PIB Headquarters

ಕೋವಿಡ್-19: ಪಿ ಐ ಬಿ ದೈನಿಕ ವರದಿ

Posted On: 07 APR 2020 6:39PM by PIB Bengaluru

ಕೋವಿಡ್-19: ಪಿ ಐ ಬಿ ದೈನಿಕ ವರದಿ

 

Coat of arms of India PNG images free downloadhttps://static.pib.gov.in/WriteReadData/userfiles/image/image001ZTPU.jpg

 

(ಕಳೆದ 24 ಗಂಟೆಗಳಲ್ಲಿ ಕೋವಿಡ್ -19ಕ್ಕೆ ಸಂಬಂಧಿಸಿದಂತೆ ಬಿಡುಗಡೆ ಮಾಡಲಾದ ಪತ್ರಿಕಾ ಪ್ರಕಟಣೆಗಳನ್ನು ಮತ್ತು ಪಿಐಬಿ ಕೈಗೊಂಡ ವಾಸ್ತವದ ಪರಿಶೀಲನೆಯನ್ನು ಒಳಗೊಂಡಿದೆ)

 

 

ಕೋವಿಡ್ 19 ಕುರಿತಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಪ್ ಡೇಟ್

ಈವರೆಗೆ 4421 ಕೋವಿಡ್ -19 ಪ್ರಕರಣಗಳು ದೃಢಪಟ್ಟಿದ್ದು,  117 ಜನರು ಮೃತಪಟ್ಟಿರುವುದಾಗಿ ವರದಿಯಾಗಿದೆ. 326 ಜನರು ಗುಣಮುಖರಾಗಿ/ಚೇತರಿಕೆಯ ಬಳಿಕ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಕೋವಿಡ್ -19 ರೋಗಿಗಳಿಗೆ ಆರೈಕೆ ನೀಡಲು ಸೂಕ್ತವಾದ ಕೋವಿಡ್-19 ಮೀಸಲಾದ ಸೌಲಭ್ಯವನ್ನು ಗುರುತಿಸಲು ಚಿಕಿತ್ಸೆಯ ಮತ್ತು ನಿರ್ಧಾರ ತೆಗೆದುಕೊಳ್ಳುವ ಕಾರ್ಯವಿಧಾನಗಳಿಗಾಗಿ ವಿವಿಧ ರೀತಿಯ ಕೋವಿಡ್-19 ಪ್ರಕರಣಗಳಿಗೆ ಮೂರು ವಿಧದ ಸೌಲಭ್ಯಗಳನ್ನು ಸ್ಥಾಪಿಸಲಾಗುವುದು.

ಹೆಚ್ಚಿನ ವಿವರಗಳಿಗೆ: https://pib.gov.in/PressReleseDetail.aspx?PRID=1612107

ಪ್ರಧಾನಮಂತ್ರಿ ಮತ್ತು ಸ್ವೀಡನ್ ಪ್ರಧಾನಮಂತ್ರಿಯವರ ನಡುವೆ ದೂರವಾಣಿ ಮಾತುಕತೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ಸ್ವೀಡನ್ ಪ್ರಧಾನಮಂತ್ರಿ ಘನತೆವೆತ್ತ ಸ್ಟೀಫನ್ ಲೋಫ್ವೆನ್ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದರು. ಇಬ್ಬರೂ ನಾಯಕರು ಕೋವಿಡ್ 19 ಮಹಾಮಾರಿ ಕುರಿತಂತೆ ಮತ್ತು ತಮ್ಮ ತಮ್ಮ ರಾಷ್ಟ್ರಗಳಲ್ಲಿ ಅದರ ಆರೋಗ್ಯ ಮತ್ತು ಆರ್ಥಿಕ ಪರಿಣಾಮಗಳನ್ನು ನಿಯಂತ್ರಿಸುವ ಕುರಿತಂತೆ ಕೈಗೊಂಡಿರುವ ಕ್ರಮಗಳ ಬಗ್ಗೆ ಚರ್ಚಿಸಿದರು.

ಹೆಚ್ಚಿನ ವಿವರಗಳಿಗೆ: https://pib.gov.in/PressReleseDetail.aspx?PRID=1612041

ವಿಶ್ವ ಆರೋಗ್ಯ ದಿನದ ಸಂದರ್ಭದಲ್ಲಿ ಪ್ರಧಾನಮಂತ್ರಿಯವರ ಸಂದೇಶ 

ಹೆಚ್ಚಿನ ವಿವರಗಳಿಗೆ: https://pib.gov.in/PressReleseDetail.aspx?PRID=1611950

ಪ್ರಧಾನಮಂತ್ರಿ ಹಾಗೂ ಒಮನ್ ಸುಲ್ತಾನ್ ನಡುವೆ ದೂರವಾಣಿ ಮಾತುಕತೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಒಮನ್ ಸುಲ್ತಾನ್ ಘನತೆವೆತ್ತ ಹೈಥಾಮ್ ಬಿನ್ ತರಿಕ್ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದರು. ಇಬ್ಬರೂ ನಾಯಕರು, ಕೋವಿಡ್ -19 ಮಹಾಮಾರಿಯಿಂದ ಎದುರಾಗಿರುವ ಆರೋಗ್ಯ ಮತ್ತು ಆರ್ಥಿಕ ಸವಾಲುಗಳು ಹಾಗೂ ಅವುಗಳಿಗೆ ಸ್ಪಂದಿಸಲು ತಮ್ಮ ತಮ್ಮ ರಾಷ್ಟ್ರಗಳಲ್ಲಿ ಕೈಗೊಂಡಿರುವ ಕ್ರಮಗಳ ಬಗ್ಗೆ ಚರ್ಚಿಸಿದರು.

ಹೆಚ್ಚಿನ ವಿವರಗಳಿಗೆ: https://pib.gov.in/PressReleseDetail.aspx?PRID=1612040

ಪ್ರಧಾನಮಂತ್ರಿ ಹಾಗೂ ಬಹರೇನ್ ಸಂಸ್ಥಾನದ ದೊರೆಯೊಂದಿಗೆ ದೂರವಾಣಿ ಮಾತುಕತೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಬಹರೇನ್ ಸಂಸ್ಥಾನದ ದೊರೆ ಘನತೆವೆತ್ತ ಹಮದ್ ಬಿನ್ ಇಸಾ ಅಲ್ ಕಲೀಫಾ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದರು.  ಇಬ್ಬರೂ ನಾಯಕರು ಪ್ರಸಕ್ತ ಕೋವಿಡ್ -19ರ ಆರೋಗ್ಯ ಬಿಕ್ಕಟ್ಟಿನ ಬಗ್ಗೆ ಮತ್ತು ಸಾಗಣೆ ಸರಪಣಿ ಮತ್ತು ಹಣಕಾಸು ಮಾರುಕಟ್ಟೆ ಸೇರಿದಂತೆ ಅದರ ಪರಿಣಾಮಗಳ ಬಗ್ಗೆ ಚರ್ಚಿಸಿದರು.

ಹೆಚ್ಚಿನ ವಿವರಗಳಿಗೆ: https://pib.gov.in/PressReleseDetail.aspx?PRID=1611833

ರಾಷ್ಟ್ರೀಯ ಉದ್ಯಾನಧಾಮಗಳು/ ಹುಲಿ ಸಂರಕ್ಷಿತ ಅರಣ್ಯಗಳಲ್ಲಿ ಕೋವಿಡ್ -19 ನಿಗ್ರಹ ಮತ್ತು ನಿರ್ವಹಣೆ ಕುರಿತಂತೆ ಸಲಹೆ ಸೂಚನೆ

ಕೋವಿಡ್ 19 ದೇಶದಲ್ಲಿ ವ್ಯಾಪಕವಾಗಿ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಹಾಗೂ ನ್ಯೂಯಾರ್ಕ್ ನಲ್ಲ ಹುಲಿ ಕೋವಿಡ್ -19ರಿಂದ ಸೋಂಕಿತವಾಗಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ  ಸಚಿವಾಲಯವು ರಾಷ್ಟ್ರೀಯ ಉದ್ಯಾನಗಳು/ ಧಾಮಗಳು/ಹುಲಿ ಸಂರಕ್ಷಿತ ಅರಣ್ಯಗಳಲ್ಲಿ ಮಾನವರಿಂದ ಪ್ರಾಣಿಗಳಿಗೆ, ಅದೇ ರೀತಿ ಪ್ರಾಣಿಗಳಿಂದ ಮಾನವರಿಗೆ ಕೊರೋನಾ ವೈರಸ್ ಹರಡುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ  ರಾಷ್ಟ್ರೀಯ ಉದ್ಯಾನಗಳು/ ಧಾಮಗಳುಹುಲಿ ಸಂರಕ್ಷಿತ ಅರಣ್ಯಗಳಲ್ಲಿ ಕೋವಿಡ್ -19 ತಡೆ ಮತ್ತು ನಿರ್ವಹಣೆಗೆ ಸಲಹೆ ಸೂಚನೆಗಳನ್ನು ಹೊರಡಿಸಿದೆ.

ಹೆಚ್ಚಿನ ವಿವರಗಳಿಗೆ: https://pib.gov.in/PressReleseDetail.aspx?PRID=1611839

ನ್ಯೂಯಾರ್ಕ್ ನಲ್ಲಿ ಹುಲಿಯೊಂದರಲ್ಲಿ ಕೋವಿಂಡ್ 19 ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಕೇಂದ್ರೀಯ ಮೃಗಾಲಯ ಪ್ರಾಧಿಕಾರ ಭಾರತದಲ್ಲಿರುವ ಮೃಗಾಲಯಗಳಿಗೆ ಕಟ್ಟೆಚ್ಚರದಿಂದ ಇರುವಂತೆ ಸೂಚಿಸಿದೆ

ಕೇಂದ್ರೀಯ ಮೃಗಾಲಯ ಪ್ರಾಧಿಕಾರ ದೇಶದಲ್ಲಿರುವ ಎಲ್ಲ ಮೃಗಾಲಯಗಳಿಗೆ 24x7 ಆಧಾರದಲ್ಲಿ ಸಿಸಿಟಿವಿ ಬಳಕೆ ಮಾಡಿಕೊಂಡು ಪ್ರಾಣಿಗಳನ್ನು ಗಮನಿಸುವಂತೆ, ಯಾವುದಾದರೂ ಪ್ರಾಣಿ ಅಸಹಜವಾಗಿ ವರ್ತಿಸುತ್ತಿದೆಯೇ/ಬೇರೆ ಲಕ್ಷಣಗಳೇನಾದರೂ ಇದೆಯೇ/ ಕಾವಲಿನವರು/ನಿರ್ವಹಣೆದಾರರು ವೈಯಕ್ತಿಕ ಸುರಕ್ಷಾ ಸಾಧನ ಧರಿಸದೆ ಪ್ರಾಣಿಗಳ ಬಳಿ ಸುಳಿಯದಂತೆ, ಅನಾರೋಗ್ಯವಿರುವ ಪ್ರಾಣಿಗಳನ್ನು ಪ್ರತ್ಯೇಕವಾಗಿಡುವಂತೆ, ಪ್ರಾಣಿಗಳಿಗೆ ಆಹಾರ ಪೂರೈಸುವಾಗ ಕನಿಷ್ಠ ಸಂಪರ್ಕಕ್ಕೆ ಹೋಗುವುದೂ ಸೇರಿದಂತೆ  ಕಟ್ಟೆಚ್ಚರದಿಂದ ಇರುವಂತೆ ಸೂಚನೆ ನೀಡಿದೆ.

ಹೆಚ್ಚಿನ ವಿವರಗಳಿಗೆ: https://pib.gov.in/PressReleseDetail.aspx?PRID=1611776

ಹಡಗು ಸಚಿವಾಲಯ ಕೋವಿಡ್ 19 ಮತ್ತು ದೇಶದಲ್ಲಿನ ಲಾಕ್ ಡೌನ್ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಸುಗಮವಾಗಿ ಹಡುಗುಗಳ ಕಾರ್ಯಾಚರಣೆಯ ಖಾತ್ರಿ ಪಡಿಸಿಕೊಳ್ಳಲು ಸಕ್ರಿಯ ಪ್ರಾತ ನಿರ್ವಹಿಸುತ್ತಿದೆ

ಏಪ್ರಿಲ್ ನಿಂದ ಮಾರ್ಚ್ 2020ವರೆಗೆ ಪ್ರಮುಖ ಬಂದರುಗಳಲ್ಲಿ ನಿರ್ವಹಣೆ ಮಾಡಿದ ಒಟ್ಟು ಸಂಚಾರ ಸಾಗಣೆಯ ಟನ್ನೇಜ್ ನಲ್ಲಿ ಶೇ.0.82ರಷ್ಟು ವೃದ್ಧಿ ಕಂಡಿದೆ. 46ಸಾವಿರ ಸಿಬ್ಬಂದಿ/ಪ್ರಯಾಣಿಕರುಗಳಿಗೆ ಬಂದರಿನಲ್ಲಿ ಥರ್ಮಲ್ ತಪಾಸಣೆ ನಡೆಸಲಾಗುತ್ತದೆ. ಪ್ರಮುಖ ಬಂದರುಗಳು ವಿಧಿಸುವ ದಂಡಗಳು, ಅವಧಿ ಶುಲ್ಕಗಳು, ವೆಚ್ಚಗಳು, ಬಾಡಿಗೆಗಳು ಯಾವುದೇ ಬಂದರು ಬಳಕೆದಾರರಿಗೆ ಮನ್ನಾ ಮಾಡಲಾಗಿದೆ. ಪ್ರಮುಖ ಬಂದರು ನ್ಯಾಸಗಳಾದ್ಯಂತದ ಆಸ್ಪತ್ರೆಗಳು ಕೋವಿಡ್ 19 ಎದುರಿಸಲು ಸಜ್ಜಾಗಿವೆ. ಡಿಜಿ, ಶಿಪ್ಪಿಂಗ್ ಕಡಲತಡಿಯವರು, ವೈವರ್ ಗಳು, ಶಿಪ್ಪಿಂಗ್ ಲೈನ್ಸ್, ನೈರ್ಮಲ್ಯೀಕರಣ, ಸುರಕ್ಷತಾ ಪ್ರಮಾಣಪತ್ರಗಳಿಗೆ ಸಂಬಂಧಿಸಿದ ಪರಿಹಾರಗಳನ್ನು ಒದಗಿಸುತ್ತಿದೆ.

ಹೆಚ್ಚಿನ ವಿವರಗಳಿಗೆ: https://pib.gov.in/PressReleseDetail.aspx?PRID=1612074

ಲೈಫ್ ಲೈನ್ ಉಡಾನ್ ವಿಮಾನಗಳು ಜೋರ್ಹಟ್, ಲೆಂಗ್ ಪುಯ್, ದಿಮಾಪುರ್, ಇಂಪಾಲ್ ಮತ್ತು ಇತರ ಈಶಾನ್ಯ ವಲಯಗಳಿಗೆ ವೈದ್ಯಕೀಯ ಸಮಗ್ರಿ ಸಾಗಿಸಿವೆ

152 ಸರಕು ಸಾಗಣೆ ವಿಮಾನಗಳು ಈ ದಿನಾಂಕದವರೆಗೆ ದೇಶದಾದ್ಯಂತ ಕಾರ್ಯಾಚರಣೆ ಮಾಡಿದ್ದು, ದೂರದ ಗಿರಿ ಪ್ರದೇಶಗಳೂ ಸೇರಿದಂತೆ ದೇಶದ ವಿವಿಧ ಭಾಗಗಳಿಗೆ ವೈದ್ಯಕೀಯ ಸಾಮಗ್ರಿಗಳನ್ನು ಸಾಗಿಸಿವೆ.

ಹೆಚ್ಚಿನ ವಿವರಗಳಿಗೆ: https://pib.gov.in/PressReleseDetail.aspx?PRID=1612109

ಕೋವಿಡ್ -19: ಸ್ಮಾರ್ಟ್ ಸಿಟಿಗಳಲ್ಲಿನ ವೈದ್ಯರುಗಳೊಂದಿಗೆ ನಗರ ಆಡಳಿತಗಳ ಸಹಯೋಗ

ಸ್ಮಾರ್ಟ್ ನಗರಗಳು ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಮತ್ತು ನಗರ ಆಡಳಿತದೊಂದಿಗೆ ಸಹಯೋಗದ ಖಾತ್ರಿ ನೀಡಿದ್ದು, ಕೋವಿಡ್ -19 ಶಂಕಿತರ ಕಣ್ಗಾವಲು ಇಟ್ಟಿದೆ.

ಹೆಚ್ಚಿನ ವಿವರಗಳಿಗೆ: https://pib.gov.in/PressReleseDetail.aspx?PRID=1612083

ಒಟ್ಟಾರೆ ಆಂತರಿಕ ಪಿಪಿಇ ತಯಾರಿಸಲು ಸಮಯದ ವಿರುದ್ಧದ ಓಡುತ್ತಿರುವ ಭಾರತೀಯ ರೈಲ್ವೆ

ಭಾರತೀಯ ರೈಲ್ವೆ ಒಟ್ಟಾರೆ ಯಂತ್ರೋಪಾದಿಯಲ್ಲಿ ಪಿಪಿಇ ಮಾದರಿಗಳ ಆಂತರಿಕ ಉತ್ಪಾದನೆಯನ್ನು ಕೈಗೆತ್ತಿಕೊಂಡಿದೆ. ಜಗಧಾರಿ ಕಾರ್ಯಾಗಾರದಿಂದ ಒಟ್ಟಾರೆಯಾಗಿ ತಯಾರಿಸಲಾದವುಗಳನ್ನು ಈ ಉದ್ದೇಶಕ್ಕಾಗಿ ಅಧಿಕಾರ ಪಡೆದಿರುವ ಡಿಆರ್‌ಡಿಒ ಪ್ರಯೋಗಾಲಯ ಇತ್ತೀಚೆಗೆ ಅನುಮೋದಿಸಿದೆ. ಈಗ ವಿವಿಧ ವಲಯಗಳಡಿಯಲ್ಲಿನ ಇತರ ಕಾರ್ಯಾಗಾರಗಳು ಒಟ್ಟಾರೆಯಾಗಿ ಈ ರಕ್ಷಣಾತ್ಮಕ ಉತ್ಪನ್ನ ತಯಾರಿಸಲು ಅನುಮೋದಿತ ವಿನ್ಯಾಸ ಮತ್ತು ವಸ್ತುಗಳನ್ನು ಈಗ ಬಳಸಿಕೊಳ್ಳಬಹುದಾಗಿದೆ.

ಹೆಚ್ಚಿನ ವಿವರಗಳಿಗೆ: https://pib.gov.in/PressReleseDetail.aspx?PRID=1611951

ಕೋವಿಡ್ 19 ಲಾಕ್ ಡೌನ್ ಹೊರತಾಗಿಯೂ ಎಫ್.ಸಿ.ಐ. 662 ಬೋಗಿಗಳಲ್ಲಿ ಸುಮಾರು 18.54 ಲಕ್ಷ ಮೆಟ್ರಿಕ್ ಟನ್ ಆಹಾರ ಧಾನ್ಯವನ್ನು ದೇಶದಾದ್ಯಂತ ಮಾರ್ಚ್ 24ರಿಂದ 14 ದಿನಗಳ ಕಾಲ ಸಾಗಿಸಿದೆ

ಎಫ್.ಸಿ.ಐ. ಗರೀಬ್ ಕಲ್ಯಾಣ ಅನ್ನ ಯೋಜನೆ (ಪಿಎಂಜಿಕೆಎವೈ) ಅನುಷ್ಠಾನಕ್ಕಾಗಿ, ಸಾಕಷ್ಟು ಪ್ರಮಾಣದ ಸಾಮಗ್ರಿಗಳನ್ನು ದೇಶದಾದ್ಯಂತದ ರಾಜ್ಯಗಳಿಗೆ ಕಳುಹಿಸಿದೆ.ರಾಷ್ಟ್ರೀಯ ಆಹಾರ ಭದ್ರತೆ ಕಾಯಿದೆ (ಎನ್.ಎಫ್.ಎಸ್.ಎ.) ಫಲಾನುಭವಿಗಳಿಗೆ ಮುಂದಿನ ಮೂರು ತಿಂಗಳುಗಳ ಕಾಲ ತಿಂಗಳಿಗೆ ಪ್ರತಿ ವ್ಯಕ್ತಿಗೆ 5 ಕೆ.ಜಿ. ಆಹಾರ ಧಾನ್ಯ ನೀಡಲಾಗುತ್ತದೆ.  

ಹೆಚ್ಚಿನ ವಿವರಗಳಿಗೆ: https://pib.gov.in/PressReleseDetail.aspx?PRID=1612052

ಕೋವಿಡ್ 19 ಹಾಗೂ ಭವಿಷ್ಯದ ಸವಾಲು ಎದುರಿಸಲು ಎಚ್.ಆರ್.ಡಿ. ಸಚಿವಾಲಯದಿಂದ ಸಮಾಧಾನ್ ಆರಂಭ

ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ನಾವಿನ್ಯ ಘಟಕ ಮತ್ತು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಗಳು ಫೋರ್ಜ್ ಅಂಡ್ ಇನೋವೇಟಿವ್ ಕ್ಯೂರಿಸ್ ಸಹಯೋಗದಲ್ಲಿ ವಿದ್ಯಾರ್ಥಿಗಳ ನಾವಿನ್ಯತೆಯ ಸಾಮರ್ಥ್ಯವನ್ನು ಪರೀಕ್ಷಿಸಲು ಸಮಾಧಾನ್ ಎಂಬ ಬೃಹತ್ ಆನ್‌ಲೈನ್ ಸವಾಲನ್ನು ಪ್ರಾರಂಭಿಸಿದೆ.

ಹೆಚ್ಚಿನ ವಿವರಗಳಿಗೆ: https://pib.gov.in/PressReleseDetail.aspx?PRID=1612064

ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಜನರಿಗೆ ನೆರವು ನೀಡುವಲ್ಲಿ ಮಾಜಿ ಸೈನಿಕರಿಂದ ತಮ್ಮ ಪಾತ್ರದ ನಿರ್ವಹಣೆ

ಇಡೀ ದೇಶವೇ ಕೊರೋನಾ ವೈರಾಣು (ಕೋವಿಡ್ -19) ವಿರುದ್ಧ ಹೋರಾಟ ಮುಂದುವರಿಸಿರುವಾಗ, ಸೇನೆ, ನೌಕೆ ಮತ್ತು ವಾಯುದಳಕ್ಕೆ ರಿದ ಮಾಜಿ ಸೈನಿಕರು( ಇಎಸ್.ಎಂ.) ನಾಗರಿಕ ಆಡಳಿತಕ್ಕೆ ನೆರವಾಗುತ್ತಿದ್ದು, ಸ್ವಯಂ ಪ್ರೇರಿತರಾಗಿ ಮತ್ತು ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಹೆಚ್ಚಿನ ವಿವರಗಳಿಗೆ: https://pib.gov.in/PressReleseDetail.aspx?PRID=1611952

ಲಾಕ್ ಡೌನ್ ನಂತರದ ಮಾರ್ಗಸೂಚಿಯಲ್ಲಿ ಆರ್ಥಿಕ ಕಾಳಜಿಗಿಂಥ ಆರೋಗ್ಯದ  ಕಾಳಜಿ ಮೊದಲಾಗಿರುತ್ತದೆ ಎಂದು ಉಪರಾಷ್ಟ್ರಪತಿ ಹೇಳಿದ್ದಾರೆ

ಕೊರೊನಾ ವೈರಾಣು ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ವಿಧಿಸಲಾಗಿರುವ 3 ವಾರಗಳ ರಾಷ್ಟ್ರೀಯ ಲಾಕ್ ಡೌನ್ ಮುಕ್ತಾಯಗೊಂಡ ಬಳಿಕ ಏಪ್ರಿಲ್ 14ರ ನಂತರ ದೇಶದ ನಾಯಕತ್ವ ಆ ನಿರ್ಧಾರದ ಬಗ್ಗೆ ಚರ್ಚೆಗೆ ಮುಂದಾದಾಗ ಆರ್ಥಿಕತೆ ಸ್ಥಿರತೆಯ ಕಾಳಜಿಗಿಂತಲೂ ಮಿಗಿಲಾಗಿ ಆರೋಗ್ಯದ ಕಾಳಜಿಯ ವಿಷಯವನ್ನು ಮೊದಲು ಪರಿಗಣಿಸಬೇಕು ಎಂದು, ಭಾರತದ ಉಪ ರಾಷ್ಟ್ರಪತಿ ಶ್ರೀ ಎಂ. ವೆಂಕಯ್ಯ ನಾಯ್ಡು ಆಗ್ರಹಿಸಿದ್ದಾರೆ.

ಹೆಚ್ಚಿನ ವಿವರಗಳಿಗೆ: https://pib.gov.in/PressReleseDetail.aspx?PRID=1611953

ಪಿಎಂಬಿಜೆಪಿ ಅಡಿಯಲ್ಲಿ ಔಷಧ ವ್ಯಾಪಾರಿಗಳು ಅಗತ್ಯ ಸೇವೆಗಳು ಮತ್ತು ಔಷಧಗಳನ್ನು ಮನೆಬಾಗಿಲಿಗೆ ತಲುಪಿಸುತ್ತಿದ್ದಾರೆ

ಪ್ರಧಾನಮಂತ್ರಿ ಜನ್ ಔಷಧಿ ಕೇಂದ್ರಗಳಸ್ವಾಸ್ಥ್ ಕಿ ಸಿಪಾಯಿ ಎಂದೇ ಖ್ಯಾತರಾದ ಔಷಧ ವ್ಯಾಪಾರಿಗಳು, ಅಗತ್ಯ ಸೇವೆಗಳು ಮತ್ತು ಔಷಧಗಳನ್ನು ರೋಗಿಗಳು ಮತ್ತು ಹಿರಿಯರ ಮನೆ ಬಾಗಿಲಿಗೇ ವಿತರಿಸುತ್ತಿವೆ.

ಹೆಚ್ಚಿನ ವಿವರಗಳಿಗೆ: https://pib.gov.in/PressReleseDetail.aspx?PRID=1612072

ಕೋವಿಡ್-19 ಕ್ರಮಗಳ ಕುರಿತಂತೆ ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿ ಸಚಿವಾಲಯದ ಪರಾಮರ್ಶೆ ಸಭೆಯ ಅಧ್ಯಕ್ಷತೆ ವಹಿಸಿದ್ದ ಎಂ.ಓ.ಎಸ್. (ಪಿಪಿ)

ಈಶಾನ್ಯ ವಲಯ ಅಭಿವೃದ್ಧಿ (ಡಿಓಎನ್.ಇ.ಆರ್.) (ಸ್ವತಂತ್ರ ನಿರ್ವಹಣೆ), ಎಂ.ಓ.ಎಸ್. ಪಿಎಂಓ, ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ, ಪಿಂಚಣಿ, ಪರಮಾಣು ಇಂಧನ  ಮತ್ತು ಬಾಹ್ಯಾಕಾಶ ಖಾತೆ ರಾಜ್ಯ ಸಚಿವ ಡಾ. ಜಿತೇಂದ್ರ ಸಿಂಗ್ ಅವರಿಂದು ವಿಡಿಯೋ ಕಾನ್ಫರೆನ್ಸ್ ಮೂಲಕ, ಡಿಓಪಿಟಿ, ಡಿಎಆರ್.ಪಿ.ಜಿ. ಮತ್ತು ಡಿಓಪಿಪಿಡಬ್ಲ್ಯುಗಳ ಸಮಗ್ರ ಪರಾಮರ್ಶೆ ನಡೆಸಿದರು.

ಹೆಚ್ಚಿನ ವಿವರಗಳಿಗೆ: https://pib.gov.in/PressReleseDetail.aspx?PRID=1612054

ದೀಪ ಆರಿಸುವ ಪ್ರಧಾನಮಂತ್ರಿಯವರ ಕರೆಗೆ ಭಾರೀ ಸ್ಪಂದನೆ, ಕೇಂದ್ರ ಇಂಧನ ಸಚಿವರ ಹೇಳಿಕೆ

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕೋವಿಡ್ -19ರ ವಿರುದ್ಧದ ಹೋರಾಟದಲ್ಲಿ ರಾಷ್ಟ್ರೀಯ ಏಕಮತ್ಯ ಪ್ರದರ್ಶಿಸಲು ಕಳೆದ ಭಾನುವಾರ ವಿದ್ಯುತ್ ದೀಪ ಆರಿಸಿ, ದೀಪ ಬೆಳಗುವಂತೆ ನೀಡಿದ್ದ ಕರೆಗೆ ಬೃಹತ್ ಸ್ಪಂದನೆ ದೊರೆತಿದೆ.

ಹೆಚ್ಚಿನ ವಿವರಗಳಿಗೆ: https://pib.gov.in/PressReleseDetail.aspx?PRID=1611841

 

ಪಿಐಬಿ ಕ್ಷೇತ್ರೀಯ ಕಚೇರಿಗಳ ವರದಿಗಳು

ಈಶಾನ್ಯ ವಲಯ

  • ಅರುಣಾಚಲ ಪ್ರದೇಶದಲ್ಲಿ ಜೀವನೋಪಾಯ ಅಭಿಯಾನ ಯೋಜನೆ ಸೇರಿದಂತೆ ಹಲವು ಎಸ್.ಎಚ್.ಜಿ. ಗಳು ಕೋವಿಡ್ 19 ವಿರುದ್ಧ ಸೆಣಸಲು ಮಾಸ್ಕ್ ಸೇರಿದಂತೆ ಅಗತ್ಯ ವಸ್ತುಗಳನ್ನು ಪೂರೈಸುವ ಚಟುವಟಿಕೆಯಲ್ಲಿ ಸಕ್ರಿಯವಾಗಿವೆ.
  • ಅಸ್ಸಾಂನಲ್ಲಿ ಎಐಯುಡಿಎಫ್ ನ ದಿಂಗ್ ಶಾಸಕ ಅಮಿನುಲ್ ಇಸ್ಲಾಮ್ ಕೋವಿಡ್ -19ರ ಬಗ್ಗೆ ನೀಡಿದ ವಿವಾದಾತ್ಮಕ ಹೇಳಿಕೆಗಾಗಿ ಬಂಧಿತರಾಗಿದ್ದಾರೆ.
  • ಲಾಕ್ ಡೌನ್ ಅವಧಿಯಲ್ಲಿ ರಾಜ್ಯದ ಹೊರಗೆ ಉಳಿದಿರುವ ಪ್ರತಿಯೊಬ್ಬ ವ್ಯಕ್ತಿಯ ಬ್ಯಾಂಕ್ ಖಾತೆಗೆ ರಾಜ್ಯ ಸರ್ಕಾರ ಮುಖ್ಯಮಂತ್ರಿಗಳ ಕೋವಿಡ್ -19 ಪರಿಹಾರ ನಿಧಿಯಿಂದ 2ಸಾವಿರ ರೂ.ಗಳನ್ನು ವರ್ಗಾವಣೆ ಮಾಡಲಿದೆ ಎಂದು ಮಣಿಪುರ ಮುಖ್ಯಮಂತ್ರಿ ಟ್ವೀಟ್ ನಲ್ಲಿ ತಿಳಿಸಿದ್ದಾರೆ.
  • ಮೇಘಾಲಯದಲ್ಲಿ ಖಾಸಗಿ ಆಸ್ಪತ್ರೆಗಳು ಕೋವಿಡ್ ಏತರ ರೋಗಿಗಳ ಚಿಕಿತ್ಸೆಗೆ ಸಿದ್ಧವಾಗಿವೆ. ವೈದ್ಯಕೀಯ ವೆಚ್ಚ ಭರಿಸಲಿರುವ ಸರ್ಕಾರಗಳು.
  • ಯಾವುದೇ ವ್ಯಕ್ತಿಗೆ ಯಾವುದೇ ಆರೋಗ್ಯದ ಸಮಸ್ಯೆ ಎದುರಾದರೂ ಎಲ್ಲ ಸಮಯದಲ್ಲಿ ಲಭ್ಯವಿರುವಂತೆ ಎಲ್ಲ ವೈದ್ಯರಿಗೆ ಮಿಜೋರಾಂ ಆರೋಗ್ಯ ಇಲಾಖೆ ಸೂಚಿಸಿದೆ.
  • ನಿಜಾಮುದ್ದೀನ್ ಮರ್ಕಜ್ ಶಂಕಿತರ ಪತ್ತೆ ಪ್ರಯತ್ನ ಇನ್ನೂ ಮುಂದುವರಿದಿದೆ ಎಂದು ನಾಗಾಲ್ಯಾಂಡ್ ಸರ್ಕಾರ ಹೇಳಿದೆ. ಅದರಲ್ಲಿ ಭಾಗಿಯಾಗಿದ್ದವರು ರಾಜ್ಯ ನಿಯಂತ್ರಣ ಕೊಠಡಿಗೆ ಸಂಪರ್ಕಿಸುವಂತೆ ಮನವಿ
  • ಸಿಕ್ಕಿಂನಲ್ಲಿ 107 ಜನರನ್ನೊಳಗೊಂಡ 12 ಕ್ವಾರಂಟೈನ್ ಕೇಂದ್ರಗಳು ಮತ್ತು 4 ಪ್ರತ್ಯೇಕೀಕರಣ ಕೇಂದ್ರಗಳಿವೆ.
  • ವಿವಿಧ ಸಂಘಟನೆಗಳು ಒಗ್ಗೂಡಿ ತ್ರಿಪುರಾದಲ್ಲಿ ಅಗತ್ಯ ಇರುವವರಿಗೆ ಪರಿಹಾರ ವಿತರಿಸುತ್ತಿವೆ.

 

ಪಶ್ಚಿಮ ವಲಯ

  • 24 ಹೊಸ ಕೋವಿಡ್ 19 ಸೋಂಕು ದೃಢಪಟ್ಟ ಪ್ರಕರಣಗಳು ರಾಜಾಸ್ಥಾನದಲ್ಲಿ ಗುರುವಾರ ವರದಿಯಾಗಿವೆ. ಜೋದ್ಪುರದಲ್ಲಿ ಗರಿಷ್ಠ ಸಂಖ್ಯೆಯ ಪ್ರಕರಣ ಅಂದರೆ 9 ಪ್ರಕರಣ ದೃಢಪಟ್ಟಿದೆ. ಇದರಿಂದಾಗಿ ರಾಜ್ಯದಲ್ಲಿ ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 325ಕ್ಕೆ ಏರಿದೆ. (ರಾಜಾಸ್ಥಾನ ಸಾರ್ವಜನಿಕ ಆರೋಗ್ಯ ಇಲಾಖೆ)
  • ಗುಜರಾತ್ ನಲ್ಲಿ ಕೋವಿಡ್ 19 ಪ್ರಕರಣಗಳ ಸಂಖ್ಯೆ ಮಂಗಳವಾರ 165ಕ್ಕೆ ಏರಿಕೆಯಾಗಿದೆ. ಇಂದು 19 ರೋಗಿಗಳಿಗೆ ಸೋಂಕು ದೃಢಟ್ಟಿದೆ. ಹೊಸ ಪ್ರಕರಣಗಳ ಪೈಕಿ 14 ಅಹಮದಾಬಾದ್ ನಲ್ಲಿ ವರದಿಯಾಗಿವೆ. (ಮೂಲ: ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ)
  • 12 ಕ್ಕೂ ಅಧಿಕ ಕೋವಿಡ್ -19 ಪ್ರಕರಣಗಳು ಬೋಪಾಲ್ ನಲ್ಲಿ ಪತ್ತೆಯಾಗಿದ್ದು, ಮಧ್ಯಪ್ರದೇಶದಲ್ಲಿ ಸೋಂಕಿತರ ಸಂಖ್ಯೆ 268 ಆಗಿದೆ. ಹೊಸ ರೋಗಿಗಳ ಪೈಕಿ 7 ಮಂದಿ ಪೊಲೀಸ್ ಸಿಬ್ಬಂದಿ ಮತ್ತು ಅವರ ಕುಟುಂಬವರ್ಗದವರು ಹಾಗೂ ಐದು ಮಂದಿ ಆರೋಗ್ಯ ಇಲಾಖೆ ಸಿಬ್ಬಂದಿಯಾಗಿದ್ದಾರೆ. (ಮೂಲ: ಮುಖ್ಯ ವೈದ್ಯಾಧಿಕಾರಿ, ಭೋಪಾಲ್)
  • ಇನ್ನು ಮೂರು ದಿನಗಳಲ್ಲಿ, ಸಮುದಾಯದ ಮನೆಯಿಂದ ಮನೆಯ ಸಮೀಕ್ಷೆ ಪೂರ್ಣವಾಗಲಿದೆ ಎಂದು ಗೋವಾ ಸರ್ಕಾರ ತಿಳಿಸಿದೆ. ಜ್ವರದಂಥ ಲಕ್ಷಣಗಳು ಮತ್ತು ಪ್ರಯಾಣದ ಇತಿಹಾಸ ಇರುವವರಿಗಾಗಿ ರಾಜ್ಯದಾದ್ಯಂತ ಜನರನ್ನು ಸಮೀಕ್ಷೆ ಮಾಡಲು ಸುಮಾರು 7 ಸಾವಿರ ಎಣಿಕೆದಾರರು ತೊಡಗಿಕೊಂಡಿದ್ದಾರೆ.
  • ಮಹಾರಾಷ್ಟ್ರ ಪೊಲೀಸರಿಂದ ದಾಳಿ: ಪಾಲ್ಘರ್ ಜಿಲ್ಲೆಯ ವಾಡಾ ಪೊಲೀಸರು ಪಾಲ್ಘರ್ ಜಿಲ್ಲೆಯ ವಾಡಾದಲ್ಲಿನ ರಾಸಾಯನಿಕ ಕಾರ್ಖಾನೆಯ ಮೇಲೆ ದಾಳಿ ನಡೆಸಿ ಕಚ್ಚಾ ವಸ್ತುಗಳು ಮತ್ತು ಎಫ್.ಡಿ.ಎ. ಅನುಮೋದನೆ ಇಲ್ಲದ ಹ್ಯಾಂಡ್ ಸ್ಯಾನಿಟೈಸರ್ ಗಳನ್ನು ವಶಪಡಿಸಿಕೊಂಡಿದ್ದಾರೆ.

 

ದಕ್ಷಿಣ ವಲಯ

  • ಕೇರಳ: ಏಪ್ರಿಲ್ 14ರ ನಂತರವೂ ರಾಜ್ಯದಲ್ಲಿ ನಿರ್ಬಂಧಗಳು ಮುಂದುವರಿಯಲಿವೆ ಎಂದು ಆರೋಗ್ಯ ಸಚಿವರು ತಿಳಿಸಿದ್ದಾರೆ. ಧಾರವಿಯಿಂದ 1 ನೇ ಕೋವಿಡ್ ರೋಗಿಯೊಂದಿಗೆ ಉಳಿದುಕೊಂಡಿದ್ದ ಕೇರಳಿಗರನ್ನು ಮುಂಬೈ ಪೊಲೀಸರು ಗುರುತಿಸಿದ್ದಾರೆ; ಇವರೆಲ್ಲರೂ ದೆಹಲಿ ಟಿಜೆ ಸಮಾವೇಶದಲ್ಲಿ ಭಾಗವಹಿಸಿದ್ದರು. ಒಬ್ಬ ಕೇರಳಿಗರು ಇಂದು ಅಮೆರಿಕದಲ್ಲಿ ಕೋವಿಡ್ ನಿಂದ ನಿಧನರಾಗಿದ್ದಾರೆ.
  •  ತಮಿಳುನಾಡು: ರಾಜ್ಯ ರೈತರಿಗಾಗಿ ಹಲವು ಕ್ರಮಗಳನ್ನು ಪ್ರಕಟಿಸಿದೆ.: ಉಚಿತ ಕರೆ, ಉಚಿತ ಶೈತ್ಯಾಗಾರ, ಸಂಚಾರಿ ತರಕಾರಿ ಹಣ್ಣಿನ ಅಂಗಡಿಗಳು, ರೈತ ಉತ್ಪಾದಕ ಕಂಪನಿಗಳಿಗೆ ಸಾಲ ಸೌಲಭ್ಯ ಇತ್ಯಾದಿ
  • ಆಂಧ್ರಪ್ರದೇಶ: ಒಟ್ಟು ಕೋವಿಡ್ ಸಾವಿನ ಸಂಖ್ಯೆ 4, ಕರ್ನೂಲ್ ನಲ್ಲಿ ಇಂದು 1. 900 ವೆಂಟಿಲೇಟರ್ ಗಳು ಲಭ್ಯ. ಹಾಟ್ ಸ್ಪಾಟ್ ಗಳಲ್ಲಿ ಆಯ್ಕೆಯ ಮಾದರಿ ಪರೀಕ್ಷೆಗೆ ರಾಜ್ಯದ ನಿರ್ಧಾರ. ಆರೋಗ್ಯಶ್ರೀ ಆರೋಗ್ಯ ಆರೈಕೆ ಕಾರ್ಯಕ್ರಮದಡಿ ಕೋವಿಡ್ ಪ್ರಕರಣಗಳಿಗೆ ಚಿಕಿತ್ಸೆ ನೀಡಲು ಸರ್ಕಾರದ ನಿರ್ದೇಶನ. ಚಿಕಿತ್ಸೆಯ ವೆಚ್ಚ ರೂ. 16,000-ರೂ. 2.16 ಲಕ್ಷ ನಿಗದಿ.
  • ತೆಲಂಗಾಣ: ಈವರೆಗೆ 11 ಸೋಂಕಿನ ಪ್ರಕರಣ ವರದಿಯಾಗಿದ್ದು, ಒಟ್ಟು ಸಂಖ್ಯೆ 375ಕ್ಕೆ ಏರಿದೆ. ಸಕ್ರಿಯ ಪ್ರಕರಣಗಳು 317. ತೆಲಂಗಾಣ ಎಚ್.ಸಿ. ಪೂರ್ಣ ನ್ಯಾಯಾಲಯ ವಿಡಿಯೋ ಕಾನ್ಫರೆನ್ಸ್ ಮೂಲಕ ಸೇರುತ್ತಿದೆ. ಏಪ್ರಿಲ್ 30ರವರೆಗೆ ಲಾಕ್ ಡೌನ್ ಮುಂದುವರಿಸಲು ನಿರ್ಧಾರ. ಲಾಕ್ ಡೌನ್ ಜಾರಿಗೆ ಪೊಲೀಸರಿಂದ ಗುಂಪು ವಿಶ್ಲೇಷಣೆ ತಂತ್ರಾಂಶ ಮತ್ತು ಸ್ವಯಂಚಾಲಿತವಾಗಿ ವಾಹನಗಳ ಸಂಖ್ಯಾ ಫಲಕ ಗುರುತಿಸುವ ವ್ಯವಸ್ಥೆ(ಎ.ಎನ್.ಪಿ.ಆರ್.)ಯುಳ್ಳ ಡ್ರೋನ್ ಕ್ಯಾಮರಾ ಬಳಕೆ.

Fact Check on #Covid19

 

 

https://pbs.twimg.com/profile_banners/231033118/1584354869/1500x500

 

 

 

 

 

 

 

***



(Release ID: 1612104) Visitor Counter : 237