ಪ್ರಧಾನ ಮಂತ್ರಿಯವರ ಕಛೇರಿ
ಆಹಾರ ಸಂಸ್ಕರಣಾ ವಲಯದಲ್ಲಿ ವ್ಯಾಪಾರ ಮಾಡುವುದನ್ನು ಸುಲಭ ಮಾಡಿಕೊಟ್ಟಿರುವ ಇತ್ತೀಚಿನ ಜಿ ಎಸ್ ಟಿ ಸುಧಾರಣೆಗಳ ಪರಿಣಾಮಗಳ ಕುರಿತ ಲೇಖನವನ್ನು ಹಂಚಿಕೊಂಡ ಪ್ರಧಾನಮಂತ್ರಿ
Posted On:
19 SEP 2025 12:01PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಇತ್ತೀಚಿನ ಜಿಎಸ್‌ಟಿ ಸುಧಾರಣೆಗಳು ಕೇವಲ ತಾಂತ್ರಿಕ ಬದಲಾವಣೆಗಳಲ್ಲ, ಬದಲಿಗೆ ಜೀವನವನ್ನು ಸುಲಭಗೊಳಿಸುವ, ವ್ಯವಹಾರ ಸುಗಮಗೊಳಿಸುವ ಮತ್ತು ಹೂಡಿಕೆಯನ್ನು ಸರಾಗಗೊಳಿಸುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆಗಳಾಗಿವೆ ಎಂಬ ಕುರಿತು ಕೇಂದ್ರ ಸಚಿವರಾದ ಶ್ರೀ ಚಿರಾಗ್ ಪಾಸ್ವಾನ್ ಅವರು ಬರೆದ ಲೇಖನವನ್ನು ಹಂಚಿಕೊಂಡಿದ್ದಾರೆ, "ದೈನಂದಿನ ಆಹಾರ ಮತ್ತು ಪ್ಯಾಕೇಜಿಂಗ್ ಮೇಲಿನ ದರಗಳನ್ನು ತಗ್ಗಿಸುವ ಮೂಲಕ ದಿನಸಿ ವಸ್ತುಗಳನ್ನು ಹೆಚ್ಚು ಕೈಗೆಟುಕುವಂತೆ ಮಾಡಲಾಗಿದ್ದು, ಎಂಎಸ್‌ಎಂಇಗಳಿಗೆ ಉತ್ತೇಜನ ದೊರಕಲಿದೆ, ರೈತರನ್ನು ಬೆಂಬಲಿಸುತ್ತದೆ ಮತ್ತು ಭಾರತದ ಜಾಗತಿಕ ಆಹಾರ ಸ್ಪರ್ಧಾತ್ಮಕತೆಯು ಸುಧಾರಿಸುತ್ತದೆ’’ ಎಂದು ಶ್ರೀ ಮೋದಿ ಹೇಳಿದ್ದಾರೆ.
ತಮ್ಮ ಸಾಮಾಜಿಕ ಜಾಲತಾಣ X ನಲ್ಲಿ ಕೇಂದ್ರ ಸಚಿವರಾದ ಶ್ರೀ ಚಿರಾಗ್ ಪಾಸ್ವಾನ್ ಅವರ ಪೋಸ್ಟ್ ಗೆ ಹೀಗೆ ಪ್ರತಿಕ್ರಿಯಿಸಿದ್ದಾರೆ:
“ಕೇಂದ್ರ ಸಚಿವರಾದ ಶ್ರೀ @iChiragPaswan ಅವರು ಇತ್ತೀಚಿನ ಜಿಎಸ್‌ಟಿ ಸುಧಾರಣೆಗಳು ಕೇವಲ ತಾಂತ್ರಿಕ ಬದಲಾವಣೆಗಳಲ್ಲ ಆದರೆ ಅವು ಜೀವನವನ್ನು ಸುಗಮಗೊಳಿಸುವ, ವ್ಯವಹಾರಯನ್ನು ಸುಲಭಗೊಳಿಸುವ ಮತ್ತು ಹೂಡಿಕೆ ಸರಾಗಗೊಳಿಸುವ ನಿಟ್ಟಿನಲ್ಲಿ ಇಟ್ಟಿರುವ ದಿಟ್ಟ ಹೆಜ್ಜೆಗಳಾಗಿವೆ ಎಂದು ತಮ್ಮ ಲೇಖನದಲ್ಲಿ ಬರೆದಿದ್ದಾರೆ. ದೈನಂದಿನ ಆಹಾರ ಮತ್ತು ಪ್ಯಾಕೇಜಿಂಗ್ ಮೇಲಿನ ದರಗಳನ್ನು ತಗ್ಗಿಸುವ ಮೂಲಕ ದಿನಸಿ ವಸ್ತುಗಳನ್ನು ಹೆಚ್ಚು ಕೈಗೆಟುಕುವಂತೆ ಮಾಡಲಾಗುತ್ತಿದೆ, ಅದು ಎಂಎಸ್‌ಎಂಇಗಳನ್ನು ವೃದ್ಧಿಸುತ್ತದೆ, ರೈತರನ್ನು ಬೆಂಬಲಿಸುತ್ತದೆ ಮತ್ತು ಭಾರತದ ಜಾಗತಿಕ ಆಹಾರ ಸ್ಪರ್ಧಾತ್ಮಕತೆಯನ್ನು ಸುಧಾರಿಸುತ್ತದೆ’’ ಎಂದು ಹೇಳಿದ್ದಾರೆ.
*****
(Release ID: 2168376)
Read this release in:
English
,
Urdu
,
Hindi
,
Marathi
,
Bengali
,
Manipuri
,
Bengali-TR
,
Assamese
,
Punjabi
,
Gujarati
,
Tamil
,
Malayalam