ಆಯುಷ್
azadi ka amrit mahotsav

ʻಅಂತಾರಾಷ್ಟ್ರೀಯ ಯೋಗ ದಿನ-2026ʼಕ್ಕೆ 100 ದಿನಗಳ ಕ್ಷಣಗಣನೆ ಆರಂಭದ ಪ್ರಯುಕ್ತ ʻಯೋಗ ಮಹೋತ್ಸವʼ

ಪ್ರಕಟಣಾ ದಿನಾಂಕ: 12 MAR 2026 10:27AM by PIB Bengaluru

ಭಾರತ ಸರ್ಕಾರದ ಆಯುಷ್ ಸಚಿವಾಲಯದ ʻಮೊರಾರ್ಜಿ ದೇಸಾಯಿ ರಾಷ್ಟ್ರೀಯ ಯೋಗ ಸಂಸ್ಥೆʼ(ಎಂಡಿಎನ್ಐವೈ) ಮಾರ್ಚ್ 13, 2026 ರಂದು ವಿಜ್ಞಾನ ಭವನದಲ್ಲಿ ʻಯೋಗ ಮಹೋತ್ಸವ-2026ʼ ಅನ್ನು ಆಯೋಜಿಸುತ್ತಿದೆ. ಆಯುಷ್ ಸಚಿವಾಲಯವು ತನ್ನ ವಿವಿಧ ಮಧ್ಯಸ್ಥಗಾರರೊಂದಿಗೆ 100 ದಿನಗಳ ಕ್ಷಣಗಣನೆ ಕಾರ್ಯಕ್ರಮವನ್ನು ರೂಪಿಸಿದ್ದು,  ಇದರಲ್ಲಿ 100 ಸಂಸ್ಥೆಗಳು 100 ಸ್ಥಳಗಳು / ನಗರಗಳಲ್ಲಿ ಯೋಗವನ್ನು ಉತ್ತೇಜಿಸುತ್ತಿವೆ. ಮಾರ್ಚ್  13, 2026 ರಂದು ವಿಜ್ಞಾನ ಭವನದಲ್ಲಿ ಬೆಳಗ್ಗೆ 9.00 ರಿಂದ ಭವ್ಯ ಕಾರ್ಯಕ್ರಮವನ್ನು ನಿಗದಿಪಡಿಸಲಾಗಿದೆ.

ಈ ಕಾರ್ಯಕ್ರಮವು ಗೌರವಾನ್ವಿತ ಸಂಪುಟ ಸಚಿವರ ಉಪಸ್ಥಿತಿಗೆ ಸಾಕ್ಷಿಯಾಗುವ ನಿರೀಕ್ಷೆಯಿದೆ. ಈ ಕಾರ್ಯಕ್ರಮದಲ್ಲಿ ಕೇಂದ್ರ ಆಯುಷ್ ಸಚಿವಾಲಯದ ಗೌರವಾನ್ವಿತ ಸಹಾಯಕ ಸಚಿವ (ಸ್ವತಂತ್ರ ನಿರ್ವಹಣೆ), ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಸಹಾಯಕ ಸಚಿವರಾದ ಶ್ರೀ ಪ್ರತಾಪರಾವ್ ಜಾಧವ್; ಭಾರತ ಸರ್ಕಾರದ ಆಯುಷ್‌ ಸಚಿವಾಲಯದ ಕಾರ್ಯದರ್ಶಿ ವೈದ್ಯ ರಾಜೇಶ್ ಕೊಟೆಚಾ; ಬೆಂಗಳೂರಿನ ಯೋಗ ಶಿಕ್ಷಣ ಸಂಸ್ಥೆ ʻಎಸ್‌-ವ್ಯಾಸ್‌ʼ ಸೊಸೈಟಿಯ ಅಧ್ಯಕ್ಷ ಡಾ. ಎಚ್.ಆರ್.ನಾಗೇಂದ್ರ; ಭಾರತ ಸರ್ಕಾರದ ಆಯುಷ್ ಸಚಿವಾಲಯದ ಜಂಟಿ ಕಾರ್ಯದರ್ಶಿ ಶ್ರೀಮತಿ ಮೊನಾಲಿಸಾ ದಾಶ್ ಹಾಗೂ ಪ್ರಮುಖ ಗಣ್ಯರು, ಯೋಗ ಗುರುಗಳು, ಆಯುಷ್ ತಜ್ಞರು, ಆಧುನಿಕ ಔಷಧ ಮತ್ತು ಸಂಬಂಧಿತ ವಿಜ್ಞಾನದ ತಜ್ಞರು, ಪ್ರತಿನಿಧಿಗಳು, ಯೋಗ ಉತ್ಸಾಹಿಗಳು ಮತ್ತು ಯೋಗ ಸಾಧಕರು ಭಾಗವಹಿಸಲಿದ್ದಾರೆ.

ಗೌರವಾನ್ವಿತ ಆಯುಷ್ ಸಚಿವರಾದ ಶ್ರೀ ಪ್ರತಾಪರಾವ್ ಜಾಧವ್ ಅವರು, "ನಿಮಗೆ ತಿಳಿದಿರುವಂತೆ, ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಉಪಕ್ರಮದಿಂದಾಗಿ, ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು 2014ರಲ್ಲಿ ಜೂನ್ 21 ಅನ್ನು ʻಅಂತಾರಾಷ್ಟ್ರೀಯ ಯೋಗ ದಿನʼವೆಂದು ಘೋಷಿಸುವ ಐತಿಹಾಸಿಕ ನಿರ್ಧಾರವನ್ನು ತೆಗೆದುಕೊಂಡಿತು. ಯೋಗವು ನಮ್ಮ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಪರಂಪರೆಯ ಅವಿಭಾಜ್ಯ ಅಂಗವಾಗಿರುವುದರಿಂದ ಯೋಗದ ಈ ವಿಶ್ವವ್ಯಾಪಿ ಅಂಗೀಕಾರವು ನಮ್ಮ ದೇಶಕ್ಕೆ ಹೆಮ್ಮೆಯ ವಿಷಯವಾಗಿದೆ. ಆಯುಷ್ ಸಚಿವಾಲಯವು ʻಅಂತಾರಾಷ್ಟ್ರೀಯ ಯೋಗ ದಿನʼವನ್ನು(ಐಡಿವೈ) ಆಚರಿಸುವ ನೋಡಲ್ ಸಚಿವಾಲಯವಾಗಿದೆ. ಪ್ರತಿ ವರ್ಷ, ʻಐಡಿವೈʼ ಆಚರಣೆಯ ಮುಖ್ಯ ಕಾರ್ಯಕ್ರಮವಾಗಿ ಸಾಮೂಹಿಕ ಯೋಗ ಪ್ರದರ್ಶನ ಹಮ್ಮಿಕೊಳ್ಳಲಾಗುತ್ತದೆ. ಇದರ ನೇತೃತ್ವವನ್ನು ಸ್ವತಃ ಮಾನ್ಯ ಪ್ರಧಾನ ಮಂತ್ರಿಯವರು ವಹಿಸುತ್ತಾರೆ. ʻಐಡಿವೈ -2026ʼ ರ ಸಿದ್ಧತೆಗಳು ಈಗಾಗಲೇ ನಡೆಯುತ್ತಿವೆ,ʼʼ ಎಂದು ಹೇಳಿದರು.

ʻಅಂತಾರಾಷ್ಟ್ರೀಯ ಯೋಗ ದಿನಾಚರಣೆʼಗೆ 100 ದಿನಗಳ ಕ್ಷಣಗಣನೆಯನ್ನು ಪ್ರತಿ ವರ್ಷ ಯೋಗ ದಿನ ಆಚರಣೆಗೆ ಮುಂಚಿತವಾಗಿ ಮಹತ್ವದ ಹಂತವಾಗಿ ಆಚರಿಸಲಾಗುತ್ತದೆ ಎಂಬುದು ಗಮನಾರ್ಹ. ಈ ಅವಧಿಯಲ್ಲಿ, ಸಚಿವಾಲಯವು ತನ್ನ ವ್ಯಾಪ್ತಿಯನ್ನು ವಿಸ್ತರಿಸಲು ಮತ್ತು ಯೋಗದ ಸಂದೇಶವನ್ನು ವ್ಯಾಪಕವಾಗಿ ಪ್ರಚಾರ ಮಾಡಲು ಪ್ರಯತ್ನಿಸುತ್ತದೆ. ದೇಶಾದ್ಯಂತದ ಜನರೊಂದಿಗೆ ಸಂಪರ್ಕ ಸಾಧಿಸುವ ಮತ್ತು 2026ರ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಮುಂಚಿನ 100 ದಿನಗಳಲ್ಲಿ ಹೆಚ್ಚಿನ ಸಾರ್ವಜನಿಕ ಭಾಗವಹಿಸುವಿಕೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಲಾಗಿದೆ.

ಮುಂಬರುವ 12ನೇ ʻಅಂತಾರಾಷ್ಟ್ರೀಯ ಯೋಗ ದಿನʼವನ್ನು (ಐಡಿವೈ) ದೇಶದಾದ್ಯಂತ 100 ಪ್ರಮುಖ ಸ್ಥಳಗಳಲ್ಲಿ ಆಚರಿಸಲು ಸಚಿವಾಲಯ ಪ್ರಸ್ತಾಪಿಸಿದೆ. ಈಗಾಗಲೇ 100 ದಿನಗಳ ಕ್ಷಣಗಣನೆ ಕಾರ್ಯಕ್ರಮ ನಡೆಯುತ್ತಿರುವುದರಿಂದ, ʻಐಡಿವೈ-2026ʼರ ಸಿದ್ಧತೆಗಳು ವೇಗ ಪಡೆದಿದ್ದು, ಸಮಗ್ರ ಯೋಗಕ್ಷೇಮದ ಮಾರ್ಗವಾಗಿ ಯೋಗವನ್ನು ಆಚರಿಸಲು ಮತ್ತು ಅಳವಡಿಸಿಕೊಳ್ಳಲು ದೇಶಾದ್ಯಂತ ಜನರನ್ನು ಪ್ರೇರೇಪಿಸುತ್ತಿವೆ.

 

*****


(ಪ್ರಕಟಣೆ ಐ.ಡಿ.: 2238771) ವಿಸಿಟರ್ ಕೌಂಟರ್ : 7
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Marathi , Bengali , Gujarati , Tamil , Malayalam