ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಮುದ್ರಾ ಯೋಜನೆಯ 10ನೇ ವಾರ್ಷಿಕೋತ್ಸವದಂದು ಅದರ ಪರಿವರ್ತನಾತ್ಮಕ ಪರಿಣಾಮವನ್ನು ಶ್ಲಾಘಿಸಿದ ಪ್ರಧಾನಮಂತ್ರಿ

Posted On: 08 APR 2025 9:08AM by PIB Bengaluru

ದೇಶವು ಇಂದು #10YearsOfMUDRA ಆಚರಿಸುತ್ತಿದ್ದು, ಪ್ರಧಾನಮಂತ್ರಿ ಮುದ್ರಾ ಯೋಜನೆಯ (ಪಿಎಂಎಂವೈ) ಫಲಾನುಭವಿಗಳಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ಕನಸುಗಳನ್ನು ಸಾಕಾರಗೊಳಿಸುವ ಮತ್ತು ಎಲ್ಲರನ್ನೂಳಗೊಂಡ ಆರ್ಥಿಕ ಬೆಳವಣಿಗೆಗೆ ಚಾಲನೆ ನೀಡಿದ ದಶಮಾನೋತ್ಸವವನ್ನು ಆಚರಿಸುವ ಮೂಲಕ, ಭಾರತದಾದ್ಯಂತ ನಿರ್ಲಕ್ಷಿತ ಸಮುದಾಯಗಳನ್ನು ಮೇಲಕ್ಕೆತ್ತುವಲ್ಲಿ ಮತ್ತು ಉದ್ಯಮಶೀಲತೆಯನ್ನು ಉತ್ತೇಜಿಸುವಲ್ಲಿ ಮುದ್ರಾ ಯೋಜನೆ ವಹಿಸಿದ ಪ್ರಮುಖ ಪಾತ್ರವನ್ನು ಪ್ರಧಾನಮಂತ್ರಿಯವರು ಒತ್ತಿ ಹೇಳಿದ್ದಾರೆ.

ಪ್ರಧಾನಮಂತ್ರಿಯವರು X ನಲ್ಲಿ ಹೀಗೆ ಹೇಳಿದ್ದಾರೆ:

"ಇಂದು, ನಾವು #10YearsOfMUDRA ಆಚರಿಸುತ್ತಿರುವ ಸಂದರ್ಭದಲ್ಲಿ, ಈ ಯೋಜನೆಯ ಮೂಲಕ ತಮ್ಮ ಜೀವನವನ್ನು ಬದಲಾಯಿಸಿಕೊಂಡ ಎಲ್ಲರಿಗೂ ನಾನು ಅಭಿನಂದಿಸುತ್ತೇನೆ. ಈ ದಶಕದಲ್ಲಿ, ಮುದ್ರಾ ಯೋಜನೆಯು ಅನೇಕ ಕನಸುಗಳನ್ನು ನನಸಾಗಿಸಿದೆ, ಹಿಂದೆ ನಿರ್ಲಕ್ಷಿಸಲ್ಪಟ್ಟಿದ್ದ ಜನರು ಆರ್ಥಿಕ ಬೆಂಬಲದೊಂದಿಗೆ ಮುಂದುವರಿಯುವಂತೆ ಸಬಲೀಕರಣಗೊಳಿಸಿದೆ. ಭಾರತದ ಜನರಿಗೆ ಯಾವುದೂ ಅಸಾಧ್ಯವಲ್ಲ ಎಂದು ಇದು ತೋರಿಸಿದೆ!"

"ಮುದ್ರಾ ಫಲಾನುಭವಿಗಳಲ್ಲಿ ಅರ್ಧದಷ್ಟು ಜನರು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ (ಒಬಿಸಿ) ಸಮುದಾಯಗಳಿಗೆ ಸೇರಿದವರು ಮತ್ತು ಶೇ.70 ಕ್ಕೂ ಹೆಚ್ಚು ಫಲಾನುಭವಿಗಳು ಮಹಿಳೆಯರಾಗಿರುವುದು ವಿಶೇಷವಾಗಿದೆ! ಪ್ರತಿಯೊಂದು ಮುದ್ರಾ ಸಾಲವು ಘನತೆ, ಸ್ವಾಭಿಮಾನ ಮತ್ತು ಅವಕಾಶವನ್ನು ಒದಗಿಸಿದೆ. ಆರ್ಥಿಕ ಸೇರ್ಪಡೆಯ ಜೊತೆಗೆ, ಈ ಯೋಜನೆಯು ಸಾಮಾಜಿಕ ಸೇರ್ಪಡೆ ಮತ್ತು ಆರ್ಥಿಕ ಸ್ವಾತಂತ್ರ್ಯವನ್ನು ಸಹ ಖಚಿತಪಡಿಸಿದೆ."

"ಮುಂದಿನ ದಿನಗಳಲ್ಲಿ, ನಮ್ಮ ಸರ್ಕಾರವು ಪ್ರತಿಯೊಬ್ಬ ಮಹತ್ವಾಕಾಂಕ್ಷಿ ಉದ್ಯಮಿಗೂ ಸಾಲ ದೊರೆಯುವಂತೆ ಬಲವಾದ ಪೂರಕ ವ್ಯವಸ್ಥೆಯನ್ನು ಖಾತ್ರಿಪಡಿಸುವತ್ತ ಗಮನಹರಿಸುತ್ತದೆ, ಇದು ಅವರಿಗೆ ಆತ್ಮವಿಶ್ವಾಸ ಮತ್ತು ಬೆಳವಣಿಗೆಗೆ ಅವಕಾಶವನ್ನು ನೀಡುತ್ತದೆ."
 

 

*****


(Release ID: 2119958) Visitor Counter : 25