ಪ್ರಧಾನ ಮಂತ್ರಿಯವರ ಕಛೇರಿ
ಭಾರತದಲ್ಲಿ ಹುಲಿಗಳ ಸಂಖ್ಯೆ ಕಾಲಕ್ರಮೇಣ ಹೆಚ್ಚುತ್ತಿದ್ದು ಸಾಮೂಹಿಕ ಪ್ರಯತ್ನಗಳಿಗೆ ವಂದನೆಗಳು : ಪ್ರಧಾನಮಂತ್ರಿ
Posted On:
03 DEC 2024 7:10PM by PIB Bengaluru
ಹುಲಿಗಳ ಸಂರಕ್ಷಣೆಯ ಸಾಮೂಹಿಕ ಪ್ರಯತ್ನಗಳನ್ನು ಇಂದು ಶ್ಲಾಘಿಸಿರುವ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಭಾರತದ ಹುಲಿಗಳ ಸಂಖ್ಯೆಯು ಕಾಲಕ್ರಮೇಣ ಹೆಚ್ಚುತ್ತಿದೆ ಎಂದು ಹೇಳಿದ್ದಾರೆ. ಭಾರತದಲ್ಲಿ 57ನೇ ಹುಲಿ ಸಂರಕ್ಷಿತ ಪ್ರದೇಶದ ಸೇರ್ಪಡೆಯು ನಮ್ಮ ಶತಮಾನಗಳಷ್ಟು ಹಳೆಯದಾದ ಪ್ರಕೃತಿಯ ಕಾಳಜಿಯ ತತ್ವಕ್ಕೆ ಅನುಗುಣವಾಗಿದೆ ಎಂದು ಪ್ರಧಾನಿ ತಿಳಿಸಿದ್ದಾರೆ.
ಕೇಂದ್ರ ಸಚಿವರಾದ ಶ್ರೀ ಭೂಪೇಂದರ್ ಯಾದವ್ ಅವರ ಎಕ್ಸ್ ಪೋಸ್ಟ್‌ಗೆ ಪ್ರಧಾನಿ ಶ್ರೀ ಮೋದಿ ಅವರು ಹೀಗೆ ಪ್ರತಿಕ್ರಿಯೆ ನೀಡಿದ್ದಾರೆ :
“ಪರಿಸರ ಪ್ರೇಮಿಗಳಿಗೆ ನಮ್ಮ ಶತಮಾನಗಳ ಹಳೆಯ ತತ್ವವಾದ ನಿಸರ್ಗದ ಕಾಳಜಿಗೆ ಅನುಗುಣವಾಗಿರುವ ಅದ್ಭುತ ಸುದ್ದಿ. ಭಾರತದ ಹುಲಿಗಳ ಸಂಖ್ಯೆಯು ಕಾಲಕ್ರಮೇಣ ಹೆಚ್ಚುತ್ತಿದೆ ಮತ್ತು ಈ ಉತ್ಸಾಹವು ಮುಂಬರುವ ದಿನಗಳಲ್ಲಿ ಮುಂದುವರಿಯಲಿದೆ ಎಂದು ನನಗೆ ವಿಶ್ವಾಸವಿದೆ. ಸಾಮೂಹಿಕ ಪ್ರಯತ್ನಗಳಿಗೆ ಧನ್ಯವಾದಗಳು.”
*****
(Release ID: 2080507)
Visitor Counter : 7