ಪ್ರಧಾನ ಮಂತ್ರಿಯವರ ಕಛೇರಿ
ಗ್ರೀಸ್ ಪ್ರಧಾನಮಂತ್ರಿ ಜತೆ ಮಾತನಾಡಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ
ಕಾರ್ಯತಾಂತ್ರಿಕ ಪಾಲುದಾರಿಕೆ ಬಲವರ್ಧನೆಗೊಳಿಸುವ ಬದ್ಧತೆ ಪುನರುಚ್ಚರಿಸಿದ ಉಭಯ ನಾಯಕರು
ಪ್ರಧಾನಮಂತ್ರಿ ಕಿರಿಯಾಕೋಸ್ ಮಿಟ್ಸೋಟಾಕಿಸ್ ಭಾರತ ಭೇಟಿಯ ಮುಂದುವರಿದ ಕ್ರಮವಾಗಿ ದ್ವಿಪಕ್ಷೀಯ ವ್ಯಾಪಾರ, ರಕ್ಷಣಾ, ಬಂದರು ಮತ್ತು ಸಂಪರ್ಕ ವಲಯದ ಪ್ರಗತಿ ಪರಾಮರ್ಶೆ
ಐಎಂಇಇಸಿ ಸೇರಿದಂತೆ ಜಾಗತಿಕ ಮತ್ತು ಪ್ರಾದೇಶಿಕ ವಿಷಯಗಳ ಬಗ್ಗೆ ವಿಚಾರ ವಿನಿಮಯ
Posted On:
02 NOV 2024 8:22AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಗ್ರೀಸ್ ನ ಪ್ರಧಾನಮಂತ್ರಿ ಗೌರವಾನ್ವಿತ ಶ್ರೀ ಕಿರಿಯಾಕೋಸ್ ಮಿಟ್ಸೋಟಾಕಿಸ್ ಅವರ ದೂರವಾಣಿ ಕರೆಯನ್ನು ಸ್ವೀಕರಿಸಿ, ಸಮಾಲೋಚನೆ ನಡೆಸಿದರು.
ಭಾರತದ ಸಾರ್ವತ್ರಿಕ ಚುನಾವಣೆಯಲ್ಲಿ ಮರು ಚುನಾಯಿತರಾದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಪ್ರಧಾನಮಂತ್ರಿ ಕಿರಿಯಾಕೋಸ್ ಮಿಟ್ಸೋಟಾಕಿಸ್ ಅವರು ಆತ್ಮೀಯವಾಗಿ ಅಭಿನಂದಿಸಿದರು.
ಉಭಯ ನಾಯಕರು ಇತ್ತೀಚಿನ ಉನ್ನತ ಮಟ್ಟದ ವಿನಿಮಯದ ದ್ವಿಪಕ್ಷೀಯ ಬಾಂಧವ್ಯದಲ್ಲಿ ಉಂಟಾದ ವೇಗದ ಬಗ್ಗೆ ಉಭಯ ನಾಯಕರು ಮೆಚ್ಚುಗೆ ವ್ಯಕ್ತಪಡಿಸಿದರು ಮತ್ತು ಭಾರತ–ಗ್ರೀಸ್ ಕಾರ್ಯತಂತ್ರ ಪಾಲುದಾರಿಕೆ ಮತ್ತಷ್ಟು ಬಲವರ್ಧನೆ ಬಗ್ಗೆ ಖಚಿತ ಬದ್ಧತೆಯನ್ನು ವ್ಯಕ್ತಪಡಿಸಿದರು.
ಈ ವರ್ಷದ ಆರಂಭದಲ್ಲಿ ಪ್ರಧಾನಮಂತ್ರಿ ಮಿಟ್ಸೋಟಾಕಿಸ್ ಅವರ ಭಾರತ ಭೇಟಿಯ ಮುಂದುವರಿದ ಭಾಗವಾಗಿ ವ್ಯಾಪಾರ, ರಕ್ಷಣಾ, ಬಂದರು ಮತ್ತು ಸಂಪರ್ಕ ಸೇರಿದಂತೆ ದ್ವಿಪಕ್ಷೀಯ ಸಹಕಾರದ ಹಲವು ವಲಯಗಳ ಪ್ರಗತಿ ಪರಾಮರ್ಶಿಸಿದರು.
ಪೂರ್ವ ಏಷ್ಯಾದ ಬೆಳವಣಿಗೆಗಳು ಮತ್ತು ಐಎಂಇಇಸಿ ಸೇರಿದಂತೆ ಹಲವು ಪ್ರಾದೇಶಿಕ ಮತ್ತು ಜಾಗತಿಕ ಹಿತಾಸಕ್ತಿಯ ಹಲವು ವಿಷಯಗಳ ಕುರಿತು ಉಭಯ ನಾಯಕರು ವಿಚಾರ ವಿನಿಮಯ ನಡೆಸಿದರು.
ಉಭಯ ನಾಯಕರು ಸದಾ ಸಂಪರ್ಕದಲ್ಲಿರಲು ಒಪ್ಪಿಗೆ ಸೂಚಿಸಿದರು.
*****
(Release ID: 2070333)
Visitor Counter : 37
Read this release in:
Odia
,
English
,
Urdu
,
Marathi
,
Hindi
,
Bengali
,
Assamese
,
Manipuri
,
Punjabi
,
Gujarati
,
Tamil
,
Telugu
,
Malayalam