ಪ್ರಧಾನ ಮಂತ್ರಿಯವರ ಕಛೇರಿ
ಯುನೈಟೆಡ್ ಕಿಂಗ್ಡಮ್ ವಿದೇಶಾಂಗ ಕಾರ್ಯದರ್ಶಿ ಅವರಿಂದ ಪ್ರಧಾನಮಂತ್ರಿ ಅವರ ಭೇಟಿ
प्रविष्टि तिथि:
04 JUN 2026 9:37PM by PIB Bengaluru
ಯುನೈಟೆಡ್ ಕಿಂಗ್ಡಮ್ ವಿದೇಶಾಂಗ ಕಾರ್ಯದರ್ಶಿ ಇವ್ಯಾಟ್ ಕೂಪರ್ ಅವರು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಇಂದು ಭೇಟಿ ಮಾಡಿದರು.
ಈ ಭೇಟಿಗೆ ಸಂತಸ ವ್ಯಕ್ತಪಡಿಸಿರುವ ಪ್ರಧಾನಮಂತ್ರಿಯವರು, ಎರಡೂ ದೇಶಗಳಿಗೆ ಅಭೂತಪೂರ್ವ ಬೆಳವಣಿಗೆಯ ಅವಕಾಶಗಳನ್ನು ತೆರೆದಿಟ್ಟಿರುವ ಇತ್ತೀಚಿನ ದಿನಗಳಲ್ಲಿ ಗಾಢಗೊಳ್ಳುತ್ತಿರುವ ಭಾರತ-ಯುನೈಟೆಡ್ ಕಿಂಗ್ಡಮ್ ಪಾಲುದಾರಿಕೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಭಾರತ - ಯುಕೆ ವಿಷನ್ 2035 ಪಾಲುದಾರಿಕೆಗೆ ಮಾರ್ಗದರ್ಶನ ನೀಡುತ್ತಾ ಜಾಗತಿಕ ಒಳಿತಿಗಾಗಿ ಜಂಟಿ ಪ್ರಯತ್ನಗಳ ಬಲವರ್ಧನೆಯನ್ನು ಮುಂದುವರಿಸಲಿದೆ ಎಂದು ಪ್ರಧಾನಮಂತ್ರಿ ಪ್ರತಿಪಾದಿಸಿದರು.
ಪ್ರಧಾನಮಂತ್ರಿಗಳು ಎಕ್ಸ್ ನಲ್ಲಿ ಹೀಗೆ ಪೋಸ್ಟ್ ಮಾಡಿದ್ದಾರೆ:
"ಯುಕೆ ವಿದೇಶಾಂಗ ಕಾರ್ಯದರ್ಶಿ ಇವ್ಯಾಟ್ ಕೂಪರ್ ಅವರನ್ನು ಭೇಟಿ ಮಾಡಿ ಸಂತೋಷವಾಗಿದೆ. ಇತ್ತೀಚಿನ ದಿನಗಳಲ್ಲಿ ಭಾರತ-ಯುಕೆ ಪಾಲುದಾರಿಕೆ ಆಳವಾಗುತ್ತಿದ್ದು, ಇದು ನಮ್ಮ ಎರಡೂ ದೇಶಗಳಿಗೆ ಅಭೂತಪೂರ್ವ ಬೆಳವಣಿಗೆಯ ಅವಕಾಶಗಳನ್ನು ತೆರೆದಿಟ್ಟಿದೆ.
ಭಾರತ-ಯುನೈಟೆಡ್ ಕಿಂಗ್ಡಮ್ ವಿಷನ್ 2035 ನಮ್ಮ ಪಾಲುದಾರಿಕೆಗೆ ಮಾರ್ಗದರ್ಶನ ನೀಡುವುದನ್ನು ಮತ್ತು ಜಾಗತಿಕ ಒಳಿತಿಗಾಗಿ ನಮ್ಮ ಜಂಟಿ ಪ್ರಯತ್ನಗಳನ್ನು ಬಲಪಡಿಸುವುದನ್ನು ಮುಂದುವರಿಸಲಿದೆ. @YvetteCooperMP"
*****
(रिलीज़ आईडी: 2269223)
आगंतुक पटल : 5
इस विज्ञप्ति को इन भाषाओं में पढ़ें:
English
,
Urdu
,
हिन्दी
,
Marathi
,
Bengali
,
Manipuri
,
Punjabi
,
Gujarati
,
Tamil
,
Telugu
,
Malayalam