ಗೃಹ ವ್ಯವಹಾರಗಳ ಸಚಿವಾಲಯ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವ ಮತ್ತು ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ ಅವರ ಮಾರ್ಗದರ್ಶನದಲ್ಲಿ, 2019 ರಿಂದ 2026 ರ ನಡುವೆ 36 ದೇಶಗಳಿಂದ 274 ಪರಾರಿಯಾಗಿದ್ದ ಅಪರಾಧಿಗಳನ್ನು ಭಾರತಕ್ಕೆ ವಾಪಸ್ ಕರೆತರಲಾಗಿದೆ
ಹಿಂದಿನ ಸರ್ಕಾರಗಳಲ್ಲಿ ಪರಾರಿಯಾದವರನ್ನು ವಾಪಸ್ ಕರೆತರುವ ರಾಜಕೀಯ ಇಚ್ಛಾಶಕ್ತಿ ಇರಲಿಲ್ಲ; ಮೋದಿ ಸರ್ಕಾರವು ಪರಾರಿಯಾದವರ ಹಸ್ತಾಂತರವನ್ನು 'ರಾಷ್ಟ್ರೀಯ ಆದ್ಯತೆ'ಯನ್ನಾಗಿ ಮಾಡಿದೆ
ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ ಅವರ ಮಾರ್ಗದರ್ಶನದಲ್ಲಿ, ಪರಾರಿಯಾದ ಅಪರಾಧಿಗಳನ್ನು ಎದುರಿಸಲು ಭಾರತವು ಸಮಗ್ರ, ಗುಪ್ತಚರ ಆಧಾರಿತ ಮತ್ತು ತಂತ್ರಜ್ಞಾನ ಚಾಲಿತ ಮಾದರಿಯನ್ನು ಅಭಿವೃದ್ಧಿಪಡಿಸಿದೆ
ಪರಾರಿಯಾದ ಅಪರಾಧಿಗಳ ವಿರುದ್ಧ ಮೋದಿ ಸರ್ಕಾರದ ಕಾರ್ಯತಂತ್ರವು ಮೂರು ಪ್ರಮುಖ ಸ್ತಂಭಗಳ ಮೇಲೆ ನಿರ್ಮಿತವಾಗಿದೆ: ಜಾಗತಿಕ ಕಾರ್ಯಾಚರಣೆಗಳು, ದೃಢ ಸಮನ್ವಯ ಮತ್ತು ಚಾಣಾಕ್ಷ ರಾಜತಾಂತ್ರಿಕತೆ
ಪರಾರಿಯಾದ ಅಪರಾಧಿಗಳ ವಿಷಯವು ದೇಶದ ಸಾರ್ವಭೌಮತ್ವ, ಆರ್ಥಿಕ ಸ್ಥಿರತೆ, ಕಾನೂನು ಮತ್ತು ಸುವ್ಯವಸ್ಥೆ ಹಾಗೂ ರಾಷ್ಟ್ರೀಯ ಭದ್ರತೆಗೆ ಆಂತರಿಕವಾಗಿ ಬೆಸೆದುಕೊಂಡಿದೆ
ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ ಅವರ ಮಾರ್ಗದರ್ಶನದಲ್ಲಿ, ಪರಾರಿಯಾದ ಅಪರಾಧಿಗಳನ್ನು ಭಾರತಕ್ಕೆ ವಾಪಸ್ ತರುವ ಪ್ರಕ್ರಿಯೆಯನ್ನು ಮಿಷನ್ ಮೋಡ್ ನಲ್ಲಿ ಕೈಗೆತ್ತಿಕೊಳ್ಳಲಾಯಿತು, ಹಸ್ತಾಂತರ ಚೌಕಟ್ಟನ್ನು ಬಲಪಡಿಸಲು ಸರ್ಕಾರವು ಸರಣಿ ಕಾನೂನು ನಿಬಂಧನೆಗಳನ್ನು ಪರಿಚಯಿಸಿದೆ
ಮೋದಿ ಸರ್ಕಾರದ ಅವಧಿಯಲ್ಲಿ, ಇಂಟರ್ಪೋಲ್ ರೆಡ್ ಕಾರ್ನರ್ ನೋಟಿಸ್ ಗಳ ನೀಡಿಕೆಯಲ್ಲಿ ಗಣನೀಯ ಏರಿಕೆಯಾಗಿದೆ, ಕಳೆದ ಮೂರು ವರ್ಷಗಳಲ್ಲಿ 401 ಪರಾರಿಯಾದ ಅಪರಾಧಿಗಳ ವಿರುದ್ಧ ನೋಟಿಸ್ ಗಳನ್ನು ನೀಡಲಾಗಿದೆ
ಮೋದಿ ಸರ್ಕಾರವು ಭಾರತ್ ಪೋಲ್ (BHARATPOL) ಅನ್ನು ಪ್ರಾರಂಭಿಸಿದ್ದು, 1,400 ಕ್ಕೂ ಹೆಚ್ಚು ಏಜೆನ್ಸಿಗಳನ್ನು ಇಂಟರ್ಪೋಲ್ ನೊಂದಿಗೆ ಜೋಡಿಸಿದೆ, ಇದರಿಂದಾಗಿ ಮಾಹಿತಿ ಹಂಚಿಕೆಗೆ ಬೇಕಾಗುವ ಸಮಯವನ್ನು 3 - 10 ದಿನಗಳಿಗೆ ಕಡಿತಗೊಳಿಸಲಾಗಿದೆ
ಮೋದಿ ಸರ್ಕಾರವು 2019ರಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ ಐ ಎ) ತಿದ್ದುಪಡಿ ಕಾಯ್ದೆ ಮತ್ತು ಕಾನೂನುಬಾಹಿರ ಚಟುವಟಿಕೆಗಳ (ತಡೆ) ತಿದ್ದುಪಡಿ (ಯುಎಪಿಎ) ಕಾಯ್ದೆಯನ್ನು ಜಾರಿಗೆ ತಂದಿತು
ಮೂರು ಹೊಸ ಅಪರಾಧ ಕಾನೂನುಗಳು ಪರಾರಿಯಾದ ಅಪರಾಧಿಗಳಿಗೆ ಸಂಬಂಧಿಸಿದಂತೆ ವಿಶೇಷ ನಿಬಂಧನೆಗಳನ್ನು ಪರಿಚಯಿಸಿವೆ, ಮೊದಲ ಬಾರಿಗೆ, ಬಿ ಎನ್ ಎಸ್ ಎಸ್ ನ ಸೆಕ್ಷನ್ 355 ಮತ್ತು 356 ಪರಾರಿಯಾದವರ ಗೈರುಹಾಜರಿಯಲ್ಲಿ ವಿಚಾರಣೆ ನಡೆಸಲು ಅವಕಾಶ ಕಲ್ಪಿಸಿವೆ
ಪಿ ಎಂ ಎಲ್ ಎ ಯ ಕಟ್ಟುನಿಟ್ಟಾದ ಜಾರಿಯ ಮೂಲಕ, ಮೋದಿ ಸರ್ಕಾರವು 2019 ಮತ್ತು 2026ರ ನಡುವೆ ಪರಾರಿಯಾದ ಅಪರಾಧಿಗಳಿಗೆ ಸೇರಿದ ₹17,874 ಕೋಟಿ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿದೆ
2019 ಮತ್ತು 2026 ರ ನಡುವೆ, ದೇಶದಿಂದ ಓಡಿಹೋದ ಆರ್ಥಿಕ ಅಪರಾಧಿಗಳಿಂದ ವಸೂಲಿ ಮಾಡಿದ ಹಣ ಸೇರಿದಂತೆ ₹18,762 ಕೋಟಿ ಮೊತ್ತದ ಯಶಸ್ವಿ ಮರುಸಂಗ್ರಹಣೆಯನ್ನು ಮಾಡಲಾಗಿದೆ
ಆಪರೇಷನ್ ತ್ರಿಶೂಲ್ ಮೂಲಕ, ಮೋದಿ ಸರ್ಕಾರವು ಹೆಸರು ಮತ್ತು ಗುರುತುಗಳನ್ನು ಬದಲಾಯಿಸಿಕೊಂಡು ವಿದೇಶಗಳಲ್ಲಿ ಅಡಗಿದ್ದ ಪರಾರಿಯಾದ ಅಪರಾಧಿಗಳ ಜಿಯೋ-ಲೋಕೇಶನ್ ಪತ್ತೆಹಚ್ಚಲು ಉಪಗ್ರಹ ತಂತ್ರಜ್ಞಾನ ಮತ್ತು ಡಿಜಿಟಲ್ ಹೆಜ್ಜೆಗುರುತುಗಳನ್ನು ಬಳಸಿಕೊಂಡಿದೆ
प्रविष्टि तिथि:
04 AUG 2026 1:15PM by PIB Bengaluru
ಪರಾರಿಯಾದ ಅಪರಾಧಿಗಳ ವಿರುದ್ಧ ನಿರ್ಣಾಯಕ ನಿಲುವು ತೆಗೆದುಕೊಂಡ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವ ಮತ್ತು ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ ಅವರ ಮಾರ್ಗದರ್ಶನದಲ್ಲಿ, ಭಾರತವು 2019 ರಿಂದ 36 ದೇಶಗಳಿಂದ 274 ಪರಾರಿಯಾದ ಅಪರಾಧಿಗಳನ್ನು ವಾಪಸ್ ಕರೆತಂದಿದೆ. ಪರಾರಿಯಾದವರ ವಿರುದ್ಧದ ಕ್ರಮವನ್ನು ಬಲಪಡಿಸಲು, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2018 ರಲ್ಲಿ 'ಪರಾರಿಯಾದ ಆರ್ಥಿಕ ಅಪರಾಧಿಗಳ ಕಾಯ್ದೆ'ಯನ್ನು ಜಾರಿಗೆ ತಂದರು. ಗೃಹ ಸಚಿವರಾದ ಶ್ರೀ ಅಮಿತ್ ಶಾ ಅವರ ಮಾರ್ಗದರ್ಶನದಲ್ಲಿ, ಭಾರತವು ಪರಾರಿಯಾದವರ ವಿರುದ್ಧ ಸಮಗ್ರ, ಗುಪ್ತಚರ ಆಧಾರಿತ ಮತ್ತು ತಂತ್ರಜ್ಞಾನ ಚಾಲಿತ ಮಾದರಿಯನ್ನು ಅಭಿವೃದ್ಧಿಪಡಿಸಿದೆ, ಇದು ಅವರ ವಿರುದ್ಧ ಕಠಿಣ ಕ್ರಮಗಳಿಗೆ ಹಾದಿ ಮಾಡಿಕೊಟ್ಟಿದೆ ಮತ್ತು ಅವರನ್ನು ಭಾರತಕ್ಕೆ ವಾಪಸ್ ಕರೆತರಲು ಅನುಕೂಲ ಮಾಡಿಕೊಟ್ಟಿದೆ.
2014ಕ್ಕೂ ಮೊದಲು, ದೇಶದ ಹಸ್ತಾಂತರ ಚೌಕಟ್ಟು ಹಳೆಯದಾಗಿತ್ತು ಮತ್ತು ಭಾರತವು ಕೇವಲ 37 ದೇಶಗಳೊಂದಿಗೆ ಮಾತ್ರ ಹಸ್ತಾಂತರ ಒಪ್ಪಂದಗಳನ್ನು ಹೊಂದಿತ್ತು. ಆರ್ಥಿಕ ಅಪರಾಧಿಗಳನ್ನು ನಿರ್ವಹಿಸಲು ಅಥವಾ ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಯಾವುದೇ ಮೀಸಲಾದ ಕಾನೂನು ಇರಲಿಲ್ಲ. 2004 ಮತ್ತು 2013 ರ ನಡುವೆ, ಭಾರತವು ಸರಾಸರಿ ವರ್ಷಕ್ಕೆ ಕೇವಲ ನಾಲ್ಕು ಪರಾರಿಯಾದವರ ಹಸ್ತಾಂತರವನ್ನು ಮಾತ್ರ ಸಾಧಿಸಲು ಸಾಧ್ಯವಾಗಿತ್ತು, ಆದರೆ 110 ಹಸ್ತಾಂತರ ಕೋರಿಕೆಗಳು ಬಾಕಿ ಉಳಿದಿದ್ದವು. ಹೆಚ್ಚುವರಿಯಾಗಿ, ಅಪೂರ್ಣ ದಾಖಲೆಗಳು ಮತ್ತು ನಿಧಾನಗತಿಯ ಪ್ರಕ್ರಿಯೆಯು ಹಸ್ತಾಂತರ ಪ್ರಕ್ರಿಯೆಯನ್ನು ಅತ್ಯಂತ ಸಂಕೀರ್ಣಗೊಳಿಸಿತ್ತು, ಇದು ವಿದೇಶಿ ನ್ಯಾಯಾಲಯಗಳು ಹಸ್ತಾಂತರ ಕೋರಿಕೆಗಳನ್ನು ಹೆಚ್ಚಾಗಿ ತಿರಸ್ಕರಿಸಲು ಕಾರಣವಾಯಿತು. ಭಾರತದ ಹಸ್ತಾಂತರ ಪ್ರಯತ್ನಗಳು ದ್ವಿಗುಣ ಶಿಕ್ಷೆ ಮತ್ತು ದ್ವಿ-ಅಪರಾಧತ್ವ ತತ್ವಗಳು ಸೇರಿದಂತೆ ಕಾನೂನು ಮತ್ತು ನ್ಯಾಯಾಂಗ ಅಡೆತಡೆಗಳನ್ನು ಎದುರಿಸಿದವು, ಇವು ಹಲವು ಬಾರಿ ಹಸ್ತಾಂತರ ಕೋರಿಕೆಗಳ ತಿರಸ್ಕರಣೆಗೆ ಕಾರಣವಾದವು. ಇದಲ್ಲದೆ, ಗೃಹ ಸಚಿವಾಲಯ ಮತ್ತು ಇತರ ಇಲಾಖೆಗಳ ನಡುವೆ ಪರಿಣಾಮಕಾರಿ ಸಮನ್ವಯ ಮತ್ತು ಏಕೀಕೃತ ಕಾರ್ಯತಂತ್ರದ ಕೊರತೆಯು ಪ್ರಗತಿಗೆ ಅಡ್ಡಿಯಾಯಿತು. ಪರಾರಿಯಾದವರ ಮಾಹಿತಿ ಹಂಚಿಕೆ, ಸ್ಥಳ ಟ್ರ್ಯಾಕಿಂಗ್ ಮತ್ತು ರೆಡ್ ಕಾರ್ನರ್ ನೋಟಿಸ್ ಗಳ ನೀಡಿಕೆಯು ಸಹ ನಿಧಾನಗತಿಯಲ್ಲಿ ಸಾಗುತ್ತಿದ್ದವು.
ಹಿಂದಿನ ಸರ್ಕಾರಗಳಲ್ಲಿ ಪರಾರಿಯಾದವರನ್ನು ವಾಪಸ್ ಕರೆತರುವ ರಾಜಕೀಯ ಇಚ್ಛಾಶಕ್ತಿ ಇರಲಿಲ್ಲ; ಮೋದಿ ಸರ್ಕಾರವು ಪರಾರಿಯಾದವರ ಹಸ್ತಾಂತರವನ್ನು 'ರಾಷ್ಟ್ರೀಯ ಆದ್ಯತೆ'ಯನ್ನಾಗಿ ಮಾಡಿದೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ದೂರದೃಷ್ಟಿಗೆ ಅನುಗುಣವಾಗಿ, ಕೇಂದ್ರ ಗೃಹ ಸಚಿವರು ಪರಾರಿಯಾದವರ ವಿರುದ್ಧ ಜಾಗತಿಕ ತಲುಪುವಿಕೆ, ಬಲವಾದ ಸಮನ್ವಯ ಮತ್ತು ಚಾಣಾಕ್ಷ ರಾಜತಾಂತ್ರಿಕತೆ ಎಂಬ ಮೂರು ಹಂತದ ಕಾರ್ಯತಂತ್ರಕ್ಕೆ ಒತ್ತು ನೀಡಿದ್ದಾರೆ. ಶ್ರೀ ಅಮಿತ್ ಶಾ ಅವರು ಪರಾರಿಯಾದ ಅಪರಾಧಿಗಳ ವಿಷಯವನ್ನು ದೇಶದ ಸಾರ್ವಭೌಮತ್ವ, ಆರ್ಥಿಕ ಸ್ಥಿರತೆ, ಕಾನೂನು ಮತ್ತು ಸುವ್ಯವಸ್ಥೆ ಹಾಗೂ ರಾಷ್ಟ್ರೀಯ ಭದ್ರತೆಗೆ ಆಂತರಿಕವಾಗಿ ಬೆಸೆದುಕೊಂಡಿರುವ ವಿಷಯವೆಂದು ಬಣ್ಣಿಸಿದ್ದಾರೆ.
ಮೋದಿ ಸರ್ಕಾರವು 2019ರಲ್ಲಿ ಎನ್ ಐ ಎ (ತಿದ್ದುಪಡಿ) ಕಾಯ್ದೆ ಮತ್ತು ಯುಎಪಿಎ (ತಿದ್ದುಪಡಿ) ಕಾಯ್ದೆಯನ್ನು ಜಾರಿಗೆ ತಂದಿತು ಮತ್ತು 2020 ರಿಂದ ಪರಾರಿಯಾದ ಅಪರಾಧಿಗಳನ್ನು ಭಾರತಕ್ಕೆ ಕರೆತರುವ ಪ್ರಕ್ರಿಯೆಯನ್ನು ಮಿಷನ್ ಮೋಡ್ ನಲ್ಲಿ ಕೈಗೆತ್ತಿಕೊಳ್ಳಲಾಯಿತು. ಪರಿಣಾಮವಾಗಿ, ಜಾರಿ ಯತ್ನಗಳು ನಿಷೇಧಿತ ಸಂಘಟನೆಗಳಿಗೆ ಮಾತ್ರ ಸೀಮಿತವಾಗಿರಲಿಲ್ಲ. ಕಾರ್ಯಾಚರಣೆಯ ವ್ಯಾಪ್ತಿಯನ್ನು ವಿದೇಶಗಳಲ್ಲಿ ನೆಲೆಸಿರುವ ವೈಯಕ್ತಿಕ ಭಯೋತ್ಪಾದಕರು, ಹ್ಯಾಂಡ್ಲರ್ ಗಳು, ಫಂಡಿಂಗ್ ನೆಟ್‌ವರ್ಕ್ ಗಳು ಮತ್ತು ಬೆಂಬಲ ವ್ಯವಸ್ಥೆಗಳನ್ನು ಒಳಗೊಳ್ಳುವಂತೆ ವಿಸ್ತರಿಸಲಾಯಿತು, ಇದು ಪರಾರಿಯಾದವರನ್ನು ಹಿಂಬಾಲಿಸುವ ಮತ್ತು ಅವರ ಜಾಲಗಳನ್ನು ಧ್ವಂಸಗೊಳಿಸುವ ಭಾರತದ ಸಾಮರ್ಥ್ಯವನ್ನು ಗಮನಾರ್ಹವಾಗಿ ಬಲಪಡಿಸಿತು.
2024 ರಲ್ಲಿ, ಮೋದಿ ಸರ್ಕಾರವು ಮೂರು ಹೊಸ ಅಪರಾಧ ಕಾನೂನುಗಳನ್ನು ಅನುಷ್ಠಾನಗೊಳಿಸಿತು, ಪರಾರಿಯಾದ ಅಪರಾಧಿಗಳಿಗೆ ಸಂಬಂಧಿಸಿದ ವಿಶೇಷ ನಿಬಂಧನೆಗಳನ್ನು ಇದರಲ್ಲಿ ಸೇರಿಸಿತು. ಮೊದಲ ಬಾರಿಗೆ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ (ಬಿ ಎನ್ ಎಸ್ ಎಸ್) ಸೆಕ್ಷನ್ 355 ಮತ್ತು 356 ಪರಾರಿಯಾದವರ ಗೈರುಹಾಜರಿಯಲ್ಲಿ ವಿಚಾರಣೆ ನಡೆಸಲು ಅವಕಾಶ ಕಲ್ಪಿಸುತ್ತವೆ, ಇದು ಪರಾರಿಯಾದ ಆರೋಪಿಯ ಗೈರುಹಾಜರಿಯಲ್ಲಿಯೂ ಇಡೀ ನ್ಯಾಯಾಂಗ ಪ್ರಕ್ರಿಯೆಯನ್ನು - ವಿಚಾರಣೆಯಿಂದ ಹಿಡಿದು ಪ್ರಾಸಿಕ್ಯೂಷನ್ ವರೆಗೆ - ಪೂರ್ಣಗೊಳಿಸಲು ಅನುವು ಮಾಡಿಕೊಡುತ್ತದೆ.
2022ರಲ್ಲಿ, ಭಾರತವು 90ನೇ ಇಂಟರ್‌ಪೋಲ್ ಸಾಮಾನ್ಯ ಸಭೆಯನ್ನು ಆಯೋಜಿಸಿತ್ತು, ಅಲ್ಲಿ ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ ಅವರು ಜಾಗತಿಕ ಪೊಲೀಸ್ ವ್ಯವಸ್ಥೆಯ ಮೂರು ಸ್ತಂಭಗಳಾದ ಸಂವಹನ, ಸಹಯೋಗ ಮತ್ತು ಸಹಕಾರದ ಪ್ರಾಮುಖ್ಯತೆಯನ್ನು ಒತ್ತಿಹೇಳಿದರು. ಭಾರತ ಮತ್ತು ಜಾಗತಿಕ ಕಾನೂನು ಜಾರಿ ಸಂಸ್ಥೆಗಳ ನಡುವೆ ಸಮನ್ವಯ, ಸಂಪರ್ಕ ಮತ್ತು ಮಾಹಿತಿ ಹಂಚಿಕೆಯನ್ನು ಬಲಪಡಿಸಲು, ಕೇಂದ್ರ ಗೃಹ ಸಚಿವರು ಜನವರಿ 2025ರಲ್ಲಿ 'ಭಾರತ್ ಪೋಲ್' (BHARATPOL) ಅನ್ನು ಪ್ರಾರಂಭಿಸಿದರು. ಭಾರತ್ ಪೋಲ್ ಸಿಬಿಐ, ರಾಜ್ಯ ಪೊಲೀಸ್ ಪ್ರಧಾನ ಕಚೇರಿಗಳು (ಇಂಟರ್‌ಪೋಲ್ ಲೈಸನ್ ಆಫೀಸರ್ಸ್ ಮೂಲಕ) ಮತ್ತು ಜಿಲ್ಲಾ ಪೊಲೀಸ್ ಪ್ರಧಾನ ಕಚೇರಿಗಳನ್ನು ಒಂದೇ ವೇದಿಕೆಯಲ್ಲಿ ಸಂಯೋಜಿಸುವ ಮೂಲಕ ಸಮಗ್ರ ಮಾಹಿತಿ ಮೂಲಸೌಕರ್ಯವನ್ನು ನಿರ್ಮಿಸಿದೆ. ಈ ಉಪಕ್ರಮದಡಿಯಲ್ಲಿ, ರಾಜ್ಯ ಮತ್ತು ಕೇಂದ್ರ ಏಜೆನ್ಸಿಗಳ 1,400 ಕ್ಕೂ ಹೆಚ್ಚು ಘಟಕಗಳನ್ನು ಪೋರ್ಟಲ್ ಮೂಲಕ ಸಂಪರ್ಕಿಸಲಾಗಿದ್ದು, ಮಾಹಿತಿಯ ತಡೆರಹಿತ ಹರಿವನ್ನು ಸುಗಮಗೊಳಿಸಲಾಗಿದೆ. ಪರಿಣಾಮವಾಗಿ, ಸಿಬಿಐ ಮತ್ತು ಇತರ ಕಾನೂನು ಜಾರಿ ಸಂಸ್ಥೆಗಳ ನಡುವಿನ ಮಾಹಿತಿ ಹಂಚಿಕೆಯ ಪ್ರತಿಕ್ರಿಯೆಯ ಸಮಯವು ಗಮನಾರ್ಹವಾಗಿ ಕಡಿಮೆಯಾಗಿದೆ. ಇಂದು, ಸಿಬಿಐ ಕೋರಿದ ಮಾಹಿತಿಯನ್ನು ಇತರ ಕಾನೂನು ಜಾರಿ ಸಂಸ್ಥೆಗಳು ಸಾಮಾನ್ಯವಾಗಿ 10 ರಿಂದ 20 ದಿನಗಳಲ್ಲಿ ಮತ್ತು ಕೆಲವು ಸಂದರ್ಭಗಳಲ್ಲಿ 3 ರಿಂದ 10 ದಿನಗಳಲ್ಲಿ ಹಂಚಿಕೊಳ್ಳುತ್ತಿವೆ, ಇದು ತನಿಖೆಗಳು ಮತ್ತು ಹಸ್ತಾಂತರ ಪ್ರಕ್ರಿಯೆಗಳ ಕಾರ್ಯಕ್ಷಮತೆಯನ್ನು ಗಣನೀಯವಾಗಿ ಸುಧಾರಿಸಿದೆ. ಕೇಂದ್ರ ಗೃಹ ಸಚಿವರು ಈ ನಿಟ್ಟಿನಲ್ಲಿ ಒಟ್ಟು 5 ಪ್ರಮುಖ ಸಭೆಗಳನ್ನು ನಡೆಸಿದ್ದಾರೆ.
ಮೋದಿ ಸರ್ಕಾರವು ಹಣಕಾಸು ಅಕ್ರಮ ತಡೆ ಕಾಯ್ದೆಯನ್ನು (ಪಿ ಎಂ ಎಲ್ ಎ) ಹೆಚ್ಚಿನ ಕಟ್ಟುನಿಟ್ಟಿನಿಂದ ಜಾರಿಗೆ ತಂದಿದೆ. ಪಿ ಎಂ ಎಲ್ ಎ ಯ ಕಟ್ಟುನಿಟ್ಟಾದ ಜಾರಿಯ ಮೂಲಕ, ಮೋದಿ ಸರ್ಕಾರವು 2019 ಮತ್ತು 2026ರ ನಡುವೆ ಪರಾರಿಯಾದ ಅಪರಾಧಿಗಳಿಗೆ ಸೇರಿದ ₹17,874 ಕೋಟಿ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿದೆ. ಪರಾರಿಯಾದವರನ್ನು ಪತ್ತೆಹಚ್ಚಲು ಮತ್ತು ಬಂಧಿಸಲು ಅಂತರರಾಷ್ಟ್ರೀಯ ಪ್ರಯತ್ನಗಳನ್ನು ಬಲಪಡಿಸಲು, ಕೇಂದ್ರೀಯ ತನಿಖಾ ದಳ (ಸಿಬಿಐ) 'ವಿಶೇಷ ಜಾಗತಿಕ ಕಾರ್ಯಾಚರಣೆ ಕೇಂದ್ರ'ವನ್ನು ಸ್ಥಾಪಿಸಿದೆ. ಈ ಕೇಂದ್ರವು ಇಂಟರ್‌ಪೋಲ್ ಮೂಲಕ ಪ್ರಪಂಚದಾದ್ಯಂತದ ಪೊಲೀಸ್ ಏಜೆನ್ಸಿಗಳೊಂದಿಗೆ ನೈಜ ಸಮಯದಲ್ಲಿ ಸಮನ್ವಯ ಸಾಧಿಸುತ್ತದೆ, ಇದು ಪರಾರಿಯಾದವರನ್ನು ವೇಗವಾಗಿ ಟ್ರ್ಯಾಕ್ ಮಾಡಲು ಮತ್ತು ಬಂಧಿಸಲು ಅನುವು ಮಾಡಿಕೊಡುತ್ತದೆ. ಮಾಹಿತಿಯ ತ್ವರಿತ ವಿನಿಮಯಕ್ಕೆ ಅನುಕೂಲವಾಗುವಂತೆ, ಸಿಬಿಐ ಪ್ರತಿಯೊಂದು ರಾಜ್ಯದಲ್ಲಿ ಹಾಗೂ ಎಲ್ಲಾ ಕೇಂದ್ರ ತನಿಖಾ ಸಂಸ್ಥೆಗಳಲ್ಲಿ 'ಇಂಟರ್‌ಪೋಲ್ ಸಂಪರ್ಕ ಅಧಿಕಾರಿಗಳನ್ನು' ನೇಮಿಸಿದೆ, ಇದು ಪರಾರಿಯಾದವರ ತನಿಖೆಯಲ್ಲಿ ಸಮನ್ವಯ ಮತ್ತು ಅಂತರರಾಷ್ಟ್ರೀಯ ಸಹಕಾರವನ್ನು ಗಣನೀಯವಾಗಿ ಹೆಚ್ಚಿಸಿದೆ.
ಇತ್ತೀಚಿನ ವರ್ಷಗಳಲ್ಲಿ ಇಂಟರ್‌ಪೋಲ್ ರೆಡ್ ಕಾರ್ನರ್ ನೋಟಿಸ್ ಗಳ ಸಂಖ್ಯೆ ಗಮನಾರ್ಹವಾಗಿ ಹೆಚ್ಚಾಗಿದೆ. 2022ರಲ್ಲಿ 40, 2023ರಲ್ಲಿ 100, 2024ರಲ್ಲಿ 107, 2025ರಲ್ಲಿ 112 ರೆಡ್ ಕಾರ್ನರ್ ನೋಟಿಸ್ ಗಳನ್ನು ನೀಡಲಾಗಿದ್ದು, 2026ರಲ್ಲಿ ಇದುವರೆಗೆ 182 ನೋಟಿಸ್ ಗಳನ್ನು ನೀಡಲಾಗಿದೆ. ಪರಾರಿಯಾದ ಅಪರಾಧಿಗಳನ್ನು ಪತ್ತೆಹಚ್ಚುವ ಪ್ರಯತ್ನಗಳನ್ನು ಬಲಪಡಿಸಲು, ಪರಾರಿಯಾದ ಅಪರಾಧಿಗಳ ಜಿಯೋ-ಲೋಕೇಶನ್ ಪತ್ತೆಹಚ್ಚಲು 'ಆಪರೇಷನ್ ತ್ರಿಶೂಲ್' ಅನ್ನು ಪ್ರಾರಂಭಿಸಲಾಯಿತು. ಈ ಉಪಕ್ರಮದ ಅಡಿಯಲ್ಲಿ, ಇಂಟರ್‌ಪೋಲ್ ಬೆಂಬಲದೊಂದಿಗೆ, ಉಪಗ್ರಹ ಇನ್‌ಪುಟ್, ಕಣ್ಗಾವಲು ಮತ್ತು ಡಿಜಿಟಲ್ ಹೆಜ್ಜೆಗುರುತುಗಳ ವಿಶ್ಲೇಷಣೆಯನ್ನು ಬಳಸಿ ಅಡಗಿರುವ ಪರಾರಿಯಾದವರ ಸ್ಥಳಗಳನ್ನು ಗುರುತಿಸಲಾಗಿದೆ. ಅನೇಕ ಪರಾರಿಯಾದ ಅಪರಾಧಿಗಳು ವಿದೇಶದಲ್ಲಿ ವಾಸಿಸುವಾಗ ತಮ್ಮ ಹೆಸರುಗಳು ಅಥವಾ ಗುರುತುಗಳನ್ನು ಬದಲಾಯಿಸಿಕೊಂಡಿದ್ದರು. ಆದಾಗ್ಯೂ, ಸುಧಾರಿತ ತಂತ್ರಜ್ಞಾನ ಮತ್ತು ಪ್ರೊಫೈಲ್ ಮ್ಯಾಪಿಂಗ್ ಬಳಕೆಯ ಮೂಲಕ, ಭಾರತೀಯ ಏಜೆನ್ಸಿಗಳು ಅವರನ್ನು ಗುರುತಿಸಲು ಮತ್ತು ಪತ್ತೆಹಚ್ಚಲು ಸಾಧ್ಯವಾಯಿತು. ಹಸ್ತಾಂತರ ಪ್ರಕ್ರಿಯೆಗಳನ್ನು ತ್ವರಿತಗೊಳಿಸಲು ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗಿದೆ, ಇದರಲ್ಲಿ ನ್ಯಾಯಾಲಯದ ವಿಚಾರಣೆಗಳಿಗೆ ವಿಡಿಯೋ ಕಾನ್ಫರೆನ್ಸಿಂಗ್ ಬಳಕೆಯೂ ಸೇರಿದೆ, ಇದರಿಂದಾಗಿ ಕಾನೂನು ಪ್ರಕ್ರಿಯೆಯನ್ನು ವೇಗಗೊಳಿಸಲು ಸಹಾಯವಾಗಿದೆ. ಕಳೆದ ಮೂರು ವರ್ಷಗಳಲ್ಲಿ, 401 ಪರಾರಿಯಾದ ಅಪರಾಧಿಗಳ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಗಳನ್ನು ನೀಡಲಾಗಿದೆ.
ವರ್ಷವಾರು ವಿವರಗಳ ಪ್ರಕಾರ 2019 ಮತ್ತು 2026 ರ ನಡುವೆ 274 ಪರಾರಿಯಾದವರನ್ನು ವಾಪಸ್ ಕರೆತರಲಾಗಿದೆ
|
ಅಪರಾಧದ ವರ್ಗ
|
2019
|
2020
|
2021
|
2022
|
2023
|
2024
|
2025
|
2026 (ಜುಲೈವರೆಗೆ)
|
ಒಟ್ಟು
|
|
ವಂಚನೆ/ಆರ್ಥಿಕ ಅಪರಾಧಗಳು
|
-
|
-
|
-
|
01
|
-
|
04
|
03
|
01
|
09
|
|
ಭಯೋತ್ಪಾದನಾ ಚಟುವಟಿಕೆ/ರಾಷ್ಟ್ರವಿರೋಧಿ ಚಟುವಟಿಕೆ/ ಮಾದಕ ವಸ್ತು ಭಯೋತ್ಪಾದನೆ
|
-
|
-
|
01
|
04
|
02
|
04
|
05
|
01
|
17
|
|
ಸಂಘಟಿತ ಅಪರಾಧ/ಗ್ಯಾಂಗ್‌ಸ್ಟರ್ ಗಳು/ಸುಲಿಗೆ
|
01
|
01
|
-
|
04
|
03
|
05
|
14
|
14
|
42
|
|
ಕೊಲೆ/ದರೋಡೆ/ಹಿಂಸಾತ್ಮಕ ಅಪರಾಧ
|
06
|
06
|
03
|
11
|
07
|
11
|
09
|
09
|
62
|
|
ಲೈಂಗಿಕ ಅಪರಾಧಗಳು/ಅತ್ಯಾಚಾರ/ಪೋಕ್ಸೋ
|
02
|
-
|
04
|
13
|
04
|
15
|
13
|
02
|
53
|
|
ಮಾದಕ ದ್ರವ್ಯ/ಎನ್ ಡಿ ಪಿ ಎಸ್/ಮಾದಕದ್ರವ್ಯ ಕಳ್ಳಸಾಗಣೆ
|
-
|
-
|
02
|
01
|
-
|
01
|
07
|
05
|
16
|
|
ಕಳ್ಳಸಾಗಣೆ/ನಕಲಿ ನೋಟು/ಸೈಬರ್/ನಿಷೇಧಿತ ವಸ್ತುಗಳು
|
-
|
-
|
04
|
02
|
-
|
02
|
02
|
02
|
12
|
|
ಮಾನವ ಕಳ್ಳಸಾಗಣೆ /ಅಪಹರಣ
|
-
|
-
|
01
|
01
|
04
|
01
|
08
|
03
|
18
|
|
ಇತರೆ
|
-
|
-
|
08
|
03
|
17
|
00
|
09
|
08
|
45
|
|
ಒಟ್ಟು
|
09
|
07
|
23
|
40
|
37
|
43
|
70
|
45
|
274
|
ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ ಅವರ ಮಾರ್ಗದರ್ಶನದಲ್ಲಿ, ಹಸ್ತಾಂತರ ಕೋರಿಕೆಗಳನ್ನು ಈಗ ಹೆಚ್ಚು ವೃತ್ತಿಪರ ಮತ್ತು ಪ್ರಮಾಣೀಕೃತ ರೀತಿಯಲ್ಲಿ ಸಿದ್ಧಪಡಿಸಲಾಗುತ್ತಿದೆ. ಹೆಚ್ಚುವರಿಯಾಗಿ, ಕೋರಲಾದ ದೇಶದ ದಾಖಲಾತಿ ಅಗತ್ಯತೆಗಳು ಮತ್ತು ಕಾನೂನು ನಿರೀಕ್ಷೆಗಳನ್ನು ಎಚ್ಚರಿಕೆಯಿಂದ ಪರಿಗಣಿಸಿದ ನಂತರ ಲಿಖಿತ ಭರವಸೆಗಳನ್ನು ನೀಡಲಾಗುತ್ತದೆ. ಭಾರತಕ್ಕೆ ವಾಪಸ್ ಕರೆತರಲಾದ ಪರಾರಿಯಾದವರಲ್ಲಿ ಭಯೋತ್ಪಾದನೆ, ಗ್ಯಾಂಗ್‌ಸ್ಟರ್ ಗಳು, ಆರ್ಥಿಕ ಅಪರಾಧಿಗಳು, ಮಾದಕ ದ್ರವ್ಯ ಆರೋಪಿಗಳು ಹಾಗೂ ಕೊಲೆ, ಅತ್ಯಾಚಾರ ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೋ) ಕಾಯ್ದೆಯಡಿಯ ಅಪರಾಧಗಳಲ್ಲಿ ಭಾಗಿಯಾದ ವ್ಯಕ್ತಿಗಳು ಸೇರಿದ್ದಾರೆ.
ಪರಾರಿಯಾದವರನ್ನು ಭಾರತಕ್ಕೆ ವಾಪಸ್ ಕರೆತರುವ ಅಭಿಯಾನವು ಭಯೋತ್ಪಾದನೆ, ಖಲಿಸ್ತಾನ್ ಪರ ತೀವ್ರವಾದ, ಗ್ಯಾಂಗ್‌ಸ್ಟರ್-ಭಯೋತ್ಪಾದಕ ನಂಟು, ಮಾದಕ ದ್ರವ್ಯ ಕಳ್ಳಸಾಗಣೆ, ಸೈಬರ್ ವಂಚನೆ ಮತ್ತು ನಕಲಿ ನೋಟುಗಳಿಗೆ ಸಂಬಂಧಿಸಿದ ಪ್ರಕರಣಗಳಾದ್ಯಂತ ವಿಸ್ತರಿಸಿದೆ. ಅಮೆರಿಕಾದಿಂದ ತಹವ್ವೂರ್ ಹುಸೇನ್ ರಾಣಾನ ಹಸ್ತಾಂತರವು ಭಾರತದ ಸಂಕಲ್ಪಕ್ಕೆ ಮತ್ತು ಜಟಿಲವಾದ ಭಯೋತ್ಪಾದನಾ ಪ್ರಕರಣಗಳನ್ನು ಬೆನ್ನಟ್ಟುವಲ್ಲಿ ಅದರ ಸುಸ್ಥಿರ ಕಾನೂನು ಮತ್ತು ರಾಜತಾಂತ್ರಿಕ ಪ್ರಯತ್ನಗಳಿಗೆ ಪ್ರಮುಖ ಉದಾಹರಣೆಯಾಗಿದೆ. ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದ ವಿಷಯಗಳಲ್ಲಿ, ವಿದೇಶದಿಂದ ಕಾರ್ಯನಿರ್ವಹಿಸುತ್ತಿದ್ದ ಪರಾರಿಯಾದವರನ್ನು ಭಯೋತ್ಪಾದನೆ, ನಾರ್ಕೋ-ಭಯೋತ್ಪಾದನೆ ಮತ್ತು ಗಡಿಯಾಚಿನ ಬೆಂಬಲ ಜಾಲಗಳನ್ನು ಜೀವಂತವಾಗಿಡಲು ಬಳಸಿಕೊಳ್ಳಲಾಗಿತ್ತು.
ಪರಾರಿಯಾದ ಅಪರಾಧಿಗಳನ್ನು ಭಾರತಕ್ಕೆ ವಾಪಸ್ ಕರೆತರುವಲ್ಲಿ ಸಾಧಿಸಿದ ಯಶಸ್ಸು ಆಕಸ್ಮಿಕವಾಗಿ ಬಂದಿದ್ದಲ್ಲ, ಬದಲಿಗೆ ವಿಶ್ವಾಸಾರ್ಹತೆ, ಸಂಪೂರ್ಣ ಕಾನೂನು ಸಿದ್ಧತೆ, ಸುಸ್ಥಿರ ರಾಜತಾಂತ್ರಿಕ ಪಟ್ಟು ಮತ್ತು ನಿರಂತರ ಅನುಸರಣೆಯ ಫಲಿತಾಂಶವಾಗಿದೆ. ದೇಶೀಯ ಮಟ್ಟದಲ್ಲಿ, ಈ ಪ್ರಯತ್ನವನ್ನು ಗುಪ್ತಚರ ಸಂಸ್ಥೆ (ಐಬಿ), ಕೇಂದ್ರೀಯ ತನಿಖಾ ದಳ (ಸಿಬಿಐ), ಸಂಶೋಧನೆ ಮತ್ತು ವಿಶ್ಲೇಷಣಾ ವಿಭಾಗ (ಆರ್&ಎಡಬ್ಲ್ಯೂ), ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ ಐ ಎ), ಜಾರಿ ನಿರ್ದೇಶನಾಲಯ (ಇಡಿ), ವಿದೇಶಾಂಗ ಸಚಿವಾಲಯ (ಎಂಇಎ), ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್ ಸಿ ಬಿ), ಸರಕು ಮತ್ತು ಸೇವಾ ತೆರಿಗೆ ಗುಪ್ತಚರ ಮಹಾನಿರ್ದೇಶನಾಲಯ (ಡಿಜಿಜಿಐ) ಮತ್ತು ರಾಜ್ಯ ಪೊಲೀಸ್ ಪಡೆಗಳ ನಡುವಿನ ನಿಕಟ ಸಮನ್ವಯದ ಮೂಲಕ ನಡೆಸಲಾಗಿದೆ. ಇದು ನಿಜವಾದ "ಇಡೀ-ಸರ್ಕಾರ" ವಿಧಾನವನ್ನು ಪ್ರತಿಬಿಂಬಿಸುತ್ತದೆ, ಇದರಲ್ಲಿ ಕೇಂದ್ರ ಮತ್ತು ರಾಜ್ಯ ಏಜೆನ್ಸಿಗಳು ಪರಾರಿಯಾದ ಅಪರಾಧಿಗಳ ಮರಳುವಿಕೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಸಂತ್ರಸ್ತರಿಗೆ ತ್ವರಿತ ನ್ಯಾಯವನ್ನು ಒದಗಿಸಲು ನಿಕಟ ಸಮನ್ವಯದೊಂದಿಗೆ ಕಾರ್ಯನಿರ್ವಹಿಸುತ್ತವೆ.
ಜನವರಿ 2026ರಲ್ಲಿ ಗುಪ್ತಚರ ಸಂಸ್ಥೆಯ (ಐಬಿ) ಮಲ್ಟಿ ಏಜೆನ್ಸಿ ಸೆಂಟರ್ (ಎಂಎಸಿ) ಅಡಿಯಲ್ಲಿ 'ಸ್ಟ್ಯಾಂಡಿಂಗ್ ಫೋಕಸ್ ಗ್ರೂಪ್' ರಚನೆಯು ಭಾರತದ ಪರಾರಿಯಾದವರ ನಿರ್ವಹಣಾ ಚೌಕಟ್ಟನ್ನು ಬಲಪಡಿಸುವಲ್ಲಿ ಒಂದು ಪ್ರಮುಖ ಸಾಂಸ್ಥಿಕ ಹೆಜ್ಜೆಯಾಗಿದೆ. ಪರಾರಿಯಾದವರ ಪ್ರಕರಣಗಳಿಗೆ ಆದ್ಯತೆ ನೀಡುವುದು, ದಾಖಲೆಗಳನ್ನು ಪ್ರಮಾಣೀಕರಿಸುವುದು, ಮಾಹಿತಿ ಕೊರತೆಗಳನ್ನು ನೀಗಿಸುವುದು, ವಿದೇಶಿ ಪಾಲುದಾರರೊಂದಿಗೆ ನಿರಂತರ ಅನುಸರಣೆ ಖಚಿತಪಡಿಸಿಕೊಳ್ಳುವುದು ಮತ್ತು ರಾಜ್ಯ ಏಜೆನ್ಸಿಗಳು ಪ್ರಾರಂಭಿಸಿದ ಪ್ರಕರಣಗಳಿಗೆ ರಾಷ್ಟ್ರೀಯ ಮಟ್ಟದ ಬೆಂಬಲವನ್ನು ಒದಗಿಸುವುದು ಈ ಗುಂಪಿನ ಜವಾಬ್ದಾರಿಯಾಗಿದೆ. ವಿದೇಶಗಳಿಂದ ಕಾರ್ಯಾಚರಿಸುವ ಪರಾರಿಯಾದ ಅಪರಾಧಿಗಳು ಕೇವಲ ಧೂಳು ಹಿಡಿದ ಕೇಸ್ ಫೈಲ್ ಗಳಲ್ಲ - ಅವರು ನಿರಂತರ, ಸಂಯೋಜಿತ ಮತ್ತು ಸಕ್ರಿಯ ಕ್ರಮದ ಅಗತ್ಯವಿರುವ ಸಜೀವ ಕಾರ್ಯಾಚರಣೆಯ ಬೆದರಿಕೆಗಳಾಗಿದ್ದಾರೆ.
Click here to see the Note.
*****
(रिलीज़ आईडी: 2294240)
आगंतुक पटल : 241
इस विज्ञप्ति को इन भाषाओं में पढ़ें:
Malayalam
,
हिन्दी
,
Bengali
,
Bengali-TR
,
Odia
,
Khasi
,
English
,
Urdu
,
Marathi
,
Nepali
,
Manipuri
,
Assamese
,
Punjabi
,
Gujarati
,
Tamil
,
Telugu_Vw
,
Telugu