ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ರಕ್ಷಾ ಬಂಧನ ವಿಶೇಷ ಸಂಭ್ರಮಾಚರಣೆಯ ಮುಖ್ಯಾಂಶಗಳನ್ನು ಹಂಚಿಕೊಂಡ ಪ್ರಧಾನಮಂತ್ರಿ


ನಿರಂತರ ನಂಬಿಕೆ ಮತ್ತು ವಾತ್ಸಲ್ಯಕ್ಕಾಗಿ ನಾರಿ ಶಕ್ತಿಗೆ ಪ್ರಧಾನಮಂತ್ರಿ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ

ಪ್ರಧಾನಮಂತ್ರಿ ಅವರಿಗೆ ರಾಖಿ ಕಟ್ಟಿದ ಮಕ್ಕಳು

Posted On: 09 AUG 2025 3:04PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವದೆಹಲಿಯ ಲೋಕ ಕಲ್ಯಾಣ್ ಮಾರ್ಗದ ಸಂ. 7ರಲ್ಲಿರುವ ತಮ್ಮ ನಿವಾಸದಲ್ಲಿ ಮಕ್ಕಳೊಂದಿಗೆ ರಕ್ಷಾ ಬಂಧನವನ್ನು ವಿಶೇಷವಾಗಿ ಆಚರಿಸಿದ್ದು, ಈ ಸಂಭ್ರಮದ ಮುಖ್ಯಾಂಶಗಳನ್ನು ಹಂಚಿಕೊಂಡಿದ್ದಾರೆ. ಇದೇ ವೇಳೆ ನಾರಿ ಶಕ್ತಿಯ ನಿರಂತರ ನಂಬಿಕೆ ಮತ್ತು ವಾತ್ಸಲ್ಯಕ್ಕೆ ಶ್ರೀ ಮೋದಿ ಅವರು ಕೃತಜ್ಞತೆ ಅರ್ಪಿಸಿದ್ದಾರೆ.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ ಮಕ್ಕಳು ರಾಖಿ ಕಟ್ಟಿ ಅವರೊಂದಿಗೆ ರಾಖಿ ಹಬ್ಬವನ್ನು ಆಚರಿಸಿದರು.

ಪ್ರಧಾನಮಂತ್ರಿ ಅವರ ಎಕ್ಸ್ ಪೋಸ್ಟ್ ಹೀಗಿದೆ:

"ಇಂದು ಬೆಳಗ್ಗೆ ಅತ್ಯಂತ ವಿಶೇಷವಾಗಿ ಆಚರಿಸಲ್ಪಟ್ಟ ರಕ್ಷಾ ಬಂಧನದ ಮುಖ್ಯಾಂಶಗಳು ಇಲ್ಲಿವೆ. ನಿರಂತರ ನಂಬಿಕೆ ಮತ್ತು ವಾತ್ಸಲ್ಯಕ್ಕೆ ನಮ್ಮ ನಾರಿ ಶಕ್ತಿಗೆ ವಂದನೆಗಳು."

 

 

*****

 


(Release ID: 2154705)