ಪ್ರಧಾನ ಮಂತ್ರಿಯವರ ಕಛೇರಿ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗುಜರಾತ್ ನ ಕಚ್ ನಲ್ಲಿ ಭಾರತೀಯ ಸಶಸ್ತ್ರ ಪಡೆಗಳೊಂದಿಗೆ ದೀಪಾವಳಿಯನ್ನು ಆಚರಿಸಿದರು
ಕಠಿಣ ದುರ್ಗಮ ಸ್ಥಳಗಳಲ್ಲಿ ದೃಢವಾಗಿ ನಿಂತು ನಮ್ಮೆಲ್ಲರನ್ನು ರಕ್ಷಿಸುವ ನಮ್ಮ ಸೇನೆಯ ಭದ್ರತಾ ಸಿಬ್ಬಂದಿಯ ಬಗ್ಗೆ ನಮಗೆ ತುಂಬಾ ಹೆಮ್ಮೆಯಿದೆ: ಪ್ರಧಾನಮಂತ್ರಿ
प्रविष्टि तिथि:
31 OCT 2024 7:20PM by PIB Bengaluru
ಗುಜರಾತ್ ನ ಕಚ್ ನ ಕ್ರೀಕ್ ಏರಿಯಾದಲ್ಲಿರುವ ಲಕ್ಕಿ ನಾಲಾದಲ್ಲಿ ಬಿ.ಎಸ್.ಎಫ್, ಸೇನೆ, ನೌಕಾಪಡೆ ಮತ್ತು ವಾಯುಪಡೆಯ ವೀರ ಸಿಬ್ಬಂದಿಗಳೊಂದಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ದೀಪಾವಳಿಯನ್ನು ಆಚರಿಸಿದರು.
ಕಠಿಣ ದುರ್ಗಮ ಸ್ಥಳಗಳಲ್ಲಿ ದೃಢವಾಗಿ ನಿಂತು ನಮ್ಮೆಲ್ಲರನ್ನು ರಕ್ಷಿಸುವ ನಮ್ಮ ಸೇನೆಯ ಭದ್ರತಾ ಸಿಬ್ಬಂದಿಯ ಬಗ್ಗೆ ನಾವು ತುಂಬಾ ಹೆಮ್ಮೆಪಡುತ್ತೇವೆ ಎಂದು ಪ್ರಧಾನಮಂತ್ರಿಯವರು ಹೇಳಿದರು. ಕಚ್ ನ ಕ್ರೀಕ್ ಪ್ರದೇಶವು ತೀವ್ರವಾದ ತಾಪಮಾನದ ಕಾರಣದಿಂದಾಗಿ ಅತ್ಯಂತ ಸವಾಲಿನ ಪರಿಸ್ಥಿತಿ ಮತ್ತು ಸಂಪರ್ಕ ರಹಿತ ದೂರದ ಸ್ಥಳವಾಗಿದೆ. ಇದು ಇತರ ಪರಿಸರ ಸವಾಲುಗಳನ್ನು ಹೊಂದಿದೆ ಎಂದು ಪ್ರಧಾನಿ ಸೇರಿಸಿದರು.
ಧೈರ್ಯಶಾಲಿ ಭದ್ರತಾ ಸಿಬ್ಬಂದಿಯೊಂದಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕೂಡ ಕ್ರೀಕ್ ಪ್ರದೇಶದಲ್ಲಿ ತೇಲುವ ಬಿಒಪಿ ಗಳಲ್ಲಿ ತೆರಳಿ ಅವರೊಂದಿಗೆ ಸಿಹಿ ಭಕ್ಷ್ಯ ಹಂಚಿಕೊಂಡರು.
ಪ್ರಧಾನಮಂತ್ರಿಯವರು ತಮ್ಮ ಎಕ್ಸ್ ಖಾತೆಯಲ್ಲಿ ಈ ರೀತಿ ಸಂದೇಶ ಹಂಚಿಕೊಂಡಿದ್ದಾರೆ:
"ಗುಜರಾತ್ ನ ಕಚ್ ನಲ್ಲಿ ನಮ್ಮ ವೀರ ಯೋಧರೊಂದಿಗೆ ದೀಪಾವಳಿಯನ್ನು ಆಚರಿಸುತ್ತಿದ್ದೇವೆ.
ನಮ್ಮ ಭದ್ರತಾ ಸಿಬ್ಬಂದಿ ಕಠಿಣ ದುರ್ಗಮ ಸ್ಥಳಗಳಲ್ಲಿ ದೃಢವಾಗಿ ನಿಂತು ನಮ್ಮೆಲ್ಲರನ್ನು ರಕ್ಷಿಸುತ್ತಾರೆ. ಅವರ ಬಗ್ಗೆ ನಮಗೆ ತುಂಬಾ ಹೆಮ್ಮೆ ಇದೆ.
ಕಚ್ ನ ಕ್ರೀಕ್ ಪ್ರದೇಶದಲ್ಲಿರುವ ಲಕ್ಕಿ ನಾಲಾದಲ್ಲಿ ಸೇವೆ ಸಲ್ಲಿಸುತ್ತಿರುವ ನಮ್ಮ ಕೆಚ್ಚೆದೆಯ ಬಿಎಸ್ಎಫ್, ಸೇನೆ, ನೌಕಾಪಡೆ ಮತ್ತು ವಾಯುಪಡೆಯ ಸಿಬ್ಬಂದಿಗಳೊಂದಿಗೆ ದೀಪಾವಳಿಯನ್ನು ಆಚರಿಸಲು ಸಂತೋಷವಾಗಿದೆ. ಈ ಪ್ರದೇಶವು ಕಠಿಣ ಸವಾಲಿನ ಮತ್ತು ಸಂಪರ್ಕ ರಹಿತ ದೂರದ ಸ್ಥಳವಾಗಿದೆ. ಇಲ್ಲಿನ ಹವಾಮಾನವು ಹಗಲಿನಲ್ಲಿ ಬಿಸಿಲಿನ ಸುಡುವ ಕಾವು ಮತ್ತು ರಾತ್ರಿ ಅತಿ ತಣ್ಣಗಾಗುತ್ತವೆ. ಕ್ರೀಕ್ ಪ್ರದೇಶವು ಇತರ ಕಠಿಣ ಪರಿಸರ ಸವಾಲುಗಳನ್ನು ಹೊಂದಿದೆ.
ಕ್ರೀಕ್ ಪ್ರದೇಶದಲ್ಲಿ ತೇಲುವ ಬಿಒಪಿಗಳಲ್ಲಿ ಹೋದೆ ಮತ್ತು ನಮ್ಮ ದೇಶ ಕಾಯುವ ಧೈರ್ಯಶಾಲಿ ಭದ್ರತಾ ಸಿಬ್ಬಂದಿಯೊಂದಿಗೆ ಸಿಹಿ ಭಕ್ಷ್ಯ ಹಂಚಿಕೊಂಡೆ."
*****
(रिलीज़ आईडी: 2070625)
आगंतुक पटल : 57
इस विज्ञप्ति को इन भाषाओं में पढ़ें:
Odia
,
English
,
Urdu
,
Marathi
,
हिन्दी
,
Manipuri
,
Bengali
,
Assamese
,
Punjabi
,
Gujarati
,
Tamil
,
Telugu
,
Malayalam