ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಖ್ಯಾತ ಚಲನಚಿತ್ರ ನಟಿ ಬಿ.ಸರೋಜಾ ದೇವಿ ಅವರ ನಿಧನಕ್ಕೆ ಪ್ರಧಾನಮಂತ್ರಿ ಸಂತಾಪ

Posted On: 14 JUL 2025 3:40PM by PIB Bengaluru

ಖ್ಯಾತ ಚಲನಚಿತ್ರ ತಾರೆ ಬಿ. ಸರೋಜಾ ದೇವಿ ಅವರ ನಿಧನಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಭಾರತೀಯ ಚಿತ್ರರಂಗ ಮತ್ತು ಸಂಸ್ಕೃತಿಯ ಅನುಕರಣೀಯ ವ್ಯಕ್ತಿಯಾಗಿ ಸರೋಜಾದೇವಿ ಅವರು ಸ್ಮರಣೀಯರು ಎಂದು ಶ್ರೀ ಮೋದಿ ಅವರು ಹೇಳಿದ್ದಾರೆ. ಅವರ ವೈವಿಧ್ಯಮಯ ನಟನೆಯು ತಲೆಮಾರುಗಳಾದ್ಯಂತ ಮರೆಯಲಾಗದ ಛಾಪನ್ನು ಮೂಡಿಸಿವೆ. ಅವರು ವಿವಿಧ ಭಾಷೆಗಳ ಚಿತ್ರಗಳಲ್ಲಿ ಅಭಿನಯಿಸಿದ್ದು ವೈವಿಧ್ಯಮಯ ವಿಷಯಾಧಾರಿತ ಚಿತ್ರಗಳಲ್ಲಿನ ಅವರ ನಟನೆಯು ಅವರ ಬಹುಮುಖ ಪ್ರತಿಭೆಯನ್ನು ಪ್ರದರ್ಶಿಸಿವೆ ಎಂದು ಶ್ರೀ ಮೋದಿ ಅವರು ಹೇಳಿದ್ದಾರೆ.

ಪ್ರಧಾನಮಂತ್ರಿ ಅವರ ಎಕ್ಸ್ ಪೋಸ್ಟ್ ಹೀಗಿದೆ:

“ಖ್ಯಾತ ಚಲನಚಿತ್ರ ನಟಿ ಬಿ. ಸರೋಜಾ ದೇವಿ ಅವರ ನಿಧನದಿಂದ ಅತೀವ ದುಃಖವಾಗಿದೆ. ಅವರು ಭಾರತೀಯ ಚಿತ್ರರಂಗ ಮತ್ತು ಸಂಸ್ಕೃತಿಯ ಮಾದರಿ ವ್ಯಕ್ತಿಯಾಗಿ ಸದಾ ಸ್ಮರಣೀಯರು. ಅವರ ವೈವಿಧ್ಯಮಯ ಅಭಿನಯ ತಲೆಮಾರುಗಳಾದ್ಯಂತ ಅಳಿಸಲಾಗದ ಛಾಪು ಮೂಡಿಸಿವೆ. ಅವರು ವಿವಿಧ ಭಾಷೆಗಳಲ್ಲಿ  ವೈವಿಧ್ಯಮಯ ವಿಷಯಾಧಾರಿತ ಚಿತ್ರಗಳಲ್ಲಿ ನಟಿಸಿರುವುದು ಅವರ ಬಹುಮುಖ ಪ್ರತಿಭೆಯನ್ನು ಪ್ರದರ್ಶಿಸಿದೆ. ಅವರ ಕುಟುಂಬ ವರ್ಗ ಮತ್ತು ಅಭಿಮಾನಿಗಳಿಗೆ ನನ್ನ ಸಂತಾಪಗಳು. ಓಂ ಶಾಂತಿ.”

 

 

*****

 


(Release ID: 2144558) Visitor Counter : 3