ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ತಮಿಳುನಾಡಿನ ಸೇಲಂ ರೈಲು ನಿಲ್ದಾಣದಲ್ಲಿ ವಂದೇ ಭಾರತ್‌ಗೆ ಅದ್ಧೂರಿ ಸ್ವಾಗತಕ್ಕೆ ಪ್ರಧಾನಮಂತ್ರಿ ಸಂತಸ ವ್ಯಕ್ತಪಡಿಸಿದ್ದಾರೆ

Posted On: 10 APR 2023 9:57AM by PIB Bengaluru

ತಮಿಳುನಾಡಿನ ಸೇಲಂ ರೈಲು ಜಂಕ್ಷನ್‌ನಲ್ಲಿ ಜನರು ವಂದೇ ಭಾರತ್ ರೈಲಿಗೆ ಅದ್ಭುತ ಸ್ವಾಗತ ನೀಡಿದ್ದಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಂತಸ ವ್ಯಕ್ತಪಡಿಸಿದ್ದಾರೆ.

ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಮಹಾ ಉತ್ಸಾಹದಿಂದ ಸ್ವಾಗತ ಕೋರಿದ ಜನರು ಸೇಲಂ ರೈಲು ಜಂಕ್ಷನ್‌ನಲ್ಲಿ ರೈಲಿನ ಮೇಲೆ ಹೂವುಗಳನ್ನು ಸುರಿಸಿದರು.

ಪಿಐಬಿ ತಮಿಳುನಾಡು ಮಾಡಿದ ಟ್ವೀಟ್‌ಗೆ ಪ್ರತ್ಯುತ್ತರ ನೀಡಿದ ಪ್ರಧಾನಮಂತ್ರಿಯವರು ಹೀಗೆ ಟ್ವೀಟ್ ಮಾಡಿದ್ದಾರೆ:

"ಸೇಲಂನಲ್ಲಿ ಒಂದು ಅದ್ಭುತ ಸ್ವಾಗತ!

ವಂದೇ ಭಾರತ್ ಎಕ್ಸ್‌ಪ್ರೆಸ್ ತಲುಪುವ ವಿವಿಧ ಸ್ಥಳಗಳಲ್ಲಿ ಇಂತಹ ಉತ್ಸಾಹ ಸಾಮಾನ್ಯವಾಗಿ ಕಂಡುಬರುತ್ತದೆ, ಇದು ಭಾರತದ ಜನರಲ್ಲಿರುವ ಆಳವಾದ ಹೆಮ್ಮೆಯನ್ನು ತೋರಿಸುತ್ತದೆ."

ಶ್ರೀಮತಿ ವಾನತಿ ಶ್ರೀನಿವಾಸನ್ ಅವರು ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ ಸುಗಮ ಪ್ರಯಾಣದ ಅನುಭವದ ಬಗ್ಗೆ ಮಾಡಿದ ಟ್ವೀಟ್‌ಗೂ ಶ್ರೀ ಮೋದಿ ಅವರು ಪ್ರತಿಕ್ರಿಯಿಸಿ, ಹೀಗೆ ಹೇಳಿದರು:

"ಅದ್ಭುತ!"

 

*****

 

 


(Release ID: 2187418) Visitor Counter : 13