ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಫಲಿತಾಂಶಗಳ ಪಟ್ಟಿ : ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಭೂತಾನ್ ಭೇಟಿ

प्रविष्टि तिथि: 22 MAR 2024 3:10PM by PIB Bengaluru

 

 

 

ತಿಳುವಳಿಕಾ ಒಡಂಬಡಿಕೆಗಳು/ಒಪ್ಪಂದ/ಕ್ರಿಯಾ ಯೋಜನೆ

 

 

 

ಕ್ರಮ ಸಂಖ್ಯೆ

ಎಂ.ಒ.ಯು. /ಒಪ್ಪಂದ /ಕ್ರಿಯಾ ಯೋಜನೆಯ ಹೆಸರು

ವಿವರಗಳು

ಭೂತಾನದ ವತಿಯಿಂದ ಭಾಗಿಯಾದ ಪ್ರತಿನಿಧಿ

ಭಾರತದ ವತಿಯಿಂದ ಭಾಗಿಯಾದ ಪ್ರತಿನಿಧಿ

1

ಭಾರತದಿಂದ ಭೂತಾನ್‌ಗೆ ಪೆಟ್ರೋಲಿಯಂ, ತೈಲ, ಲೂಬ್ರಿಕಂಟ್‌ಗಳು (ಪಿಒಎಲ್) ಮತ್ತು ಸಂಬಂಧಿತ ಉತ್ಪನ್ನಗಳ ಸಾಮಾನ್ಯ ಪೂರೈಕೆಗಾಗಿ ತಿಳಿವಳಿಕಾ ಒಡಂಬಡಿಕೆ

ಈ ತಿಳಿವಳಿಕಾ ಒಡಂಬಡಿಕೆ ಪೆಟ್ರೋಲಿಯಂ, ತೈಲ, ಲೂಬ್ರಿಕಂಟ್‌ಗಳಿಗೆ ಸಂಬಂಧಿಸಿದ ವಸ್ತುಗಳ ಪಟ್ಟಿಯನ್ನು ಒದಗಿಸುತ್ತದೆ. ಭಾರತ ಸರ್ಕಾರವು ಒಪ್ಪಿದ ಪ್ರವೇಶ/ನಿರ್ಗಮನ ಬಿಂದುಗಳ ಮೂಲಕ ಭೂತಾನ್‌ಗೆ ತನ್ನ ಸರಬರಾಜನ್ನು ಸುಗಮಗೊಳಿಸುತ್ತದೆ.

ಶ್ರೀಮತಿ ತಾಶಿ ವಾಂಗ್ಮೋ,

ಕಾರ್ಯದರ್ಶಿ, ಕೈಗಾರಿಕಾ ವಾಣಿಜ್ಯ ಮತ್ತು ಉದ್ಯೋಗ ಸಚಿವಾಲಯ, ಆರ್.ಜಿ.ಒ.ಬಿ

ಶ್ರೀ ಸುಧಾಕರ್ ದಲೇಲಾ,

ಭೂತಾನ್ ಸಾಮ್ರಾಜ್ಯಕ್ಕೆ ಭಾರತದ ರಾಯಭಾರಿ

2

ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರ (ಎಫ್.ಎಸ್.ಎಸ್.ಎ.ಐ.) ದಿಂದ ಭೂತಾನ್ ಆಹಾರ ಮತ್ತು ಔಷಧ ಪ್ರಾಧಿಕಾರ (ಬಿ.ಎಪ್.ಡಿ.ಎ.) ನಡೆಸುವ ಅಧಿಕೃತ ನಿಯಂತ್ರಣವನ್ನು ಮಾನ್ಯ ಮಾಡುವ ಒಪ್ಪಂದ.

ಈ ಒಪ್ಪಂದವು ಭಾರತ ಮತ್ತು ಭೂತಾನ್ ನಡುವಿನ ವ್ಯಾಪಾರಕ್ಕೆ ಅನುಕೂಲಕರ ವಾತಾವರಣವನ್ನು ನಿರ್ಮಾಣ ಮಾಡುವ ಮೂಲಕ ಮತ್ತು ಎರಡೂ ಕಡೆಗಳಲ್ಲಿ ಅನುಸರಣಾ ವೆಚ್ಚವನ್ನು ಕಡಿಮೆ ಮಾಡುವ ಮೂಲಕ ವ್ಯಾಪಾರವನ್ನು ಸುಗಮಗೊಳಿಸುತ್ತದೆ. ಈ ತಿಳುವಳಿಕಾ ಒಡಂಬಡಿಕೆಯು ಬಿಎಫ್‌ಡಿಎ ನೀಡುವ ರಫ್ತು ತಪಾಸಣೆ ಪ್ರಮಾಣಪತ್ರವನ್ನು ಎಫ್‌ಎಸ್‌ಎಸ್‌ಎಐ ಸೂಚಿಸಿದ ಅವಶ್ಯಕತೆಗಳ ಅನುಸರಣೆಗಾಗಿ ಮತ್ತು ಭಾರತಕ್ಕೆ ಉತ್ಪನ್ನಗಳನ್ನು ರಫ್ತು ಮಾಡುವಾಗ ಸ್ವೀಕಾರಾರ್ಹವಾಗಿಸುತ್ತದೆ.

ಶ್ರೀ ಪೆಂಬಾ ವಾಂಗ್ಚುಕ್,

ಕಾರ್ಯದರ್ಶಿ, ಆರೋಗ್ಯ ಸಚಿವಾಲಯ, ಆರ್.ಜಿ.ಒ.ಬಿ

ಶ್ರೀ ಸುಧಾಕರ್ ದಲೇಲಾ,

ಭೂತಾನ್ ಸಾಮ್ರಾಜ್ಯಕ್ಕೆ ಭಾರತದ ರಾಯಭಾರಿ

3

ಇಂಧನ ದಕ್ಷತೆ ಮತ್ತು ಇಂಧನ ಸಂರಕ್ಷಣಾ ಕ್ರಮಗಳಲ್ಲಿ ಸಹಕಾರಕ್ಕಾಗಿ ತಿಳಿವಳಿಕಾ ಒಡಂಬಡಿಕೆ.

ಇಂಧನ ದಕ್ಷತೆ ಬ್ಯೂರೋ ಅಭಿವೃದ್ಧಿಪಡಿಸಿದ ನಕ್ಷತ್ರ ಲೇಬಲಿಂಗ್ ಕಾರ್ಯಕ್ರಮವನ್ನು ಉತ್ತೇಜಿಸುವ ಮೂಲಕ ಗೃಹ ವಲಯದಲ್ಲಿ ಇಂಧನ ದಕ್ಷತೆಯನ್ನು ಹೆಚ್ಚಿಸಲು ಭೂತಾನ್‌ಗೆ ಸಹಾಯ ಮಾಡುವುದು ಈ ತಿಳುವಳಿಕಾ ಒಡಂಬಡಿಕೆಯ  ಉದ್ದೇಶವಾಗಿದೆ. ಭಾರತದ ಅನುಭವದ ಆಧಾರದ ಮೇಲೆ ಕಟ್ಟಡ ಸಂಕೇತಗಳನ್ನು ರೂಪಿಸುವುದು, ಇಂಧನ ಲೆಕ್ಕಪರಿಶೋಧಕರ ತರಬೇತಿಯನ್ನು ಸಾಂಸ್ಥಿಕಗೊಳಿಸುವ ಮೂಲಕ ಭೂತಾನ್‌ನಲ್ಲಿ ಇಂಧನ ವೃತ್ತಿಪರರ ಗುಂಪನ್ನು ರಚಿಸುವುದು ಇತ್ಯಾದಿಗಳನ್ನು ಈ ತಿಳುವಳಿಕಾ ಒಡಂಬಡಿಕೆ ಒಳಗೊಂಡಿದೆ.

ಶ್ರೀ ಕರ್ಮ ತ್ಸೆರಿಂಗ್,

ಕಾರ್ಯದರ್ಶಿ, ಆರ್ಥಿಕ ಮತ್ತು ನೈಸರ್ಗಿಕ ಸಂಪನ್ಮೂಲ ಸಚಿವಾಲಯ, ಆರ್.ಜಿ.ಒ.ಬಿ

ಶ್ರೀ ಸುಧಾಕರ್ ದಲೇಲಾ,

ಭೂತಾನ್ ಸಾಮ್ರಾಜ್ಯಕ್ಕೆ ಭಾರತದ ರಾಯಭಾರಿ

4

ಕ್ರೀಡೆ ಮತ್ತು ಯುವಜನರಲ್ಲಿ ಸಹಕಾರಕ್ಕಾಗಿ ತಿಳುವಳಿಕಾ ಒಡಂಬಡಿಕೆ.

ಈ ತಿಳಿವಳಿಕಾ ಒಡಂಬಡಿಕೆಯು ಎರಡೂ ಕಡೆಯ ಕ್ರೀಡಾ ಸಂಸ್ಥೆಗಳ ನಡುವಿನ ಸಂಪರ್ಕವನ್ನು ಹೆಚ್ಚಿಸುವ ಮೂಲಕ ಮತ್ತು ಕ್ರೀಡಾ ಚಟುವಟಿಕೆಗಳು/ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಭಾರತ ಮತ್ತು ಭೂತಾನ್ ನಡುವಿನ ಜನರ ನಡುವಿನ ಸಂಪರ್ಕವನ್ನು ಮತ್ತಷ್ಟು ಹೆಚ್ಚಿಸಲು ಸಹಾಯ ಮಾಡುತ್ತದೆ.

ಶ್ರೀಮತಿ ಪೆಮಾ ಚೋಡೆನ್,

ಕಾರ್ಯದರ್ಶಿ, ವಿದೇಶಾಂಗ ವ್ಯವಹಾರ ಮತ್ತು ಬಾಹ್ಯ ವ್ಯಾಪಾರ ಸಚಿವಾಲಯ, ಆರ್.ಜಿ.ಒ.ಬಿ

ಶ್ರೀ ಸುಧಾಕರ್ ದಲೇಲಾ,

ಭೂತಾನ್ ಸಾಮ್ರಾಜ್ಯಕ್ಕೆ ಭಾರತದ ರಾಯಭಾರಿ

5

ಉಲ್ಲೇಖ ಮಾನದಂಡಗಳ ಹಂಚಿಕೆ, ಔಷಧಶಾಸ್ತ್ರ, ಜಾಗರೂಕತೆ/ಎಚ್ಚರ ಮತ್ತು ಔಷಧೀಯ ಉತ್ಪನ್ನಗಳ ಪರೀಕ್ಷೆಗೆ ಸಂಬಂಧಿಸಿದ ಸಹಕಾರದ ಕುರಿತು ತಿಳುವಳಿಕಾ ಒಡಂಬಡಿಕೆ.

ಈ ತಿಳಿವಳಿಕಾ ಒಡಂಬಡಿಕೆಯು ನಮ್ಮ ನಿಕಟ ಸಹಕಾರವನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ಮತ್ತು ಎರಡೂ ಕಡೆಯ ಕಾನೂನುಗಳು ಮತ್ತು ನಿಬಂಧನೆಗಳಿಗೆ ಅನುಸಾರವಾಗಿ ಔಷಧಿಗಳ ನಿಯಂತ್ರಣ ಕ್ಷೇತ್ರದಲ್ಲಿ ಮಾಹಿತಿ ವಿನಿಮಯಕ್ಕೆ ಸಹಾಯ ಮಾಡುತ್ತದೆ. ಈ ತಿಳಿವಳಿಕಾ ಒಡಂಬಡಿಕೆಯು ಭೂತಾನ್ ಔಷಧಿಗಳಿಗೆ ಮಾನದಂಡಗಳ ಪುಸ್ತಕವಾಗಿ ಭಾರತೀಯ ಫಾರ್ಮಾಕೋಪಿಯಾವನ್ನು ಸ್ವೀಕರಿಸಲು ಮತ್ತು ಕೈಗೆಟುಕುವ ಬೆಲೆಯಲ್ಲಿ ಜೆನೆರಿಕ್ ಔಷಧಿಗಳ ಪೂರೈಕೆಗೆ ಅವಕಾಶ ನೀಡುತ್ತದೆ.

ಶ್ರೀ ಪೆಂಬಾ ವಾಂಗ್ಚುಕ್,

ಕಾರ್ಯದರ್ಶಿ, ಆರೋಗ್ಯ ಸಚಿವಾಲಯ, ಆರ್.ಜಿ.ಒ.ಬಿ

ಶ್ರೀ ಸುಧಾಕರ್ ದಲೇಲಾ,

ಭೂತಾನ್ ಸಾಮ್ರಾಜ್ಯಕ್ಕೆ ಭಾರತದ ರಾಯಭಾರಿ

6

ಬಾಹ್ಯಾಕಾಶ ಸಹಕಾರದ ಜಂಟಿ ಕ್ರಿಯಾ ಯೋಜನೆ (ಜೆಪಿಒಎ)

ವಿನಿಮಯ ಕಾರ್ಯಕ್ರಮಗಳು, ತರಬೇತಿ ಇತ್ಯಾದಿಗಳ ಮೂಲಕ ನಮ್ಮ ಬಾಹ್ಯಾಕಾಶ ಸಹಕಾರವನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ಜಂಟಿ ಕ್ರಿಯಾ ಯೋಜನೆಯು ಒಂದು ನಿರ್ದಿಷ್ಟ ಬಲಿಷ್ಟ ಮಾರ್ಗಸೂಚಿಯನ್ನು ಒದಗಿಸುತ್ತದೆ.

ಶ್ರೀ ಜಿಗ್ಮೆ ತೇನ್ಸಿಂಗ್,

ಕಾರ್ಯದರ್ಶಿ, ಸರ್ಕಾರಿ ತಂತ್ರಜ್ಞಾನ ಸಂಸ್ಥೆ, ಆರ್.ಜಿ.ಒ.ಬಿ

ಶ್ರೀ ಸುಧಾಕರ್ ದಲೇಲಾ,

ಭೂತಾನ್ ಸಾಮ್ರಾಜ್ಯಕ್ಕೆ ಭಾರತದ ರಾಯಭಾರಿ

7

ಭಾರತದ ರಾಷ್ಟ್ರೀಯ ಜ್ಞಾನ ಜಾಲ (ಎನ್‌ಕೆಎನ್) ಮತ್ತು ಭೂತಾನ್‌ನ ಡ್ರಕ್ ಸಂಶೋಧನೆ ಮತ್ತು ಶಿಕ್ಷಣ ಜಾಲದ ನಡುವಿನ ಪಿಯರಿಂಗ್ ವ್ಯವಸ್ಥೆ ಕುರಿತ ತಿಳಿವಳಿಕಾ ಒಡಂಬಡಿಕೆಯ  ನವೀಕರಣ.

ಈ ತಿಳುವಳಿಕಾ ಒಡಂಬಡಿಕೆಯು ಭಾರತದ ರಾಷ್ಟ್ರೀಯ ಜ್ಞಾನ ಜಾಲ (ಎನ್.ಕೆ.ಎನ್.) ಮತ್ತು ಭೂತಾನ್‌ನ ಡ್ರಕ್ ಸಂಶೋಧನೆ ಮತ್ತು ಶಿಕ್ಷಣ ಜಾಲ (ಡ್ರಕ್ ರೆನ್) ನಡುವೆ ಎನ್.ಕೆ.ಎನ್. ಮತ್ತು ಡ್ರಕ್‌ರೆನ್ ನಡುವಿನ ಪೀರಿಂಗ್ ಒಪ್ಪಂದವನ್ನು ನವೀಕರಿಸುವುದಕ್ಕೆ ಸಂಬಂಧಿಸಿದುದಾಗಿದೆ. ಈ ತಿಳುವಳಿಕಾ ಒಡಂಬಡಿಕೆಯು ಭಾರತ ಮತ್ತು ಭೂತಾನ್ ನಡುವಿನ ಡಿಜಿಟಲ್ ಸಂಪರ್ಕವನ್ನು ಹೆಚ್ಚಿಸುತ್ತದೆ ಮತ್ತು ಭೂತಾನ್‌ನ ವಿದ್ವಾಂಸರು ಮತ್ತು ಸಂಶೋಧನಾ ಸಂಸ್ಥೆಗಳಿಗೆ ಪ್ರಯೋಜನವನ್ನು ನೀಡುತ್ತದೆ.

ಶ್ರೀ ಜಿಗ್ಮೆ ತೇನ್ಸಿಂಗ್,

ಕಾರ್ಯದರ್ಶಿ, ಸರ್ಕಾರಿ ತಂತ್ರಜ್ಞಾನ ಸಂಸ್ಥೆ, ಆರ್.ಜಿ.ಒ.ಬಿ

ಶ್ರೀ ಸುಧಾಕರ್ ದಲೇಲಾ,

ಭೂತಾನ್ ಸಾಮ್ರಾಜ್ಯಕ್ಕೆ ಭಾರತದ ರಾಯಭಾರಿ

ಇದರ ಜೊತೆಗೆ, ಭಾರತ ಮತ್ತು ಭೂತಾನ್ ನಡುವೆ ರೈಲು ಸಂಪರ್ಕಗಳ ಸ್ಥಾಪನೆ ಕುರಿತ ತಿಳುವಳಿಕಾ ಒಡಂಬಡಿಕೆಯ  ಪಠ್ಯವನ್ನು ಎರಡೂ ಕಡೆಯವರು ಒಪ್ಪಿಕೊಂಡಿದ್ದಾರೆ ಮತ್ತು ಅದರ ಆರಂಭಕ್ಕೆ ಸಹಿ ಹಾಕಿದ್ದಾರೆ. - ಈ ತಿಳುವಳಿಕಾ ಒಡಂಬಡಿಕೆಯು ಭಾರತ ಮತ್ತು ಭೂತಾನ್ ನಡುವೆ ಎರಡು ಪ್ರಸ್ತಾವಿತ ರೈಲು ಸಂಪರ್ಕಗಳ ಸ್ಥಾಪನೆಗೆ ಅವಕಾಶ ನೀಡುತ್ತದೆ, ಇದರಲ್ಲಿ ಕೊಕ್ರಜಾರ್-ಗೆಲೆಫು ರೈಲು ಸಂಪರ್ಕ ಮತ್ತು ಬನಾರ್ಹತ್-ಸಮ್ತ್ಸೆ ರೈಲು ಸಂಪರ್ಕ ಮತ್ತು ಅವುಗಳ ಅನುಷ್ಠಾನ ವಿಧಾನಗಳು ಸೇರಿವೆ.

 

****

 

 

 


(रिलीज़ आईडी: 2177186) आगंतुक पटल : 36
इस विज्ञप्ति को इन भाषाओं में पढ़ें: English , Urdu , Marathi , हिन्दी , Bengali , Manipuri , Assamese , Punjabi , Gujarati , Odia , Tamil , Telugu , Malayalam