ಚುನಾವಣಾ ಆಯೋಗ

ಮುಖ್ಯ ಚುನಾವಣಾ ಆಯುಕ್ತ ಮತ್ತು ಚುನಾವಣಾ ಆಯುಕ್ತರಿಂದ ತಮ್ಮ ಮೂಲ ವೇತನದ ಶೇ.ಮೂವತ್ತರಷ್ಟು ಒಂದು ವರ್ಷದವರೆಗೆ ಕೋವಿಡ್ ನಿಧಿಗೆ ಕೊಡುಗೆ

Posted On: 13 APR 2020 12:18PM by PIB Bengaluru

ಮುಖ್ಯ ಚುನಾವಣಾ ಆಯುಕ್ತ ಮತ್ತು ಚುನಾವಣಾ ಆಯುಕ್ತರಿಂದ ತಮ್ಮ ಮೂಲ ವೇತನದ ಶೇ.ಮೂವತ್ತರಷ್ಟು ಒಂದು ವರ್ಷದವರೆಗೆ ಕೋವಿಡ್ ನಿಧಿಗೆ ಕೊಡುಗೆ

 

ವಿಶ್ವದ ಇತರ ಭಾಗಗಳಂತೆ ದೇಶವು ಸಹ ಕೋವಿಡ್-19 ಸಾಂಕ್ರಾಮಿಕ ರೋಗವನ್ನು ಎದುರಿಸುತ್ತಿದೆ. ಸಾಂಕ್ರಾಮಿಕ ರೋಗದ ಹರಡುವಿಕೆಯನ್ನು ನಿಯಂತ್ರಿಸುವ ಮತ್ತು ಸಾರ್ವಜನಿಕ ಆರೋಗ್ಯ ಮತ್ತು ರಾಷ್ಟ್ರೀಯ ಆರ್ಥಿಕತೆಯ ಮೇಲೆ ಅದರ ಪ್ರಭಾವವನ್ನು ನಿಗ್ರಹಿಸಲು ಮತ್ತು ಕಡಿಮೆ ಮಾಡಲು ಸರ್ಕಾರವು ಇತರ ಏಜೆನ್ಸಿಗಳೊಂದಿಗೆ ವಿವಿಧ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂಬುದು ಸ್ಪಷ್ಟವಾಗಿದೆ. ಸರ್ಕಾರ ಮತ್ತು ನಾಗರಿಕ ಸಾಮಾಜಿಕ ಸಂಸ್ಥೆಗಳು ಕೈಗೊಳ್ಳುತ್ತಿರುವ ಹಲವಾರು ಕ್ರಮಗಳಿಗೆ ಅಪಾರ ಸಂಪನ್ಮೂಲಗಳ ಅವಶ್ಯಕತೆ ಇದೆ. ಇದಕ್ಕಾಗಿ ಎಲ್ಲಾ ಮೂಲಗಳಿಂದ ಬರುವ ಕೊಡುಗೆಗಳು, ಬೊಕ್ಕಸಕ್ಕೆ ಸಂಬಳದ ಹೊರೆಯನ್ನು ಕಡಿಮೆ ಮಾಡುವುದು ಇದಕ್ಕೆ ನೆರವಾಗಬಹುದು.

ದೃಷ್ಟಿಯಿಂದ, ಭಾರತದ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ ಎಸ್.ಸುನೀಲ್ ಅರೋರಾ ಮತ್ತು ಚುನಾವಣಾ ಆಯುಕ್ತರಾದ ಎಸ್.ಅಶೋಕ್ ಲವಾಸಾ ಮತ್ತು ಎಸ್.ಸುಶೀಲ್ ಚಂದ್ರ ಅವರು ತಮ್ಮ ಮೂಲ ವೇತನದಲ್ಲಿ ಶೇಕಡಾ ಮೂವತ್ತನ್ನು ಏಪ್ರಿಲ್ 1, 2020 ರಿಂದ ಒಂದು ವರ್ಷದವರೆಗೆ ಸ್ವಯಂಪ್ರೇರಣೆಯಿಂದ ಕೊಡುಗೆ ನೀಡಲು ನಿರ್ಧರಿಸಿದ್ದಾರೆ.

***



(Release ID: 1613867) Visitor Counter : 230