ಪ್ರಧಾನ ಮಂತ್ರಿಯವರ ಕಛೇರಿ
ಗುಜರಾತ್ ನ ಗಿರ್ ನಲ್ಲಿ ಸಫಾರಿ ಕೈಗೊಂಡ ಪ್ರಧಾನಮಂತ್ರಿ
ಕಳೆದ ಹಲವು ವರ್ಷಗಳಿಂದ ಏಷ್ಯಾದ ಸಿಂಹಗಳ ಸಂತತಿ ಸ್ಥಿರವಾಗಿ ಏರಿಕೆಯಾಗುತ್ತಿರುವುದನ್ನು ಖಾತ್ರಿಪಡಿಸಿರುವ ಪ್ರಯತ್ನಗಳನ್ನು ಶ್ಲಾಘಿಸಿದ ಪ್ರಧಾನಮಂತ್ರಿ
Posted On:
03 MAR 2025 12:03PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಏಷ್ಯಾದ ಸಿಂಹಗಳ ನೆಲೆವೀಡಾಗಿರುವ ಗುಜರಾತ್‌ನ ಗಿರ್‌ನಲ್ಲಿ ಸಫಾರಿ ಕೈಗೊಂಡರು. ಕಳೆದ ಹಲವು ವರ್ಷಗಳಿಂದ ಏಷ್ಯಾಟಿಕ್ ಸಿಂಹಗಳ ಸಂಖ್ಯೆಯಲ್ಲಿ ಸ್ಥಿರವಾದ ಏರಿಕೆಯನ್ನು ಖಾತ್ರಿಪಡಿಸಿಕೊಂಡಿರುವ ಸಾಮೂಹಿಕ ಪ್ರಯತ್ನಗಳನ್ನು ಅವರು ಶ್ಲಾಘಿಸಿದರು.
ಅವರು ತಮ್ಮ ಸಾಮಾಜಿಕ ಜಾಲತಾಣ X ನಲ್ಲಿ ಹೀಗೆ ಹೇಳಿದ್ದಾರೆ.
“ವಿಶ್ವವನ್ಯಜೀವಿ ದಿನ#WorldWildlife ವಾದ ಇಂದು ಬೆಳಿಗ್ಗೆ ನಾನು ಗಿರ್ ನಲ್ಲಿ ಸಫಾರಿ ಹೋಗಿದ್ದೆ. ಅದು ನಿಮಗೆಲ್ಲರಿಗೂ ತಿಳಿದಿರುವಂತೆ ಭವ್ಯ ಏಷ್ಯಾದ ಸಿಂಹಗಳ ನೆಲೆಯಾಗಿದೆ. ನಾನು ಗಿರ್ ಗೆ ಬಂದಾಗ, ಗುಜರಾತ್ ಸಿಎಂ ಆಗಿದ್ದಾಗ ನಾವು ಸಾಮೂಹಿಕವಾಗಿ ಮಾಡಿದ ಕೆಲವು ಕಾರ್ಯಗಳು ಮತ್ತೆ ನೆನಪಾಗುತ್ತವೆ. ಕಳೆದ ಹಲವು ವರ್ಷಗಳಲ್ಲಿ, ಸಾಮೂಹಿಕ ಪ್ರಯತ್ನಗಳಿಂದಾಗಿ ಏಷ್ಯಾದ ಸಿಂಹಗಳ ಜನಸಂಖ್ಯೆಯು ಸ್ಥಿರವಾಗಿ ಏರುತ್ತಿದೆ ಎಂಬುದನ್ನು ಖಾತ್ರಿಪಡಿಸಿವೆ. ಏಷ್ಯಾದ ಸಿಂಹದ ಆವಾಸಸ್ಥಾನಗಳನ್ನು ಸಂರಕ್ಷಿಸುವಲ್ಲಿ ಬುಡಕಟ್ಟು ಸಮುದಾಯಗಳು ಮತ್ತು ಸುತ್ತಮುತ್ತಲಿನ ಪ್ರದೇಶಗಳ ಮಹಿಳೆಯರ ಪಾತ್ರವೂ ಅಷ್ಟೇ ಶ್ಲಾಘನೀಯ.”
"ಗಿರ್ ನ ಇನ್ನೂ ಕೆಲವು ನೋಟ ಇಲ್ಲಿವೆ. ಭವಿಷ್ಯದಲ್ಲಿ ನೀವೆಲ್ಲರೂ ಗಿರ್ ಗೆ ಭೇಟಿ ನೀಡಲು ನಾನು ಕರೆ ನೀಡುತ್ತೇನೆ."
"ಗಿರ್ ನಲ್ಲಿ ಸಿಂಹಗಳು ಮತ್ತು ಸಿಂಹಿಣಿಗಳು! ಇಂದು ಬೆಳಿಗ್ಗೆ ಛಾಯಾಗ್ರಹಣದಲ್ಲಿ ಸೆರೆಹಿಡಿಯಲು ಪ್ರಯತ್ನಿಸಿದೆ."
*****
(Release ID: 2107687)
Visitor Counter : 63
Read this release in:
English
,
Urdu
,
Marathi
,
Hindi
,
Assamese
,
Bengali
,
Manipuri
,
Punjabi
,
Gujarati
,
Tamil
,
Telugu
,
Malayalam