ಪ್ರಧಾನ ಮಂತ್ರಿಯವರ ಕಛೇರಿ
ನೈಜೀರಿಯಾದ ಮಾಜಿ ಅಧ್ಯಕ್ಷರಾದ ಮುಹಮ್ಮದು ಬುಹಾರಿ ಅವರ ನಿಧನಕ್ಕೆ ಪ್ರಧಾನಮಂತ್ರಿ ಸಂತಾಪ
Posted On:
14 JUL 2025 11:44AM by PIB Bengaluru
ನೈಜೀರಿಯಾದ ಮಾಜಿ ಅಧ್ಯಕ್ಷರಾದ ಮುಹಮ್ಮದು ಬುಹಾರಿ ಅವರ ನಿಧನಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ವಿವಿಧ ಸಂದರ್ಭಗಳಲ್ಲಿ ನೈಜೀರಿಯಾದ ಮಾಜಿ ಅಧ್ಯಕ್ಷರಾದ ಮುಹಮ್ಮದು ಬುಹಾರಿ ಅವರೊಂದಿಗಿನ ತಮ್ಮ ಭೇಟಿಗಳು ಮತ್ತು ಸಂಭಾಷಣೆಗಳನ್ನು ಶ್ರೀ ಮೋದಿ ಅವರು ಸ್ಮರಿಸಿದ್ದಾರೆ. ಭಾರತ-ನೈಜೀರಿಯಾ ನಡುವಣ ಮೈತ್ರಿಯಲ್ಲಿ ಮುಹಮ್ಮದು ಬುಹಾರಿ ಅವರ ಜಾಣ್ಮೆ, ಆತ್ಮೀಯತೆ ಮತ್ತು ಅಚಲ ಬದ್ಧತೆ ಎದ್ದು ಕಾಣುತ್ತದೆ ಎಂದು ಶ್ರೀ ಮೋದಿ ಅವರು ಅಭಿಪ್ರಾಯಪಟ್ಟಿದ್ದಾರೆ. ಭಾರತದ 140 ಕೋಟಿ ಜನರೊಂದಿಗೆ ಬುಹಾರಿ ಅವರ ಕುಟುಂಬ, ಜನರು ಮತ್ತು ನೈಜೀರಿಯಾ ಸರ್ಕಾರಕ್ಕೆ ಶ್ರೀ ಮೋದಿ ಅವರು ಸಂತಾಪ ಸಲ್ಲಿಸಿದ್ದಾರೆ.
ಪ್ರಧಾನಮಂತ್ರಿಗಳ ಎಕ್ಸ್ ಪೋಸ್ಟ್ ಹೀಗಿದೆ:
“ನೈಜೀರಿಯಾದ ಮಾಜಿ ಅಧ್ಯಕ್ಷರಾದ ಮುಹಮ್ಮದು ಬುಹಾರಿ ಅವರ ನಿಧನದಿಂದ ತೀವ್ರ ದುಃಖವಾಗಿದೆ. ವಿವಿಧ ಸಂದರ್ಭಗಳಲ್ಲಿ ಅವರೊಂದಿಗಿನ ನನ್ನ ಭೇಟಿ ಮತ್ತು ಸಂಭಾಷಣೆಗಳನ್ನು ನಾನು ಪ್ರೀತಿಯಿಂದ ನೆನಪಿಸಿಕೊಳ್ಳುತ್ತೇನೆ. ಭಾರತ-ನೈಜೀರಿಯಾ ಸ್ನೇಹದಲ್ಲಿ ಅವರ ಜಾಣ್ಮೆ, ಆತ್ಮೀಯತೆ ಮತ್ತು ಅಚಲ ಬದ್ಧತೆ ಎದ್ದು ಕಾಣುತ್ತದೆ. ಭಾರತದ 1.4 ಶತಕೋಟಿ ಜನರೊಂದಿಗೆ ಅವರ ಕುಟುಂಬ, ಜನರು ಮತ್ತು ನೈಜೀರಿಯಾ ಸರ್ಕಾರಕ್ಕೆ ನನ್ನ ತೀವ್ರ ಸಂತಾಪಗಳು.
@officialABAT
@NGRPresident”
*****
(Release ID: 2144477)
Read this release in:
English
,
Urdu
,
Marathi
,
Hindi
,
Bengali-TR
,
Bengali
,
Assamese
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam