ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

ದೋಲ್ ಜಾತ್ರಾ ಮತ್ತು ಡೋಲಾ ಪೂರ್ಣಿಮೆಯ ಸಂದರ್ಭದಲ್ಲಿ ಪಶ್ಚಿಮ ಬಂಗಾಳ, ಒಡಿಶಾ ಮತ್ತು ಅಸ್ಸಾಂನ ಜನತೆಗೆ ಶುಭ ಕೋರಿದ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ


ಭಕ್ತಿ ಮತ್ತು ಬಣ್ಣಗಳ ಹಬ್ಬವು ಪ್ರತಿಯೊಬ್ಬರ ಜೀವನವನ್ನು ಉತ್ತಮ ಆರೋಗ್ಯ, ಸಂತೋಷ ಮತ್ತು ಸಮೃದ್ಧಿಯಿಂದ ತುಂಬಲಿ

ಭಗವಾನ್ ಕೃಷ್ಣನೊಂದಿಗಿನ ಸಂತೋಷದ ಮಿಲನದ ಈ ಹಬ್ಬವು ಎಲ್ಲರಿಗೂ ಸಂತೋಷ ಮತ್ತು ಅದೃಷ್ಟದ ಎಲ್ಲಾ ಆಶೀರ್ವಾದಗಳನ್ನು ಆಹ್ವಾನಿಸಲಿ

ಈ ಹಬ್ಬದ ಭವ್ಯತೆಯು ನಮ್ಮ ಬೇರುಗಳು, ಸಂಸ್ಕೃತಿ ಮತ್ತು ಪರಂಪರೆಯೊಂದಿಗಿನ ನಮ್ಮ ಸಂಪರ್ಕವನ್ನು ಮತ್ತಷ್ಟು ಬಲಪಡಿಸಲಿ

ಪ್ರಕಟಣಾ ದಿನಾಂಕ: 03 MAR 2026 12:33PM by PIB Bengaluru

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಇಂದು ಪಶ್ಚಿಮ ಬಂಗಾಳ, ಒಡಿಶಾ ಮತ್ತು ಅಸ್ಸಾಂನ ಜನರಿಗೆ ದೋಲ್ ಜಾತ್ರಾ ಮತ್ತು ಡೋಲಾ ಪೂರ್ಣಿಮೆಯ ಶುಭ ಸಂದರ್ಭದಲ್ಲಿ ತಮ್ಮ ಹೃತ್ಪೂರ್ವಕ ಶುಭಾಶಯಗಳನ್ನು ಕೋರಿದ್ದಾರೆ.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಸಚಿವರಾದ ಶ್ರೀ ಅಮಿತ್ ಶಾ, "ಪಶ್ಚಿಮ ಬಂಗಾಳದ ನನ್ನ ಸಹೋದರಿಯರು ಮತ್ತು ಸಹೋದರರಿಗೆ ದೋಲ್ ಜಾತ್ರಾ ಸಂದರ್ಭದಲ್ಲಿ ಶುಭಾಶಯಗಳು. ಈ ಹಬ್ಬದ ಭವ್ಯತೆಯು ನಮ್ಮ ಬೇರುಗಳು, ಸಂಸ್ಕೃತಿ ಮತ್ತು ಪರಂಪರೆಯೊಂದಿಗಿನ ನಮ್ಮ ಸಂಪರ್ಕವನ್ನು ಮತ್ತಷ್ಟು ಬಲಪಡಿಸಲಿ ಮತ್ತು ಪ್ರತಿಯೊಬ್ಬರ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರಲಿ." 

"ಡೋಲಾ ಪೂರ್ಣಿಮೆಯಂದು ಒಡಿಶಾದ ಜನತೆಗೆ ಹಾರ್ದಿಕ ಶುಭಾಶಯಗಳು. ಭಗವಾನ್ ಕೃಷ್ಣನೊಂದಿಗಿನ ಸಂತೋಷದ ಐಲನದ ಈ ಹಬ್ಬವು ಎಲ್ಲರಿಗೂ ಸಂತೋಷ ಮತ್ತು ಅದೃಷ್ಟದ ಎಲ್ಲಾ ಆಶೀರ್ವಾದಗಳನ್ನು ಆಹ್ವಾನಿಸಲಿ.’’

"ಡೋಲ್ ಜಾತ್ರಾ ಶುಭ ಸಂದರ್ಭದಲ್ಲಿ ಅಸ್ಸಾಂನ ನಮ್ಮ ಸಹೋದರಿಯರು ಮತ್ತು ಸಹೋದರರಿಗೆ ಶುಭಾಶಯಗಳು. ಭಕ್ತಿ ಮತ್ತು ಬಣ್ಣಗಳ ಹಬ್ಬವು ಪ್ರತಿಯೊಬ್ಬರ ಜೀವನವನ್ನು ಉತ್ತಮ ಆರೋಗ್ಯ, ಸಂತೋಷ ಮತ್ತು ಸಮೃದ್ಧಿಯಿಂದ ತುಂಬಲಿ," ಎಂದು ಹೇಳಿದರು.

 

*****


(ಪ್ರಕಟಣೆ ಐ.ಡಿ.: 2234945) ವಿಸಿಟರ್ ಕೌಂಟರ್ : 63