PIB Headquarters

ಕೋವಿಡ್-19: ಪಿ ಐ ಬಿ ದೈನಿಕ ವರದಿ

Posted On: 17 APR 2020 6:38PM by PIB Bengaluru

ಕೋವಿಡ್-19: ಪಿ  ಬಿ ದೈನಿಕ ವರದಿ

Coat of arms of India PNG images free downloadhttps://static.pib.gov.in/WriteReadData/userfiles/image/image001ZTPU.jpg

(ಕಳೆದ 24 ಗಂಟೆಗಳಲ್ಲಿ ಕೋವಿಡ್-19ಕ್ಕೆ ಸಂಬಂಧಿಸಿದಂತೆ ಬಿಡುಗಡೆ ಮಾಡಲಾದ ಮಾಧ್ಯಮ ಹೇಳಿಕೆಗಳು ಮತ್ತು ಪಿಐಬಿ ಮಾಡಿದ ವಾಸ್ತವದ ಪರಿಶೀಲನೆ -Fact check- ಯನ್ನು ಒಳಗೊಂಡಿದೆ)

 

ಕೋವಿಡ್ -19  ಕುರಿತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಪ್ ಡೇಟ್

ನಿನ್ನೆಯಿಂದೀಚೆಗೆ 1007  ಹೊಸ ಕೋವಿಡ್ ಪ್ರಕರಣಗಳು  ಹೆಚ್ಚಳವಾಗಿವೆ ಮತ್ತು 23 ಹೊಸ ಸಾವುಗಳು ಸಂಭವಿಸಿವೆ. ಒಟ್ಟು ದೃಢಪಟ್ಟ ಕೋವಿಡ್ -19 ಪ್ರಕರಣಗಳ ಸಂಖ್ಯೆ  13,387 ಕ್ಕೇರಿದೆ. ಸುಮಾರು 1749  ಮಂದಿ ಗುಣಮುಖರಾಗಿದ್ದಾರೆ / ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಲಾಕ್ ಡೌನಿಗೆ ಮೊದಲು ಭಾರತದಲ್ಲಿ ಪ್ರಕರಣಗಳ  ಸಂಖ್ಯೆ 3  ದಿನಗಳಲ್ಲಿ  ದುಪ್ಪಟ್ಟಾಗುತ್ತಿತ್ತು, ಈಗ ಅದು ಕಳೆದ 7 ದಿನಗಳಿಂದ  6.2 ದಿನಗಳಲ್ಲಿ ದುಪ್ಪಟ್ಟಾಗುತ್ತಿದೆ. ಒಟ್ಟು 1919  ಸೌಲಭ್ಯ ಕೇಂದ್ರಗಳು 1,73,746 ಐಸೋಲೇಶನ್ ಹಾಸಿಗೆಗಳನ್ನು ಹೊಂದಿವೆ ಮತ್ತು ಒಟ್ಟು ಲಭ್ಯ ಇರುವ ಐ.ಸಿ.ಯು. ಹಾಸಿಗೆಗಳ ಸಂಖ್ಯೆ 21,806 ಆಗಿದೆ.

ವಿವರಗಳಿಗೆ : https://pib.gov.in/PressReleseDetail.aspx?PRID=1615405

 

ಪ್ರಸ್ತುತ ಸ್ಥಿತಿಯನ್ನು ಪರಾಮರ್ಶಿಸಿದ ಜಿ..ಎಂ., ಮತ್ತು ಕೋವಿಡ್ -19 ನಿರ್ವಹಣೆಗೆ ಕ್ರಮಗಳು

ಕೋವಿಡ್-19 ರ ನಿಭಾವಣೆ ಮತ್ತು ನಿಯಂತ್ರಣ ಕುರಿತಂತೆ ಸಚಿವರ ಗುಂಪು ವಿವರವಾದ ಚರ್ಚೆ ನಡೆಸಿತು. ಇದುವರೆಗೆ ಕೈಗೊಂಡ ಕ್ರಮಗಳು, ಪ್ರತಿಬಂಧಕ ಕ್ರಮವಾಗಿರುವ ಸಾಮಾಜಿಕ ಅಂತರದ  ಕ್ರಮಗಳ ಹಾಲಿ ಸ್ಥಿ ತಿ –ಗತಿ ಮತ್ತು ಕೇಂದ್ರ ಸರಕಾರ  ಹಾಗು ರಾಜ್ಯಗಳು ಕೋವಿಡ್ -19 ಹರಡುವಿಕೆಯನ್ನು  ನಿಯಂತ್ರಿಸಲು ಕೈಗೊಂಡ ಕಟ್ಟು ನಿಟ್ಟಿನ ಕ್ರಮಗಳ ಬಗ್ಗೆ ಪರಾಮರ್ಶೆ ನಡೆಸಿತು. ರಾಜ್ಯಗಳ ಸಾಮರ್ಥ್ಯ ವರ್ಧನೆ ಸಹಿತ , ಕೋವಿಡ್ -19 ಕ್ಕಾಗಿಯೇ ಪ್ರತ್ಯೇಕ ಆಸ್ಪತ್ರೆಗಳ ನಿರ್ಮಾಣಕ್ಕೆ ಸಾಕಷ್ಟು ಸಂಪನ್ಮೂಲ ಒದಗಣೆ, ವೈದ್ಯಕೀಯ ಸಂಸ್ಥೆಗಳನ್ನು ಪಿ.ಪಿ.ಇ. ಗಳೊಂದಿಗೆ ಸಜ್ಜುಗೊಳಿಸುವುದು , ವೆಂಟಿಲೇಟರುಗಳು ಮತ್ತು ಇತರ ಅವಶ್ಯ ಸಲಕರಣೆಗಳು ಇತ್ಯಾದಿಗಳ ಬಗ್ಗೆಯೂ ವಿವರವಾಗಿ ಚರ್ಚಿಸಲಾಯಿತು.

ವಿವರಗಳಿಗೆ : https://pib.gov.in/PressReleseDetail.aspx?PRID=1615392

ಹಣಕಾಸು ಸ್ಥಿರತೆ ಕಾಪಾಡಲು ಕ್ರಮಗಳನ್ನು ಘೋಷಿಸಿದ ಆರ್.ಬಿ.. ಮತ್ತು ಆವಶ್ಯಕತೆ ಇರುವವರ ಕೈಗಳಿಗೆ ಹಣ ಸಿಗುವಂತಾಗಲು ನೆರವು; ರಾಜ್ಯಗಳಿಗೆ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೋವಿಡ್ -19 ನಿಭಾವಣೆಗಾಗಿ ಇನ್ನಷ್ಟು ಹೆಚ್ಚು ಸಾಲ ಮಾಡಲು  ಅವಕಾಶ

ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಶ್ರೀ ಶಶಿಕಾಂತ ದಾಸ್ ಇಂದು ಸಂಕಷ್ಟದ  ಪರಿಸ್ಥಿತಿಯನ್ನು ಎದುರಿಸುತ್ತಿರುವ ದೇಶೀಯ ಆರ್ಥಿಕತೆಗೆ ಪುನಃಶ್ಚೇತನ ನೀಡಲು 9 ಅಂಶಗಳ ಕ್ರಮಗಳನ್ನು ಪ್ರಕಟಿಸಿದರು. 2020 ರ ಮಾರ್ಚ್ 27 ರಂದು ಆರ್.ಬಿ.ಐ. ಪ್ರಕಟಿಸಿದ ಕ್ರಮಗಳನ್ನು ಅನುಸರಿಸಿ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕೋವಿಡ್ -19 ಸೃಷ್ಟಿಸಿರುವ ಅಲ್ಲೋಲ ಕಲ್ಲೋಲಗಳ ಹಿನ್ನೆಲೆಯಲ್ಲಿ ವ್ಯವಸ್ಥೆಯಲ್ಲಿ ಸಾಕಷ್ಟು ಹಣಕಾಸು ಲಭ್ಯತೆಯ ಉದ್ದೇಶದಿಂದ ಹೆಚ್ಚುವರಿ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಆರ್.ಬಿ.ಐ. ಗವರ್ನರ್ ಹೇಳಿದ್ದಾರೆ. ಬ್ಯಾಂಕ್ ಮುಂಗಡ ಹರಿವಿಗೆ ಪ್ರೋತ್ಸಾಹ ನೀಡಲು ಮತ್ತು ಅವಕಾಶಗಳನ್ನು ಒದಗಿಸಲು , ಹಣಕಾಸು ಒತ್ತಡವನ್ನು ನಿವಾರಿಸಲು ಹಾಗು ಮಾರುಕಟ್ಟೆಯ ಸಹಜ ಕಾರ್ಯಾಚರಣೆಗೆ ಅನುವು ಮಾಡಿಕೊಡಲು ಇದನ್ನು ಅನುಸರಿಸಲಾಗಿದೆ. ಕೇಂದ್ರೀಯ ಬ್ಯಾಂಕು ತನ್ನೆಲ್ಲಾ ಸಲಕರಣೆಗಳನ್ನು ಸಾಂಕ್ರಾಮಿಕ ತಂದಿಟ್ಟಿರುವ ಸವಾಲುಗಳನ್ನು ಎದುರಿಸಲು ಬಳಸುತ್ತದೆ ಎಂದು ಗವರ್ನರ್ ಹೇಳಿದ್ದಾರೆ.

ವಿವರಗಳಿಗೆ : https://pib.gov.in/PressReleseDetail.aspx?PRID=1615349

ಆರ್.ಬಿ.. ಇಂದು ಪ್ರಕಟಿಸಿದ ಕ್ರಮಗಳಿಗೆ ಪ್ರಧಾನ ಮಂತ್ರಿ ಮೆಚ್ಚುಗೆ; ಇದರಿಂದ ಹಣಕಾಸು ಲಭ್ಯತೆ ಹೆಚ್ಚಲಿದೆ ಮತ್ತು ಮುಂಗಡ ಪೂರೈಕೆ ಸುಧಾರಿಸಲಿದೆ ಎಂದಿದ್ದಾರೆ ಪ್ರಧಾನ ಮಂತ್ರಿ

ವಿವರಗಳಿಗೆ : https://pib.gov.in/PressReleseDetail.aspx?PRID=1615327

ವಲಸೆ ಕಾರ್ಮಿಕರಿಗೆ ಸುರಕ್ಷೆ, ಆಶ್ರಯ ಮತ್ತು ಆಹಾರ ಭದ್ರತೆ  ಖಾತ್ರಿಪಡಿಸುವಂತೆ ಕೋರಿ ಎಲ್ಲಾ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಗೆ ಸಂಪುಟ ಕಾರ್ಯದರ್ಶಿ ಪತ್ರ

ಕೋವಿಡ್ -19  ನಿಯಂತ್ರಣಕ್ಕೆ ಜಾರಿಯಲ್ಲಿರುವ ಲಾಕ್ ಡೌನ್ ನಲ್ಲಿ ಸಿಕ್ಕಿ ಹಾಕಿಕೊಂಡಿರುವವರು ಮತ್ತು ವಲಸೆ ಕಾರ್ಮಿಕರ ಕಲ್ಯಾಣಕ್ಕೆ ಭಾರತ ಸರಕಾರ ಗರಿಷ್ಟ ಮಹತ್ವ ನೀಡುತ್ತಿದೆ. ಸಂಪುಟ ಕಾರ್ಯದರ್ಶಿ ಅವರು ಎಲ್ಲಾ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆದು ವಲಸೆ ಕಾರ್ಮಿಕರಿಗೆ ಸುರಕ್ಷೆ, ಆಶ್ರಯ, ಮತ್ತು ಆಹಾರ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಎಂ.ಎಚ್.ಎ. ಹೊರಡಿಸಿರುವ ಮಾರ್ಗದರ್ಶಿಗಳನ್ನು ದಕ್ಷತೆಯಿಂದ ಅನುಷ್ಟಾನಿಸುವುದನ್ನು ಖಾತ್ರಿಪಡಿಸುವಂತೆ  ಹೇಳಿದ್ದಾರೆ. ಇದರಲ್ಲಿ ಎಲ್ಲಾ ಜಿಲಾಧಿಕಾರಿಗಳಿಗೆ ತಕ್ಷಣವೇ ಪರಿಸ್ಥಿತಿಯ ಪರಾಮರ್ಶೆ ನಡೆಸುವಂತೆ ನಿರ್ದೇಶನಗಳನ್ನು  ನೀಡಲು ರಾಜ್ಯಗಳನ್ನು ಕೋರಲಾಗಿದೆ.

ವಿವರಗಳಿಗೆ: https://pib.gov.in/PressReleseDetail.aspx?PRID=1615085

ಕಿರು ಅರಣ್ಯ ಉತ್ಪನ್ನ, ಪ್ಲಾಂಟೇಶನ್ ಗಳು, ಎನ್.ಬಿ.ಎಫ್.ಸಿ.ಗಳು, ಸಹಕಾರಿ ಕ್ರೆಡಿಟ್ ಸೊಸೈಟಿಗಳು ಮತ್ತು ಗ್ರಾಮೀಣ ಭಾಗಗಳಲ್ಲಿ ನಿರ್ಮಾಣ ಚಟುವಟಿಕೆಗಳ ಸಹಿತ ನಿರ್ದಿಷ್ಟ ಕಾರ್ಯಚಟುವಟಿಕೆಗಳಿಗೆ ಕೋವಿಡ್ -19 ವಿರುದ್ದ ಹೋರಾಟಕ್ಕಾಗಿ ಜಾರಿಯಲ್ಲಿರುವ ಲಾಕ್ ಡೌನ್ ನಿರ್ಬಂಧಗಳಿಂದ ವಿನಾಯಿತಿ ನೀಡಿ ಎಂ.ಎಚ್.. ಆದೇಶ

ಕೋವಿಡ್- 19 ವಿರುದ್ದ ಹೋರಾಟಕ್ಕಾಗಿ ರಾಷ್ಟ್ರವ್ಯಾಪೀ ಲಾಕ್ ಡೌನ್ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಗೃಹ ವ್ಯವಹಾರಗಳ ಸಚಿವಾಲಯವು (ಎಂ.ಎಚ್.ಎ.) ಎಲ್ಲಾ ಸಚಿವಾಲಯಗಳಿಗೆ / ಇಲಾಖೆಗಳಿಗೆ    ನಿರ್ದಿಷ್ಟ ಕೆಲವು ಕಾರ್ಯಚಟುವಟಿಕೆಗಳನ್ನು ಸಮಗ್ರ ಪರಿಷ್ಕೃತ ಮಾರ್ಗದರ್ಶಿಗಳ ಅನ್ವಯ ವಿನಾಯಿತಿ ನೀಡಿ ಆದೇಶ ಹೊರಡಿಸಿದೆ.

ವಿವರಗಳಿಗೆ : https://pib.gov.in/PressReleseDetail.aspx?PRID=1615255

.ಎಂ.ಎಫ್. ಅಂತಾರಾಷ್ಟ್ರೀಯ   ಹಣಕಾಸು ಸಮಿತಿ (.ಎಂ.ಎಫ್.ಸಿ.) ಪ್ರಾಥಮಿಕ ಸಭೆಯಲ್ಲಿ ವೀಡಿಯೋ ಕಾನ್ಫರೆನ್ಸ್ ಮೂಲಕ ಶ್ರೀಮತಿ ನಿರ್ಮಲಾ ಸೀತಾರಾಮನ್ ಭಾಗವಹಿಸಿದರು

ಹಣಕಾಸು ಮತ್ತು ಸಾಂಸ್ಥಿಕ ವ್ಯವಹಾರಗಳ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಅಂತಾರಾಷ್ಟ್ರೀಯ ಹಣಕಾಸು ಸಮಿತಿಯ  ಪ್ರಾಥಮಿಕ ಸಭೆಯಲ್ಲಿ ವೀಡಿಯೋ ಕಾನ್ಫರೆನ್ಸ್ ಮೂಲಕ ಪಾಲ್ಗೊಂಡರು. ಇದು ಅಂತಾರಾಷ್ಟ್ರೀಯ ಹಣಕಾಸು ನಿಧಿಯ (ಐ.ಎಂ.ಎಫ್.) ಸಚಿವರ ಮಟ್ಟದ ಸಮಿತಿಯಾಗಿದೆ. ಐ.ಎಂ.ಎಫ್. ಆಡಳಿತ ನಿರ್ದೇಶಕರ ಜಾಗತಿಕ ನೀತಿ ಕಾರ್ಯಪಟ್ಟಿಯಾದ  “ಅಸಾಧಾರಣ ಸಮಯ- ಅಸಾಧಾರಣ ಕ್ರಮ “ ಆಧರಿಸಿ ಸಭೆಯಲ್ಲಿ ಚರ್ಚೆಗಳು ನಡೆದವು.  ಐ.ಎಂ.ಎಫ್.ಸಿ. ಸದಸ್ಯರು ಸಮಿತಿಗೆ ಕೋವಿಡ್-19   ವಿರುದ್ದ ಹೋರಾಟಕ್ಕೆ ಸದಸ್ಯ ರಾಷ್ಟ್ರಗಳು ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಮತ್ತು ಜಾಗತಿಕ ನಗದು ಹರಿವಿನ ಹಾಗು ಸದಸ್ಯರ ಹಣಕಾಸು ಆವಶ್ಯಕತೆಗಳನ್ನು ಪರಿಹರಿಸಲು ಐ.ಎಂ.ಎಫ್. ನ  ಬಿಕ್ಕಟ್ಟು ಪ್ರತಿಕ್ರಿಯಾ ಪ್ಯಾಕೇಜ್ ಬಗ್ಗೆಯೂ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಿದರು.

ವಿವರಗಳಿಗೆ : https://pib.gov.in/PressReleseDetail.aspx?PRID=1615113

ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನಾ ಅಡಿಯಲ್ಲಿ ಪಿ.ಎಂ.ಯು.ವೈ. ಫಲಾನುಭವಿಗಳಿಗೆ ಇದುವರೆಗೆ 1.51 ಕೋಟಿಗೂ ಅಧಿಕ ಉಚಿತ ಅಡುಗೆ ಅನಿಲ ಸಿಲಿಂಡರ್ ವಿತರಣೆ

ತಿಂಗಳಲ್ಲಿ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನಾ ಅಡಿಯಲ್ಲಿ ಪಿ.ಎಂ.ಯು.ವೈ. ಫಲಾನುಭವಿಗಳಿಗೆ ಇದುವರೆಗೆ 1.51 ಕೋಟಿಗೂ ಅಧಿಕ ಉಚಿತ ಅಡುಗೆ ಅನಿಲ ಸಿಲಿಂಡರ್ ವಿತರಣೆ ಮಾಡಲಾಗಿದೆ. ಪಿ.ಎಂ.ಕೆ.ಜಿ.ವೈ. ಅಡಿಯಲ್ಲಿ ಬಡವರ ಕಲ್ಯಾಣಕ್ಕಾಗಿ ಕೇಂದ್ರ ಸರಕಾರ ಹಲವಾರು ಪರಿಹಾರ ಕ್ರಮಗಳನ್ನು ಪ್ರಕಟಿಸಿದ್ದು, ಯೋಜನೆಯ ಒಂದು ಪ್ರಮುಖ ಘಟಕವೆಂದರೆ  ಪ್ರಧಾನ ಮಂತ್ರಿ ಉಜ್ವಲ ಯೋಜನೆಯ (ಪಿ.ಎಂ.ಯು.ವೈ.) 8 ಕೋಟಿ ಫಲಾನುಭವಿಗಳಿಗೆ 2020 ರ ಏಪ್ರಿಲ್ ನಿಂದ ಜೂನ್ ವರೆಗೆ ಉಚಿತವಾಗಿ 3 ಎಲ್.ಪಿ.ಜಿ. ಸಿಲಿಂದರುಗಳನ್ನು (14.2 ಕಿ.ಗ್ರಾಂ.) ಒದಗಿಸುವುದಾಗಿದೆ.

ವಿವರಗಳಿಗೆ : https://pib.gov.in/PressReleseDetail.aspx?PRID=1615103

ಪ್ರಧಾನ ಮಂತ್ರಿ  ಮತ್ತು ಭೂತಾನದ ಪ್ರಧಾನ ಮಂತ್ರಿ ನಡುವೆ ದೂರವಾಣಿ ಸಂಭಾಷಣೆ

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭೂತಾನ ರಾಜಮನೆತನದ ಪ್ರಧಾನ ಮಂತ್ರಿ (ಲಿಯೋಂಚೆನ್) ಗೌರವಾನ್ವಿತ ಡಾ. ಲೊಟೇ ತ್ಸೆರಿಂಗ್ ಅವರ ಜೊತೆ ದೂರವಾಣಿ ಮೂಲಕ ಮಾತುಕತೆ ನಡೆಸಿದರು. ಕೋವಿಡ್ -19 ಜಾಗತಿಕ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಪ್ರಾದೇಶಿಕ ಪರಿಸ್ಥಿತಿಯ ಬಗ್ಗೆ ಇಬ್ಬರು ಪ್ರಧಾನ ಮಂತ್ರಿಗಳು ಚರ್ಚಿಸಿದರು. ಮತ್ತು ಅದರ ಪರಿಣಾಮವನ್ನು ನಿಯಂತ್ರಿಸಲು ಸರಕಾರಗಳು ಕೈಗೊಂಡ ಕ್ರಮಗಳ ಬಗ್ಗೆ ಪರಸ್ಪರ ಮಾಹಿತಿ ವಿನಿಮಯ ಮಾಡಿಕೊಂಡರು.

ವಿವರಗಳಿಗೆ: https://pib.gov.in/PressReleseDetail.aspx?PRID=1615126

ಪ್ರಧಾನ ಮಂತ್ರಿ ಮತ್ತು ಜೋರ್ಡಾನಿನ ಹಾಶೆಮಿಟೆ ರಾಜವಂಶದ ದೊರೆ ನಡುವೆ ದೂರವಾಣಿ ಸಂಭಾಷಣೆ

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಜೋರ್ಡಾನಿನ ಹಾಶೆಮಿಟೆ ರಾಜವಂಶದ ಗೌರವಾನ್ವಿತ  ದೊರೆ ಅಬ್ದುಲ್ಲಾ ii ಅವರ ಜೊತೆ ದೂರವಾಣಿ ಸಂಭಾಷಣೆ ನಡೆಸಿದರು. ಇಬ್ಬರು ನಾಯಕರೂ ಕೋವಿದ್ -19 ಸಾಂಕ್ರಾಮಿಕ ವಿಶ್ವಕ್ಕೆ ತಂದಿಟ್ಟಿರುವ ಸವಾಲುಗಳ ಬಗ್ಗೆ ಚರ್ಚಿಸಿದರು. ಮತ್ತು ಅವರವರ ದೇಶಗಳು ಇದರ ಪರಿಣಾಮವನ್ನು ನಿಯಂತ್ರಿಸಲು ಕೈಗೊಂಡ ಕ್ರಮಗಳ ಬಗ್ಗೆಯೂ ಮಾತುಕತೆ ನಡೆಸಿದರು. ಪರಸ್ಪರ ಮಾಹಿತಿ ಹಂಚಿಕೊಳ್ಳುವ ಮೂಲಕ ಮತ್ತು ಉತ್ತಮ ಪದ್ದತಿಗಳನ್ನು ಅಳವಡಿಸಿಕೊಂಡು, ಅವಶ್ಯಕ ಪೂರೈಕೆಗಳಿಗೆ ಸವಲತ್ತುಗಳನ್ನು ಒದಗಿಸಿ ಸಾಧ್ಯ ಇರುವ ಗರಿಷ್ಟ ಪ್ರಮಾಣದಲ್ಲಿ ಪರಸ್ಪರರನ್ನು ಬೆಂಬಲಿಸಲು ಅವರು ಒಪ್ಪಿಕೊಂಡರು.

ವಿವರಗಳಿಗೆ: https://pib.gov.in/PressReleseDetail.aspx?PRID=1615122

ಲಾಕ್ ಡೌನ್ ಅವಧಿಯಲ್ಲಿ ಆಹಾರ ಧಾನ್ಯಗಳು ಮತ್ತು ಬೇಗ ಹಾಳಾಗುವ ವಸ್ತುಗಳ ಸಾಗಾಟಕ್ಕೆ ಅನುಕೂಲ ಒದಗಿಸುವ ಕಿಸಾನ್ ರಥ್ ಮೊಬೈಲ್ ಆಪ್ ಗೆ ಕೃಷಿ ಸಚಿವರಿಂದ ಚಾಲನೆ

ಕೃಷಿ ಮತ್ತು ರೈತರ ಕಲ್ಯಾಣ ಸಚಿವರಾದ ಶ್ರೀ ನರೇಂದ್ರ ಸಿಂಗ್ ತೋಮರ್  ಅವರು ಇಂದು ರೈತ ಸ್ನೇಹಿ ಮೊಬೈಲ್ ಅಪ್ಲಿಕೇಶನ್ ಕಾರ್ಯಾರಂಭ  ಮಾಡಿದರು. ನ್ಯಾಶನಲ್ ಇನ್ಫಾರ್ಮೆಟಿಕ್ಸ್ ಕೇಂದ್ರವು ಇದನ್ನು ಅಭಿವೃದ್ದಿಪಡಿಸಿದೆ. ರೈತರಿಗೆ ಮತ್ತು ವ್ಯಾಪಾರಿಗಳಿಗೆ ಕೃಷಿ ಮತ್ತು ತೋಟಗಾರಿಕಾ ಉತ್ಪನ್ನಗಳನ್ನು ಸಾಗಾಟ  ಮಾಡಲು ಇದು ಪ್ರಾಥಮಿಕ ಮತ್ತು ಎರಡನೆ ಹಂತದ ವಾಹನಗಳ ಹುಡುಕಾಟಕ್ಕೆ ನೆರವಾಗುತ್ತದೆ.  ಪ್ರಾಥಮಿಕ ಸಾರಿಗೆಯು ತೋಟದಿಂದ ಮಂಡಿಗೆ, ಎಫ್.ಪಿ.ಒ. ಸಂಗ್ರಹ ಕೇಂದ್ರಗಳು, ದಾಸ್ತಾನುಗಾರ ಇತ್ಯಾದಿಗಳಿಗೆ  ಸಾಗಾಟವನ್ನು ಒಳಗೊಂಡಿದ್ದರೆ ಎರಡನೆ ಹಂತದ ಸಾಗಾಟ ಮಂಡಿಯಿಂದ ರಾಜ್ಯದೊಳಗೆ ಮತ್ತು ಅಂತಾರಾಜ್ಯ ಮಂಡಿಗಳಿಗೆ , ಸಂಸ್ಕರಣಾ ಘಟಕಗಳಿಗೆ , ರೈಲ್ವೇ ನಿಲ್ದಾಣಗಳಿಗೆ , ದಾಸ್ತಾನುಗಾರಗಳಿಗೆ ಮತ್ತು ರಖಂ ವ್ಯಾಪಾರಿಗಳು ಇತ್ಯಾದಿಗಳಿಗೆ ಸಾಗಾಟವನ್ನು ಒಳಗೊಂಡಿರುತ್ತದೆ. 

ವಿವರಗಳಿಗಾಗಿ: : https://pib.gov.in/PressReleseDetail.aspx?PRID=1615352

ಲಾಕ್ ಡೌನ್ ಅವಧಿಯಲ್ಲಿ ದೇಶಾದ್ಯಂತ  418 ಟನ್ ವೈದ್ಯಕೀಯ ಪೂರೈಕೆಗಳನ್ನು ಸಾಗಾಟ ಮಾಡಲು 247  ಲೈಫ್ ಲೈನ್ ಉಡಾನ್ ವಿಮಾನಗಳ ಕಾರ್ಯಾಚರಣೆ

ಏರಿಂಡಿಯಾ, ಅಲಯಾನ್ಸ್ ಏರ್, ಐ.ಎ.ಎಫ್., ಮತ್ತು ಖಾಸಗಿ ವಿಮಾನಗಳ 247 ಹಾರಾಟಗಳನ್ನು ಲೈಫ್ ಲೈನ್ ಉಡಾನ್ ಅಡಿಯಲ್ಲಿ ನಡೆಸಲಾಗಿದೆ. ಇವುಗಳಲಿ 154 ವಿಮಾನಗಳನ್ನು ಏರಿಂಡಿಯಾ ಮತ್ತು ಅಲಯೆನ್ಸ್ ಏರ್ ಗಳು ನಿರ್ವಹಿಸಿವೆ. ಇಂದಿನವರೆಗೆ ಸಾಗಾಟ ಮಾಡಿದ ಸರಕಿನ ಪ್ರಮಾಣ 418 ಟನ್ನಿಗೂ ಅಧಿಕ. ಲೈಫ್ ಲೈನ್ ಉಡಾನ್ ವಿಮಾನಗಳು ಕ್ರಮಿಸಿದ ವಾಯು ದೂರ ಇಂದಿನವರೆಗೆ  2.45 ಲಕ್ಷ ಕಿಲೋ ಮೀಟರಿಗೂ ಅಧಿಕ.

ವಿವರಗಳಿಗೆ : https://pib.gov.in/PressReleseDetail.aspx?PRID=1615089

ಲಾಕ್ ಡೌನ್ ಅವಧಿಯಲ್ಲಿ ದೇಶಾದ್ಯಂತ ತನ್ನ ಸರಾಸರಿ ಆಹಾರ ಧಾನ್ಯ ಸಾಗಣೆಯನ್ನು ದುಪ್ಪಟ್ಟು ಮಾಡಿದ ಎಫ್.ಸಿ..

ಲಾಕ್ ಡೌನ್ ಅವಧಿಯಲ್ಲಿ ಎಫ್.ಸಿ.ಐ.ಯು  1335  ರೈಲು ಲೋಡುಗಳ ಮೂಲಕ ಹೆಚ್ಚುವರಿ ಆಹಾರ ಧಾನ್ಯಗಳಿರುವ ರಾಜ್ಯಗಳಿಂದ ದಾಖಲೆ 3.74 ಮಿಲಿಯನ್ ಮೆಟ್ರಿಕ್ ಟನ್ (ಎಂ.ಎಂ.ಟಿ.) ಆಹಾರ ಧಾನ್ಯಗಳನ್ನು ಸಾಗಾಟ ಮಾಡಲು ಯಶಸ್ವಿಯಾಗಿದೆ. ಅದು ದಿನವೊಂದಕ್ಕೆ ಸರಾಸರಿ 1.7  ಲಕ್ಷ ಮೆಟ್ರಿಕ್ ಟನ್ (ಎಲ್.ಎಂ.ಟಿ.) ಸಾಗಾಟ ಮಾಡಿದೆ. ಇದು ಅದರ ಸಾಮಾನ್ಯ ಸರಾಸರಿ ಸಾಗಾಟವಾದ ದಿನವೊಂದಕ್ಕೆ 0.8  ಎಲ್.ಎಂ.ಟಿ. ಗೆ ಹೋಲಿಸಿದಾಗ ಅದರ ದುಪ್ಪಟ್ಟಿಗೂ ಅಧಿಕವಾಗಿದೆ. ಇದೇ ಅವಧಿಯಲ್ಲಿ ಗುರಿ ನಿಗದಿತ ಸಾರ್ವಜನಿಕ ವಿತರಣಾ ವ್ಯವಸ್ಥೆ (ಪಿ.ಡಿ.ಎಸ್. ) ಅಡಿಯಲ್ಲಿ  3.34 ಎಂ.ಎಂ.ಟಿ. ದಾಸ್ತಾನನ್ನು ಬಳಕೆದಾರ ರಾಜ್ಯಗಳಲ್ಲಿ ಅಲ್ಲಿಯ ಫಲಾನುಭವಿಗಳ ಅಗತ್ಯವನ್ನು ಪೂರೈಸುವುದಕ್ಕಾಗಿ ಅನ್ ಲೋಡ್ ಮಾಡಲಾಗಿದೆ.

ವಿವರಗಳಿಗೆ : https://pib.gov.in/PressReleseDetail.aspx?PRID=1615088

ಪಿ.ಎಂ.ಜಿ.ಕೆ.ವೈ. ಪ್ಯಾಕೇಜಿನಡಿಯಲ್ಲಿ .ಪಿ.ಎಫ್.. ದಿಂದ 15 ದಿನಗಳಲ್ಲಿ  3.31 ಲಕ್ಷ ಕೋವಿಡ್ -19 ಕ್ಲೇಮುಗಳ ಇತ್ಯರ್ಥ

ಬರೇ ಹದಿನೈದು ದಿನಗಳಲ್ಲಿ , ಸಿಬ್ಬಂದಿಗಳ ಭವಿಷ್ಯ ನಿಧಿ (ಎಂಪ್ಲಾಯಿಸ್ ಪ್ರಾವಿಡೆಂಟ್ ಫಂಡ್  ಸಂಘಟನೆಯು ) 3.31 ಲಕ್ಷ ಕ್ಲೇಮುಗಳನ್ನು ಸಂಸ್ಕರಿಸಿ 946.49 ಕೋ.ರೂ.ಗಳನ್ನು ವಿತರಿಸಿದೆ. ಇದಲ್ಲದೆ ಹೆಚ್ಚುವರಿಯಾಗಿ 284 ಕೋ.ರೂ. ಗಳನ್ನು ವಿನಾಯಿತಿ ನೀಡಲಾದ ಪಿ.ಎಫ್. ಟ್ರಸ್ಟ್ ಗಳ ಮೂಲಕ ಯೋಜನೆ ಅಡಿಯಲ್ಲಿ ವಿತರಿಸಿದೆ. ಅದರಲ್ಲು ಗಮನಿಸಬೇಕಾದವೆಂದರೆ ನಿಯಮದಡಿ ಇರುವವು  ಟಿ.ಸಿ.ಎಸ್.ಗಳು. ಈ ನಿಯಮಗಳಡಿಯಲ್ಲಿ ಮರುಪಾವತಿ ಮಾಡುವ ಆವಶ್ಯಕತೆ ಇಲ್ಲದೆ ಮೂರು ತಿಂಗಳ ಮೂಲ ವೇತನ ಮತ್ತು ತುಟ್ಟಿ ಬತ್ತೆ ಯಷ್ಟು ಮೊತ್ತವನ್ನು ಅಥವಾ ಸದಸ್ಯರ ಇ.ಪಿ.ಎಫ್. ಖಾತೆಯಲ್ಲಿ ಜಮಾ ಇರುವ ಮೊತ್ತದ 75 % -ಇದರಲ್ಲಿ ಯಾವುದು ಕಡಿಮೆಯೋ ಅಷ್ಟನ್ನು ಹಿಂಪಡೆಯಬಹುದು. ಸದಸ್ಯರು ಇದಕ್ಕಿಂತ ಸಣ್ಣ ಮೊತಕ್ಕಾಗಿಯೂ ಅರ್ಜಿ ಸಲ್ಲಿಸಬಹುದು.

ವಿವರಗಳಿಗಾಗಿ: https://pib.gov.in/PressReleseDetail.aspx?PRID=1615037

ಕೋವಿಡ್ -19  ನಿಯಂತ್ರಿಸಲು ಸಶಸ್ತ್ರ ಪಡೆಗಳ ವೈದ್ಯಕೀಯ ಸೇವೆಗಳ ಕಾರ್ಯವನ್ನು ಪರಿಶೀಲಿಸಿದ ರಕ್ಷಣಾ ಮಂತ್ರಿ

ರಕ್ಷಣಾ ಮಂತ್ರಿ ಶ್ರೀ ರಾಜ್ ನಾಥ್ ಸಿಂಗ್ ಅವರು ಇಂದು ಸಶಸ್ತ್ರ ಪಡೆಗಳ ವೈದ್ಯಕೀಯ ಸೇವೆಗಳ (ಎ.ಎಫ್.ಎಂ.ಎಸ್.) ಕಾರ್ಯದ ಪ್ರಗತಿ ಪರಿಶೀಲನೆ ನಡೆಸಿದರು. ಮತ್ತು ಕೋವಿಡ್ -19 ಹರಡುವಿಕೆ ತಡೆಯುವಲ್ಲಿ ನಾಗರಿಕ ಅಧಿಕಾರಿಗಳಿಗೆ ಅವರ ಸಹಾಯದ ಬಗ್ಗೆಯೂ ಪರಿಶೀಲನೆ ನಡೆಸಿದರು. ಸಶಸ್ತ್ರ ಪಡೆಗಳ ಸಿಬ್ಬಂದಿಗಳಿಗೆ ಸಲಹಾಸೂಚಿಗಳನ್ನು ವಿತರಿಸಿರುವ ಬಗ್ಗೆ , ಕ್ವಾರಂಟೈನ್ ಸೌಲಭ್ಯಗಳಿಗೆ ಸಂಬಂಧಿಸಿ ನಾಗರಿಕ ಅಧಿಕಾರಿಗಳಿಗೆ ಸಹಾಯ ನೀಡುವ ಬಗ್ಗೆ , ಹಾಲಿ ಇರುವ ಸ್ಥಿತಿಯಲ್ಲಿ ಆಸ್ಪತ್ರೆಗಳನ್ನು ಮತ್ತು ಆರೋಗ್ಯ ರಕ್ಷಣೆಯ ಸವಲತ್ತನ್ನು ಮೀಸಲಿಡುವ ಬಗ್ಗೆ ರಕ್ಷಣಾ ಮಂತ್ರಿಗಳಿಗೆ ಮಾಹಿತಿ ಒದಗಿಸಲಾಯಿತು.

ವಿವರಗಳಿಗೆ : https://pib.gov.in/PressReleseDetail.aspx?PRID=1615330

ಕೋವಿಡ್ -19  ಕ್ರಿಮಿನಾಶ ಪ್ರಕ್ರಿಯೆಗೆ ಅವಕಾಶ ಮಾಡಿಕೊಡುವ ಎರಡು ಹೊಸ ಉತ್ಪನ್ನಗಳನ್ನು ಪರಿಚಯಿಸಿದ  ಡಿ.ಆರ್.ಡಿ..

ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ದಿ ಸಂಸ್ಥೆಯು ಕೋವಿಡ್ -19 ವಿರುದ್ದ ಹೋರಾಟಕ್ಕೆ ತನ್ನ ಕೊಡುಗೆ ನೀಡುವ ಪ್ರಬಲವಾದ , ನಿರಂತರ ಆಶಯದ ಅಂಗವಾಗಿ ತನ್ನ ಹಾಲಿ ಇರುವ ತಂತ್ರಜ್ಞಾನ ಮತ್ತು ಅನುಭವದಿಂದ ಹಲವಾರು ಪರಿಹಾರಗಳನ್ನು ಅಭಿವೃದ್ದಿಪಡಿಸುತ್ತಿದೆ. ಇವು  ಈಗಿನ ಆವಶ್ಯಕತೆಗಳನ್ನು ಪೂರೈಸುವಂತಹ ಅನ್ವೇಷಣೆಗಳನ್ನು ಒಳಗೊಂಡಿದೆ. ಇಂದು ಡಿ.ಆರ್.ಡಿ.ಒ . ಜಾಗತಿಕ ಸಾಂಕ್ರಾಮಿಕದ ಈಗಿನ  ಪರಿಸ್ಥಿತಿಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಕ್ರಿಮಿಗಳನ್ನು ನಾಶ ಮಾಡುವ ಎರಡು ಉತ್ಪನ್ನಗಳನ್ನು ಪರಿಚಯಿಸಿದೆ.

ವಿವರಗಳಿಗಾಗಿ: https://pib.gov.in/PressReleasePage.aspx?PRID=1615331

ಭಾರತದ ಸಾಫ್ಟ್ ವೇರ್ ಪಾರ್ಕ್ ಕೇಂದ್ರ (ಎಸ್.ಟಿ.ಪಿ..) ಗಳಿಂದ ಕಾರ್ಯಾಚರಿಸುವ .ಟಿ. ಸಂಸ್ಥೆಗಳಿಗೆ 4 ತಿಂಗಳ ಬಾಡಿಗೆ ಮನ್ನಾ

ಭಾರತದ ಸಾಫ್ಟ್ ವೇರ್ ಪಾರ್ಕ್ ಕೇಂದ್ರ (ಎಸ್.ಟಿ.ಪಿ.ಐ.) ಗಳಿಂದ ಕಾರ್ಯಾಚರಿಸುವ ಸಣ್ಣ ಐ.ಟಿ ಘಟಕಗಳಿಗೆ ಬಾಡಿಗೆ ಪಾವತಿಯಲ್ಲಿ ಪರಿಹಾರ ನೀಡಲು ಸರಕಾರ ಪ್ರಮುಖ ನಿರ್ಧಾರವನ್ನು ಕೈಗೊಂಡಿದೆ. ಬಹುತೇಕ ಘಟಕಗಳು ಒಂದೋ ತಂತ್ರಜ್ಞಾನ ಎಂ.ಎಸ್.ಎಂ.ಇ. ಗಳು ಅಥವಾ ನವೋದ್ಯಮಗಳು. ಇಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ದೇಶದ ಎಸ್.ಟಿ.ಪಿ.ಐ. ಆವರಣಗಳಲ್ಲಿ ಇರುವ ಘಟಕಗಳಿಗೆ 1.3. 2020 ರಿಂದ 30.6.2020 ರವರೆಗೆ ಅಂದರೆ 4 ತಿಂಗಳು  ಅವಧಿಗೆ ಬಾಡಿಗೆ ಮನ್ನಾ ಮಾಡಲು ನಿರ್ಧರಿಸಿದೆ.

ವಿವರಗಳಿಗೆ : https://pib.gov.in/PressReleseDetail.aspx?PRID=1615052

ಶ್ರೀ ನರೇಂದ್ರ ಸಿಂಗ್ ತೋಮರ್ ಅವರು ಗ್ರಾಮೀಣಾಭಿವೃದ್ದಿ ಸಚಿವಾಲಯದ ಪ್ರಮುಖ ಕಾರ್ಯಕ್ರಮಗಳ ವಿವರವಾದ ಪ್ರಗತಿ ಪರಿಶೀಲನೆ ನಡೆಸಿದರು

ಎರಡನೆ ಮತ್ತು ಮೂರನೆ ಕಂತಿನ ನಿಧಿಯನ್ನು ಪಡೆದಿರುವ ಪಿ.ಎಂ.ಎ.ವೈ. (ಜಿ) ಯೋಜನೆಯ ಸುಮಾರು 40 ಲಕ್ಷ ಫಲಾನುಭವಿಗಳು ಅವರ ಮನೆಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಸಹಾಯ ಮಾಡುವಂತೆ ಶ್ರೀ ತೋಮರ್ ಅವರು  ಸಲಹೆ ಮಾಡಿದರು. ಎಂ.ಜಿ. ನರೇಗಾ ಅಡಿಯಲ್ಲಿ ಹಣಕಾಸು ವರ್ಷ 2019-2020 ರಡಿಯಲ್ಲಿ ಬಾಕಿ ಇರುವ ಹಣ ಪಾವತಿಗಾಗಿ ಮತ್ತು 2020-2021 ಮೊದಲ ಪಾಕ್ಷಿಕದ ವೇತನ/ಕೂಲಿ ಬಾಕಿ ಪಾವತಿಗಾಗಿ 7300 ಕೋ.ರೂ.ಗಳನ್ನು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಬಿಡುಗಡೆ ಮಾಡಲಾಗಿದೆ.

ವಿವರಗಳಿಗೆ : https://pib.gov.in/PressReleseDetail.aspx?PRID=1615079

ಡಿ.ಡಿ . ಮತ್ತು ..ಆರ್ ಗಳಿಂದ  ಶಿಕ್ಷಣ ಸಾಮಗ್ರಿ/ ವರ್ಚುವಲ್ ತರಗತಿಗಳ  ಪ್ರಸಾರ

ಭಾರತದ ಸಾರ್ವಜನಿಕ ಪ್ರಸಾರ ಸಂಸ್ಥೆಗಳು ಚಾಲ್ತಿಯಲ್ಲಿರುವ ಲಾಕ್ ಡೌನ್ ನಡುವೆ ವಿದ್ಯಾರ್ಥಿಗಳಿಗೆ ಅವರ ಅಧ್ಯಯನಕ್ಕೆ ಸಹಾಯ ಮಾಡುತ್ತಿವೆ. ವಿವಿಧ ರಾಜ್ಯ ಸರಕಾರಗಳ ಸಂಸ್ಥೆಗಳ ಸಹಯೋಗದೊಂದಿಗೆ ದೂರದರ್ಶನ ಮತ್ತು ಆಕಾಶವಾಣಿಗಳು ವರ್ಚುವಲ್ ತರಗತಿಗಳನ್ನು ಪ್ರಸಾರ ಮಾಡುತ್ತಿವೆ  ಮತ್ತು ಇತರ ಶಿಕ್ಷಣ ವಸ್ತುವನ್ನು ಅವುಗಳ ಪ್ರಾದೇಶಿಕ ವಾಹಿನಿಗಳ ಮೂಲಕ ದೇಶಾದ್ಯಂತ ಟಿ.ವಿ, ರೇಡಿಯೋ ಮತ್ತು ಯು ಟ್ಯೂಬ್ ಗಳಲ್ಲಿಯೂ ಪ್ರಸಾರ ಮಾಡುತ್ತಿವೆ.

ವಿವರಗಳಿಗಾಗಿ: https://pib.gov.in/PressReleseDetail.aspx?PRID=1615204

ಲಾಕ್ ಡೌನ್ ಅವಧಿಯಲ್ಲಿ ಸಾಮಾನ್ಯ ಮನುಷ್ಯನಿಗೆ ಸಹಾಯ ಮಾಡುತ್ತಿರುವ ರಸ್ತೆ ಸಾರಿಗೆ ವಲಯ

ಕೋವಿಡ್ -19 ಕಾರಣದಿಂದಾಗಿ ರಾಷ್ಟ್ರವ್ಯಾಪ್ತಿಯಲ್ಲಿ ಜಾರಿಯಲ್ಲಿರುವ  ಲಾಕ್ ಡೌನ್ ಅವಧಿಯಲ್ಲಿ ರಸ್ತೆಯಲ್ಲಿರುವ ಜನರಿಗೆ ಸಹಾಯ ಮಾಡುವ ಸಾಮಾಜಿಕ ಜವಾಬ್ದಾರಿಯನ್ನು ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ಕೈಗೆತ್ತಿಕೊಂಡಿದೆ. ಕಳೆದ ತಿಂಗಳು ದಿನಾಂಕ 24 ರಂದು ಪ್ರಧಾನ ಮಂತ್ರಿ ಅವರು ಘೋಷಣೆ ಮಾಡಿದ ಬಳಿಕ ಸಚಿವಾಲಯದ ಕ್ಷೇತ್ರ ಘಟಕಗಳಿಗೆ  ದೇಶಾದ್ಯಂತ ಅವರ ಕಾರ್ಮಿಕರಿಗೆ/ಕೆಲಸಗಾರರಿಗೆ ಮತ್ತು ಜನಸಾಮಾನ್ಯರಿಗೆ ಅವಶ್ಯ ಸಹಾಯ ಹಸ್ತವನ್ನು ನೀಡುವಂತೆ ಸೂಚಿಸಲಾಗಿದೆ.

ವಿವರಗಳಿಗೆ : https://pib.gov.in/PressReleseDetail.aspx?PRID=1615393

2 ಗಂಟೆಗಳಲ್ಲಿ ಕೋವಿಡ್ 19 ಪರೀಕ್ಷಾ ಫಲಿತಾಂಶ ದೃಢೀಕರಿಸಿ ನೀಡುವ ಚಿತ್ರಾ ಜೀನ್ ಲ್ಯಾಂಪ್-ಎನ್

ವೈರಲ್ ನ್ಯೂಕ್ಲಿಕ್ ಆಸಿಡ್ ಲೂಪ್ ಮಧ್ಯಸ್ಥ ವರ್ಧನೆಯ ಹಿಮ್ಮುಖ ನಕಲು (ಆರ್.ಟಿ-ಲ್ಯಾಂಪ್) ಬಳಸಿ ಸಾರ್ಸ್-ಕೋವ್  2 ರ ಎನ್-ಜೀನ್ ಪತ್ತೆ ಹಚ್ಚುವ ದೃಢೀಕೃತ ಪತ್ತೆ ಪರೀಕ್ಷೆಯು  ವಿಶ್ವದ ಮೊದಲನೇಯದಾಗಿರದಿದ್ದರೂ ವಿಶ್ವದ ಕೆಲವೇ ಕೆಲವು ಕಡೆ ಲಭ್ಯ ಇರುವಂತಹ ವ್ಯವಸ್ಥೆಯಾಗಿದೆ.

ವಿವರಗಳಿಗೆ : https://pib.gov.in/PressReleseDetail.aspx?PRID=1615204

 

ಪಿ.ಐ.ಬಿ. ಕ್ಷೇತ್ರ ಕಾರ್ಯಾಲಯಗಳಿಂದ ಮಾಹಿತಿ.

  • ಅರುಣಾಚಲ ಪ್ರದೇಶ: ರಾಜಧಾನಿ ಇಟಾನಗರದಲ್ಲಿ ಸಿಕ್ಕಿ ಹಾಕಿಕೊಂಡಿರುವ ರೋಗಿಗಳಿಗೆ ರಾಜ್ಯದೊಳಗೆ ಅವರ ತವರು ಜಿಲ್ಲೆಗಳಿಗೆ ತಲುಪಲು ವ್ಯವಸ್ಥೆಗಳನ್ನು ಮಾಡುವುದಾಗಿ ಮುಖ್ಯಮಂತ್ರಿ ಹೇಳಿಕೆ.
  • ಅಸ್ಸಾಂ: ದೇಶದ ಇತರ ಭಾಗಗಳಲ್ಲಿ ಬಾಕಿಯಾಗಿರುವ ಜನರಿಗಾಗಿ ಸಹಾಯವಾಣಿ, ನಾಲ್ಕು ಲಕ್ಷಕ್ಕೂ ಅಧಿಕ ಕುಟುಂಬಗಳ ಕರೆ ದಾಖಲು, ಅಸ್ಸಾಂ ಆರೋಗ್ಯ ಸಚಿವ ಹಿಮಂತ ಬಿಸ್ವಾ ಸರ್ಮಾ ಮಾಹಿತಿ.
  • ಮೇಘಾಲಯ: ಶಿಲ್ಲಾಂಗ್ ನಲ್ಲಿ ನಡೆಯಬೇಕಿದ್ದ ಸೇನಾ ನೇಮಕಾತಿ ಶಿಬಿರ ಕೋವಿಡ್ -19 ರಿಂದಾಗಿ 2020 ರ ಅಕ್ಟೋಬರ್ 5- 8 ಕ್ಕೆ  ಮುಂದೂಡಿಕೆ.
  • ಮಣಿಪುರ: ತಮೇಗ್ಲಾಂಗ್ ಜಿಲ್ಲೆಯಲ್ಲಿ ಮಧ್ಯಾಹ್ನ 1.30 ರಿಂದ 4.30 ರವರೆಗೆ ಅವಶ್ಯಕ ಸಾಮಗ್ರಿಗಳಿಗಾಗಿರುವ ಅಂಗಡಿಗಳನ್ನು ತೆರೆಯಲು ಜಿಲ್ಲಾಧಿಕಾರಿ ಅನುಮತಿ.
  • ನಾಗಾಲ್ಯಾಂಡ್: ಕೋವಿಡ್ -19 ಪ್ರಕರಣಕ್ಕೆ ಸಂಬಂಧಿಸಿದ 140 ಮಂದಿಯ ಸ್ಯಾಂಪಲ್ ಗಳಲ್ಲಿ 100 ಮಾದರಿಗಳು ನೆಗೆಟಿವ್. 40 ಪ್ರಕರಣಗಳ ಫಲಿತಾಂಶಕ್ಕಾಗಿ ಕಾಯಲಾಗುತ್ತಿದೆ.
  • ತ್ರಿಪುರಾ: ಲಾಕ್ ಡೌನ್ ನ 19 ದಿನಗಳ ಅವಧಿಯಲ್ಲಿ 25,025   ಮಂದಿಗೆ ಹಣಕಾಸು ನೆರವು ನೀಡಲು 2.85  ಕೋ.ರೂ.ಗಳನ್ನು ತೆಗೆದಿಡಲಾಗಿದೆ.
  • ಕೇರಳ: ಲಾಕ್ ಡೌನ್ ನಿಂದಾಗಿ ರಾಜ್ಯದ ಕುಟ್ಟನಾಡ್ ಮತ್ತು ಚಾವರ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ನಡೆಸುವುದು ಸಾಧ್ಯವಿಲ್ಲ ಎಂದು ಮುಖ್ಯ ಚುನಾವಣಾಧಿಕಾರಿ ಹೇಳಿದ್ದಾರೆ. ಶ್ರೀ ಚಿತ್ರಾ ಇನ್ಸ್ಟಿಟ್ಯೂಟ್ , ತಿರುವನಂತಪುರಂ  ತ್ವರಿತ ಪರೀಕ್ಷಾ ಕಿಟ್ ಗಳನ್ನು ಅಭಿವೃದ್ದಿಪಡಿಸಿದೆ. ಇದಕ್ಕೆ ಐ.ಸಿ.ಎಂ.ಆರ್. ಅನುಮೋದನೆಗಾಗಿ ಕಾಯಲಾಗುತ್ತಿದೆ. ನಿನ್ನೆ 7  ಹೊಸ ಪ್ರಕರಣಗಳು ಕಂಡುಬಂದಿವೆ ಮತ್ತು 27 ಮಂದಿ ಗುಣಮುಖರಾಗಿದ್ದಾರೆ. ಈಗ ಒಟ್ಟು ಪ್ರಕರಣಗಳ ಸಂಖ್ಯೆ 394, ಗುಣಮುಖರಾದವರು 245 ,ಕೊರೊನಾ ಬಾಧಿತ ಪ್ರಕರಣಗಳು 147
  • ತಮಿಳುನಾಡು: 32 ರೋಗಿಗಳು ತ್ರಿಚ್ಚಿಯ ಎಂ.ಜಿ.ಎಂ. ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ರಾಜ್ಯಕ್ಕೆ 24,000 ತ್ವರಿತ ಪರೀಕ್ಷಾ ಕಿಟ್ ಗಳು ಲಭಿಸಿವೆ. ಗ್ರಾಮೀಣ ಭಾಗದಲ್ಲಿ ರಸ್ತೆ ನಿರ್ವಹಣೆ ಪುನರಾರಂಭವಾಗುವ ನಿರೀಕ್ಷೆ ಇದೆ. ರಾಜ್ಯವು ನಿರ್ಗಮನ ವ್ಯೂಹ ರಚಿಸಲು ಸಮಿತಿಯನ್ನು ರಚಿಸಿದೆ. ಒಟ್ಟು ಪ್ರಕರಣಗಳು: 1267. ಸಾವುಗಳು 15, ಚಿಕಿತ್ಸೆ ಪಡೆದು ಬಿಡುಗಡೆಗೊಂಡವರು 180.
  • ಕರ್ನಾಟಕ: ಇಂದು 38 ಹೊಸ ಪ್ರಕರಣಗಳು ದೃಢಪಟ್ಟಿವೆ, ಗರಿಷ್ಟ ಸಂಖ್ಯೆಯ ಪ್ರಕರಣಗಳು ಮೈಸೂರು 12, ಮಂಡ್ಯ 3, ಬಳ್ಳಾರಿ 7, ಬೆಂಗಳೂರು 9, ದಕ್ಷಿಣ ಕನ್ನಡ 1, ಚಿಕ್ಕಬಳ್ಳಾಪುರ 3, ಬೀದರ್ 1, ಮತ್ತು ವಿಜಯಪುರ 2,  ಗಳಿಂದ ವರದಿಯಾಗಿವೆ. ಒಟ್ಟು ಸಾವುಗಳ ಸಂಖ್ಯೆ 13 ಕ್ಕೆ ತಲುಪಿದೆ. 82 ಮಂದಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಒಟ್ಟು ದೃಢೀಕೃತ ಪ್ರಕರಣಗಳ ಸಂಖ್ಯೆ 353, ಸ್ಸವುಗಳು 13; ಆಸ್ಪತ್ರೆಯಿಂದ ಬಿಡುಗಡೆಯಾದವರು 82.  
  • ಆಂದ್ರಪ್ರದೇಶ: ಕಳೆದ 24  ಗಂಟೆಗಳಲ್ಲಿ 38 ಹೊಸ ಪ್ರಕರಣಗಳು ವರದಿಯಾಗಿದ್ದು, ಒಟ್ಟು ಸಂಖ್ಯೆ 572 ಕ್ಕೇರಿದೆ. ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದವರ ಒಟ್ಟು ಸಂಖ್ಯೆ 35. ಸಾವುಗಳು 14. ರಾಜ್ಯವು ಒಟ್ಟು 1 ಲಕ್ಷ ತ್ವರಿತ ಪರೀಕ್ಷಾ ಕಿಟ್ ಗಳನ್ನು ದಕ್ಷಿಣ ಕೊರಿಯಾದಿಂದ ಖರೀದಿಸಿದೆ. ರೋಗ ಬಾಧೆ ಹೆಚ್ಚಿರುವ ಪ್ರದೇಶಗಳಲ್ಲಿ ವ್ಯಾಪಕ ಪರೀಕ್ಷೆಗಳನ್ನು (ಟೆಸ್ಟಿಂಗ್) ನಡೆಸಲಾಗುತ್ತಿದೆ. ಗುಂಟೂರು (126), ಕರ್ನೂಲ್ (126) ನೆಲ್ಲೂರು (64) ಕೃಷ್ನಾ (52) ಗಳಿಂದ ಗರಿಷ್ಟ ಸಂಖ್ಯೆಯಲ್ಲಿ ಪ್ರಕರಣಗಳು ವರದಿಯಾಗಿವೆ.
  • ತೆಲಂಗಾಣ: ನಿಜಾಮಾಬಾದಿನ ವ್ಯಕ್ತಿಯು ಕೋವಿಡ್ ನಿಂದಾಗಿ ಸೌದಿ ಅರೇಬಿಯಾದಲ್ಲಿ ಮೃತಪಟ್ಟಿದ್ದಾರೆ. ಸೂರ್ಯಪೇಟ್ ನಲ್ಲಿ ಮತ್ತೆ 5  ಪ್ರಕರಣಗಳು ವರದಿಯಾಗಿವೆ. ಸುಮಾರು 600 ಮಾದರಿಗಳ ಪರೀಕ್ಷಾ ಫಲಿತಾಂಶ ಇಂದು ನಿರೀಕ್ಷಿಸಲಾಗಿತ್ತು. ಕೋವಿಡ್ ಚಿಕಿತ್ಸೆಯಲ್ಲಿ ಪ್ಲಾಸ್ಮಾ ಥೆರಪಿ ಬಳಸಲು ರಾಜ್ಯವು ಐ.ಸಿ.ಎಂ.ಆರ್. ಅನುಮತಿಯನ್ನು ಕೋರಿದೆ. 
  • ಮಹಾರಾಷ್ಟ್ರ: ಮಹಾರಾಷ್ಟ್ರದಲ್ಲಿ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಈಗ 3,236 ಕ್ಕೇರಿದೆ. ಇಂದು ಮಧ್ಯಾಹ್ನದವರೆಗೆ 34 ಹೊಸ ಪ್ರಕರಣಗಳು ವರದಿಯಾಗಿವೆ. ನಿನ್ನೆ ಮಹಾರಾಷ್ಟ್ರವು 3,000 ಗಡಿ ದಾಟಿದ ಮೊದಲ ರಾಜ್ಯವಾಗಿ ಹೊರಹೊಮ್ಮಿತ್ತು. ರಾಜ್ಯದಲ್ಲಿ ದೃಢೀಕೃತ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದರೂ , ಚೇತರಿಸಿಕೊಳ್ಳುತ್ತಿರುವವರ ಸಂಖ್ಯೆಯೂ ನಿಧಾನವಾಗಿ ಹೆಚ್ಚುತ್ತಿದೆ. ಮುಂಬಯಿಯ 166 ಮಂದಿ ಸಹಿತ ಒಟ್ಟು 295 ಜನರು ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಆದಾಗ್ಯೂ ರಾಜ್ಯದಲ್ಲಿ 194 ಸಾವುಗಳು ವರದಿಯಾಗಿವೆ. ದೇಶದಲ್ಲಿ ಸಂಭವಿಸಿದ ಒಟ್ಟು ಸಾವುಗಳ ಸಂಖ್ಯೆಗೆ ಹೋಲಿಸಿದಾಗ ಇದರ ಪ್ರಮಾಣ 40 %
  • ಗುಜರಾತ್: ಶುಕ್ರವಾರದಂದು ಬೆಳಿಗ್ಗೆ 92 ಹೊಸ ಪ್ರಕರಣಗಳು ದಾಖಲಾಗುವುದರೊಂದಿಗೆ ಗುಜರಾತ್ 1000 ಪಾಸಿಟಿವ್ ಪ್ರಕರಣಗಳ ಸಂಖ್ಯೆಯನ್ನು ದಾಟಿತು. ಅಲ್ಲಿ ಈಗ ಒಟ್ಟು 1,021 ದೃಢೀಕೃತ ಪ್ರಕರಣಗಳಿವೆ. ಹೊಸ ಪ್ರಕರಣಗಳಲ್ಲಿ 45 ಅಹ್ಮದಾಬಾದಿನವು , 14 ಸೂರತ್ತಿನವು ಮತ್ತು 9 ವಡೋದರದವು. ಗುಜರಾತಿನಲ್ಲಿ ಸತ್ತವರ ಸಂಖ್ಯೆ 38. ಏತನ್ಮಧ್ಯೆ ರಾಜ್ಯ ಸರಕಾರವು ರಾಜ್ಯದಲ್ಲಿ ಕೋವಿಡ್ -19 ರೋಗಿಗಳಿಗಾಗಿ ರೋಗ ಚೇತರಿಕೆ ಪ್ಲಾಸ್ಮಾ ಥೆರಪಿ ಕ್ಲಿನಿಕಲ್ ಪರೀಕ್ಷೆ ನಡೆಸಲು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆಯಿಂದ (ಐ.ಸಿ.ಎಂ.ಆರ್.) ನಿಂದ ಅನುಮತಿ ಕೋರಿದೆ.
  • ರಾಜಸ್ತಾನ: ಇಂದು 34  ಹೊಸ ಪಾಸಿಟಿವ್ ಪ್ರಕರಣಗಳು ವರದಿಯಾಗುವುದರೊಂದಿಗೆ , ಕೋವಿಡ್ -19 ದೃಢೀಕೃತಗೊಂಡವರ ಸಂಖ್ಯೆ ರಾಜಸ್ಥಾನದಲ್ಲಿ 1,169 ಕ್ಕೇರಿದೆ. ಹೊಸ ಪ್ರಕರಣಗಳಲ್ಲಿ 18 ಪ್ರಕರಣಗಳು ಜೋಧಪುರದವು. ರಾಜ್ಯದಲ್ಲಿ ಇದುವರೆಗೆ 16 ಸಾವುಗಳು ಸಂಭವಿಸಿವೆ.   
  • ಮಧ್ಯಪ್ರದೇಶ: ಇಲ್ಲಿ 226 ಮಂದಿಯಲ್ಲಿ  ಕೊರೊನಾ ಪಾಸಿಟಿವ್ ಪತ್ತೆಯಾಗಿದ್ದು, ಮಧ್ಯಪ್ರದೇಶದಲ್ಲಿ ಒಟ್ಟು ಕೊರೊನಾವೈರಸ್ ಪಾಸಿಟಿವ್ ಪ್ರಕರಣಗಳ ಸಂಖ್ಯೆ 1,164  ಕ್ಕೇರಿದೆ.ವೈರಸ್ ಈಗ ರಾಜ್ಯದ 52 ಜಿಲ್ಲೆಗಳ ಪೈಕಿ 26 ರಲ್ಲಿ ತನ್ನ ಹೆಜ್ಜೆಗಳನ್ನಿಟ್ಟಿದೆ. ಇಂದೋರಿನಲ್ಲಿ ರಾಜ್ಯದಲ್ಲಿಯೇ ಗರಿಷ್ಟ  ಅಂದರೆ 707 ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಇವುಗಳಲ್ಲಿ 163 ಹೊಸ ಪ್ರಕರಣಗಳು ಕಳೆದ 24 ಗಂಟೆಗಳಲ್ಲಿ ವರದಿಯಾದಂತಹವು.
  • ಚಂಡೀಗಢ: ಕೇಂದ್ರಾಡಳಿತ ಪ್ರದೇಶದ ಆಡಳಿತಾಧಿಕಾರಿಗಳು ಎಲ್ಲಾ ಸರಕಾರಿ ಅಧಿಕಾರಿಗಳು ಮತ್ತು ಸಾರ್ವಜನಿಕರು ಆರೋಗ್ಯ ಸೇತು ಆಪ್ ನ್ನು ಸಾರ್ವತ್ರಿಕವಾಗಿ ಡೌನ್ ಲೋಡ್ ಮಾಡಿಕೊಳ್ಳುವ ಅಗತ್ಯವನ್ನು ಬಲವಾಗಿ ಪ್ರತಿಪಾದಿಸಿದ್ದಾರೆ . ಕೇಂದ್ರಾಡಳಿತ ಪ್ರದೇಶದ ಶಾಲೆಗಳಲ್ಲಿ ಇರುವ ಮಧ್ಯಾಹ್ನದ ಊಟದ ಸವಲತ್ತನ್ನು ಸಕ್ರಿಯಗೊಳಿಸಲಾಗಿದ್ದು, ಅಲ್ಲಿ ಆಹಾರ ಪೊಟ್ಟಣಗಳನ್ನು ತಯಾರಿಸಿ ಅಗತ್ಯ  ಇರುವ ವ್ಯಕ್ತಿಗಳಿಗೆ ವಿತರಿಸಲಾಗುತ್ತಿದೆ.
  • ಪಂಜಾಬ್: ಲಾಕ್ ಡೌನ್ ಅವಧಿಯಲ್ಲಿ ಒತ್ತಡ ಸಂಬಂಧಿ ಮತ್ತು ವೈದ್ಯಕೀಯ ಸಂಬಂಧಿ ವಿಷಯಗಳನ್ನು ಸಮರ್ಪಕವಾಗಿ ಪರಿಹರಿಸಲು ಪಂಜಾಬ್ ಸರಕಾರ ವಿಶೇಷ ಸಹಾಯವಾಣಿ 1800 180 4104 ಯನ್ನು ನಾಗರಿಕರಿಗಾಗಿ ಆರಂಭಿಸಿದ್ದು, ಅದು ಟೆಲಿಕಾನ್ಫರೆನ್ಸ್ ಮೂಲಕ ಹಿರಿಯ ವೈದ್ಯರ ಜಾಲವನ್ನು ಸಂಪರ್ಕಿಸುತ್ತದೆ ಮತ್ತು ವೈದ್ಯಕೀಯ ಸಲಹೆಗಳನ್ನು ನೀಡುತ್ತದೆ.
 

ಕೋವಿಡ್-19 ಕುರಿತ ವಾಸ್ತವದ ಪರಿಶೀಲನೆ

ಪ್ರಮುಖ ಪತ್ರಿಕೆಯೊಂದು ಹೇಳುತ್ತದೆ, ದಿಲ್ಲಿ ಎಫ್. ಎಂ. ಗೋಲ್ಡ್ ನ ೮೦ ರೇಡಿಯೋ ಜಾಕಿಗಳು  (ಆರ್.ಜೆ.ಗಳು) ಕೆಲಸದಿಂದ ಹೊರಗಿದ್ದಾರೆ ಮತ್ತು ಸರಕಾರದ ಆದೇಶದ ಹೊರತಾಗಿಯೂ ಅವರಿಗೆ ವೇತನ ನೀಡಿಲ್ಲ ಎಂದು.

ಸತ್ಯಸ್ಥಿತಿ: ಅವರು ಸಿಬ್ಬಂದಿಗಳಲ್ಲ, ಆದರೆ ಅರೆ ಕಾಲಿಕ ಫ್ರೀಲಾನ್ಸರ್ ಗಳು, ಕಾರ್ಯಕ್ರಮ ಹಂಚಿಕೆ ಆಧಾರದಲ್ಲಿ ಅವಶ್ಯಕತೆ ಇದ್ದಂತೆ ಅವರಿಗೆ ಕೆಲಸ ನೀಡಲಾಗುತ್ತದೆ. ಅವರು ಬೇರೆ ಕಡೆ ಕೂಡಾ ಕೆಲಸ ಪಡೆದುಕೊಳ್ಳಲು ಮುಕ್ತ ಅವಕಾಶ ಹೊಂದಿದ್ದಾರೆ.

https://pbs.twimg.com/profile_banners/231033118/1584354869/1500x500

ಪಾದರಸದ ಮಟ್ಟ ಏರುತ್ತಿದ್ದಂತೆ , ಇಲ್ಲಿದೆ ಪಿ.ಐ.ಬಿ.ಯ ಇನ್ನೊಂದು ವಾಸ್ತವದ ಪರಿಶೀಲನೆ.

ಹೇಳಿಕೆ: ಎ.ಸಿ.ಗಳು ಕೋವಿಡ್ -19 ಹರಡುವುದರಿಂದ ಉಷ್ಣತೆಯನ್ನು ತಂಪು ಮಾಡಲು ಅವುಗಳನ್ನು ಬಳಸಬಾರದು.

ವಸ್ತುಸ್ಥಿತಿ: ಇದು ಸ್ವಲ್ಪ ಸಂಕೀರ್ಣವಾದುದು. ವಿಂಡೋ ಎ.ಸಿ.ಗಳು ಪರವಾಗಿಲ್ಲ. ಆದರೆ ಸೆಂಟ್ರಲ್ ಏರ್ ಕಂಡೀಶನಿಂಗ್ ಬೇಡ. ನಾವು ಈ ವಿಷಯದ ಬಗ್ಗೆ ಡಿ.ಡಿ.ನ್ಯೂಸ್ ಲೈವ್ ಕೇಳೋಣ.

ದೈನಿಕ ಸಾಮಾಜಿಕ ಮಾಧ್ಯಮ ವರದಿ (ಪಿ.ಐ.ಬಿ.) 17.4.2020


(Release ID: 1615643) Visitor Counter : 396