ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

ಇಥಿಯೋಪಿಯಾದ ಅತ್ಯುನ್ನತ ಪ್ರಶಸ್ತಿ 'ಗ್ರೇಟ್ ಹಾನರ್ ನಿಶಾನ್ ಆಫ್ ಇಥಿಯೋಪಿಯಾ' ಪುರಸ್ಕಾರಕ್ಕೆ ಭಾಜನರಾದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಅಭಿನಂದಿಸಿದ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ


ಪ್ರತಿಯೊಬ್ಬ ಭಾರತೀಯರಿಗೂ ಹೆಮ್ಮೆಯ ಕ್ಷಣ

ಮೋದಿ ಅವರ ಮುತ್ಸದ್ಧಿತನಕ್ಕೆ ವಿದೇಶಿ ರಾಷ್ಟ್ರವೊಂದು ನೀಡಿದ 28ನೇ ಪ್ರಶಸ್ತಿ ಇದಾಗಿದ್ದು, ಅವರ ನಾಯಕತ್ವದಲ್ಲಿ ಜಾಗತಿಕ ರಾಜತಾಂತ್ರಿಕತೆಯಲ್ಲಿ ಭಾರತದ ಸ್ಥಾನ ಉನ್ನತ ಮಟ್ಟಕ್ಕೆ ಏರಿಕೆಯ ಸೂಚನೆ

ಈ ಗೌರವವು ಭಾರತ ಮತ್ತು ಇಥಿಯೋಪಿಯಾ ನಡುವಿನ ಸ್ನೇಹದಲ್ಲಿ ಒಂದು ಮೈಲಿಗಲ್ಲು

प्रविष्टि तिथि: 17 DEC 2025 11:01AM by PIB Bengaluru

ಇಥಿಯೋಪಿಯಾದ ಅತ್ಯುನ್ನತ ಪ್ರಶಸ್ತಿ 'ಗ್ರೇಟ್ ಹಾನರ್ ನಿಶಾನ್ ಆಫ್ ಇಥಿಯೋಪಿಯಾ' ಪುರಸ್ಕಾರಕ್ಕೆ  ಭಾಜನರಾಗಿರುವ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಅಭಿನಂದಿಸಿರುವ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ, ಇದು ಪ್ರತಿಯೊಬ್ಬ ಭಾರತೀಯರಿಗೂ ಹೆಮ್ಮೆಯ ಕ್ಷಣ ಎಂದು ಬಣ್ಣಿಸಿದ್ದಾರೆ.

ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ ತಮ್ಮ ಸಾಮಾಜಿಕ ಜಾಲತಾಣ 'X' ಪೋಸ್ಟ್‌ನಲ್ಲಿ ”ಪ್ರತಿಯೊಬ್ಬ ಭಾರತೀಯರಿಗೂ ಹೆಮ್ಮೆಯ ಕ್ಷಣ. ಇಥಿಯೋಪಿಯಾದ ಅತ್ಯುನ್ನತ ಪ್ರಶಸ್ತಿ 'ಗ್ರೇಟ್ ಹಾನರ್ ನಿಶಾನ್ ಆಫ್ ಇಥಿಯೋಪಿಯಾ' ಪ್ರಶಸ್ತಿಗೆ ಭಾಜನರಾದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ ಅಭಿನಂದನೆಗಳು. ನರೇಂದ್ರ ಮೋದಿ ಅವರ ಮುತ್ಸದ್ಧಿತನಕ್ಕೆ ವಿದೇಶಿ ರಾಷ್ಟ್ರವೊಂದು ನೀಡಿದ 28ನೇ ಪ್ರಶಸ್ತಿ ಇದು, ಇದು ಅವರ ನಾಯಕತ್ವದಲ್ಲಿ ಜಾಗತಿಕ ರಾಜತಾಂತ್ರಿಕತೆಯಲ್ಲಿ ಭಾರತದ ಏತ್ತರದ ಸ್ಥಾನಕ್ಕೇರುವುದನ್ನು ಸೂಚಿಸುತ್ತದೆ. ಈ ಗೌರವವು ಭಾರತ ಮತ್ತು ಇಥಿಯೋಪಿಯಾ ನಡುವಿನ ಸ್ನೇಹದಲ್ಲಿ ಒಂದು ಮೈಲಿಗಲ್ಲಾಗಿ ಉಳಿಯುತ್ತದೆ.’’

 

*****


(रिलीज़ आईडी: 2205074) आगंतुक पटल : 39
इस विज्ञप्ति को इन भाषाओं में पढ़ें: English , Urdu , Marathi , हिन्दी , Assamese , Bengali , Bengali-TR , Punjabi , Gujarati , Tamil , Telugu , Malayalam