ಪ್ರಧಾನ ಮಂತ್ರಿಯವರ ಕಛೇರಿ
ಜಿಇಎಂ(GeM) ವೇದಿಕೆಯ ಕುರಿತಾದ ಲೇಖನವನ್ನು ಹಂಚಿಕೊಂಡ ಪ್ರಧಾನಮಂತ್ರಿ
Posted On:
19 MAY 2025 2:01PM by PIB Bengaluru
ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವರಾದ ಶ್ರೀ ಪಿಯೂಷ್ ಗೋಯಲ್ ಅವರು ಬರೆದ ಜಿಇಎಂ ವೇದಿಕೆಯ ಕುರಿತಾದ ಲೇಖನವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಾಮಾಜಿಕ ತಾಣಗಳಲ್ಲಿ ಹಂಚಿಕೊಂಡಿದ್ದಾರೆ.
"ಪಾರದರ್ಶಕ ಆಡಳಿತಕ್ಕಾಗಿ ಸರ್ಕಾರದ ಪ್ರಯತ್ನವು ಡಿಜಿಟಲ್ ಉತ್ತೇಜನವನ್ನು ಪಡೆಯುತ್ತಿದೆ. @GeM_India ಅವಕಾಶವಂಚಿತರಿಗೆ ಬಾಗಿಲು ತೆರೆಯುತ್ತಿದೆ, ಕೆಂಪು ಪಟ್ಟಿಯ ನಿಯಮಾವಳಿಗಳನ್ನು ಕಡಿತಗೊಳಿಸುತ್ತಿದೆ ಮತ್ತು ಭಾರಿ ಉಳಿತಾಯವನ್ನು ಖಚಿತಪಡಿಸುತ್ತಿದೆ" ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೇಳಿದರು.
ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವರಾದ ಶ್ರೀ ಪಿಯೂಷ್ ಗೋಯಲ್ ಅವರ ಲೇಖನಕ್ಕೆ, ಪ್ರಧಾನಮಂತ್ರಿಯವರ ಕಚೇರಿ ಎಕ್ಸ್ ಖಾತೆಯಲ್ಲಿ ಈ ರೀತಿ ಪ್ರತಿಕ್ರಿಯಿಸಿದೆ;
"ಪಾರದರ್ಶಕ ಆಡಳಿತಕ್ಕಾಗಿ ಸರ್ಕಾರದ ಪ್ರಯತ್ನವು ಡಿಜಿಟಲ್ ಉತ್ತೇಜನವನ್ನು ಪಡೆಯುತ್ತಿದೆ.
ಅವಕಾಶವಂಚಿತರಿಗೆ @ GeM_India ಬಾಗಿಲು ತೆರೆಯುತ್ತಿದೆ, ಕೆಂಪು ಪಟ್ಟಿಯ ನಿಯಮಾವಳಿಗಳನ್ನು ಕಡಿತಗೊಳಿಸುತ್ತಿದೆ ಮತ್ತು ಬೃಹತ್ ಉಳಿತಾಯವನ್ನು ಖಚಿತಪಡಿಸುತ್ತಿದೆ.
ಕೇಂದ್ರ ಸಚಿವರಾದ ಶ್ರೀ @PiyushGoyal ಅವರಿಂದ ಬರೆಯಲ್ಪಟ್ಟ ಜಿಇಎಂ ವೇದಿಕೆಯ ಕುರಿತು ವಿವರವಾದ ಮಾಹಿತಿ, ಒಳನೋಟವುಳ್ಳ ಲೇಖನವನ್ನು ಓದಿರಿ!"
*****
(Release ID: 2129615)
Read this release in:
Odia
,
English
,
Urdu
,
Marathi
,
Hindi
,
Nepali
,
Assamese
,
Bengali
,
Manipuri
,
Punjabi
,
Gujarati
,
Tamil
,
Telugu
,
Malayalam