ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಭಾರತದ ಸಮುದ್ರ ಪುನರುಜ್ಜೀವನದ ದೃಷ್ಟಿಕೋನವನ್ನು ಹಂಚಿಕೊಂಡು, ಜಾಗತಿಕ ಹೂಡಿಕೆಯನ್ನು ಆಹ್ವಾನಿಸಿದ ಪ್ರಧಾನಮಂತ್ರಿ

Posted On: 30 OCT 2025 3:15PM by PIB Bengaluru

ಭಾರತವು ಸಾಗರ ವಲಯದ ಹೂಡಿಕೆಯ ಪ್ರಮುಖ ತಾಣವಾಗಿ ಹೊರಹೊಮ್ಮುತ್ತಿರುವ ಈ ಸಂದರ್ಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಸಾಗರ ವಲಯದಲ್ಲಿ ಹೂಡಿಕೆ ಮಾಡಲು ಭಾರತ ಸೂಕ್ತ ಬಂದರು ಎಂದು ಅವರು ತಮ್ಮ ಅಭಿಪ್ರಾಯವನ್ನು ಒತ್ತಿ ಹೇಳಿದ್ದಾರೆ. ನಮ್ಮಲ್ಲಿ ಬಹಳ ಉದ್ದವಾದ ಕರಾವಳಿ ಇದೆ, ವಿಶ್ವ ದರ್ಜೆಯ ಉತ್ತಮ ಬಂದರುಗಳಿವೆ. ನಮಲ್ಲಿ ಉತ್ತಮ ಮೂಲಸೌಕರ್ಯ, ನಾವೀನ್ಯತೆ ಮತ್ತು ಅದನ್ನು ಸೂಕ್ತವಾಗಿ ಬಳಸುವ ಉದ್ದೇಶವಿದೆ. ಬನ್ನಿ, ಭಾರತದಲ್ಲಿ ಹೂಡಿಕೆ ಮಾಡಿ ಎಂದು ಶ್ರೀ ಮೋದಿ ಅವರು ಹೇಳಿದ್ದಾರೆ.

ಭಾರತವು ಕಾರ್ಯತಂತ್ರ ಸ್ಥಳವಾಗಿದ್ದು, ಅದು ಆಧುನಿಕ ಬಂದರು ಮೂಲಸೌಕರ್ಯ ಮತ್ತು ನಾವೀನ್ಯತೆಗೆ ಬದ್ಧತೆಯು ಹಡಗು ನಿರ್ಮಾಣ, ಬಂದರು ಕಾರ್ಯಾಚರಣೆಗಳು, ಲಾಜಿಸ್ಟಿಕ್ಸ್, ಕರಾವಳಿ ಸಾಗಣೆ ಮತ್ತು ಸಂಬಂಧಿತ ಸೇವೆಗಳಲ್ಲಿ ಹೂಡಿಕೆದಾರರಿಗೆ ಅಪಾರ ಅವಕಾಶಗಳನ್ನು ಹೇಗೆ ಒದಗಿಸುತ್ತದೆ ಎಂಬುದನ್ನು ಪ್ರಧಾನಮಂತ್ರಿ ಅವರು ತಮ್ಮ ಲಿಂಕ್ಡ್ಇನ್ ಪುಟದಲ್ಲಿ ವಿವರವಾದ ಪೋಸ್ಟ್‌ ನಲ್ಲಿ ವಿವರಿಸಿದ್ದಾರೆ.

7,500 ಕಿ. ಮೀ. ಗೂ ಮೀರಿದ ಕರಾವಳಿ ಮತ್ತು ಜಾಗತಿಕವಾಗಿ ಸ್ಪರ್ಧಾತ್ಮಕ ಬಂದರುಗಳ ಜಾಲದೊಂದಿಗೆ, ಭಾರತವು ಸಂಪರ್ಕವನ್ನು ಮಾತ್ರವಲ್ಲದೆ ಮೌಲ್ಯವರ್ಧಿತ ಸೇವೆಗಳು, ಹಸಿರು ಹಡಗು ಉಪಕ್ರಮಗಳು ಮತ್ತು ಉದ್ಯಮ ಸ್ನೇಹ-ನೀತಿ ಚೌಕಟ್ಟುಗಳನ್ನು ನೀಡುವ ಪ್ರಮುಖ ಕಡಲ ಕೇಂದ್ರವಾಗಲು ಸಜ್ಜಾಗಿದೆ ಎಂದು ಶ್ರೀ ಮೋದಿ ಅವರು ಹೇಳಿದ್ದಾರೆ.

"ಬನ್ನಿ, ಭಾರತದಲ್ಲಿ ಹೂಡಿಕೆ ಮಾಡಿ" ಎಂದು ಹೇಳಿದ ಪ್ರಧಾನಮಂತ್ರಿ ಅವರು, ದೃಢವಾದ ಮೂಲಸೌಕರ್ಯ, ಸ್ಪಷ್ಟ ಉದ್ದೇಶ ಮತ್ತು ಉದಯೋನ್ಮುಖ ನಾವೀನ್ಯತೆ ಪರಿಸರ ವ್ಯವಸ್ಥೆಗಳಿಂದ ಬೆಂಬಲಿತವಾದ ದೇಶದ ಕಡಲ ಬೆಳವಣಿಗೆಯ ಕಥೆಯ ಭಾಗವಾಗಲು ದೇಶೀಯ ಮತ್ತು ಅಂತರರಾಷ್ಟ್ರೀಯ ಹೂಡಿಕೆದಾರರಿಗೆ ಪ್ರಧಾನಮಂತ್ರಿ ಅವರು ಕರೆ ನೀಡಿದ್ದಾರೆ.

ಲಿಂಕ್ಡ್‌ ಇನ್‌ನಲ್ಲಿ ಬರೆದ ತಮ್ಮ ಆಲೋಚನೆಗಳನ್ನು ಹಂಚಿಕೊಂಡ ಪ್ರಧಾನಮಂತ್ರಿ ಅವರು, ಎಕ್ಸ್ ನಲ್ಲಿ ಹೀಗೆ ಟ್ವೀಟ್ ಮಾಡಿದ್ದಾರೆ;

“ಸಾಗರ ಕ್ಷೇತ್ರದಲ್ಲಿ ಹೂಡಿಕೆ ಮಾಡುವ ವಿಷಯಕ್ಕೆ ಬಂದಾಗ ಭಾರತವು ಪರಿಪೂರ್ಣ ಬಂದರು ಕ್ಷೇತ್ರವನ್ನು ಹೊಂದಿದೆ. 

ನಮ್ಮಲ್ಲಿ ಬಹಳ ಉದ್ದವಾದ ಕರಾವಳಿ ಇದೆ. 

ನಮ್ಮಲ್ಲಿ ವಿಶ್ವ ದರ್ಜೆಯ ಬಂದರುಗಳಿವೆ. 

ನಮಗೆ ಮೂಲಸೌಕರ್ಯ, ನಾವೀನ್ಯತೆ ಮತ್ತು ಅದನ್ನು ಸಶಕ್ತವಾಗಿ ಬಳಸುವ ಉದ್ದೇಶವಿದೆ. 

ಬನ್ನಿ, ಭಾರತದಲ್ಲಿ ಹೂಡಿಕೆ ಮಾಡಿ! 

@LinkedIn ನಲ್ಲಿ ಕೆಲವು ಆಲೋಚನೆಗಳನ್ನು ಹಂಚಿಕೊಂಡಿದ್ದೇನೆ.”

 

 

*****


(Release ID: 2184406) Visitor Counter : 7