ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಫಿಲಿಪೈನ್ಸ್ ಗಣರಾಜ್ಯದ ಅಧ್ಯಕ್ಷರ ಭಾರತ ಭೇಟಿ: ಫಲಪ್ರದತೆಯ ವಿವರ

Posted On: 05 AUG 2025 4:31PM by PIB Bengaluru

 

ಕ್ರ.ಸಂ.

ಒಪ್ಪಂದ/ ಒಡಂಬಡಿಕೆಯ ಹೆಸರು

1.

ಭಾರತ ಗಣರಾಜ್ಯ ಮತ್ತು ಫಿಲಿಪೈನ್ಸ್ ಗಣರಾಜ್ಯದ ನಡುವೆ ಕಾರ್ಯತಂತ್ರದ ಸಹಭಾಗಿತ್ವದ ಸ್ಥಾಪಿಸುವ ಘೋಷಣೆ

2.

ಭಾರತ-ಫಿಲಿಪೈನ್ಸ್ ಕಾರ್ಯತಂತ್ರದ ಪಾಲುದಾರಿಕೆ: ಕ್ರಿಯಾ ಯೋಜನೆ (2025-29)

3.

ವಾಯುಪಡೆ ಸಿಬ್ಬಂದಿ ಮಾತುಕತೆ ಕುರಿತು ಭಾರತೀಯ ವಾಯುಪಡೆ ಮತ್ತು ಫಿಲಿಪ್ಪೀನ್ಸ್ ವಾಯುಪಡೆಯ ನಡುವಿನ ನಿಯಮಾವಳಿ

4.

ಸೇನಾ ಸಿಬ್ಬಂದಿ ಮಾತುಕತೆಗೆ ಸಂಬಂಧಿಸಿದಂತೆ ಭಾರತೀಯ ಭೂಸೇನೆ ಮತ್ತು ಫಿಲಿಪ್ಪೀನ್ಸ್ ಭೂಸೇನೆಯ ನಡುವಿನ ನಿಯಮಾವಳಿ

5.

ನೌಕಾಪಡೆಗೆ ಮಾತುಕತೆ ಕುರಿತು ಭಾರತೀಯ ನೌಕಾಪಡೆ ಮತ್ತು ಫಿಲಿಪ್ಪೀನ್ಸ್ ನೌಕಾಪಡೆಯ ನಡುವಿನ ನಿಯಮಾವಳಿ

6.

ಭಾರತ ಗಣರಾಜ್ಯದ ಸರ್ಕಾರ ಮತ್ತು ಫಿಲಿಪೈನ್ಸ್ ಗಣರಾಜ್ಯದ ಸರ್ಕಾರದ ನಡುವೆ ಕ್ರಿಮಿನಲ್ ವಿಷಯಗಳಲ್ಲಿ ಪರಸ್ಪರ ಕಾನೂನು ನೆರವು ಕುರಿತ ಒಪ್ಪಂದ

7.

ಭಾರತ ಗಣರಾಜ್ಯದ ಸರ್ಕಾರ ಮತ್ತು ಫಿಲಿಪೈನ್ಸ್ ಗಣರಾಜ್ಯದ ಸರ್ಕಾರದ ನಡುವೆ ಶಿಕ್ಷೆಗೊಳಗಾದ ವ್ಯಕ್ತಿಗಳ ವರ್ಗಾವಣೆ ಕುರಿತ ಒಪ್ಪಂದ

8.

ಭಾರತ ಗಣರಾಜ್ಯದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಾಗೂ ಫಿಲಿಪೈನ್ಸ್ ಗಣರಾಜ್ಯದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ನಡುವೆ 2025-2028ರ ಅವಧಿಗೆ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿನ ಸಹಕಾರ ಕಾರ್ಯಕ್ರಮ

9.

ಪ್ರವಾಸೋದ್ಯಮ ಸಹಕಾರಕ್ಕಾಗಿ ಫಿಲಿಪೈನ್ಸ್ ಗಣರಾಜ್ಯದ ಸರ್ಕಾರದ ಪ್ರವಾಸೋದ್ಯಮ ಇಲಾಖೆ ಮತ್ತು ಭಾರತ ಗಣರಾಜ್ಯದ ಸರ್ಕಾರದ ಪ್ರವಾಸೋದ್ಯಮ ಸಚಿವಾಲಯದ ನಡುವೆ ಅನುಷ್ಠಾನ ಕಾರ್ಯಕ್ರಮ (2025-2028)

10.

ಡಿಜಿಟಲ್ ತಂತ್ರಜ್ಞಾನ ಕ್ಷೇತ್ರದಲ್ಲಿನ ಸಹಕಾರಕ್ಕಾಗಿ ಭಾರತ ಗಣರಾಜ್ಯದ ಸರ್ಕಾರ ಮತ್ತು ಫಿಲಿಪ್ಪೀನ್ಸ್ ಗಣರಾಜ್ಯದ ಸರ್ಕಾರದ ನಡುವೆ ಒಪ್ಪಂದ.

11.

ಬಾಹ್ಯಾಕಾಶದ ಶಾಂತಿಯುತ ಬಳಕೆಯ ಸಹಕಾರಕ್ಕಾಗಿ ಭಾರತ ಗಣರಾಜ್ಯದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೊ) ಮತ್ತು ಫಿಲಿಪ್ಪೀನ್ಸ್‌ನ ʻಫಿಲಿಪ್ಪೀನ್ಸ್ ಬಾಹ್ಯಾಕಾಶ ಸಂಸ್ಥೆʼ ನಡುವೆ ಉದ್ದೇಶಿತ ಘೋಷಣೆ

12.

ಭಾರತೀಯ ಕರಾವಳಿ ಕಾವಲು ಪಡೆ ಮತ್ತು ಫಿಲಿಪ್ಪೀನ್ಸ್ ಕೋಸ್ಟ್ ಗಾರ್ಡ್ ನಡುವೆ ಕಡಲ ಸಹಕಾರ ವರ್ಧನೆಗಾಗಿ ನಿಯಮಾವಳಿ

13.

ಭಾರತ ಗಣರಾಜ್ಯದ ಸರ್ಕಾರ ಮತ್ತು ಫಿಲಿಪೈನ್ಸ್ ಗಣರಾಜ್ಯದ ಸರ್ಕಾರದ ನಡುವೆ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮ

ಘೋಷಣೆಗಳು:

 1) ಫಿಲಿಪ್ಪೀನ್ಸ್‌ನ ಸಾರ್ವಭೌಮ ಡೇಟಾ ಕ್ಲೌಡ್ ಮೂಲಸೌಕರ್ಯ ಸ್ಥಾಪಿಸುವ ಪ್ರಾಯೋಗಿಕ ಯೋಜನೆಗೆ ಭಾರತ ಬೆಂಬಲ ನೀಡಲಿದೆ;

2) ಹಿಂದೂ ಮಹಾಸಾಗರ ಪ್ರದೇಶದ ಮಾಹಿತಿ ಸಂಗಮ ಕೇಂದ್ರದಲ್ಲಿ (ಐಎಫ್ ಸಿ-ಐಒಆರ್) ಭಾಗವಹಿಸಲು ಫಿಲಿಪ್ಪೀನ್ಸ್‌ಗೆ ಆಹ್ವಾನ;

3) ಫಿಲಿಪಿನ್ಸ್‌ ಪ್ರಜೆಗಳಿಗೆ ಉಚಿತ ಇ-ಪ್ರವಾಸಿ ವೀಸಾ ಸೌಲಭ್ಯವನ್ನು ಒಂದು ವರ್ಷದ ಅವಧಿಗೆ (ಆಗಸ್ಟ್ 2025ರಿಂದ) ವಿಸ್ತರಣೆ;

4) ಭಾರತ-ಫಿಲಿಪ್ಪೀನ್ಸ್ ರಾಜತಾಂತ್ರಿಕ ಸಂಬಂಧಗಳ ಸ್ಥಾಪನೆಯ 75ನೇ ವಾರ್ಷಿಕೋತ್ಸವದ ಸ್ಮರಣಾರ್ಥ ಜಂಟಿ ಅಂಚೆ ಚೀಟಿ ಬಿಡುಗಡೆ;

5) ಭಾರತ ಗಣರಾಜ್ಯ ಮತ್ತು ಫಿಲಿಪೈನ್ಸ್ ಗಣರಾಜ್ಯದ ನಡುವೆ ಆದ್ಯತಾ ವ್ಯಾಪಾರ ಒಪ್ಪಂದದ ಮಾತುಕತೆಗಾಗಿ ನಿಯಮಾವಳಿಗಳನ್ನು ಅಳವಡಿಸಿಕೊಳ್ಳುವುದು.

 

*****


(Release ID: 2152649)