ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪಾಲಿ ಭಾಷೆಗೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ನೀಡುವ ಭಾರತ ಸರ್ಕಾರದ ನಿರ್ಧಾರವು ಭಗವಾನ್ ಬುದ್ಧನ ಚಿಂತನೆಗಳನ್ನು ಪಾಲಿಸುವವರಲ್ಲಿ ಸಂತೋಷದ ಮನೋಭಾವವನ್ನು ಹುಟ್ಟುಹಾಕಿದೆ: ಪ್ರಧಾನಮಂತ್ರಿ

Posted On: 24 OCT 2024 10:43AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ಪಾಲಿ ಭಾಷೆಗೆ ಶಾಸ್ತ್ರೀಯ ಭಾಷೆ ಸ್ಥಾನಮಾನ ನೀಡುವ ಭಾರತ ಸರ್ಕಾರದ ನಿರ್ಧಾರಕ್ಕೆ ಸಂತಸ ವ್ಯಕ್ತಪಡಿಸಿದರು. ಭಗವಾನ್ ಬುದ್ಧನ ಚಿಂತನೆಗಳನ್ನು ನಂಬುವವರಲ್ಲಿ ಇದು ಸಂತೋಷದ ಮನೋಭಾವವನ್ನು ಹುಟ್ಟುಹಾಕಿದೆ ಎಂದು ಅವರು ಹೇಳಿದರು. ಕೊಲಂಬೋದಲ್ಲಿ ಇಂಡಿಯನ್ ಕೌನ್ಸಿಲ್ ಫಾರ್ ಕಲ್ಚರಲ್ ರಿಲೇಶನ್ಸ್ (ಐಸಿಸಿಆರ್) ಆಯೋಜಿಸಿದ್ದ 'ಪಾಲಿ ಒಂದು ಶಾಸ್ತ್ರೀಯ ಭಾಷೆ' ಕುರಿತಾದ ಚರ್ಚೆಯಲ್ಲಿ ಭಾಗವಹಿಸಿದ ವಿವಿಧ ರಾಷ್ಟ್ರಗಳ ವಿದ್ವಾಂಸರು ಮತ್ತು ಸನ್ಯಾಸಿಗಳಿಗೆ ಶ್ರೀ ಮೋದಿಯವರು ಧನ್ಯವಾದ ಅರ್ಪಿಸಿದರು.

ಶ್ರೀಲಂಕಾ ಹ್ಯಾಂಡಲ್ ನಲ್ಲಿ ಭಾರತದ ಪೋಸ್ಟ್ ಗೆ ಪ್ರತಿಕ್ರಿಯಿಸಿದ ಶ್ರೀ ಮೋದಿಯವರು;

"ಪಾಲಿ ಭಾಷೆಗೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ನೀಡುವ ಭಾರತ ಸರ್ಕಾರದ ನಿರ್ಧಾರವು ಭಗವಾನ್ ಬುದ್ಧನ ಚಿಂತನೆಗಳನ್ನು ಪಾಲಿಸುವವರಲ್ಲಿ ಸಂತೋಷದ ಮನೋಭಾವವನ್ನು ಸೃಷ್ಟಿಸಿದೆ ಎಂದು ತಿಳಿದು ನನಗೆ ಸಂತೋಷವಾಗಿದೆ. ಕೊಲಂಬೋದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿವಿಧ ರಾಷ್ಟ್ರಗಳ ವಿದ್ವಾಂಸರು ಮತ್ತು ಸನ್ಯಾಸಿಗಳಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಗಳು" ಎಂದು ಹೇಳಿದ್ದಾರೆ.

 

 

*****




(Release ID: 2067921) Visitor Counter : 11