ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ
ಕಾರ್ಮಿಕ ಕಾನೂನುಗಳನ್ನು ಸರಳೀಕರಿಸಲು ಮತ್ತು ಸುವ್ಯವಸ್ಥಿತಗೊಳಿಸಲು ನಾಲ್ಕು ಕಾರ್ಮಿಕ ಸಂಹಿತೆಗಳ ಜಾರಿಯನ್ನು ಘೋಷಿಸಿದ ಕೇಂದ್ರ ಸರ್ಕಾರ
ನಾಲ್ಕು ಕಾರ್ಮಿಕ ಸಂಹಿತೆಗಳು ಪರಿವರ್ತನಾತ್ಮಕ ಬದಲಾವಣೆ ಸೂಚಿಸುತ್ತವೆ: ಭಾರತದ ದುಡಿಯುವ ಶಕ್ತಿಗೆ ಉತ್ತಮ ವೇತನ, ಸುರಕ್ಷತೆ, ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ ಒದಗಿಸುತ್ತದೆ
ಸಂಹಿತೆಗಳು ಸಂರಕ್ಷಿತ, ಭವಿಷ್ಯಕ್ಕೆ ಸಿದ್ಧವಾಗಿರುವ ದುಡಿಯುವಪಡೆ ಮತ್ತು ಸ್ಥಿತಿಸ್ಥಾಪಕ ಕೈಗಾರಿಕೆಗಳಿಗೆ ಅಡಿಪಾಯ ಹಾಕುತ್ತವೆ, ಉದ್ಯೋಗಾವಕಾಶಗಳನ್ನು ವೃದ್ಧಿಸುತ್ತವೆ ಮತ್ತು ಆತ್ಮನಿರ್ಭರ ಭಾರತ ನಿರ್ಮಾಣಕ್ಕಾಗಿ ಕಾರ್ಮಿಕ ಸುಧಾರಣೆಗಳಿಗೆ ಚಾಲನೆ ನೀಡುತ್ತವೆ
ಸಂಹಿತೆ ಭಾರತದ ಕಾರ್ಮಿಕ ಪೂರಕ ವ್ಯವಸ್ಥೆಯನ್ನು ಜಾಗತಿಕ ಮಾನದಂಡಗಳೊಂದಿಗೆ ಸಂಯೋಜಿಸುತ್ತದೆ, ಎಲ್ಲಾ ಕಾರ್ಮಿಕರಿಗೆ ಸಾಮಾಜಿಕ ನ್ಯಾಯ ಖಾತ್ರಿಪಡಿಸುತ್ತದೆ
प्रविष्टि तिथि:
21 NOV 2025 3:00PM by PIB Bengaluru
ಭಾರತ ಸರ್ಕಾರವು ನಾಲ್ಕು ಕಾರ್ಮಿಕ ಸಂಹಿತೆಗಳನ್ನು - ವೇತನ ಸಂಹಿತೆ 2019, ಕೈಗಾರಿಕಾ ಸಂಬಂಧಗಳ ಸಂಹಿತೆ 2020, ಸಾಮಾಜಿಕ ಭದ್ರತಾ ಸಂಹಿತೆ 2020 ಮತ್ತು ಔದ್ಯೋಗಿಕ ಸುರಕ್ಷತೆ, ಆರೋಗ್ಯ ಮತ್ತು ದುಡಿಯುವ ಪರಿಸ್ಥಿತಿಗಳ ಸಂಹಿತೆ 2020 - ಇವುಗಳನ್ನು 2025ರ ನವೆಂಬರ್ 21 ರಿಂದ ಜಾರಿಗೆ ಬರುವಂತೆ ಅನುಷ್ಠಾನಗೊಳಿಸುವ ಐತಿಹಾಸಿಕ ನಿರ್ಧಾರವೊಂದನ್ನು ಘೋಷಿಸಿದೆ, ಇದು ಹಾಲಿ ಅಸ್ತಿತ್ವದಲ್ಲಿರುವ 29 ಕಾರ್ಮಿಕ ಕಾನೂನುಗಳನ್ನು ಏಕರೂಪಗೊಳಿಸಿದೆ. ಕಾರ್ಮಿಕ ನಿಯಮಗಳನ್ನು ಆಧುನೀಕರಿಸುವ ಮೂಲಕ, ಕಾರ್ಮಿಕರ ಕಲ್ಯಾಣವನ್ನು ಹೆಚ್ಚಿಸುವ ಮೂಲಕ ಮತ್ತು ಬದಲಾಗುತ್ತಿರುವ ಜಗತ್ತಿಗೆ ಅನುಗುಣವಾಗಿ ಕಾರ್ಮಿಕ ಪೂರಕ ವ್ಯವಸ್ಥೆಯನ್ನು ಸಂಯೋಜಿಸುವ ಮೂಲಕ ಈ ಮಹತ್ವಾಕಾಂಕ್ಷೆಯ ಕ್ರಮವು ಆತ್ಮನಿರ್ಭರ ಭಾರತಕ್ಕಾಗಿ ಕಾರ್ಮಿಕ ಸುಧಾರಣೆಗಳಿಗೆ ಚಾಲನೆ ನೀಡುವ ಭವಿಷ್ಯಕ್ಕೆ ಸಿದ್ಧವಾಗಿರುವ ದುಡಿಯುವ ಪಡೆ ಸೃಷ್ಟಿಮತ್ತು ಸ್ಥಿತಿಸ್ಥಾಪಕ ಕೈಗಾರಿಕೆಗಳಿಗೆ ಭದ್ರವಾದ ಅಡಿಪಾಯವನ್ನು ಹಾಕುತ್ತದೆ.
ಭಾರತದ ಬಹುತೇಕ ಕಾರ್ಮಿಕ ಕಾನೂನುಗಳನ್ನು ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯ ನಂತರದ ಆರಂಭದ ದಿನಗಳಲ್ಲಿ (1930-1950 ರ ದಶಕ) ರೂಪಿಸಲಾಯಿತು. ಆ ಸಮಯದಲ್ಲಿ ಆರ್ಥಿಕತೆ ಮತ್ತು ದುಡಿಯುವ ಲೋಕವು ಮೂಲಭೂತವಾಗಿ ವಿಭಿನ್ನವಾಗಿತ್ತು. ಇತ್ತೀಚಿನ ದಶಕಗಳಲ್ಲಿ ಹೆಚ್ಚಿನ ಪ್ರಮುಖ ಆರ್ಥಿಕತೆಗಳು ತಮ್ಮ ಕಾರ್ಮಿಕ ನಿಯಮಗಳನ್ನು ನವೀಕರಿಸಿ ಮತ್ತು ಏಕರೂಪಗೊಳಿಸಿವೆ. ಭಾರತವು 29 ಕೇಂದ್ರ ಕಾರ್ಮಿಕ ಕಾನೂನುಗಳಲ್ಲಿ ಹರಡಿರುವ ವಿಭಜಿತ, ಸಂಕೀರ್ಣ ಮತ್ತು ಹಲವಾರು ಭಾಗಗಳಲ್ಲಿ ಹಳೆಯ ನಿಬಂಧನೆಗಳಡಿಯಲ್ಲಿ ಕಾರ್ಯನಿರ್ವಹಿಸುವುದನ್ನು ಮುಂದುವರೆಸಿದೆ. ಈ ನಿರ್ಬಂಧಿತ ಚೌಕಟ್ಟುಗಳು ಬದಲಾಗುತ್ತಿರುವ ಆರ್ಥಿಕ ವಾಸ್ತವತೆಗಳು ಮತ್ತು ವಿಕಸನಗೊಳ್ಳುತ್ತಿರುವ ಉದ್ಯೋಗದ ಸ್ವರೂಪದೊಂದಿಗೆ ವೇಗವನ್ನು ಕಾಯ್ದುಕೊಳ್ಳಲು ಹೆಣಗಾಡಿದವು, ಅನಿಶ್ಚಿತತೆಯನ್ನು ಸೃಷ್ಟಿಸಿದವು ಮತ್ತು ಕಾರ್ಮಿಕರು ಮತ್ತು ಉದ್ಯಮ ಎರಡಕ್ಕೂ ಅನುಸರಣೆಯ ಹೊರೆಯನ್ನು ಹೆಚ್ಚಿಸಿದವು. ನಾಲ್ಕು ಕಾರ್ಮಿಕ ಸಂಹಿತೆಗಳ ಅನುಷ್ಠಾನವು ವಸಾಹತುಶಾಹಿ ಯುಗದ ವ್ಯವಸ್ಥೆಗಳನ್ನು ಮೀರಿ ಆಧುನಿಕ ಜಾಗತಿಕ ಪ್ರವೃತ್ತಿಗಳೊಂದಿಗೆ ಹೊಂದಿಕೊಳ್ಳುವ ದೀರ್ಘಕಾಲೀನ ಅಗತ್ಯತೆಯನ್ನು ಪರಿಹರಿಸುತ್ತದೆ. ಒಟ್ಟಾಗಿ, ಈ ಸಂಹಿತೆಗಳು ಕಾರ್ಮಿಕರು ಮತ್ತು ಉದ್ಯಮಗಳೆರಡನ್ನೂ ಸಬಲೀಕರಣಗೊಳಿಸುತ್ತವೆ, ಸುರಕ್ಷಿತ, ಉತ್ಪಾದಕ ಮತ್ತು ವಿಕಸನಗೊಳ್ಳುತ್ತಿರುವ ದುಡಿಯುವ ಪ್ರಪಂಚಕ್ಕೆ ಹೊಂದಿಕೆಯಾಗುವ - ಹೆಚ್ಚು ಸ್ಥಿತಿಸ್ಥಾಪಕ, ಸ್ಪರ್ಧಾತ್ಮಕ ಮತ್ತು ಸ್ವಾವಲಂಬಿ ರಾಷ್ಟ್ರಕ್ಕೆ ದಾರಿ ಮಾಡಿಕೊಡುವ ಕಾರ್ಯಪಡೆಯನ್ನು ಸೃಷ್ಟಿಸುತ್ತವೆ.
ಕಾರ್ಮಿಕ ಸಂಹಿತೆಗಳ ಅನುಷ್ಠಾನದ ಮೊದಲು ಮತ್ತು ನಂತರ ಕಾರ್ಮಿಕ ಪೂರಕ ವ್ಯವಸ್ಥೆಯ ಹೋಲಿಕೆ ಈ ಕೆಳಗಿನಂತಿದೆ.
|
|
ಕಾರ್ಮಿಕ ಸುಧಾರಣೆಗಳಿಗೂ ಮುನ್ನ
|
ಕಾರ್ಮಿಕ ಸುಧಾರಣೆಗಳ ನಂತರ
|
|
ಉದ್ಯೋಗಗಳನ್ನು ಅಧಿಕೃತಗೊಳಿಸುವುದು
|
ನೇಮಕಾತಿ ಪತ್ರಗಳನ್ನು ನೀಡುವುದು ಕಡ್ಡಾಯವಾಗಿರಲಿಲ್ಲ
|
ಎಲ್ಲಾ ಕಾರ್ಮಿಕರಿಗೆ ನೇಮಕಾತಿ ಪತ್ರ ನೀಡುವುದು ಕಡ್ಡಾಯವಾಗಿದೆ.
ಲಿಖಿತ ಪುರಾವೆಗಳು ಪಾರದರ್ಶಕತೆ, ಉದ್ಯೋಗ ಭದ್ರತೆ ಮತ್ತು ಸ್ಥಿರ ಉದ್ಯೋಗವನ್ನು ಖಾತ್ರಿಪಡಿಸುತ್ತವೆ.
|
|
ಸಾಮಾಜಿಕ ಸುರಕ್ಷತಾ ವ್ಯಾಪ್ತಿ
|
ಸೀಮಿತ ಸಾಮಾಜಿಕ ಸುರಕ್ಷತಾ ಭದ್ರತೆ
|
ಸಾಮಾಜಿಕ ಭದ್ರತಾ ಸಂಹಿತೆ, 2020ರಡಿಯಲ್ಲಿ, ಗಿಗ್ ಮತ್ತು ಪ್ಲಾಟ್ಫಾರ್ಮ್ ಕಾರ್ಮಿಕರು ಸೇರಿದಂತೆ ಎಲ್ಲಾ ಕಾರ್ಮಿಕರಿಗೆ ಸಾಮಾಜಿಕ ಭದ್ರತಾ ವ್ಯಾಪ್ತಿ ಸಿಗುತ್ತದೆ.
ಎಲ್ಲಾ ಕಾರ್ಮಿಕರಿಗೆ ಪಿಎಫ್, ಇಎಸ್‌ಐಸಿ, ವಿಮೆ ಮತ್ತು ಇತರ ಸಾಮಾಜಿಕ ಭದ್ರತಾ ಪ್ರಯೋಜನಗಳು ದೊರಕಲಿವೆ.
|
|
ಕನಿಷ್ಠ ವೇತನಗಳು
|
ಕನಿಷ್ಠ ವೇತನವನ್ನು ನಿಗದಿತ ಕೈಗಾರಿಕೆಗಳು/ಉದ್ಯೋಗಗಳಿಗೆ ಮಾತ್ರ ಅನ್ವಯಿಸಲಾಗಿದೆ; ಹೆಚ್ಚಿನ ವರ್ಗದ ಕಾರ್ಮಿಕರು ರಕ್ಷಣೆಯಿಲ್ಲದೆ ಉಳಿದಿದ್ದರು.
|
2019 ರ ವೇತನ ಸಂಹಿತೆಯ ಅಡಿಯಲ್ಲಿ ಎಲ್ಲಾ ಕಾರ್ಮಿಕರು ಶಾಸನಬದ್ಧ ಕನಿಷ್ಠ ವೇತನ ಪಾವತಿಯನ್ನು ಪಡೆಯಬೇಕು.
ಕನಿಷ್ಠ ವೇತನ ಮತ್ತು ಸಕಾಲಿಕ ಪಾವತಿಯು ಆರ್ಥಿಕ ಭದ್ರತೆಯನ್ನು ಖಚಿತಪಡಿಸುತ್ತದೆ.
|
|
ಆರೋಗ್ಯ ಮುನ್ನೆಚ್ಚರಿಕೆ ಕ್ರಮಗಳು
|
ಉದ್ಯೋಗದಾತರು ಕಾರ್ಮಿಕರಿಗೆ ಉಚಿತ ವಾರ್ಷಿಕ ಆರೋಗ್ಯ ತಪಾಸಣೆಗಳನ್ನು ಒದಗಿಸಬೇಕೆಂಬ ಕಾನೂನುಬದ್ಧ ಅವಶ್ಯಕತೆ ಇರಲಿಲ್ಲ.
|
ಉದ್ಯೋಗದಾತರು 40 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲಾ ಕಾರ್ಮಿಕರಿಗೆ ಉಚಿತ ವಾರ್ಷಿಕ ಆರೋಗ್ಯ ತಪಾಸಣೆ ಒದಗಿಸಬೇಕು.
ಕಾಲ ಕಾಲಕ್ಕೆ ಮುನ್ನೆಚ್ಚರಿಕೆ ಆರೋಗ್ಯ ಸಂಸ್ಕೃತಿಗೆ ಉತ್ತೇಜನ
|
|
ಸಕಾಲಕ್ಕೆ ವೇತನ ಪಾವತಿ
|
ಉದ್ಯೋಗದಾತರಿಗೆ ವೇತನ ಪಾವತಿಗೆ ಕಡ್ಡಾಯ ಪಾಲನೆ ಇರಲಿಲ್ಲ.
|
ಉದ್ಯೋಗದಾತರು ಸಕಾಲಿಕ ವೇತನವನ್ನು ಒದಗಿಸುವುದು ಕಡ್ಡಾಯವಾಗಿದೆ.
ಆರ್ಥಿಕ ಸ್ಥಿರತೆಯನ್ನು ಖಚಿತಪಡಿಸುವುದು, ಕೆಲಸದ ಒತ್ತಡವನ್ನು ಕಡಿಮೆ ಮಾಡುವುದು ಮತ್ತು ಕಾರ್ಮಿಕರ ಒಟ್ಟಾರೆ ನೈತಿಕತೆಯನ್ನು ಹೆಚ್ಚಿಸುವ ಕ್ರಮವಿದೆ.
|
|
ಮಹಿಳಾ ದುಡಿಯುವ ಸಿಬ್ಬಂದಿ ಪಾಲ್ಗೊಳ್ಳುವಿಕೆ
|
ರಾತ್ರಿ ಪಾಳಿಯಲ್ಲಿ ಮತ್ತು ಕೆಲವು ವೃತ್ತಿಗಳಲ್ಲಿ ಮಹಿಳೆಯರು ದುಡಿಯುವುದನ್ನು ನಿರ್ಬಂಧಿಸಲಾಗಿದೆ.
|
ಮಹಿಳೆಯರು ರಾತ್ರಿ ವೇಳೆ ಕೆಲಸ ಮಾಡಲು ಮತ್ತು ಎಲ್ಲಾ ಸಂಸ್ಥೆಗಳಲ್ಲಿ ಎಲ್ಲಾ ರೀತಿಯ ಕೆಲಸಗಳಲ್ಲಿ ಕೆಲಸ ಮಾಡಲು ಅನುಮತಿ ಇದೆ. ಆದರೆ ಅದು ಅವರ ಒಪ್ಪಿಗೆ ಮತ್ತು ಅಗತ್ಯವಿರುವ ಸುರಕ್ಷತಾ ಕ್ರಮಗಳಿಗೆ ಒಳಪಟ್ಟಿರುತ್ತದೆ.
ಹೆಚ್ಚಿನ ಸಂಬಳದ ಉದ್ಯೋಗಗಳಲ್ಲಿ ಮಹಿಳೆಯರಿಗೆ ಹೆಚ್ಚಿನ ಆದಾಯ ಗಳಿಸಲು ಸಮಾನ ಅವಕಾಶಗಳು ಸಿಗುತ್ತವೆ
|
|
ಇ.ಎಸ್.ಐ.ಸಿ ವ್ಯಾಪ್ತಿ
|
ಇ.ಎಸ್.ಐ.ಸಿ ವ್ಯಾಪ್ತಿಯನ್ನು ಅಧಿಸೂಚಿತ ಪ್ರದೇಶಗಳು ಮತ್ತು ನಿರ್ದಿಷ್ಟ ಕೈಗಾರಿಕೆಗಳಿಗೆ ಸೀಮಿತಗೊಳಿಸಲಾಗಿತ್ತು; 10 ಕ್ಕಿಂತ ಕಡಿಮೆ ಉದ್ಯೋಗಿಗಳನ್ನು ಹೊಂದಿರುವ ಸಂಸ್ಥೆಗಳನ್ನು ಸಾಮಾನ್ಯವಾಗಿ ಹೊರಗಿಡಲಾಗುತ್ತಿತ್ತು ಮತ್ತು ಅಪಾಯಕಾರಿ-ಸಂಸ್ಕರಣಾ ಘಟಕಗಳು ಭಾರತದಾದ್ಯಂತ ಏಕರೂಪದ ಕಡ್ಡಾಯ ಇ.ಎಸ್.ಐ.ಸಿ ವ್ಯಾಪ್ತಿಯನ್ನು ಹೊಂದಿರಲಿಲ್ಲ.
|
ಇ.ಎಸ್.ಐ.ಸಿ ವ್ಯಾಪ್ತಿ ಮತ್ತು ಪ್ರಯೋಜನಗಳನ್ನು ದೇಶಾದ್ಯಂತ ವಿಸ್ತರಿಸಲಾಗಿದೆ - 10 ಕ್ಕಿಂತ ಕಡಿಮೆ ಉದ್ಯೋಗಿಗಳನ್ನು ಹೊಂದಿರುವ ಸಂಸ್ಥೆಗಳಿಗೆ ಸ್ವಯಂಪ್ರೇರಿತ ಮತ್ತು ಅಪಾಯಕಾರಿ ಪ್ರಕ್ರಿಯೆಗಳಲ್ಲಿ ತೊಡಗಿರುವ ಒಬ್ಬ ಉದ್ಯೋಗಿಯನ್ನು ಹೊಂದಿರುವ ಸಂಸ್ಥೆಗಳಿಗೂ ಕಡ್ಡಾಯವಾಗಿದೆ.
ಸಾಮಾಜಿಕ ಸಂರಕ್ಷಣಾ ವ್ಯಾಪ್ತಿಯನ್ನು ಎಲ್ಲಾ ಕಾರ್ಮಿಕರಿಗೆ ವಿಸ್ತರಿಸಲಾಗುವುದು.
|
|
ಅನುಪಾಲನಾ ಹೊಣೆಗಾರಿಕೆ
|
ವಿವಿಧ ಕಾರ್ಮಿಕ ಕಾನೂನುಗಳಲ್ಲಿ ಹಲವೆಡೆ ನೋಂದಣಿಗಳು, ಪರವಾನಗಿಗಳು ಮತ್ತು ರಿಟರ್ನ್‌ಗಳ ಸಲ್ಲಿಕೆ.
|
ಒಂದೇ ಕಡೆ ನೋಂದಣಿ, ಪ್ಯಾನ್-ಇಂಡಿಯಾ ಒಂದೇ ಪರವಾನಗಿ ಮತ್ತು ಒಂದೇ ರಿಟರ್ನ್ ಸಲ್ಲಿಕೆ
ಸರಳೀಕೃತ ಪ್ರಕ್ರಿಯೆಗಳು ಮತ್ತು ಅನುಸರಣೆ ಹೊರೆಯಲ್ಲಿ ಕಡಿತ
|
ಪ್ರಮುಖ ವಲಯಗಳಾದ್ಯಂತ ಕಾರ್ಮಿಕ ಸುಧಾರಣೆಯ ಪ್ರಯೋಜನಗಳು:
1. ನಿಶ್ಚಿತ ಅವಧಿಯ ಕೆಲಸಗಾರರು (ಎಫ್.ಟಿ.ಇ):
- ರಜೆ, ವೈದ್ಯಕೀಯ ಮತ್ತು ಸಾಮಾಜಿಕ ಭದ್ರತೆ ಸೇರಿದಂತೆ ಕಾಯಂ ಕಾರ್ಮಿಕರಿಗೆ ಸಮಾನವಾದ ಎಲ್ಲಾ ಪ್ರಯೋಜನಗಳನ್ನು ಎಫ್.ಟಿ.ಇ ಗಳು ಪಡೆಯಲಿದ್ದಾರೆ.
- ಐದು ವರ್ಷದ ಬದಲು ಕೇವಲ ಒಂದು ವರ್ಷದ ನಂತರ ಗ್ರಾಚ್ಯುಟಿ ಅರ್ಹತೆ.
- ಕಾಯಂ ಸಿಬ್ಬಂದಿಯಾಗಿ ಸಮಾನ ವೇತನ, ಆದಾಯ ಮತ್ತು ರಕ್ಷಣೆಯನ್ನು ಹೆಚ್ಚಿಸುತ್ತದೆ.
- ನೇರ ನೇಮಕಾತಿಯನ್ನು ಉತ್ತೇಜಿಸುತ್ತದೆ ಮತ್ತು ಅತಿಯಾದ ಗುತ್ತಿಗೆಯನ್ನು ಕಡಿಮೆ ಮಾಡುತ್ತದೆ.
2. ಗಿಗ್ ಮತ್ತು ಫ್ಲಾಟ್ ಫಾರ್ಮ್ ಕಾರ್ಮಿಕರು:
- 'ಗಿಗ್ ವರ್ಕ್', 'ಪ್ಲಾಟ್ಫಾರ್ಮ್ ವರ್ಕ್' ಮತ್ತು 'ಅಗ್ರಿಗೇಟರ್ಗಳು' ಅನ್ನು ಮೊದಲ ಬಾರಿಗೆ ವ್ಯಾಖ್ಯಾನಿಸಲಾಗಿದೆ.
- ಗಿಗ್ ಮತ್ತು ಪ್ಲಾಟ್‌ಫಾರ್ಮ್ ಕೆಲಸಗಾರರಿಗೆ ಪಾವತಿಸಿದ/ಪಾವತಿಸಬೇಕಾದ ಮೊತ್ತದ ಶೇ.5 ಕ್ಕೆ ಸೀಮಿತಗೊಳಿಸಿದ ವಾರ್ಷಿಕ ವಹಿವಾಟಿನ ಶೇ.1–2 ರಷ್ಟು ಕೊಡುಗೆ ನೀಡಬೇಕು.
- ಆಧಾರ್-ಲಿಂಕ್ ಮಾಡಲಾದ ಸಾರ್ವತ್ರಿಕ ಖಾತೆ ಸಂಖ್ಯೆಯು ಕಲ್ಯಾಣ ಪ್ರಯೋಜನಗಳನ್ನು ಸುಲಭವಾಗಿ ಪಡೆಯಲು ಸಂಪೂರ್ಣವಾಗಿ ಪೋರ್ಟಬಲ್ ಮಾಡಲು ಮತ್ತು ವಲಸೆಯನ್ನು ಲೆಕ್ಕಿಸದೆ ರಾಜ್ಯಗಳಾದ್ಯಂತ ಲಭ್ಯವಾಗುವಂತೆ ಮಾಡುತ್ತದೆ.
3. ಗುತ್ತಿಗೆ ಕಾರ್ಮಿಕರು:
- ನಿಶ್ಷಿತ-ಅವಧಿಯ ನೌಕರರು (ಎಫ್.ಟಿ.ಇ) ಉದ್ಯೋಗಾವಕಾಶಗಳನ್ನು ಹೆಚ್ಚಿಸುತ್ತಾರೆ ಮತ್ತು ಸಾಮಾಜಿಕ ಭದ್ರತೆ, ಶಾಶ್ವತ ಉದ್ಯೋಗಿಗಳಿಗೆ ಸಮಾನವಾದ ಪ್ರಯೋಜನಗಳಂತಹ ಕಾನೂನು ರಕ್ಷಣೆಯನ್ನು ಖಚಿತಪಡಿಸುತ್ತಾರೆ.
- ನಿಶ್ಚಿತ-ಅವಧಿಯ ನೌಕರರು ಒಂದು ವರ್ಷದ ನಿರಂತರ ಸೇವೆಯ ನಂತರ ಗ್ರಾಚ್ಯುಟಿಗೆ ಅರ್ಹರಾಗುತ್ತಾರೆ.
- ಪ್ರಧಾನ ಉದ್ಯೋಗದಾತರು ಗುತ್ತಿಗೆ ಕಾರ್ಮಿಕರಿಗೆ ಆರೋಗ್ಯ ಪ್ರಯೋಜನಗಳು ಮತ್ತು ಸಾಮಾಜಿಕ ಭದ್ರತಾ ಪ್ರಯೋಜನಗಳನ್ನು ಒದಗಿಸುತ್ತಾರೆ.
- ಕಾರ್ಮಿಕರಿಗೆ ಉಚಿತ ವಾರ್ಷಿಕ ಆರೋಗ್ಯ ತಪಾಸಣೆ ಒದಗಿಸಲಾಗುತ್ತದೆ.
4. ಮಹಿಳಾ ಕಾರ್ಮಿಕರು:
- ಲಿಂಗ ತಾರತಮ್ಯವನ್ನು ಕಾನೂನುಬದ್ಧವಾಗಿ ನಿಷೇಧಿಸಲಾಗಿದೆ.
- ಸಮಾನ ಕೆಲಸಕ್ಕೆ ಸಮಾನ ವೇತನವನ್ನು ಖಾತ್ರಿಪಡಿಸಲಾಗಿದೆ.
- ಮಹಿಳೆಯರು ರಾತ್ರಿ ಪಾಳಿಯಲ್ಲಿ ಮತ್ತು ಎಲ್ಲಾ ರೀತಿಯ ಕೆಲಸಗಳಲ್ಲಿ (ಭೂಗತ ಗಣಿಗಾರಿಕೆ ಮತ್ತು ಭಾರೀ ಯಂತ್ರೋಪಕರಣಗಳು ಸೇರಿದಂತೆ) ಕೆಲಸ ಮಾಡಲು ಅನುಮತಿಸಲಾಗಿದೆ, ಅವರ ಒಪ್ಪಿಗೆ ಮತ್ತು ಕಡ್ಡಾಯ ಸುರಕ್ಷತಾ ಕ್ರಮಗಳಿಗೆ ಒಳಪಟ್ಟಿರುತ್ತದೆ.
- ಕುಂದುಕೊರತೆ ಪರಿಹಾರ ಸಮಿತಿಗಳಲ್ಲಿ ಮಹಿಳಾ ಪ್ರಾತಿನಿಧ್ಯ ಕಡ್ಡಾಯ
- ಕುಟುಂಬದಲ್ಲಿ ಪೋಷಕರನ್ನು ಸೇರಿಸಲು ಅವಕಾಶ ಮಹಿಳಾ ಉದ್ಯೋಗಿಗಳ ವ್ಯಾಖ್ಯಾನ, ಅವಲಂಬಿತ ವ್ಯಾಪ್ತಿಯನ್ನು ವಿಸ್ತರಿಸುವುದು ಮತ್ತು ಒಳಗೊಳ್ಳುವಿಕೆಯನ್ನು ಖಚಿತಪಡಿಸುವುದು.
5. ಯುವ ಕಾರ್ಮಿಕರು:
- ಎಲ್ಲಾ ಕಾರ್ಮಿಕರಿಗೆ ಕನಿಷ್ಠ ವೇತನವನ್ನು ಖಾತರಿಪಡಿಸಲಾಗಿದೆ.
- ಎಲ್ಲಾ ಕಾರ್ಮಿಕರಿಗೆ ನೇಮಕಾತಿ ಪತ್ರಗಳನ್ನು ನೀಡುವುದು, - ಸಾಮಾಜಿಕ ಭದ್ರತೆ, ಉದ್ಯೋಗ ಇತಿಹಾಸ ಮತ್ತು ಔಪಚಾರಿಕ ಉದ್ಯೋಗವನ್ನು ಉತ್ತೇಜಿಸುವುದು.
- ಉದ್ಯೋಗದಾತರಿಂದ ಕಾರ್ಮಿಕರ ಶೋಷಣೆಯನ್ನು ನಿಷೇಧಿಸಲಾಗಿದೆ—ರಜೆಯ ಸಮಯದಲ್ಲಿ ವೇತನ ಪಾವತಿಸುವುದನ್ನು ಕಡ್ಡಾಯಗೊಳಿಸಲಾಗಿದೆ.
- ಯೋಗ್ಯವಾದ ಜೀವನ ಮಟ್ಟವನ್ನು ಖಾತ್ರಿಪಡಿಸಿಕೊಳ್ಳಲು, ಕೇಂದ್ರ ಸರ್ಕಾರವು ನಿರ್ಧರಿಸಿದ ನೆ floor wage ವೇತನದ ಪ್ರಕಾರ ಕಾರ್ಮಿಕರು ವೇತನವನ್ನು ಪಡೆಯುತ್ತಾರೆ.
6. ಎಂ.ಎಸ್.ಎಂ.ಇ ಕಾರ್ಮಿಕರು:
- ಸಾಮಾಜಿಕ ಭದ್ರತಾ ಸಂಹಿತೆ, 2020 ರ ಅಡಿಯಲ್ಲಿ ಬರುವ ಎಲ್ಲಾ ಎಂ.ಎಸ್.ಎಂ.ಇ ಕಾರ್ಮಿಕರು, ಉದ್ಯೋಗಿಗಳ ಸಂಖ್ಯೆಯನ್ನು ಆಧರಿಸಿ ಅರ್ಹತೆ.
- ಎಲ್ಲಾ ಕಾರ್ಮಿಕರಿಗೆ ಕನಿಷ್ಠ ವೇತನವನ್ನು ಖಾತರಿಪಡಿಸಲಾಗಿದೆ.
- ಕಾರ್ಮಿಕರಿಗೆ ಕ್ಯಾಂಟೀನ್ಗಳು, ಕುಡಿಯುವ ನೀರು ಮತ್ತು ವಿಶ್ರಾಂತಿ ಪ್ರದೇಶಗಳಂತಹ ಸೌಲಭ್ಯಗಳಿಗೆ ಪ್ರವೇಶವಿರುತ್ತದೆ.
- ಪ್ರಮಾಣಿತ ಕೆಲಸದ ಸಮಯ, ಡಬಲ್ ಓವರ್‌ಟೈಮ್ ವೇತನ ಮತ್ತು ವೇತನ ರಜೆಗಾಗಿ ನಿಬಂಧನೆಗಳು.
- ಸಕಾಲಿಕ ವೇತನ ಪಾವತಿಯನ್ನು ಖಚಿತಪಡಿಸಲಾಗಿದೆ.
7. ಬೀಡಿ ಮತ್ತು ಸಿಗರೇಟು ಕಾರ್ಮಿಕರು:
- ಎಲ್ಲರಿಗೂ ಕನಿಷ್ಠ ವೇತನ ಖಾತರಿ.
- ದಿನಕ್ಕೆ 8-12 ಗಂಟೆಗಳು, ವಾರಕ್ಕೆ 48 ಗಂಟೆಗಳ ಕೆಲಸದ ಸಮಯವನ್ನು ಮಿತಿಗೊಳಿಸಲಾಗಿದೆ.
- ಹೆಚ್ಚುವರಿ ಸಮಯ ನಿಗದಿತ ಸಮಯಕ್ಕಿಂತ ಹೆಚ್ಚಿನ ಕೆಲಸ, ಒಪ್ಪಿಗೆಯ ಆಧಾರದ ಮೇಲೆ ಮತ್ತು ಸಾಮಾನ್ಯ ವೇತನ ದರಕ್ಕಿಂತ ಕನಿಷ್ಠ ಎರಡು ಪಟ್ಟು ಪಾವತಿಸಬೇಕು.
- ಸಕಾಲಿಕ ವೇತನ ಪಾವತಿಯನ್ನು ಖಾತ್ರಿಪಡಿಸಿಕೊಳ್ಳಬೇಕು.
- ವರ್ಷದಲ್ಲಿ 30 ದಿನಗಳ ಕೆಲಸವನ್ನು ಪೂರ್ಣಗೊಳಿಸಿದ ನಂತರ ಬೋನಸ್ಗೆ ಅರ್ಹರಾಗಿರುವ ಕಾರ್ಮಿಕರು.
8. ಪ್ಲಾಂಟೇಷನ್ ಕಾರ್ಮಿಕರು:
- ಪ್ಲಾಂಟೇಷನ್ ಕಾರ್ಮಿಕರನ್ನು ಇದೀಗ ಒ.ಎಸ್.ಹೆಚ್.ಡೆಬ್ಲೂ.ಸಿ ಕೋಡ್ ಮತ್ತು ಸಾಮಾಜಿಕ ಭದ್ರತಾ ಕೋಡ್ ಅಡಿಯಲ್ಲಿ ತರಲಾಗಿದೆ.
- 10 ಕ್ಕಿಂತ ಹೆಚ್ಚು ಕಾರ್ಮಿಕರು ಅಥವಾ 5 ಅಥವಾ ಹೆಚ್ಚಿನ ಹೆಕ್ಟೇರ್‌ಗಳನ್ನು ಹೊಂದಿರುವ ತೋಟಗಳಿಗೆ ಕಾರ್ಮಿಕ ಕೋಡ್‌ಗಳು ಅನ್ವಯಿಸುತ್ತವೆ.
- ರಾಸಾಯನಿಕಗಳನ್ನು ನಿರ್ವಹಿಸುವುದು, ಸಂಗ್ರಹಿಸುವುದು ಮತ್ತು ಬಳಸುಲು ಸುರಕ್ಷತಾ ತರಬೇತಿ ಕಡ್ಡಾಯ
- ಅಪಘಾತಗಳು ಮತ್ತು ರಾಸಾಯನಿಕಗಳಿಗೆ ತೆರದುಕೊಳ್ಳುವುದನ್ನು ತಪ್ಪಿಸಲು ರಕ್ಷಣಾ ಸಾಧನಗಳನ್ನು ಒದಗಿಸುವುದು ಕಡ್ಡಾಯ.
- ಕಾರ್ಮಿಕರು ಮತ್ತು ಅವರ ಕುಟುಂಬಗಳು ಪೂರ್ಣ ಇ.ಎಸ್.ಐ ವೈದ್ಯಕೀಯ ಸೌಲಭ್ಯಗಳನ್ನು ಪಡೆಯಲು; ಅವರ ಮಕ್ಕಳಿಗೆ ಶಿಕ್ಷಣ ಸೌಲಭ್ಯಗಳನ್ನು ಸಹ ಖಾತರಿಪಡಿಸಲಾಗಿದೆ.
9. ಶ್ರವಣ-ದೃಶ್ಯ ಮತ್ತು ಡಿಜಿಟಲ್ ಮಾಧ್ಯಮ ಕಾರ್ಮಿಕರು:
- ಎಲೆಕ್ಟ್ರಾನಿಕ್ ಮಾಧ್ಯಮದ ಪತ್ರಕರ್ತರು, ಡಬ್ಬಿಂಗ್ ಕಲಾವಿದರು ಮತ್ತು ಸ್ಟಂಟ್ ವ್ಯಕ್ತಿಗಳು ಸೇರಿದಂತೆ ಡಿಜಿಟಲ್ ಮತ್ತು ಆಡಿಯೋ-ವಿಶುವಲ್ ಕೆಲಸಗಾರರು ಈಗ ಪೂರ್ಣ ಪ್ರಯೋಜನಗಳನ್ನು ಪಡೆಯಲಿದ್ದಾರೆ.
- ಎಲ್ಲಾ ಕಾರ್ಮಿಕರಿಗೆ ನೇಮಕಾತಿ ಪತ್ರ ಕಡ್ಡಾಯ - ಅವರ ಹುದ್ದೆ, ವೇತನ ಮತ್ತು ಸಾಮಾಜಿಕ ಭದ್ರತಾ ಅರ್ಹತೆಗಳನ್ನು ಸ್ಪಷ್ಟವಾಗಿ ತಿಳಿಸುತ್ತದೆ.
- ಸಕಾಲಕ್ಕೆ ವೇತನ ಪಾವತಿಯನ್ನು ಖಾತ್ರಿಪಡಿಸಲಾಗಿದೆ.
- ಕೆಲಸದ ಅವಧಿಗಿಂತ ಹೆಚ್ಚಿನ ಸಮಯವನ್ನು ಮೀರಿ ಕೆಲಸ ಮಾಡಿ, ಒಪ್ಪಿಗೆಯನ್ನು ಆಧರಿಸಿರಬೇಕು ಮತ್ತು ಸಾಮಾನ್ಯ ವೇತನ ದರಕ್ಕಿಂತ ಕನಿಷ್ಠ ಎರಡು ಪಟ್ಟು ಪಾವತಿಸಬೇಕು.
10. ಗಣಿ ಕಾರ್ಮಿಕರು:
- ಸಾಮಾಜಿಕ ಭದ್ರತಾ ಸಂಹಿತೆಯು ಕೆಲವು ಪ್ರಯಾಣಿಕ ಅಪಘಾತಗಳನ್ನು ಉದ್ಯೋಗ-ಸಂಬಂಧಿತವೆಂದು ಪರಿಗಣಿಸುತ್ತದೆ, ಇದು ಸಮಯ ಮತ್ತು ಉದ್ಯೋಗದ ಸ್ಥಳದ ಪರಿಸ್ಥಿತಿಗಳಿಗೆ ಒಳಪಟ್ಟಿರುತ್ತದೆ.
- ದುಡಿಯುವ ಸ್ಥಳದ ಔದ್ಯೋಗಿಕ ಸುರಕ್ಷತೆ ಮತ್ತು ಆರೋಗ್ಯ ಪರಿಸ್ಥಿತಿಗಳನ್ನು ಪ್ರಮಾಣೀಕರಿಸಲು ಕೇಂದ್ರ ಸರ್ಕಾರವು ಮಾನದಂಡಗಳನ್ನು ಸೂಚಿಸಿದೆ.
- ಎಲ್ಲಾ ಕಾರ್ಮಿಕರಿಗೆ ಆರೋಗ್ಯ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲಾಗುತ್ತದೆ. ಉಚಿತ ವಾರ್ಷಿಕ ಆರೋಗ್ಯ ತಪಾಸಣೆಯನ್ನು ಒದಗಿಸಲಾಗುವುದು.
- ಆರೋಗ್ಯ ಮತ್ತು ಕೆಲಸ-ಜೀವನ ಸಮತೋಲನವನ್ನು ಖಚಿತಪಡಿಸಿಕೊಳ್ಳಲು ಕೆಲಸದ ಸಮಯದ ಮಿತಿಯನ್ನು ದಿನಕ್ಕೆ 8 ರಿಂದ 12 ಗಂಟೆಗಳವರೆಗೆ, ವಾರಕ್ಕೆ 48 ಗಂಟೆಗಳವರೆಗೆ ಮಿತಿ ನಿಗದಿಪಡಿಸಲಾಗಿದೆ.
11. ಅಪಾಯಕಾರಿ ಕೈಗಾರಿಕೆಗಳ ಉದ್ಯೋಗಿಗಳು:
- ಎಲ್ಲಾ ಕಾರ್ಮಿಕರಿಗೆ ಉಚಿತ ವಾರ್ಷಿಕ ಆರೋಗ್ಯ ತಪಾಸಣೆ ಒದಗಿಸಲಾಗುವುದು.
- ಕಾರ್ಮಿಕರ ಉತ್ತಮ ಸುರಕ್ಷತೆಗಾಗಿ ಕೇಂದ್ರ ಸರ್ಕಾರವು ರಾಷ್ಟ್ರೀಯ ಮಾನದಂಡಗಳನ್ನು ರೂಪಿಸುತ್ತದೆ.
- ನೆಲದಾಳದ ಗಣಿಗಾರಿಕೆ, ಭಾರೀ ಯಂತ್ರೋಪಕರಣಗಳು ಮತ್ತು ಅಪಾಯಕಾರಿ ಕೆಲಸಗಳು ಸೇರಿದಂತೆ ಎಲ್ಲಾ ಸಂಸ್ಥೆಗಳಲ್ಲಿ ಮಹಿಳೆಯರು ಕೆಲಸ ಮಾಡಬಹುದು, ಎಲ್ಲರಿಗೂ ಸಮಾನ ಉದ್ಯೋಗಾವಕಾಶಗಳನ್ನು ಖಚಿತಪಡಿಸುತ್ತದೆ.
- ಸ್ಥಳದಲ್ಲೇ ಸುರಕ್ಷತಾ ಮೇಲ್ವಿಚಾರಣೆ ಮತ್ತು ಅಪಾಯಕಾರಿ ರಾಸಾಯನಿಕಗಳ ಸುರಕ್ಷಿತ ನಿರ್ವಹಣೆಗಾಗಿ ಪ್ರತಿ ಸ್ಥಳದಲ್ಲಿ ಸುರಕ್ಷತಾ ಸಮಿತಿ ಕಡ್ಡಾಯಗೊಳಿಸಲಾಗಿದೆ.
12. ಜವಳಿ ಕಾರ್ಮಿಕರು:
- ಎಲ್ಲಾ ವಲಸೆ ಕಾರ್ಮಿಕರು (ನೇರ, ಗುತ್ತಿಗೆದಾರ-ಆಧಾರಿತ ಮತ್ತು ಸ್ವಯಂ-ವಲಸೆ) ಸಮಾನ ವೇತನ, ಕಲ್ಯಾಣ ಪ್ರಯೋಜನಗಳು ಮತ್ತು ಪಿ.ಡಿ.ಎಸ್ ಪೋರ್ಟೆಬಿಲಿಟಿ ಪ್ರಯೋಜನಗಳನ್ನು ಪಡೆಯಬಹುದು.
- ಬಾಕಿ ಇರುವ ವೇತನ ಪಾವತಿ ಇತ್ಯರ್ಥಕ್ಕಾಗಿ ಕಾರ್ಮಿಕರು 3 ವರ್ಷಗಳವರೆಗೆ ಹಕ್ಕುಗಳನ್ನು ಸಲ್ಲಿಸಬಹುದು, ಇದು ಸರಳ ಮತ್ತು ಸುಲಭ ಪರಿಹಾರವನ್ನು ಸುಗಮಗೊಳಿಸುತ್ತದೆ.
- ನಿಗದಿತ ಸಮಯದ ನಂತರದ ಕೆಲಸಕ್ಕಾಗಿ ಕಾರ್ಮಿಕರಿಗೆ ಡಬಲ್ ವೇತನಕ್ಕಾಗಿ ನಿಬಂಧನೆ.
13. ಐ.ಟಿ. ಮತ್ತು ಐ.ಟಿ.ಇ.ಎಸ್ ಕಾರ್ಮಿಕರು:
- ಪ್ರತಿ ತಿಂಗಳ 7 ನೇ ತಾರೀಖಿನೊಳಗೆ ವೇತನವನ್ನು ಕಡ್ಡಾಯವಾಗಿ ಬಿಡುಗಡೆ ಮಾಡುವುದು. ಪಾರದರ್ಶಕತೆ ಮತ್ತು ವಿಶ್ವಾಸವನ್ನು ಖಾತ್ರಿಪಡಿಸಲಾಗಿದೆ.
- ಸಮಾನ ಕೆಲಸಕ್ಕೆ ಸಮಾನ ವೇತನವನ್ನು ಕಡ್ಡಾಯಗೊಳಿಸಲಾಗಿದೆ, ಮಹಿಳೆಯರ ಭಾಗವಹಿಸುವಿಕೆಯನ್ನು ಬಲಪಡಿಸಲಾಗಿದೆ.
- ಎಲ್ಲಾ ಸಂಸ್ಥೆಗಳಲ್ಲಿ ಮಹಿಳೆಯರು ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಸೌಲಭ್ಯ - ಮಹಿಳೆಯರಿಗೆ ಹೆಚ್ಚಿನ ವೇತನ ಗಳಿಸುವ ಅವಕಾಶ.
- ಕಿರುಕುಳ, ತಾರತಮ್ಯ ಮತ್ತು ವೇತನ ಸಂಬಂಧಿತ ವಿವಾದಗಳ ಸಕಾಲಿಕ ಪರಿಹಾರ.
- ನಿಶ್ಚಿತ-ಅವಧಿಯ ಉದ್ಯೋಗ ಮತ್ತು ಕಡ್ಡಾಯ ನೇಮಕಾತಿ ಪತ್ರಗಳ ಮೂಲಕ ಸಾಮಾಜಿಕ ಭದ್ರತಾ ಪ್ರಯೋಜನಗಳ ಖಾತರಿ.
14. ಡಾಕ್ ಕಾರ್ಮಿಕರು:
- ಎಲ್ಲಾ ಡಾಕ್ ಕಾರ್ಮಿಕರಿಗೆ ಅಧಿಕೃತ ಮಾನ್ಯತೆ, ಕಾನೂನು ರಕ್ಷಣೆ.
- ಸಾಮಾಜಿಕ ಭದ್ರತಾ ಪ್ರಯೋಜನಗಳನ್ನು ಖಾತರಿಪಡಿಸಲು ನೇಮಕಾತಿ ಪತ್ರಗಳು ಕಡ್ಡಾಯಗೊಳಿಸಲಾಗಿದೆ.
- ಗುತ್ತಿಗೆ ಅಥವಾ ತಾತ್ಕಾಲಿಕ ಡಾಕ್ ಕಾರ್ಮಿಕರಾಗಿದ್ದರೂ ಎಲ್ಲರಿಗೂ ಭವಿಷ್ಯ ನಿಧಿ, ಪಿಂಚಣಿ ಮತ್ತು ವಿಮಾ ಪ್ರಯೋಜನಗಳನ್ನು ಖಾತ್ರಿಪಡಿಸಲಾಗಿದೆ.
- ಉದ್ಯೋಗದಾತರಿಂದ ಅನುದಾನಿತ ವಾರ್ಷಿಕ ಆರೋಗ್ಯ ತಪಾಸಣೆ ಕಡ್ಡಾಯವಾಗಿದೆ.
- ಯೋಗ್ಯ ಕೆಲಸದ ಪರಿಸ್ಥಿತಿಗಳು ಮತ್ತು ಸುರಕ್ಷತೆಯನ್ನು ಖಾತ್ರಿಪಡಿಸಿಕೊಳ್ಳಲು ಡಾಕ್ ಕಾರ್ಮಿಕರಿಗೆ ಕಡ್ಡಾಯ ವೈದ್ಯಕೀಯ ಸೌಲಭ್ಯಗಳು, ಪ್ರಥಮ ಚಿಕಿತ್ಸೆ, ನೈರ್ಮಲ್ಯ ಮತ್ತು ತೊಳೆಯುವ ಪ್ರದೇಶಗಳು ಇತ್ಯಾದಿಗಳನ್ನು ಪಡೆಯಬೇಕು.
15. ರಫ್ತು ವಲಯದ ಕಾರ್ಮಿಕರು:
- ರಫ್ತು ವಲಯದ ನಿಶ್ಚಿತ -ಅವಧಿಯ ಕಾರ್ಮಿಕರು ಗ್ರಾಚ್ಯುಟಿ, ಭವಿಷ್ಯ ನಿಧಿ (ಪಿ.ಎಫ್.) ಮತ್ತು ಇತರ ಸಾಮಾಜಿಕ ಭದ್ರತಾ ಪ್ರಯೋಜನಗಳನ್ನು ಪಡೆಯುತ್ತಾರೆ.
- ಪ್ರತಿ ಕಾರ್ಮಿಕನಿಗೆ ವರ್ಷದಲ್ಲಿ 180 ದಿನಗಳ ಕೆಲಸದ ನಂತರ ವಾರ್ಷಿಕ ರಜೆ ಪಡೆಯುವ ಆಯ್ಕೆ ಇರುತ್ತದೆ.
- ಪ್ರತಿಯೊಬ್ಬ ಕಾರ್ಮಿಕನಿಗೆ ಸಕಾಲಿಕ ವೇತನ ಪಾವತಿಯ ಹಕ್ಕು ಮತ್ತು ಯಾವುದೇ ಅನಧಿಕೃತ ವೇತನ ಕಡಿತಗಳಿಲ್ಲ ಮತ್ತು ಯಾವುದೇ ವೇತನ ಮಿತಿ ನಿರ್ಬಂಧಗಳಿಲ್ಲ
● ಮಹಿಳೆಯರು ಒಪ್ಪಿಗೆಯೊಂದಿಗೆ ರಾತ್ರಿ ಪಾಳಿಯಲ್ಲಿ ಕೆಲಸ ಮಾಡಲು ಅವಕಾಶ ನೀಡಲಾಗಿದೆ, ಇದರಿಂದಾಗಿ ಹೆಚ್ಚಿನ ಆದಾಯ ಗಳಿಸುವ ಅವಕಾಶ ದೊರಕುತ್ತದೆ.
● ಸುರಕ್ಷತೆ ಮತ್ತು ಕಲ್ಯಾಣ ಕ್ರಮಗಳಲ್ಲಿ ಕಡ್ಡಾಯ ಲಿಖಿತ ಒಪ್ಪಿಗೆ, ಒಟಿಗೆ ಡಬಲ್ ವೇತನ, ಸುರಕ್ಷಿತ ಸಾರಿಗೆ, ಸಿ.ಸಿ.ಟಿ.ವಿ ಕಣ್ಗಾವಲು ಮತ್ತು ಭದ್ರತಾ ವ್ಯವಸ್ಥೆಗಳು ಸೇರಿವೆ.
ಈಗಾಗಲೇ ಪ್ರಮುಖವಾಗಿ ಪ್ರಸ್ತಾಪಿಸಲಾದ ಪ್ರಮುಖ ಕಲ್ಯಾಣ ಉಪಕ್ರಮಗಳ ಹೊರತಾಗಿ, ಕಾರ್ಮಿಕ ಸಂಹಿತೆಗಳು ಕಾರ್ಮಿಕರ ರಕ್ಷಣೆಯನ್ನು ಬಲಪಡಿಸುವ ಮತ್ತು ಉದ್ಯೋಗದಾತರಿಗೆ ಅನುಸರಣೆಯನ್ನು ಸರಳಗೊಳಿಸುವ ಹಲವಾರು ಸುಧಾರಣೆಗಳನ್ನು ಪರಿಚಯಿಸುತ್ತವೆ:
- ಯಾವುದೇ ಕಾರ್ಮಿಕನಿಗೆ ಕನಿಷ್ಠ ಜೀವನ ಮಟ್ಟಕ್ಕಿಂತ ಕಡಿಮೆ ವೇತನ ಸಿಗುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ರಾಷ್ಟ್ರೀಯ ಮಹಡಿ ವೇತನ.
- ಲಿಂಗ-ತಟಸ್ಥ ವೇತನ ಮತ್ತು ಉದ್ಯೋಗಾವಕಾಶಗಳು, ಲಿಂಗಪರಿವರ್ತಿತ ವ್ಯಕ್ತಿಗಳ ವಿರುದ್ಧದ ತಾರತಮ್ಯವನ್ನು ಸ್ಪಷ್ಟವಾಗಿ ನಿಷೇಧಿಸುತ್ತವೆ.
- ಇನ್ಸ್ಪೆಕ್ಟರ್-ಕಮ್-ಫೆಸಿಲಿಟೇಟರ್ ವ್ಯವಸ್ಥೆ, ಶಿಕ್ಷೆಯ ಕ್ರಮಕ್ಕಿಂತ ಮಾರ್ಗದರ್ಶನ, ಅರಿವು ಮತ್ತು ಅನುಸರಣೆ ಬೆಂಬಲದ ಕಡೆಗೆ ಜಾರಿಯನ್ನು ಬದಲಾಯಿಸುವುದು
- ಇಬ್ಬರು ಸದಸ್ಯರ ಕೈಗಾರಿಕಾ ನ್ಯಾಯಮಂಡಳಿಗಳು ಮತ್ತು ರಾಜಿ ಸಂಧಾನದ ನಂತರ ನೇರವಾಗಿ ನ್ಯಾಯಮಂಡಳಿಗಳನ್ನು ಸಂಪರ್ಕಿಸುವ ಆಯ್ಕೆಯೊಂದಿಗೆ ವೇಗ ಮತ್ತು ನಿರೀಕ್ಷಿತ ವಿವಾದ ಪರಿಹಾರ.
- ಸುರಕ್ಷತೆ ಮತ್ತು ಕೆಲಸದ ಪರಿಸ್ಥಿತಿಗಳ ಅವಶ್ಯಕತೆಗಳಲ್ಲಿ ಒಂದೇ ನೋಂದಣಿ, ಒಂದೇ ಪರವಾನಗಿ ಮತ್ತು ಒಂದೇ ರಿಟರ್ನ್ ಕ್ರಮಗಳಿಂದ ಹಲವು ಒವರ್ ಲ್ಯಾಪಿಂಗ್ ಫೈಲಿಂಗ್‌ಗಳನ್ನು ಬದಲಾಯಿಸುವುದು.
- ವಲಯಗಳಾದ್ಯಂತ ಸಾಮರಸ್ಯದ ಸುರಕ್ಷತೆ ಮತ್ತು ಆರೋಗ್ಯ ಮಾನದಂಡಗಳನ್ನು ಹೊಂದಿಸಲು ರಾಷ್ಟ್ರೀಯ ಒಎಸ್ ಎಚ್ ಮಂಡಳಿ
- 500ಕ್ಕೂ ಅಧಿಕ ಕಾರ್ಮಿಕರನ್ನು ಹೊಂದಿರುವ ಸಂಸ್ಥೆಗಳಲ್ಲಿ ಸುರಕ್ಷತಾ ಸಮಿತಿಗಳ ರಚನೆ ಕಡ್ಡಾಯ, ಕೆಲಸದ ಸ್ಥಳದ ಹೊಣೆಗಾರಿಕೆಯನ್ನು ಸುಧಾರಿಸುವುದು.
- ಹೆಚ್ಚಿನ ಕಾರ್ಖಾನೆ ಅನ್ವಯಿಸಬಹುದಾದ ಮಿತಿಗಳು, ಕಾರ್ಮಿಕರಿಗೆ ಸಂಪೂರ್ಣ ಸುರಕ್ಷತೆಗಳನ್ನು ಉಳಿಸಿಕೊಳ್ಳುವಾಗ ಸಣ್ಣ ಘಟಕಗಳಿಗೆ ನಿಯಂತ್ರಕ ಹೊರೆಯನ್ನು ಸರಾಗಗೊಳಿಸುವುದು.
ಕಾರ್ಮಿಕ ಸಂಹಿತೆಗಳ ಕರಡು ರಚನೆಯ ವೇಳೆ ನಡೆಸಲಾದ ವ್ಯಾಪಕ ಸಮಾಲೋಚನೆಗಳಿಗೆ ಅನುಗುಣವಾಗಿ, ಸರ್ಕಾರವು ಸಾರ್ವಜನಿಕರು ಮತ್ತು ಪಾಲುದಾರರನ್ನು ಸಂಹಿತೆಗಳ ಅಡಿಯಲ್ಲಿ ಅನುಗುಣವಾದ ನಿಯಮಗಳು, ನಿಬಂಧನೆಗಳು, ಯೋಜನೆಗಳು ಇತ್ಯಾದಿಗಳ ರಚನೆಯಲ್ಲಿ ತೊಡಗಿಸಿಕೊಳ್ಳಲಾಗಿದೆ. ಪರಿವರ್ತನೆಯ ಸಮಯದಲ್ಲಿ, ಅಸ್ತಿತ್ವದಲ್ಲಿರುವ ಕಾರ್ಮಿಕ ಕಾಯಿದೆಗಳ ಸಂಬಂಧಿತ ನಿಬಂಧನೆಗಳು ಮತ್ತು ಅವುಗಳ ಸಂಬಂಧಿತ ನಿಯಮಗಳು, ನಿಬಂಧನೆಗಳು, ಅಧಿಸೂಚನೆಗಳು, ಮಾನದಂಡಗಳು, ಯೋಜನೆಗಳು ಇತ್ಯಾದಿಗಳು ಜಾರಿಯಲ್ಲಿ ಮುಂದುವರಿಯುತ್ತವೆ.
ಕಳೆದೊಂದು ದಶಕದಲ್ಲಿ ಭಾರತವು ಸಾಮಾಜಿಕ ಭದ್ರತಾ ವ್ಯಾಪ್ತಿಯನ್ನು ಗಣನೀಯವಾಗಿ ವಿಸ್ತರಿಸಿದೆ. 2015 ರಲ್ಲಿ ಸುಮಾರು ಶೇ.19 ರಷ್ಟು ಉದ್ಯೋಗಿಗಳಿಂದ 2025 ರಲ್ಲಿ ಶೇ.64ಕ್ಕಿಂತ ಅಧಿಕ ಕಾರ್ಮಿಕರಿಗೆ ಸಾಮಾಜಿಕ ರಕ್ಷಣೆ ಒದಗಿದ್ದು, ಅವರ ರಕ್ಷಣೆ ಮತ್ತು ಘನತೆ ದೇಶಾದ್ಯಂತ ಕಾರ್ಮಿಕರನ್ನು ತಲುಪುವುದನ್ನು ಖಚಿತಪಡಿಸುತ್ತದೆ ಮತ್ತು ಸಾಮಾಜಿಕ ರಕ್ಷಣೆಯಲ್ಲಿ ಈ ಮಹತ್ವದ ಸಾಧನೆಗಾಗಿ ಜಾಗತಿಕ ಮಟ್ಟದಲ್ಲಿ ಮನ್ನಣೆಯನ್ನು ಗಳಿಸಿದೆ. ನಾಲ್ಕು ಕಾರ್ಮಿಕ ಸಂಹಿತೆಗಳ ಜಾರಿಯು ಆ ಪಥದಲ್ಲಿ ಮುಂದಿನ ಪ್ರಮುಖ ಹೆಜ್ಜೆಯನ್ನು ಗುರುತಿಸುತ್ತದೆ, ಸಾಮಾಜಿಕ ಭದ್ರತಾ ಜಾಲವನ್ನು ಮತ್ತಷ್ಟು ವಿಸ್ತರಿಸುತ್ತದೆ ಮತ್ತು ರಾಜ್ಯಗಳು ಮತ್ತು ವಲಯಗಳಲ್ಲಿ ಪ್ರಯೋಜನಗಳ ಪೋರ್ಟಬಿಲಿಟಿಯನ್ನು ಉತ್ತೇಜನ ಮಾಡುತ್ತದೆ. ವಿಸ್ತೃತ ಸಾಮಾಜಿಕ ಭದ್ರತೆ, ಬಲವಾದ ರಕ್ಷಣೆಗಳು ಮತ್ತು ರಾಷ್ಟ್ರವ್ಯಾಪಿ ಹಕ್ಕುಗಳ ಪೋರ್ಟಬಿಲಿಟಿಯೊಂದಿಗೆ, ಸಂಹಿತೆಗಳು ಕಾರ್ಮಿಕರನ್ನು, ವಿಶೇಷವಾಗಿ ಮಹಿಳೆಯರು, ಯುವಕರು, ಅಸಂಘಟಿತರು, ಗಿಗ್ ಮತ್ತು ವಲಸೆ ಕಾರ್ಮಿಕರನ್ನು ಕಾರ್ಮಿಕ ಆಡಳಿತದ ಗುರಿಯಾಗಿಟ್ಟುಕೊಳ್ಳಲಾಗಿದೆ. ಅನುಪಾಲನೆಯ ಹೊರೆಯನ್ನು ತಗ್ಗಿಸುವ ಮೂಲಕ ಮತ್ತು ಹೊಂದಿಕೊಳ್ಳುವ, ಆಧುನಿಕ ಕೆಲಸದ ವ್ಯವಸ್ಥೆಗಳನ್ನು ಸಕ್ರಿಯಗೊಳಿಸುವ ಮೂಲಕ, ಸಂಹಿತೆಗಳು ಉದ್ಯೋಗ, ಕೌಶಲ್ಯ ಮತ್ತು ಕೈಗಾರಿಕಾ ಬೆಳವಣಿಗೆಯನ್ನು ವೃದ್ಧಿಸುತ್ತವೆ. ಕಾರ್ಮಿಕರ ಪರ, ಮಹಿಳೆಯರ ಪರ, ಯುವಜನರ ಪರ ಮತ್ತು ಉದ್ಯೋಗ ಪರ ಕಾರ್ಮಿಕ ವ್ಯವಸ್ಥೆಗೆ ಸರ್ಕಾರದ ಬದ್ಧತೆಯನ್ನು ಪುನರುಚ್ಚರಿಸುತ್ತವೆ.
*****
(रिलीज़ आईडी: 2192605)
आगंतुक पटल : 49