ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಭಾರತದ ಜೌಗು ಪ್ರದೇಶ ಸಂರಕ್ಷಣಾ ಅಭಿಯಾನದಲ್ಲಿ ಬಿಹಾರದ ಹೊಸ ರಾಮ್ಸರ್ ತಾಣಗಳನ್ನು ಮೈಲಿಗಲ್ಲು ಎಂದು ಶ್ಲಾಘಿಸಿದ ಪ್ರಧಾನಮಂತ್ರಿ

Posted On: 27 SEP 2025 6:00PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಬಿಹಾರದಲ್ಲಿ ಎರಡು ಹೊಸ ರಾಮ್ಸರ್ ತಾಣಗಳಾದ ಬಕ್ಸಾರ್ ಜಿಲ್ಲೆಯ ಗೋಕುಲ್ ಜಲಾಶಯ (448 ಹೆಕ್ಟೇರ್) ಮತ್ತು ಪಶ್ಚಿಮ ಚಂಪಾರಣ್ ಜಿಲ್ಲೆಯ ಉದಯಪುರ ಝೀಲ್ (319 ಹೆಕ್ಟೇರ್) ಸೇರ್ಪಡೆಯಾಗಿರುವುದು ಭಾರತದ ಪರಿಸರ ನಿರ್ವಹಣೆಗೆ ಹೆಮ್ಮೆಯ ಕ್ಷಣವಾಗಿದೆ ಎಂದು ಶ್ಲಾಘಿಸಿದ್ದಾರೆ.

ಕೇಂದ್ರ ಸಚಿವರಾದ ಶ್ರೀ ಭೂಪೇಂದರ್ ಯಾದವ್ ಅವರ ಎಕ್ಸ್ ಖಾತೆಯ ಪೋಸ್ಟ್ ಗೆ ಪ್ರತಿಕ್ರಿಯಿಸಿದ ಪ್ರಧಾನಮಂತ್ರಿ ಅವರು ಹೀಗೆ ಹೇಳಿದ್ದಾರೆ:

"ಅದ್ಭುತ ಸುದ್ದಿ! ಸುಸ್ಥಿರ ಅಭಿವೃದ್ಧಿಗೆ ಗದ್ದೆಗಳು ಅತ್ಯಗತ್ಯ. ಪರಿಸರ ಸಂರಕ್ಷಣೆಯಲ್ಲಿ ಹೇಗೆ ಮುಂಚೂಣಿಯಲ್ಲಿರಬೇಕು ಎಂಬುದನ್ನು ಚಿಂತನೆ ಮತ್ತು ಕ್ರಿಯೆಯಲ್ಲಿ ತೋರಿಸುತ್ತಿರುವ ಬಿಹಾರದ ಜನರಿಗೆ ವಿಶೇಷ ಮೆಚ್ಚುಗೆ," ಎಂದು ಹೇಳಿದ್ದಾರೆ.

.

 

*****

 


(Release ID: 2172339) Visitor Counter : 5