ರೈಲ್ವೇ ಸಚಿವಾಲಯ
ದೆಹಲಿ-ಮುಂಬೈ ಮಾರ್ಗದ ಮಥುರಾ-ಕೋಟಾ ವಿಭಾಗದಲ್ಲಿ ದೇಶೀಯವಾಗಿ ಅಭಿವೃದ್ಧಿಪಡಿಸಲಾದ ಕವಚ್ 4.0 ಕಾರ್ಯಾರಂಭ ಮಾಡಿದೆ
ದಟ್ಟಣೆಯ ದೆಹಲಿ-ಮುಂಬೈ ಮಾರ್ಗದ ಮಥುರಾ-ಕೋಟಾ ವಿಭಾಗದಲ್ಲಿ ದಾಖಲೆಯ ಸಮಯದಲ್ಲಿ ಕವಚ್ 4.0 ಕಾರ್ಯಾರಂಭ ಮಾಡಿರುವುದು ಒಂದು ಪ್ರಮುಖ ಸಾಧನೆಯಾಗಿದೆ: ಶ್ರೀ ಅಶ್ವಿನಿ ವೈಷ್ಣವ್
ಕವಚ್ ಪರಿಣಾಮಕಾರಿ ಬ್ರೇಕಿಂಗ್ ಅನ್ನು ಅನ್ವಯಿಸುವ ಮೂಲಕ ಲೋಕೋ ಪೈಲಟ್ ಗಳಿಗೆ ವೇಗ ನಿಯಂತ್ರಣವನ್ನು ಸಕ್ರಿಯಗೊಳಿಸುತ್ತದೆ; ಲೋಕೋ ಪೈಲಟ್ ಗಳು ಕ್ಯಾಬಿನ್ ಒಳಗೆ ಮಂಜಿನಲ್ಲಿಯೂ ಸಿಗ್ನಲ್ ಮಾಹಿತಿಯನ್ನು ಪಡೆಯುತ್ತಾರೆ
ಭಾರತೀಯ ರೈಲ್ವೆಯು 6 ವರ್ಷಗಳಲ್ಲಿ ದೇಶಾದ್ಯಂತ ಕವಚ್ 4.0 ಕಾರ್ಯಾರಂಭ ಮಾಡಲಿದೆ; ಅನೇಕ ಅಭಿವೃದ್ಧಿ ಹೊಂದಿದ ದೇಶಗಳು ರೈಲು ರಕ್ಷಣಾ ವ್ಯವಸ್ಥೆಗಳನ್ನು ಸ್ಥಾಪಿಸಲು 20-30 ವರ್ಷಗಳನ್ನು ತೆಗೆದುಕೊಂಡವು
ಸುರಕ್ಷತೆಗೆ ರೈಲ್ವೆಯ ಬದ್ಧತೆ: ಕವಚ್ ಜೊತೆಗೆ ಹಲವಾರು ಇತರ ಸುರಕ್ಷತಾ ಕ್ರಮಗಳು ₹1 ಲಕ್ಷ ಕೋಟಿ ವಾರ್ಷಿಕ ಹೂಡಿಕೆಯಿಂದ ಬೆಂಬಲಿತವಾಗಿವೆ
Posted On:
30 JUL 2025 5:58PM by PIB Bengaluru
ಭಾರತೀಯ ರೈಲ್ವೆಯು ಹೆಚ್ಚಿನ ದಟ್ಟಣೆಯ ದೆಹಲಿ-ಮುಂಬೈ ಮಾರ್ಗದ ಮಥುರಾ-ಕೋಟಾ ವಿಭಾಗದಲ್ಲಿ ದೇಶೀಯ ರೈಲ್ವೆ ಭದ್ರತಾ ವ್ಯವಸ್ಥೆ ಕವಚ್ 4.0 ಅನ್ನು ನಿಯೋಜಿಸಿದೆ. ದೇಶದಲ್ಲಿ ರೈಲ್ವೆ ಸುರಕ್ಷತಾ ವ್ಯವಸ್ಥೆಗಳ ಆಧುನೀಕರಣಕ್ಕೆ ಇದು ಮಹತ್ವದ ಹೆಜ್ಜೆಯಾಗಿದೆ.
"ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ 'ಆತ್ಮನಿರ್ಭರ ಭಾರತ' ದೃಷ್ಟಿಕೋನದಿಂದ ಪ್ರೇರಿತವಾಗಿ, ರೈಲ್ವೆಯು ದೇಶಿಯವಾಗಿ ಕವಚ್ ಸ್ವಯಂಚಾಲಿತ ರೈಲು ರಕ್ಷಣಾ ವ್ಯವಸ್ಥೆಯನ್ನು ವಿನ್ಯಾಸಗೊಳಿಸಿದೆ, ಅಭಿವೃದ್ಧಿಪಡಿಸಿದೆ ಮತ್ತು ತಯಾರಿಸಿದೆ ಎಂದು ಕೇಂದ್ರ ರೈಲ್ವೆ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಹೇಳಿದ್ದಾರೆ. ಕವಚ್ 4.0 ತಂತ್ರಜ್ಞಾನ-ತೀವ್ರ ವ್ಯವಸ್ಥೆಯಾಗಿದೆ. ಇದನ್ನು ಜುಲೈ 2024 ರಲ್ಲಿ ಸಂಶೋಧನಾ ವಿನ್ಯಾಸಗಳು ಮತ್ತು ಮಾನದಂಡಗಳ ಸಂಸ್ಥೆ (ಆರ್ ಡಿ ಎಸ್ ಒ) ಅನುಮೋದಿಸಿತು. ಅನೇಕ ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ರೈಲು ರಕ್ಷಣಾ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸಲು ಮತ್ತು ಸ್ಥಾಪಿಸಲು 20-30 ವರ್ಷಗಳನ್ನು ತೆಗೆದುಕೊಂಡವು. ಕೋಟಾ-ಮಥುರಾ ವಿಭಾಗದಲ್ಲಿ ಕವಚ್ 4.0 ಅನ್ನು ಬಹಳ ಕಡಿಮೆ ಅವಧಿಯಲ್ಲಿಯೇ ಕಾರ್ಯಗತಗೊಳಿಸಲಾಗಿದೆ. ಇದೊಂದು ದೊಡ್ಡ ಸಾಧನೆಯಾಗಿದೆ ಎಂದು ಅವರು ಹೇಳಿದರು.
ಸ್ವಾತಂತ್ರ್ಯದ ನಂತರ ಕಳೆದ 60 ವರ್ಷಗಳಲ್ಲಿ ದೇಶದಲ್ಲಿ ಅಂತರರಾಷ್ಟ್ರೀಯ ಗುಣಮಟ್ಟದ ಸುಧಾರಿತ ರೈಲು ಸುರಕ್ಷತಾ ವ್ಯವಸ್ಥೆಗಳನ್ನು ಸ್ಥಾಪಿಸಲಾಗಿರಲಿಲ್ಲ. ರೈಲು ಮತ್ತು ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು, ಕವಚ್ ವ್ಯವಸ್ಥೆಯನ್ನು ಇತ್ತೀಚೆಗೆ ಕಾರ್ಯಗತಗೊಳಿಸಲಾಗಿದೆ.
ಭಾರತೀಯ ರೈಲ್ವೆಯು ಆರು ವರ್ಷಗಳ ಅಲ್ಪಾವಧಿಯಲ್ಲಿ ದೇಶಾದ್ಯಂತ ವಿವಿಧ ಮಾರ್ಗಗಳಲ್ಲಿ ಕವಚ್ 4.0 ಅನ್ನು ಜಾರಿಗೆ ತರಲು ಸಿದ್ಧತೆ ನಡೆಸುತ್ತಿದೆ. 30,000 ಕ್ಕೂ ಹೆಚ್ಚು ಜನರಿಗೆ ಈಗಾಗಲೇ ಕವಚ್ ವ್ಯವಸ್ಥೆಗಳ ಕುರಿತು ತರಬೇತಿ ನೀಡಲಾಗಿದೆ. IRISET (ಇಂಡಿಯನ್ ರೈಲ್ವೇಸ್ ಇನ್ಸ್ಟಿಟ್ಯೂಟ್ ಆಫ್ ಸಿಗ್ನಲ್ ಎಂಜಿನಿಯರಿಂಗ್ & ಟೆಲಿಕಮ್ಯುನಿಕೇಷನ್) 17 ಎಐಸಿಟಿಇ-ಅನುಮೋದಿತ ಎಂಜಿನಿಯರಿಂಗ್ ಕಾಲೇಜುಗಳು, ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳೊಂದಿಗೆ ಕವಚ್ ಅನ್ನು ತಮ್ಮ ಬಿ.ಟೆಕ್ ಪಠ್ಯಕ್ರಮದಲ್ಲಿ ಸೇರಿಸಲು ಒಪ್ಪಂದಗಳಿಗೆ ಸಹಿ ಹಾಕಿದೆ.
ಕವಚ್ ಪರಿಣಾಮಕಾರಿ ಬ್ರೇಕ್ ಅಪ್ಲಿಕೇಶನ್ ಮೂಲಕ ರೈಲಿನ ವೇಗವನ್ನು ಕಾಯ್ದುಕೊಳ್ಳಲು ಲೋಕೋ ಪೈಲಟ್ ಗಳಿಗೆ ಸಹಾಯ ಮಾಡುತ್ತದೆ. ಮಂಜಿನಂತಹ ಕಡಿಮೆ ಗೋಚರತೆಯ ಪರಿಸ್ಥಿತಿಗಳಲ್ಲಿಯೂ ಸಹ, ಲೋಕೋ ಪೈಲಟ್ ಗಳು ಸಿಗ್ನಲ್ ಗಾಗಿ ಕ್ಯಾಬಿನ್ ನಿಂದ ಹೊರಗೆ ನೋಡಬೇಕಾಗಿಲ್ಲ. ಪೈಲಟ್ ಗಳು ಕ್ಯಾಬಿನ್ ಒಳಗೆ ಸ್ಥಾಪಿಸಲಾದ ಡ್ಯಾಶ್ಬೋರ್ಡ್ ನಲ್ಲಿರುವ ಮಾಹಿತಿಯನ್ನು ನೋಡಬಹುದು.
ಕವಚ್ ಎಂದರೇನು?
- ಕವಚ್ ಸ್ಥಳೀಯವಾಗಿ ಅಭಿವೃದ್ಧಿಪಡಿಸಲಾದ ರೈಲು ಸುರಕ್ಷತಾ ವ್ಯವಸ್ಥೆಯಾಗಿದೆ. ರೈಲು ವೇಗವನ್ನು ಮೇಲ್ವಿಚಾರಣೆ ಮಾಡುವ ಮತ್ತು ನಿಯಂತ್ರಿಸುವ ಮೂಲಕ ಅಪಘಾತಗಳನ್ನು ತಡೆಗಟ್ಟಲು ಇದನ್ನು ವಿನ್ಯಾಸಗೊಳಿಸಲಾಗಿದೆ.
- ಇದನ್ನು ಸುರಕ್ಷತಾ ಸಮಗ್ರತೆ ಮಟ್ಟ 4 (ಎಸ್ ಐ ಎಲ್ 4) ರಲ್ಲಿ ವಿನ್ಯಾಸಗೊಳಿಸಲಾಗಿದೆ. ಇದು ಅತ್ಯುನ್ನತ ಮಟ್ಟದ ಸುರಕ್ಷತಾ ವಿನ್ಯಾಸವಾಗಿದೆ.
- ಕವಚ್ ಅಭಿವೃದ್ಧಿಯನ್ನು 2015 ರಲ್ಲಿ ಪ್ರಾರಂಭಿಸಲಾಯಿತು. ಈ ವ್ಯವಸ್ಥೆಯನ್ನು 3 ವರ್ಷಗಳಿಗೂ ಹೆಚ್ಚು ಕಾಲ ವ್ಯಾಪಕವಾಗಿ ಪರೀಕ್ಷಿಸಲಾಯಿತು.
- ತಾಂತ್ರಿಕ ಸುಧಾರಣೆಗಳ ನಂತರ, ಈ ವ್ಯವಸ್ಥೆಯನ್ನು ದಕ್ಷಿಣ ಮಧ್ಯ ರೈಲ್ವೆಯಲ್ಲಿ (ಎಸ್ ಸಿ ಆರ್) ಸ್ಥಾಪಿಸಲಾಯಿತು. ಮೊದಲ ಕಾರ್ಯಾಚರಣಾ ಪ್ರಮಾಣಪತ್ರವನ್ನು 2018 ರಲ್ಲಿ ನೀಡಲಾಯಿತು.
- ಎಸ್ ಸಿ ಆರ್ ನಲ್ಲಿ ಪಡೆದ ಅನುಭವಗಳ ಆಧಾರದ ಮೇಲೆ, 'ಕವಚ್ 4.0' ಎಂಬ ಮುಂದುವರಿದ ಆವೃತ್ತಿಯನ್ನು ಅಭಿವೃದ್ಧಿಪಡಿಸಲಾಯಿತು. 160 ಕಿಮೀ/ಗಂಟೆಯವರೆಗಿನ ವೇಗಕ್ಕಾಗಿ ಇದನ್ನು ಮೇ 2025 ರಲ್ಲಿ ಅನುಮೋದಿಸಲಾಯಿತು.
- ಕವಚ್ ಬಿಡಿಭಾಗಗಳನ್ನು ದೇಶೀಯವಾಗಿ ತಯಾರಿಸಲಾಗುತ್ತಿದೆ.
ಕವಚ್ ನ ಸಂಕೀರ್ಣತೆ
ಕವಚ್ ಅತ್ಯಂತ ಸಂಕೀರ್ಣವಾದ ವ್ಯವಸ್ಥೆಯಾಗಿದೆ. ಕವಚ್ ಅನ್ನು ನಿಯೋಜಿಸುವುದು ದೂರಸಂಪರ್ಕ ಕಂಪನಿಯನ್ನು ಸ್ಥಾಪಿಸುವುದಕ್ಕೆ ಸಮಾನವಾಗಿದೆ. ಇದು ಈ ಕೆಳಗಿನ ಉಪ-ವ್ಯವಸ್ಥೆಗಳನ್ನು ಒಳಗೊಂಡಿದೆ:
1. ಆರ್ ಎಫ್ ಐ ಡಿ ಟ್ಯಾಗ್: ಹಳಿಯ ಉದ್ದಕ್ಕೂ ಪ್ರತಿ 1 ಕಿ.ಮೀ.ಗೆ ಅಳವಡಿಸಲಾಗಿದೆ. ಪ್ರತಿಯೊಂದು ಸಿಗ್ನಲ್ ನಲ್ಲಿಯೂ ಟ್ಯಾಗ್ ಗಳನ್ನು ಅಳವಡಿಸಲಾಗಿದೆ. ಈ ಆರ್ ಎಫ್ ಐ ಡಿ ಟ್ಯಾಗ್ ರೈಲುಗಳ ನಿಖರವಾದ ಸ್ಥಳವನ್ನು ಒದಗಿಸುತ್ತವೆ.


(ಹಳಿಗಳ ಮೇಲೆ ಆರ್ ಎಫ್ ಐ ಡಿ ಟ್ಯಾಗ್ ಅಳವಡಿಕೆ)
2. ಟೆಲಿಕಾಂ ಟವರ್ ಗಳು: ಆಪ್ಟಿಕಲ್ ಫೈಬರ್ ಸಂಪರ್ಕ ಮತ್ತು ವಿದ್ಯುತ್ ಸರಬರಾಜು ಸೇರಿದಂತೆ ಪೂರ್ಣ ಪ್ರಮಾಣದ ಟೆಲಿಕಾಂ ಟವರ್ ಗಳನ್ನು ಪ್ರತಿ ಕೆಲವು ಕಿಲೋಮೀಟರ್ ಗಳಿಗೆ ಹಳಿಯ ಉದ್ದಕ್ಕೂ ಸ್ಥಾಪಿಸಲಾಗುತ್ತದೆ. ಲೋಕೋಮೋಟಿವ್ ಗಳಲ್ಲಿ ಸ್ಥಾಪಿಸಲಾದ ಕವಚ್ ವ್ಯವಸ್ಥೆಗಳು ಮತ್ತು ನಿಲ್ದಾಣಗಳಲ್ಲಿ ಕವಚ್ ನಿಯಂತ್ರಕಗಳು ಈ ಟವರ್ ಗಳನ್ನು ಬಳಸಿಕೊಂಡು ನಿರಂತರವಾಗಿ ಸಂವಹನ ನಡೆಸುತ್ತವೆ. ಇದು ಟೆಲಿಕಾಂ ಆಪರೇಟರ್ ನಂತಹ ಸಂಪೂರ್ಣ ನೆಟ್ವರ್ಕ್ ಅನ್ನು ಸ್ಥಾಪಿಸುವುದಕ್ಕೆ ಸಮಾನವಾಗಿದೆ.


(ಟೆಲಿಕಾಂ ಟವರ್ ಗಳನ್ನು ಸ್ಥಾಪಿಸಲಾಗಿದೆ)
3. ಲೋಕೋ ಕವಚ್: ಇದು ಹಳಿಗಳಲ್ಲಿ ಸ್ಥಾಪಿಸಲಾದ ಆರ್ ಎಫ್ ಐ ಡಿ ಟ್ಯಾಗ್ ಗಳೊಂದಿಗೆ ಸಂವಹನ ನಡೆಸುತ್ತದೆ ಮತ್ತು ಮಾಹಿತಿಯನ್ನು ಟೆಲಿಕಾಂ ಟವರ್ ಗಳಿಗೆ ರವಾನಿಸುತ್ತದೆ ಮತ್ತು ಸ್ಟೇಷನ್ ಕವಚ್ ನಿಂದ ರೇಡಿಯೋ ಮಾಹಿತಿಯನ್ನು ಪಡೆಯುತ್ತದೆ. ಲೋಕೋ ಕವಚ್ ಲೋಕೋಮೋಟಿವ್ ಗಳ ಬ್ರೇಕಿಂಗ್ ವ್ಯವಸ್ಥೆಯೊಂದಿಗೆ ಸಹ ಸಂಯೋಜಿಸಲ್ಪಟ್ಟಿದೆ. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಬ್ರೇಕ್ ಗಳನ್ನು ಅನ್ವಯಿಸುವುದನ್ನು ಈ ವ್ಯವಸ್ಥೆಯು ಖಚಿತಪಡಿಸುತ್ತದೆ.

(ಲೊಕೊ ಕವಚದ ಸ್ಥಾಪನೆ)
4. ನಿಲ್ದಾಣ ಕವಚ: ಪ್ರತಿಯೊಂದು ನಿಲ್ದಾಣ ಮತ್ತು ಬ್ಲಾಕ್ ವಿಭಾಗದಲ್ಲಿ ಸ್ಥಾಪಿಸಲಾಗಿದೆ. ಇದು ಲೋಕೋ ಕವಚ ಮತ್ತು ಸಿಗ್ನಲಿಂಗ್ ವ್ಯವಸ್ಥೆಯಿಂದ ಮಾಹಿತಿಯನ್ನು ಪಡೆಯುತ್ತದೆ ಮತ್ತು ಸುರಕ್ಷಿತ ವೇಗಕ್ಕಾಗಿ ಲೋಕೋ ಕವಚಕ್ಕೆ ಮಾರ್ಗದರ್ಶನ ನೀಡುತ್ತದೆ.

(ನಿಲ್ದಾಣ ಕವಚದ ಸ್ಥಾಪನೆ)
(ನಿಲ್ದಾಣ ಕವಚ)
5. ಆಪ್ಟಿಕಲ್ ಫೈಬರ್ ಕೇಬಲ್ (ಒ ಎಫ್ ಸಿ): ಹೈ-ಸ್ಪೀಡ್ ಡೇಟಾ ಸಂವಹನಕ್ಕಾಗಿ ಈ ಎಲ್ಲಾ ವ್ಯವಸ್ಥೆಗಳನ್ನು ಸಂಪರ್ಕಿಸುವ ಹಳಿಗಳ ಉದ್ದಕ್ಕೂ ಆಪ್ಟಿಕಲ್ ಫೈಬರ್ ಅನ್ನು ಹಾಕಲಾಗುತ್ತದೆ.
6. ಸಿಗ್ನಲಿಂಗ್ ವ್ಯವಸ್ಥೆ: ಸಿಗ್ನಲಿಂಗ್ ವ್ಯವಸ್ಥೆಯನ್ನು ಲೋಕೋ ಕವಚ್, ನಿಲ್ದಾಣ ಕವಚ್, ಟೆಲಿಕಾಂ ಟವರ್ ಗಳು ಇತ್ಯಾದಿಗಳೊಂದಿಗೆ ಸಂಯೋಜಿಸಲಾಗಿದೆ.

(ಸ್ಟೇಷನ್ ಮ್ಯಾನೇಜರ್ ಕಾರ್ಯಾಚರಣೆ ಫಲಕ)
ಪ್ರಯಾಣಿಕ ಮತ್ತು ಸರಕು ರೈಲುಗಳ ಭಾರೀ ಸಂಚಾರ ಸೇರಿದಂತೆ ರೈಲ್ವೆ ಕಾರ್ಯಾಚರಣೆಗಳಿಗೆ ಅಡ್ಡಿಯಾಗದಂತೆ ಈ ವ್ಯವಸ್ಥೆಗಳನ್ನು ಸ್ಥಾಪಿಸಬೇಕು, ಪರೀಕ್ಷಿಸಬೇಕು ಮತ್ತು ಪ್ರಮಾಣೀಕರಿಸಬೇಕು.
ಕವಚ್ ಪ್ರಗತಿ
ಕ್ರಮ ಸಂಖ್ಯೆ
|
ಸಾಧನ
|
ಪ್ರಗತಿ
|
-
|
ಆಪ್ಟಿಕಲ್ ಫೈಬರ್ ಅಳವಡಿಕೆ
|
5,856 ಕಿ.ಮೀ
|
-
|
ಟೆಲಿಕಾಂ ಟವರ್ ಗಳ ಸ್ಥಾಪನೆ
|
619
|
-
|
ನಿಲ್ದಾಣಗಳಲ್ಲಿ ಕವಚ್ ಸ್ಥಾಪನೆ
|
708
|
-
|
ಲೊಕೊಮೊಟಿವ್ ಗಳಲ್ಲಿ ಕವಚ್ ಸ್ಥಾಪನೆ
|
1,107
|
-
|
ಟ್ರ್ಯಾಕ್‌ಸೈಡ್ ಉಪಕರಣಗಳ ಸ್ಥಾಪನೆ
|
4,001 ಆರ್ ಕೆ ಎಂ
|
ಭಾರತೀಯ ರೈಲ್ವೆಯು ಸುರಕ್ಷತೆಗೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ವರ್ಷಕ್ಕೆ 1 ಲಕ್ಷ ಕೋಟಿ ರೂಪಾಯಿಗಳಿಗಿಂತ ಹೆಚ್ಚು ಹೂಡಿಕೆ ಮಾಡುತ್ತದೆ. ಪ್ರಯಾಣಿಕರು ಮತ್ತು ರೈಲುಗಳ ಸುರಕ್ಷತೆಯನ್ನು ಹೆಚ್ಚಿಸಲು ತೆಗೆದುಕೊಂಡ ಹಲವು ಉಪಕ್ರಮಗಳಲ್ಲಿ ಕವಚ್ ಒಂದಾಗಿದೆ. ಸಾಧಿಸಿದ ಪ್ರಗತಿ ಮತ್ತು ಕವಚ್ ನಿಯೋಜನೆಯ ವೇಗವು ರೈಲ್ವೆ ಸುರಕ್ಷತೆಯನ್ನು ಖಾತರಿಪಡಿಸುವಲ್ಲಿ ಭಾರತೀಯ ರೈಲ್ವೆಯ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.
*****
(Release ID: 2150460)
Read this release in:
Odia
,
English
,
Khasi
,
Urdu
,
Marathi
,
Hindi
,
Bengali
,
Bengali-TR
,
Assamese
,
Manipuri
,
Gujarati
,
Tamil
,
Malayalam