ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಜಲ ಜೀವನ್ ಮಿಷನ್ ಆರು ವರ್ಷ ಪೂರೈಸಿದ್ದು 15 ಕೋಟಿಗೂ ಹೆಚ್ಚು ಮನೆಗಳಿಗೆ ಶುದ್ಧ ಕುಡಿಯುವ ನೀರು ಸರಬರಾಜು ಖಾತರಿಪಡಿಸಲಾಗಿದೆ -  ಪ್ರಧಾನಮಂತ್ರಿ

Posted On: 14 AUG 2025 1:41PM by PIB Bengaluru

ಭಾರತದಾದ್ಯಂತ ಲಕ್ಷಾಂತರ ಮನೆಗಳಿಗೆ ಸುರಕ್ಷಿತ ಮತ್ತು ಅಗತ್ಯವಿರುವಷ್ಟು ಶುದ್ಧ ಕುಡಿಯುವ ನೀರನ್ನು ಪ್ರತ್ಯೇಕವಾಗಿ ನಲ್ಲಿ ಸಂಪರ್ಕದ ಮೂಲಕ ಪೂರೈಸುವುದನ್ನು ಖಚಿತಪಡಿಸಿಕೊಳ್ಳುವ ಮೂಲಕ ಪರಿವರ್ತನಾತ್ಮಕ ಬದಲಾವಣೆಯನ್ನು ತಂದ ಪ್ರಮುಖ ಉಪಕ್ರಮವಾಗಿರುವ ಜಲ ಜೀವನ್ ಮಿಷನ್ ಆರು ವರ್ಷಗಳನ್ನು ಪೂರ್ಣಗೊಳಿಸಿರುವ ಈ ಸಂದರ್ಭವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಗುರುತಿಸಿದ್ದಾರೆ. 

ಆರೋಗ್ಯವನ್ನು ಸುಧಾರಿಸುತ್ತಾ, ಸಮುದಾಯಗಳನ್ನು ಸಬಲಗೊಳಿಸುತ್ತಾ ಮತ್ತು ಅಸಂಖ್ಯಾತ ಕನಸುಗಳನ್ನು ನನಸು ಮಾಡಿರುವ 2019ರಲ್ಲಿ ಪ್ರಾರಂಭವಾದ ಜಲ ಜೀವನ್ ಮಿಷನ್, ಕೆಲವೇ ವರ್ಷಗಳಲ್ಲಿ 15 ಕೋಟಿಗೂ ಹೆಚ್ಚು ಮನೆಗಳಿಗೆ ಶುದ್ಧ ಕುಡಿಯುವ ನೀರನ್ನು ಪೂರೈಸುವ ಮೂಲಕ ಸರ್ಕಾರದ ಬದ್ಧತೆಗೆ ನಿದರ್ಶನವಾಗಿದೆ.

ಈ ಯೋಜನೆಯು ಗ್ರಾಮೀಣ ಭಾರತದ ಜನರ ಜೀವನವನ್ನು ಉನ್ನತೀಕರಿಸುವ ಜೊತೆಗೆ ಆರೋಗ್ಯ ವಲಯದಲ್ಲಿ ವಿಶೇಷವಾಗಿ ಭಾರತದ ನಾರಿ ಶಕ್ತಿ - ಮಹಿಳೆಯರಿಗೆ ಹೆಚ್ಚು ಪ್ರಯೋಜನವಾಗಬಹುದಾದ ಗಮನಾರ್ಹ ಸುಧಾರಣೆಯನ್ನೂ ತಂದಿದೆ. 

ಶ್ರೀ ಮೋದಿ ಅವರು ಎಕ್ಸ್ ನಲ್ಲಿ MyGovIndia ದ ಪ್ರತ್ಯೇಕ ಪೋಸ್ಟ್ ಗಳಿಗೆ ಹೀಗೆ ಪ್ರತಿಕ್ರಿಯೆ ನೀಡಿದ್ದಾರೆ:

"ಘನತೆ ಮತ್ತು ಜೀವನವನ್ನು ಪರಿವರ್ತಿಸಲು ಆದ್ಯ ಗಮನ ನೀಡುವ ಯೋಜನೆಯ #6YearsOfJalJeevanMission ಅನ್ನು ನಾವು ಆಚರಿಸುತ್ತಿದ್ದೇವೆ. ಇದು ಆರೋಗ್ಯ ರಕ್ಷಣೆಯನ್ನು, ವಿಶೇಷವಾಗಿ ನಮ್ಮ ನಾರಿ ಶಕ್ತಿಗೆ ಉತ್ತಮ ಆರೋಗ್ಯ ಖಾತರಿಪಡಿಸಿದೆ." 

“ಭಾರತದಾದ್ಯಂತ ಜಲ ಜೀವನ್ ಮಿಷನ್ ಬೀರಿರುವ ದೀರ್ಘಾವಧಿ ಪರಿಣಾಮದ ಒಂದು ನೋಟ. 

#6YearsOfJalJeevanMission”

 

 

*****


(Release ID: 2156379)