ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

LVM3-M6 ಉಡಾವಣೆ ಯಶಸ್ವಿಗಾಗಿ ಇಸ್ರೋ ತಂಡವನ್ನು ಅಭಿನಂದಿಸಿದ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ


ಇದು ಭಾರತದ ಬಾಹ್ಯಾಕಾಶ ಪರಾಕ್ರಮ ವಾಣಿಜ್ಯ ಯಶಸ್ಸನ್ನಾಗಿ ಪರಿವರ್ತಿಸುವಲ್ಲಿ ನಮ್ಮ ವಿಜ್ಞಾನಿಗಳ ಸಾಮರ್ಥ್ಯ ಪ್ರದರ್ಶನ

ಭಾರತವನ್ನು ಬಾಹ್ಯಾಕಾಶ ತಂತ್ರಜ್ಞಾನದ ಜಾಗತಿಕ ತಾಣವನ್ನಾಗಿ ಮಾಡುವ ಮೋದಿ ಜಿ ಅವರ ದೂರದೃಷ್ಟಿ ಸಾಕಾರ

प्रविष्टि तिथि: 24 DEC 2025 12:22PM by PIB Bengaluru

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಎಲ್ ವಿಎಂ3-6 ಉಡಾವಣೆಯ ಯಶಸ್ಸಿಗೆ ಇಸ್ರೋ ತಂಡವನ್ನು ಅಭಿನಂದಿಸಿದ್ದಾರೆ ಮತ್ತು ಇದು ಭಾರತದ ಬಾಹ್ಯಾಕಾಶ ಪರಾಕ್ರಮವನ್ನು ವಾಣಿಜ್ಯ ಯಶಸ್ಸಾಗಿ ಪರಿವರ್ತಿಸುವಲ್ಲಿ ನಮ್ಮ ವಿಜ್ಞಾನಿಗಳ ಸಾಮರ್ಥ್ಯವನ್ನು ಪ್ರದರ್ಶಿಸುತ್ತದೆ ಎಂದು ಹೇಳಿದ್ದಾರೆ.

ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ ತಮ್ಮ ಸಾಮಾಜಿಕ ಜಾಲತಾಣ ಎಕ್ಸ್ ಪೋಸ್ಟ್‌ನಲ್ಲಿ, “ಎಲ್ ವಿಎಂ3-ಎಂ6 ಉಡಾವಣೆಯ ಯಶಸ್ಸಿಗೆ ಇಸ್ರೋ ತಂಡಕ್ಕೆ ಅಭಿನಂದನೆಗಳು. ವಿಶ್ವದಾದ್ಯಂತ ವರ್ಧಿತ ಸಂವಹನವನ್ನು ಒದಗಿಸಲು ಇಂದು ಹಾರಿಸಲಾದ ಅಮೆರಿಕಾದ ಬಾಹ್ಯಾಕಾಶ ನೌಕೆ ಬ್ಲೂಬರ್ಡ್ ಬ್ಲಾಕ್ -2 ಭಾರತದ ಬಾಹ್ಯಾಕಾಶ ಪರಾಕ್ರಮವನ್ನು ವಾಣಿಜ್ಯ ಯಶಸ್ಸಾಗಿ ಪರಿವರ್ತಿಸುವಲ್ಲಿ ನಮ್ಮ ವಿಜ್ಞಾನಿಗಳ ಸಾಮರ್ಥ್ಯವನ್ನು ಪ್ರದರ್ಶಿಸುತ್ತದೆ, ಭಾರತವನ್ನು ಬಾಹ್ಯಾಕಾಶ ತಂತ್ರಜ್ಞಾನದ ಜಾಗತಿಕ ತಾಣವನ್ನಾಗಿ ಮಾಡುವ ಮೋದಿ ಅವರ ದೂರದೃಷ್ಟಿಯು ಸಾಕಾರವಾಯಿತು.’’

 

*****


(रिलीज़ आईडी: 2208060) आगंतुक पटल : 9
इस विज्ञप्ति को इन भाषाओं में पढ़ें: Malayalam , English , Urdu , Marathi , हिन्दी , Bengali , Assamese , Manipuri , Punjabi , Gujarati , Tamil , Telugu