ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಸಂವಿಧಾನ ದಿನದಂದು ನಾಗರಿಕರಿಗೆ ಪತ್ರ ಬರೆದ ಪ್ರಧಾನಮಂತ್ರಿ


ಭಾರತವು ವಿಕಸಿತ ಭಾರತ ದೃಷ್ಟಿಕೋನದತ್ತ ಸಾಗುತ್ತಿರುವಾಗ ನಾಗರಿಕರು ತಮ್ಮ ಮನಸ್ಸಿನಲ್ಲಿ ತಮ್ಮ ಕರ್ತವ್ಯಗಳನ್ನು ಅಗ್ರಸ್ಥಾನದಲ್ಲಿಟ್ಟುಕೊಳ್ಳಬೇಕು ಎಂದು ಪ್ರಧಾನಮಂತ್ರಿ ಕರೆ

ತಮ್ಮ ಮತದಾನದ ಹಕ್ಕನ್ನು ಚಲಾಯಿಸುವ ಮೂಲಕ ಪ್ರಜಾಪ್ರಭುತ್ವವನ್ನು ಬಲಪಡಿಸುವಂತೆ ನಾಗರಿಕರಿಗೆ ಪ್ರಧಾನಮಂತ್ರಿ ಕರೆ

प्रविष्टि तिथि: 26 NOV 2025 9:00AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವೆಂಬರ್ 26ರಂದು ಸಂವಿಧಾನ ದಿನದ ಸಂದರ್ಭದಲ್ಲಿ ಭಾರತದ ನಾಗರಿಕರಿಗೆ ಪತ್ರ ಬರೆದು, 1949ರಲ್ಲಿ ಐತಿಹಾಸಿಕ ಅಂಗೀಕಾರವನ್ನು ಸ್ಮರಿಸಿದ್ದಾರೆ ಮತ್ತು ರಾಷ್ಟ್ರದ ಪ್ರಗತಿಗೆ ಮಾರ್ಗದರ್ಶನ ನೀಡುವಲ್ಲಿ ಅದರ ಶಾಶ್ವತ ಪಾತ್ರವನ್ನು ಒತ್ತಿಹೇಳಿದ್ದಾರೆ. ಈ ಪವಿತ್ರ ದಾಖಲೆಯನ್ನು ಗೌರವಿಸಲು 2015ರಲ್ಲಿ ಸರ್ಕಾರವು ನವೆಂಬರ್ 26 ಅನ್ನು ಸಂವಿಧಾನ ದಿನವೆಂದು ಘೋಷಿಸಿತು ಎಂದು ಅವರು ಹೇಳಿದರು.

ಸಂಸತ್ತು ಮತ್ತು ಸಂವಿಧಾನದ ಬಗ್ಗೆ ತಮ್ಮದೇ ಆದ ಗೌರವದ ಅನುಭವಗಳನ್ನು ಹಂಚಿಕೊಂಡು, ವಿನಮ್ರ ಹಿನ್ನೆಲೆಯ ವ್ಯಕ್ತಿಗಳಿಗೆ ಉನ್ನತ ಮಟ್ಟದಲ್ಲಿ ರಾಷ್ಟ್ರ ಸೇವೆ ಮಾಡಲು ಸಂವಿಧಾನವು ಹೇಗೆ ಅಧಿಕಾರ ನೀಡಿದೆ ಎಂಬುದನ್ನು ಶ್ರೀ ನರೇಂದ್ರ ಮೋದಿ ಬಿಂಬಿಸಿದರು. 2014ರಲ್ಲಿ ಸಂಸತ್ತಿನ ಮೆಟ್ಟಿಲುಗಳಿಗೆ ನಮಸ್ಕರಿಸಿದ್ದನ್ನು ಮತ್ತು 2019ರಲ್ಲಿ ಸಂವಿಧಾನವನ್ನು ಗೌರವದ ಸಂಕೇತವಾಗಿ ತಮ್ಮ ಹಣೆಯ ಮೇಲೆ ಇರಿಸಿದ್ದನ್ನು ಅವರು ನೆನಪಿಸಿಕೊಂಡರು. ಸಂವಿಧಾನವು ಅಸಂಖ್ಯಾತ ನಾಗರಿಕರಿಗೆ ಕನಸು ಕಾಣುವ ಶಕ್ತಿ ಮತ್ತು ಆ ಕನಸುಗಳನ್ನು ನನಸಾಗಿಸುವ ಶಕ್ತಿಯನ್ನು ನೀಡಿದೆ ಎಂದು ತಿಳಿಸಿದರು.

ಸಂವಿಧಾನ ರಚನಾ ಸಭೆಯ ಸದಸ್ಯರಿಗೆ ಗೌರವ ನಮನ ಸಲ್ಲಿಸಿದ ಪ್ರಧಾನಮಂತ್ರಿಯವರು, ಡಾ. ರಾಜೇಂದ್ರ ಪ್ರಸಾದ್, ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಸಂವಿಧಾನವನ್ನು ಶ್ರೀಮಂತಗೊಳಿಸಿದ ಹಲವಾರು ಗಣ್ಯ ಮಹಿಳಾ ಸದಸ್ಯರನ್ನು ಸ್ಮರಿಸಿದರು. ಸಂವಿಧಾನದ 60ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಗುಜರಾತ್ ನಲ್ಲಿ ನಡೆದ ಸಂವಿಧಾನ ಗೌರವ್ ಯಾತ್ರೆ, ಸಂಸತ್ತಿನ ವಿಶೇಷ ಅಧಿವೇಶನ ಮತ್ತು ಅದರ 75ನೇ ವಾರ್ಷಿಕೋತ್ಸವದ ನೆನಪಿಗಾಗಿ ನಡೆದ ರಾಷ್ಟ್ರವ್ಯಾಪಿ ಕಾರ್ಯಕ್ರಮಗಳಂತಹ ಮೈಲಿಗಲ್ಲುಗಳನ್ನು ಅವರು ಪ್ರತಿಬಿಂಬಿಸಿದರು, ಇದು ದಾಖಲೆಯ ಸಾರ್ವಜನಿಕ ಭಾಗವಹಿಸುವಿಕೆಗೆ ಸಾಕ್ಷಿಯಾಯಿತು.

ಸರ್ದಾರ್ ವಲ್ಲಭಭಾಯಿ ಪಟೇಲ್ ಮತ್ತು ಭಗವಾನ್ ಬಿರ್ಸಾ ಮುಂಡಾ ಅವರ 150ನೇ ಜನ್ಮ ದಿನಾಚರಣೆ, ವಂದೇ ಮಾತರಂನ 150ನೇ ವಾರ್ಷಿಕೋತ್ಸವ ಮತ್ತು ಶ್ರೀ ಗುರು ತೇಜ್ ಬಹದ್ದೂರ್ ಜೀ ಅವರ 350ನೇ ಹುತಾತ್ಮ ವಾರ್ಷಿಕೋತ್ಸವದ ಸಂದರ್ಭದಲ್ಲಿ ಈ ವರ್ಷದ ಸಂವಿಧಾನ ದಿನವು ವಿಶೇಷವಾಗಿ ಮಹತ್ವದ್ದಾಗಿದೆ ಎಂದು ತಿಳಿಸಿದ ಶ್ರೀ ನರೇಂದ್ರ ಮೋದಿ, ಈ ವ್ಯಕ್ತಿತ್ವಗಳು ಮತ್ತು ಮೈಲಿಗಲ್ಲುಗಳು ನಮ್ಮ ಕರ್ತವ್ಯಗಳ ಪ್ರಾಮುಖ್ಯತೆಯನ್ನು ನಮಗೆ ನೆನಪಿಸುತ್ತವೆ ಎಂದು ಹೇಳಿದರು. ಸಂವಿಧಾನದ ಅನುಚ್ಛೇದ 51-ಎ ಯಲ್ಲಿ ಪ್ರತಿಪಾದಿಸಿರುವಂತೆ. ಕರ್ತವ್ಯಗಳ ನಿರ್ವಹಣೆಯಿಂದಲೇ ಹಕ್ಕುಗಳು ಹರಿಯುತ್ತವೆ ಎಂಬ ಮಹಾತ್ಮಾ ಗಾಂಧಿ ಅವರ ನಂಬಿಕೆಯನ್ನು ಸ್ಮರಿಸಿದ ಅವರು, ಕರ್ತವ್ಯಗಳನ್ನು ಪೂರೈಸುವುದು ಸಾಮಾಜಿಕ ಮತ್ತು ಆರ್ಥಿಕ ಪ್ರಗತಿಯ ಅಡಿಪಾಯ ಎಂದು ತಿಳಿಸಿದರು.

ಈ ಶತಮಾನದ ಆರಂಭದಿಂದ ಈಗಾಗಲೇ 25 ವರ್ಷಗಳು ಕಳೆದಿವೆ ಮತ್ತು ಕೇವಲ ಎರಡು ದಶಕಗಳಲ್ಲಿ ಭಾರತವು ವಸಾಹತುಶಾಹಿ ಆಳ್ವಿಕೆಯಿಂದ ಸ್ವಾತಂತ್ರ್ಯದ 100 ವರ್ಷಗಳನ್ನು ಆಚರಿಸಲಿದೆ ಎಂದು ಶ್ರೀ ನರೇಂದ್ರ ಮೋದಿ ಅವರು ಹೇಳಿದರು. 2049ರಲ್ಲಿ, ಸಂವಿಧಾನವನ್ನು ಅಂಗೀಕರಿಸಿ ಒಂದು ಶತಮಾನ ತುಂಬುತ್ತದೆ. ಇಂದು ತೆಗೆದುಕೊಳ್ಳುವ ನೀತಿಗಳು ಮತ್ತು ನಿರ್ಧಾರಗಳು ಮುಂದಿನ ಪೀಳಿಗೆಯ ಜೀವನವನ್ನು ರೂಪಿಸುತ್ತವೆ ಎಂದು ಅವರು ತಿಳಿಸಿದರು ಮತ್ತು ಭಾರತವು ವಿಕಸಿತ ಭಾರತದ ದೃಷ್ಟಿಕೋನದತ್ತ ಸಾಗುತ್ತಿರುವಾಗ ನಾಗರಿಕರು ತಮ್ಮ ಕರ್ತವ್ಯಗಳನ್ನು ತಮ್ಮ ಮನಸ್ಸಿನಲ್ಲಿ ಇಡಬೇಕು ಎಂದು ಒತ್ತಾಯಿಸಿದರು.

ಮತದಾನದ ಹಕ್ಕನ್ನು ಚಲಾಯಿಸುವ ಮೂಲಕ ಪ್ರಜಾಪ್ರಭುತ್ವವನ್ನು ಬಲಪಡಿಸುವ ಜವಾಬ್ದಾರಿಯನ್ನು ತಿಳಿಸಿದ ಪ್ರಧಾನಮಂತ್ರಿ ಅವರು, ಶಾಲೆಗಳು ಮತ್ತು ಕಾಲೇಜುಗಳು 18 ವರ್ಷಕ್ಕೆ ಕಾಲಿಟ್ಟ ಮೊದಲ ಬಾರಿಗೆ ಮತದಾರರನ್ನು ಗೌರವಿಸುವ ಮೂಲಕ ಸಂವಿಧಾನ ದಿನವನ್ನು ಆಚರಿಸಬೇಕು ಎಂದು ಸಲಹೆ ನೀಡಿದರು. ಯುವಕರನ್ನು ಜವಾಬ್ದಾರಿ ಮತ್ತು ಹೆಮ್ಮೆಯಿಂದ ಪ್ರೇರೇಪಿಸುವುದು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಮತ್ತು ರಾಷ್ಟ್ರದ ಭವಿಷ್ಯವನ್ನು ಬಲಪಡಿಸುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ತಮ್ಮ ಪತ್ರವನ್ನು ಮುಕ್ತಾಯಗೊಳಿಸಿದ ಪ್ರಧಾನಮಂತ್ರಿ ಅವರು, ಈ ಮಹಾನ್ ರಾಷ್ಟ್ರದ ನಾಗರಿಕರಾಗಿ ತಮ್ಮ ಕರ್ತವ್ಯಗಳನ್ನು ಪೂರೈಸುವ ಪ್ರತಿಜ್ಞೆಯನ್ನು ಪುನರುಚ್ಚರಿಸುವಂತೆ ಮತ್ತು ಆ ಮೂಲಕ ಅಭಿವೃದ್ಧಿ ಹೊಂದಿದ ಮತ್ತು ಸಶಕ್ತ ಭಾರತವನ್ನು ನಿರ್ಮಿಸಲು ಅರ್ಥಪೂರ್ಣವಾಗಿ ಕೊಡುಗೆ ನೀಡುವಂತೆ ನಾಗರಿಕರಿಗೆ ಕರೆ ನೀಡಿದರು.

ಈ ಸಂಬಂಧ ಎಕ್ಸ್ ಖಾತೆಯ ಪ್ರತ್ಯೇಕ ಪೋಸ್ಟ್ ಗಳಲ್ಲಿ ಶ್ರೀ ಮೋದಿ ಅವರು ಹೀಗೆ ಹೇಳಿದ್ದಾರೆ:

"ಸಂವಿಧಾನ ದಿನದಂದು, ನನ್ನ ಸಹ ನಾಗರಿಕರಿಗೆ ಪತ್ರ ಬರೆದಿದ್ದೇನೆ, ಅದರಲ್ಲಿ ನಮ್ಮ ಸಂವಿಧಾನದ ಶ್ರೇಷ್ಠತೆ, ನಮ್ಮ ಜೀವನದಲ್ಲಿ ಮೂಲಭೂತ ಕರ್ತವ್ಯಗಳ ಪ್ರಾಮುಖ್ಯತೆ, ನಾವು ಮೊದಲ ಬಾರಿಗೆ ಮತದಾರರಾಗಲು ಏಕೆ ಸಂಭ್ರಮಿಸಬೇಕು ಮತ್ತು ಹೆಚ್ಚಿನವುಗಳ ಬಗ್ಗೆ ತಿಳಿಸಿದ್ದೇನೆ.’’

“संविधान दिवस पर मैंने देशभर के अपने परिवारजनों के नाम एक पत्र लिखा है। इसमें हमारे संविधान की महानता, जीवन में मौलिक कर्तव्यों का महत्त्व और हमें पहली बार मतदाता बनने का उत्सव क्यों मनाना चाहिए, ऐसे कई विषयों पर अपने विचार साझा किए हैं… “  

 

*****

 

 


(रिलीज़ आईडी: 2194511) आगंतुक पटल : 56
इस विज्ञप्ति को इन भाषाओं में पढ़ें: English , Khasi , Urdu , Marathi , हिन्दी , Manipuri , Bengali , Bengali-TR , Assamese , Punjabi , Gujarati , Odia , Tamil , Telugu , Malayalam