ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ
ಖೇಲೋ ಇಂಡಿಯಾ ಬೀಚ್ ಗೇಮ್ಸ್ (ಕೆಐಬಿಜಿ) ಕೀಡಾಕೂಟವು ಕ್ರೀಡೆಯ ಪರಿವರ್ತನಾತ್ಮಕ ಶಕ್ತಿಯನ್ನು ಪ್ರತಿಬಿಂಬಿಸಿದೆ ಮತ್ತು ಹೊಸ ಅಧ್ಯಾಯವನ್ನು ಸೇರಿಸಿದೆ : ಪ್ರಧಾನಮಂತ್ರಿ ನರೇಂದ್ರ ಮೋದಿ
ಕೇಂದ್ರ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವರಾದ ಡಾ. ಮನ್ಸುಖ್ ಮಾಂಡವಿಯಾ ಅವರು ಕ್ರೀಡಾಕೂಟಕ್ಕೆ ಚಾಲನೆ ನೀಡಿದರು
ಡಿಯುನಲ್ಲಿರುವ ಕೆಐಬಿಜಿ ಎಲ್ಲಾ ರೀತಿಯ ಕ್ರೀಡೆಗಳಲ್ಲಿ ಶ್ರೇಷ್ಠತೆಯನ್ನು ಸಾಧಿಸುವ ಭಾರತದ ಪ್ರಯತ್ನವನ್ನು ತೋರಿಸುತ್ತದೆ: ಡಾ. ಮನ್ಸುಖ್ ಮಾಂಡವಿಯಾ
Posted On:
20 MAY 2025 8:45AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಸೋಮವಾರ ಕ್ರೀಡೆಗಳ 'ಪರಿವರ್ತನಾತ್ಮಕ ಶಕ್ತಿ' ಮತ್ತು ಖೇಲೋ ಇಂಡಿಯಾ ಬೀಚ್ ಗೇಮ್ಸ್, ರಾಷ್ಟ್ರದ ಕ್ರೀಡಾ ಇತಿಹಾಸದಲ್ಲಿ ಹೇಗೆ ಒಂದು ಬಹು ಮುಖ್ಯವಾದ ಕ್ಷಣವಾಗಿತ್ತು ಎನ್ನುವುದನ್ನು ಎತ್ತಿ ತೋರಿಸಿದರು. ಕೇಂದ್ರಾಡಳಿತ ಪ್ರದೇಶವಾದ ದಾದ್ರಾ ಮತ್ತು ನಗರ ಹವೇಲಿ ಹಾಗು ದಮನ್ ಮತ್ತು ಡಿಯುನಲ್ಲಿನ ಕ್ರೀಡಾಕೂಟದ ಆಯೋಜಕರು ಮತ್ತು ಭಾರತೀಯ ಕ್ರೀಡಾ ಪ್ರಾಧಿಕಾರಕ್ಕೆ ನೀಡಿದ ಸಂದೇಶದಲ್ಲಿ, ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಬೀಚ್ ಗೇಮ್ಸ್ ಭಾರತದ ಕ್ರೀಡಾ ಜಗತ್ತಿನಲ್ಲಿ ಹೊಸ ಅಲೆಯನ್ನು ಸೃಷ್ಟಿಸುವ ಭರವಸೆ ನೀಡುತ್ತದೆ ಎಂದು ಅಭಿನಂದಿಸಿದರು ಮತ್ತು ತಮ್ಮ ಶುಭಾಶಯಗಳನ್ನು ತಿಳಿಸಿದರು.
ಖೇಲೋ ಇಂಡಿಯಾ ಬೀಚ್ ಕ್ರೀಡಾಕೂಟವನ್ನು ಆಯೋಜಿಸಲು ದಿಯು ನಗರವನ್ನು ಆಯ್ಕೆ ಮಾಡಿರುವುದು “ಬಹಳ ಸೂಕ್ತವಾಗಿದೆ” ಎಂದು ಪ್ರಧಾನಮಂತ್ರಿ ಮೋದಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. "ಸೂರ್ಯನ ಬೆಳಕು, ಮರಳು ಮತ್ತು ನೀರಿನ ಸಂಯೋಜನೆಯು ನಮ್ಮ ಕಡಲ ಪರಂಪರೆಯನ್ನು ಆಚರಿಸುವುದರ ಜೊತೆಗೆ ದೈಹಿಕ ಸದೃಢತೆಯನ್ನು ಹೆಚ್ಚಿಸುತ್ತದೆ" "ಅಲೆಗಳು ತೀರಗಳನ್ನು ಅಪ್ಪಳಿಸುತ್ತಿದ್ದಂತೆ ಮತ್ತು ಕ್ರೀಡಾಪಟುಗಳು ಸ್ಪರ್ಧಿಸುತ್ತಿದ್ದಂತೆ. ಭಾರತವು ಹೊಸ ಕ್ರೀಡಾ ಅಧ್ಯಾಯವನ್ನು ಬರೆಯಲಿದೆ." ಎಂದು ಅವರು ಹೇಳಿದರು.


ಖೇಲೋ ಇಂಡಿಯಾ ಕ್ರೀಡಾಕೂಟದ ಅಡಿಯಲ್ಲಿ ನಡೆದ ಮೊದಲ ಬೀಚ್ ಕ್ರೀಡಾಕೂಟವನ್ನು ಕೇಂದ್ರ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವರಾದ ಡಾ. ಮನ್ಸುಖ್ ಮಾಂಡವಿಯಾ ಅವರು ಸೋಮವಾರ ಡಿಯುವಿನ ಘೋಘ್ಲಾ ಕಡಲತೀರದಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ಔಪಚಾರಿಕವಾಗಿ ಉದ್ಘಾಟಿಸಿದರು
ಖೇಲೋ ಇಂಡಿಯಾ ಬೀಚ್ ಕ್ರೀಡಾಕೂಟವು 30 ಕ್ಕೂ ಹೆಚ್ಚು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ 1,350 ಕ್ಕೂ ಹೆಚ್ಚು ಕ್ರೀಡಾಪಟುಗಳನ್ನು ಒಟ್ಟುಗೂಡಿಸಿದೆ. ಮೇ 24 ರಂದು, ನಿಗದಿಪಡಿಸಿದಂತೆ ಕ್ರೀಡಾಕೂಟ ಕೊನೆಗೊಳ್ಳುವಾಗ , ಕ್ರೀಡಾಪಟುಗಳು ಆರು ಪದಕ ಕ್ರೀಡೆಗಳಲ್ಲಿ ಸ್ಪರ್ಧಿಸಿರುತ್ತಾರೆ - ಸಾಕರ್, ವಾಲಿಬಾಲ್, ಸೆಪಕ್ಟಕ್ರಾ, ಕಬಡ್ಡಿ, ಪೆನ್ಕಾಕ್ಸಿಲಾಟ್ ಮತ್ತು ಓಪನ್ ವಾಟರ್ ಈಜು. ಮಲ್ಲಕಂಬ ಮತ್ತು ಹಗ್ಗ ಜಗ್ಗಾಟ ಎರಡು ಪದಕೇತರ (ಪ್ರದರ್ಶನ) ವಿಭಾಗಗಳಾಗಿವೆ. ಸೋಮವಾರ ಬೆಳಿಗ್ಗೆ ಬೀಚ್ ಸಾಕರ್ ಆಟಗಳೊಂದಿಗೆ ಕ್ರೀಡಾಕೂಟವು ಪ್ರಾರಂಭವಾಯಿತು.
"ನಮ್ಮಂತಹ ವೈವಿಧ್ಯಮಯ ದೇಶದಲ್ಲಿ, ಕ್ರೀಡೆಗಳು ಯಾವಾಗಲೂ ವಿಭಿನ್ನ ಸಂಸ್ಕೃತಿಗಳು, ಪ್ರದೇಶಗಳು ಮತ್ತು ಭಾಷೆಗಳನ್ನು ಒಟ್ಟುಗೂಡಿಸುವ ವಿಶಿಷ್ಟ ಶಕ್ತಿಯನ್ನು ಹೊಂದಿವೆ. ಕ್ರೀಡೆಯ ರೋಮಾಂಚಕ ಶಕ್ತಿಯು ಮನರಂಜನೆಯನ್ನು ಮೀರಿ ಪರಿವರ್ತನಾತ್ಮಕ ಶಕ್ತಿಯಾಗಿ ಮತ್ತು ನಮ್ಮ ಯುವಕರ ರಾಷ್ಟ್ರೀಯ ಹೆಮ್ಮೆ ಮತ್ತು ಆಕಾಂಕ್ಷೆಗಳ ಸಂಕೇತವಾಗಿ ಮಾರ್ಪಟ್ಟಿದೆ. ಮತ್ತು ಈ ಸಂದರ್ಭದಲ್ಲಿಯೇ ಖೇಲೋ ಇಂಡಿಯಾ ಬೀಚ್ ಕ್ರೀಡಾಕೂಟವು ಹೆಚ್ಚಿನ ಮಹತ್ವವನ್ನು ಪಡೆದುಕೊಂಡಿದೆ" ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಹೇಳಿದರು.
ಸಾಂಪ್ರದಾಯಿಕ ನೃತ್ಯ ಪ್ರಕಾರಗಳ ಮೂಲಕ ಭಾರತದ ಅದ್ಭುತ ವೈವಿಧ್ಯತೆಯನ್ನು ವೈಭವೀಕರಿಸುವ ಸುಂದರವಾಗಿ ನಡೆಸಲ್ಪಟ್ಟ ಉದ್ಘಾಟನಾ ಸಮಾರಂಭವನ್ನು ದಾದ್ರಾ ಮತ್ತು ನಗರ ಹವೇಲಿ ಮತ್ತು ದಮನ್ ಮತ್ತು ಡಿಯು ಮತ್ತು ಲಕ್ಷದ್ವೀಪದ ಆಡಳಿತಾಧಿಕಾರಿ ಶ್ರೀ ಪ್ರಫುಲ್ ಪಟೇಲ್, ಪುದುಚೇರಿಯ ಲೆಫ್ಟಿನೆಂಟ್ ಗವರ್ನರ್ ಶ್ರೀ ಕೆ. ಕೈಲಾಶನಾಥನ್ ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಲೆಫ್ಟಿನೆಂಟ್ ಗವರ್ನರ್ ಅಡ್ಮಿರಲ್ ಡಿ.ಕೆ. ಜೋಶಿ ಸೇರಿದಂತೆ ಹಲವಾರು ಗಣ್ಯರು ವೀಕ್ಷಿಸಿದರು.
"ಇಂದು, ನಾವು ಕೇವಲ ಕ್ರೀಡಾಕೂಟವನ್ನು ಉದ್ಘಾಟಿಸುತ್ತಿಲ್ಲ, ಭಾರತದ ಮೊದಲ ಬೀಚ್ ಕ್ರೀಡಾ ಕ್ರಾಂತಿಯನ್ನು ಘೋಷಿಸುತ್ತಿದ್ದೇವೆ! ಅಲೆಗಳಿರುವಲ್ಲಿ ಉತ್ಸಾಹ ಇರಬೇಕು ಎಂದು ನಾನು ನಂಬುತ್ತೇನೆ; ಮರಳು ಇರುವಲ್ಲಿ ಉತ್ಸಾಹದ ಬೆಂಕಿ ಇರಬೇಕು - ಮತ್ತು ಖೇಲೋ ಇಂಡಿಯಾ ಬೀಚ್ ಕ್ರೀಡಾಕೂಟ ಇಂದು ನಮ್ಮೆಲ್ಲರ ಹೃದಯಗಳಲ್ಲಿ ಆ ಬೆಂಕಿಯನ್ನು ಹೊತ್ತಿಸಿದೆ" ಎಂದು ಡಾ. ಮನ್ಸುಖ್ ಮಾಂಡವಿಯಾ ಹೇಳಿದರು. ಅವರು ಹೇಳಿದರು: "ಮೋದಿ ಸರ್ಕಾರದ ಅಡಿಯಲ್ಲಿ, ನಾವು ಕೇವಲ ಔಪಚಾರಿಕ ಕಾರ್ಯಕ್ರಮಗಳಾಗಿ ಕಾರ್ಯಕ್ರಮಗಳನ್ನು ಆಯೋಜಿಸುವುದಿಲ್ಲ - ನಾವು ಒಂದು ಕಾರ್ಯಾಚರಣೆಯಲ್ಲಿದ್ದೇವೆ. ಮತ್ತು ಈ ಮಿಷನ್, ಕ್ರೀಡೆಗಳನ್ನು ಉದ್ಯೋಗಕ್ಕೆ ಸಂಪರ್ಕಿಸುತ್ತದೆ. ವಿಕಸಿತ ಭಾರತಕ್ಕಾಗಿ, ಖೇಲೋ ಇಂಡಿಯಾ ಯುವಕರು ತಮ್ಮ ಕನಸುಗಳನ್ನು ಸಾಧಿಸಲು ಖಚಿತವಾದ ಮಾರ್ಗವಾಗಿದೆ." ಎಂದು ಹೇಳಿದರು.
ಖೇಲೋ ಇಂಡಿಯಾ ದೇಶೀಯ ಕ್ರೀಡಾ ವೇಳಾಪಟ್ಟಿಯಲ್ಲಿ ಹೆಚ್ಚಿನ ಆಟಗಳನ್ನು ಸೇರಿಸಿದೆ ಎಂದು ಹೇಳಿದ ಡಾ. ಮನ್ಸುಖ್ ಮಾಂಡವಿಯಾ, ಪ್ರಧಾನಮಂತ್ರಿ ಮೋದಿಯವರಂತೆ, ಕಳೆದ ಕೆಲವು ವರ್ಷಗಳಿಂದ, ಮೂಲಸೌಕರ್ಯಗಳಲ್ಲಿ ಹೂಡಿಕೆ, ಉತ್ತಮ ತರಬೇತಿ ಸೌಲಭ್ಯಗಳು ಮತ್ತು ಕ್ರೀಡಾಪಟುಗಳಿಗೆ ಬೆಂಬಲ ನೀಡುವ ಕ್ರಮಗಳ ಮೂಲಕ ಕ್ರೀಡಾ ಪರಿಸರ ವ್ಯವಸ್ಥೆಯನ್ನು ಉತ್ತೇಜಿಸಲು ಸರ್ಕಾರವು ಸರ್ವ ಪ್ರಯತ್ನವನ್ನು ಮಾಡುತ್ತಿದೆ ಎನ್ನುವುದನ್ನು ಎತ್ತಿ ತೋರಿಸಿದರು. ಹೊಸ ಕ್ರೀಡಾಕೂಟಗಳು "ದೇಶೀಯ ಕ್ರೀಡಾ ಮೂಲಸೌಕರ್ಯವನ್ನು ಬಲಪಡಿಸುವ ಮತ್ತು ಭಾರತವು ಯಾವುದೇ ಪ್ರಮಾಣದ ಅಂತರರಾಷ್ಟ್ರೀಯ ಕ್ರೀಡಾಕೂಟಗಳನ್ನು ಆಯೋಜಿಸಲು ಸಮರ್ಥವಾಗಿದೆ ಎಂಬ ಬಲವಾದ ಸಂದೇಶವನ್ನು ಜಗತ್ತಿಗೆ ಕಳುಹಿಸುವ" ಒಂದು ಮಾರ್ಗವಾಗಿದೆ ಎಂದು ಡಾ. ಮನ್ಸುಖ್ ಮಾಂಡವಿಯಾ ಈ ಮಾತನ್ನು ಪುನರುಚ್ಚರಿಸಿದರು.

ಖೇಲೋ ಇಂಡಿಯಾ ಬೀಚ್ ಕ್ರೀಡಾಕೂಟವನ್ನು "ಸಾಂದರ್ಭಿಕ" ವ್ಯವಹಾರವಾಗಿ ನೋಡಬಾರದು ಎಂದು ಡಾ. ಮನ್ಸುಖ್ ಮಾಂಡವಿಯಾ ಹೇಳಿದರು. "ಬೀಚ್ ವಾಲಿಬಾಲಿನಂತಹ ಕ್ರೀಡೆಗಳು ಯುವಕರನ್ನು ಹವ್ಯಾಸವಾಗಿ ಆಕರ್ಷಿಸುವುದಲ್ಲದೆ ಅವರಿಗೆ ವೃತ್ತಿಯ ಅವಕಾಶಗಳನ್ನು ಸಹ ನೀಡುತ್ತವೆ. ಭಾರತದ ಕಡಲತೀರಗಳಲ್ಲಿ ಸ್ಪರ್ಧಾತ್ಮಕ ಕ್ರೀಡೆಗಳನ್ನು ಇಷ್ಟು ದೊಡ್ಡ ಪ್ರಮಾಣದಲ್ಲಿ ನಡೆಸುತ್ತಿರುವುದು ಇದೇ ಮೊದಲು" ಎಂದು ಅವರು ಹೇಳಿದರು.

ಭಾರತವು ʼಫಿಟ್ನೆಸ್ ಪ್ರಜ್ಞೆಯʼ ರಾಷ್ಟ್ರವಾಗುತ್ತಿದೆ ಮತ್ತು ಕ್ರೀಡಾ ಸಂಸ್ಕೃತಿಯು "ಹೊಸ ಸಾಮಾನ್ಯ ಜೀವನ"ವಾಗಿದೆ ಎಂದು ಡಾ. ಮನ್ಸುಖ್ ಮಾಂಡವಿಯಾ ಹೇಳಿದರು. ಕೇಂದ್ರಾಡಳಿತ ಪ್ರದೇಶಕ್ಕಾಗಿ ಸರ್ಕಾರ ಹೊಂದಿರುವ ಬಲವಾದ ಬದ್ಧತೆಯನ್ನು ಅವರು ಎತ್ತಿ ತೋರಿಸಿದರು.
ಖೇಲೋ ಇಂಡಿಯಾ ಬೀಚ್ ಗೇಮ್ಸ್ 2025 ಕುರಿತು ಹೆಚ್ಚಿನ ಮಾಹಿತಿಗಾಗಿ: https://beach.kheloindia.gov.in/ ನೋಡಿರಿ.
ಖೇಲೋ ಇಂಡಿಯಾ ಬೀಚ್ ಗೇಮ್ಸ್ ಇಂಡಿಯಾ ಬೀಚ್ ಗೇಮ್ಸ್ 2025 ರ ಪದಕಗಳ ಪಟ್ಟಿಗಾಗಿ: https://beach.kheloindia.gov.in/medal-tally ನೋಡಿರಿ
ಖೇಲೋ ಇಂಡಿಯಾ ಬೀಚ್ ಗೇಮ್ಸ್ ಬಗ್ಗೆ
ಖೇಲೋ ಇಂಡಿಯಾ ಬ್ಯಾನರ್ ಅಡಿಯಲ್ಲಿ ನಡೆಸಲಾಗುವ ಮೊದಲ ಬೀಚ್ ಗೇಮ್ಸ್ ಇದಾಗಿದೆ. ಈ ಕ್ರೀಡಾಕೂಟವನ್ನು ಮೇ 19 ರಿಂದ ಮೇ 24, 2025 ರವರೆಗೆ ದಾದ್ರಾ ಮತ್ತು ನಗರ ಹವೇಲಿಯ ಕೇಂದ್ರಾಡಳಿತ ಪ್ರದೇಶವಾದ ಡಿಯು ಮತ್ತು ದಮನ್ ನ ಡಿಯು ನಗರದಲ್ಲಿ ನಡೆಸಲಾಗುತ್ತಿದೆ. ಈ ಉಪಕ್ರಮವು ಬೀಚ್ ಕ್ರೀಡೆಗಳನ್ನು ಉತ್ತೇಜಿಸುವ ಮತ್ತು ಬೀಚ್ ಗೇಮ್ಸ್ ನ ವ್ಯಾಪ್ತಿ ಮತ್ತು ಜನಪ್ರಿಯತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಈ ಆವೃತ್ತಿಯಲ್ಲಿ, ಆರು ಪದಕ ವಿಜೇತ ಕ್ರೀಡೆಗಳು: ಬೀಚ್ ಸಾಕರ್, ಬೀಚ್ ವಾಲಿಬಾಲ್, ಬೀಚ್ ಸೆಪಕ್ ಟಕ್ರಾ, ಬೀಚ್ ಕಬಡ್ಡಿ, ಪೆನ್ಕಾಕ್ ಸಿಲಾಟ್ ಮತ್ತು ಓಪನ್ ವಾಟರ್ ಈಜು. ಎರಡು (ಪದಕೇತರ) ಪ್ರದರ್ಶನ ಕ್ರೀಡೆಗಳು: ಮಲ್ಲಖಂಬ್ ಮತ್ತು ಟಗ್ ಆಫ್ ವಾರ್ ಅನ್ನು ಸಹ ಡಿಯುನಲ್ಲಿ ಸೇರಿಸಲಾಗಿದೆ.
*****
(Release ID: 2129891)
Read this release in:
Odia
,
English
,
Urdu
,
Marathi
,
Hindi
,
Assamese
,
Bengali
,
Manipuri
,
Gujarati
,
Tamil
,
Malayalam