ಪ್ರಧಾನ ಮಂತ್ರಿಯವರ ಕಛೇರಿ
ಅಸ್ಸಾಂನಲ್ಲಿ ಐ.ಐ.ಎಂ ಸ್ಥಾಪನೆಗೆ ಪ್ರಧಾನಮಂತ್ರಿ ಅಭಿನಂದನೆ
Posted On:
20 AUG 2025 7:48PM by PIB Bengaluru
ಅಸ್ಸಾಂನಲ್ಲಿ ಭಾರತೀಯ ನಿರ್ವಹಣಾ ಸಂಸ್ಥೆ (ಐ.ಐ.ಎಂ.) ಸ್ಥಾಪಿಸಿದ್ದಕ್ಕಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಸ್ಸಾಂನ ಜನರನ್ನು ಅಭಿನಂದಿಸಿದ್ದಾರೆ.
ಐ.ಐ.ಎಂ ಸ್ಥಾಪನೆಯು ಶಿಕ್ಷಣದ ಮೂಲಸೌಕರ್ಯವನ್ನು ಹೆಚ್ಚಿಸುತ್ತದೆ ಮತ್ತು ಭಾರತದಾದ್ಯಂತದ ವಿದ್ಯಾರ್ಥಿಗಳು ಮತ್ತು ಸಂಶೋಧಕರನ್ನು ಆಕರ್ಷಿಸುತ್ತದೆ ಎಂದು ಶ್ರೀ ನರೇಂದ್ರ ಮೋದಿ ಹೇಳಿದರು.
ಅಸ್ಸಾಂನಲ್ಲಿ ಐ.ಐ.ಎಂ ಸ್ಥಾಪನೆಯ ಬಗ್ಗೆ ಕೇಂದ್ರ ಶಿಕ್ಷಣ ಸಚಿವರಾದ ಶ್ರೀ ಧರ್ಮೇಂದ್ರ ಪ್ರಧಾನ್ ಅವರ ಎಕ್ಸ್ ಖಾತೆಯ ಪೊಸ್ಟ್ ಗೆ ಶ್ರೀ ನರೇಂದ್ರ ಮೋದಿ ಅವರು ಹೀಗೆ ಹೇಳಿದ್ದಾರೆ:
"ಅಸ್ಸಾಂನ ಜನರಿಗೆ ಅಭಿನಂದನೆಗಳು! ರಾಜ್ಯದಲ್ಲಿ ಐ.ಐ.ಎಂ ಸ್ಥಾಪನೆಯು ಶಿಕ್ಷಣದ ಮೂಲಸೌಕರ್ಯವನ್ನು ಹೆಚ್ಚಿಸುತ್ತದೆ ಮತ್ತು ಭಾರತದಾದ್ಯಂತದ ವಿದ್ಯಾರ್ಥಿಗಳು ಮತ್ತು ಸಂಶೋಧಕರನ್ನು ಆಕರ್ಷಿಸುತ್ತದೆ" ಎಂದು ಹೇಳಿದರು.
*****
(Release ID: 2158748)