ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಭಾರತದ ಆಕ್ಟ್ ಈಸ್ಟ್ ಪಾಲಿಸಿ (ಎಇಪಿ) ಬೆಂಬಲದೊಂದಿಗೆ ಇಂಡೋ-ಪೆಸಿಫಿಕ್ ಕುರಿತ ಆಸಿಯಾನ್ ದೃಷ್ಟಿಕೋನ (ಎಒಐಪಿ) ಹಿನ್ನೆಲೆಯಲ್ಲಿ ಈ ವಲಯದಲ್ಲಿ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಗಾಗಿ ಆಸಿಯಾನ್-ಭಾರತ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯನ್ನು ಬಲಪಡಿಸುವ ಜಂಟಿ ಹೇಳಿಕೆ

Posted On: 10 OCT 2024 5:41PM by PIB Bengaluru

ನಾವು, ಆಗ್ನೇಯ ಏಷ್ಯಾ ರಾಷ್ಟ್ರಗಳ ಸಂಘದ (ಆಸಿಯಾನ್) ಸದಸ್ಯ ರಾಷ್ಟ್ರಗಳು  ಮತ್ತು ಭಾರತ ಗಣರಾಜ್ಯ, 2024ರ ಅಕ್ಟೋಬರ್ 10 ರಂದು ಲಾವೋ ಪಿಡಿಆರ್ ವಿಯೆಂಟಿಯಾನ್ ನಲ್ಲಿ ನಡೆದ 21ನೇ ಆಸಿಯಾನ್-ಭಾರತ ಶೃಂಗಸಭೆಯ ಸಂದರ್ಭದಲ್ಲಿ ಒಟ್ಟುಗೂಡಿದ್ದೇವೆ;

ಆಸಿಯಾನ್-ಭಾರತ ಸ್ಮರಣಾರ್ಥ ಶೃಂಗಸಭೆಯ ವಿಷನ್ ಸ್ಟೇಟ್ಮೆಂಟ್ (2012), ಆಸಿಯಾನ್-ಭಾರತ ಸಂವಾದ ಸಂಬಂಧಗಳ 25ನೇ ವಾರ್ಷಿಕೋತ್ಸವದ ಅಂಗವಾಗಿ ಆಸಿಯಾನ್-ಭಾರತ ಸ್ಮರಣಾರ್ಥ ಶೃಂಗಸಭೆಯ ದಿಲ್ಲಿ ಘೋಷಣೆ ಸೇರಿದಂತೆ 1992ರಲ್ಲಿ ಸ್ಥಾಪನೆಯಾದಾಗಿನಿಂದ ಆಸಿಯಾನ್-ಭಾರತ ಸಂವಾದ ಸಂಬಂಧಗಳನ್ನು ಮುನ್ನಡೆಸುತ್ತಿರುವ ಮೂಲಭೂತ ತತ್ವಗಳು, ಹಂಚಿಕೆಯ ಮೌಲ್ಯಗಳು ಮತ್ತು ಮಾನದಂಡಗಳಿಂದ ನಿರ್ದೇಶಿಸಲ್ಪಟ್ಟ ಆಸಿಯಾನ್-ಭಾರತ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯನ್ನು ಉತ್ತೇಜಿಸುವ ನಮ್ಮ ಬದ್ಧತೆಯನ್ನು ಪುನರುಚ್ಚರಿಸುತ್ತೇವೆ.  ಈ ಪ್ರದೇಶದಲ್ಲಿ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಗಾಗಿ ಇಂಡೋ-ಪೆಸಿಫಿಕ್ ಕುರಿತ ಆಸಿಯಾನ್ ದೃಷ್ಟಿಕೋನದ ಸಹಕಾರ ಕುರಿತ ಆಸಿಯಾನ್-ಭಾರತ ಜಂಟಿ ಹೇಳಿಕೆ (2021), ಆಸಿಯಾನ್-ಭಾರತ ಸಮಗ್ರ ಕಾರ್ಯತಂತ್ರದ ಸಹಭಾಗಿತ್ವದ ಜಂಟಿ ಹೇಳಿಕೆ (2022), ಕಡಲ ಸಹಕಾರದ ಆಸಿಯಾನ್-ಭಾರತ ಜಂಟಿ ಹೇಳಿಕೆ (2023) ಮತ್ತು ಬಿಕ್ಕಟ್ಟುಗಳಿಗೆ ಪ್ರತಿಕ್ರಿಯೆಯಾಗಿ ಆಹಾರ ಭದ್ರತೆ ಮತ್ತು ಪೌಷ್ಠಿಕಾಂಶವನ್ನು ಬಲಪಡಿಸುವ ಆಸಿಯಾನ್-ಭಾರತ ಜಂಟಿ ನಾಯಕರ ಹೇಳಿಕೆ (2023)ಗಳಿಗೆ ಬದ್ಧರಾಗಿರುತ್ತೇವೆ.
ರಾಜಕೀಯ-ಭದ್ರತೆ, ಆರ್ಥಿಕ, ಸಾಂಸ್ಕೃತಿಕ ಮತ್ತು ಜನರ ನಡುವಿನ ಸಂಬಂಧಗಳ ಕ್ಷೇತ್ರಗಳಲ್ಲಿ ಸಹಕಾರದ ಮೂಲಕ ಆಸಿಯಾನ್-ಭಾರತ ಸಂಬಂಧಗಳನ್ನು ಮುನ್ನಡೆಸಲು ಕೊಡುಗೆ ನೀಡಿದ ಆಸಿಯಾನ್ ನ್ನು ಹೃದಯಭಾಗದಲ್ಲಿಟ್ಟುಕೊಂಡಿರುವ  ಮತ್ತು ಅತ್ಯಂತ ಆದ್ಯತೆಯ ಭಾರತದ ಆಕ್ಟ್ ಈಸ್ಟ್ ನೀತಿಯ ದಶಕವನ್ನು ಸ್ವಾಗತಿಸುತ್ತೇವೆ;

ಇಂಡೋ-ಪೆಸಿಫಿಕ್ ವಿವಿಧ ಸಮುದ್ರಗಳು ಮತ್ತು ಸಾಗರಗಳನ್ನು ಒಳಗೊಂಡಂತೆ ಆಗ್ನೇಯ ಏಷ್ಯಾ ಮತ್ತು ಭಾರತದ ನಡುವಿನ ಭೂ ಮತ್ತು ಕಡಲ ಮಾರ್ಗಗಳ ಮೂಲಕ ಸುಗಮಗೊಳಿಸಲಾದ ಆಳವಾದ ನಾಗರಿಕ ಸಂಪರ್ಕಗಳು ಮತ್ತು ಅಂತರ-ಸಾಂಸ್ಕೃತಿಕ ವಿನಿಮಯಗಳನ್ನು ಅಂಗೀಕರಿಸುವುದು, ಆಸಿಯಾನ್-ಭಾರತ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಗೆ ಬಲವಾದ ಅಡಿಪಾಯವನ್ನು ಒದಗಿಸುವುದನ್ನು ಗುರುತಿಸಿದ್ದೇವೆ;

ಆಸಿಯಾನ್-ಭಾರತ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸಲು ಆಕ್ಟ್ ಈಸ್ಟ್ ನೀತಿಯ ದಶಕದ ಸಂದರ್ಭದಲ್ಲಿ 2024ರಲ್ಲಿ ನಡೆದ ಚಟುವಟಿಕೆಗಳು ಮತ್ತು ಉಪಕ್ರಮಗಳನ್ನು ಸ್ವಾಗತಿಸುತ್ತೇವೆ;

ವಿಕಸನಗೊಳ್ಳುತ್ತಿರುವ ಪ್ರಾದೇಶಿಕ ವಾಸ್ತುಶಿಲ್ಪದಲ್ಲಿ ಆಸಿಯಾನ್ ಕೇಂದ್ರೀಕರಣ ಮತ್ತು ಏಕತೆಗೆ ಭಾರತದ ಬೆಂಬಲ ಮತ್ತು ಆಸಿಯಾನ್-ಭಾರತ ಶೃಂಗಸಭೆ, ಪೂರ್ವ ಏಷ್ಯಾ ಶೃಂಗಸಭೆ (ಇಎಎಸ್), ಭಾರತದೊಂದಿಗಿನ ಸಚಿವರ ಸಭೆಯ ನಂತರದ ಸಮ್ಮೇಳನ (ಪಿಎಂಸಿ +1), ಆಸಿಯಾನ್ ಪ್ರಾದೇಶಿಕ ವೇದಿಕೆ (ಎಆರ್ಎಫ್), ಆಸಿಯಾನ್ ರಕ್ಷಣಾ ಸಚಿವರ ಸಭೆ ಪ್ಲಸ್ (ಎಡಿಎಂಎಂ-ಪ್ಲಸ್) ಮತ್ತು ವಿಸ್ತೃತ ಆಸಿಯಾನ್ ಕಡಲ ವೇದಿಕೆ (ಇಎಎಂಎಫ್) ಸೇರಿದಂತೆ ಆಸಿಯಾನ್ ನೇತೃತ್ವದ ಕಾರ್ಯವಿಧಾನಗಳು ಮತ್ತು ವೇದಿಕೆಗಳ ಮೂಲಕ ನಿಕಟವಾಗಿ ಕೆಲಸ ಮಾಡುವ ಬದ್ಧತೆಯನ್ನು ಗುರುತಿಸುವುದು ಮತ್ತು ಆಸಿಯಾನ್ ಏಕೀಕರಣ ಮತ್ತು ಆಸಿಯಾನ್ ಸಮುದಾಯ ನಿರ್ಮಾಣ ಪ್ರಕ್ರಿಯೆಗೆ ಬೆಂಬಲ ಆಸಿಯಾನ್ ಸಂಪರ್ಕ (ಎಂಪಿಎಸಿ) 2025, ಆಸಿಯಾನ್ ಏಕೀಕರಣ ಉಪಕ್ರಮ (ಐಎಐ) ಮತ್ತು ಇಂಡೋ-ಪೆಸಿಫಿಕ್ ಕುರಿತ ಆಸಿಯಾನ್ ದೃಷ್ಟಿಕೋನ (ಎಒಐಪಿ)ಗಳಿಗೆ ಬೆಂಬಲವನ್ನು ಗುರುತಿಸಿದ್ದೇವೆ.

ವಿಶ್ವಸಂಸ್ಥೆಯ ಸಾಮಾನ್ಯ ಸಭೆ (ಯುಎನ್ಜಿಎ) ನಿರ್ಣಯ ಎ / ಆರ್ಇಎಸ್ / 78/69ಅನ್ನು ಗಮನಿಸಲಾಗಿದೆ. ಇದು ಪೀಠಿಕೆಯಲ್ಲಿ, ಸಮುದ್ರದ ಕಾನೂನು ಕುರಿತ 1982ರ ವಿಶ್ವಸಂಸ್ಥೆಯ ಸಮಾವೇಶದ (ಯುಎನ್ಸಿಎಲ್ಒಎಸ್) ಸಾರ್ವತ್ರಿಕ ಮತ್ತು ಏಕೀಕೃತ ಗುಣಲಕ್ಷಣವನ್ನು ಒತ್ತಿಹೇಳುತ್ತದೆ ಮತ್ತು ಸಾಗರಗಳು ಹಾಗು  ಸಮುದ್ರಗಳಲ್ಲಿನ ಎಲ್ಲಾ ಚಟುವಟಿಕೆಗಳಿಗೆ ಸಂಬಂಧಿಸಿ ಕಾನೂನು ಚೌಕಟ್ಟನ್ನು ಸಮಾವೇಶವು ರೂಪಿಸುತ್ತದೆ ಮತ್ತು ರಾಷ್ಟ್ರೀಯತೆಗೆ ಆಧಾರವಾಗಿ ಕಾರ್ಯತಂತ್ರದ ಪ್ರಾಮುಖ್ಯತೆಯನ್ನು ಹೊಂದಿದೆ ಎಂದು ಪುನರುಚ್ಚರಿಸುತ್ತದೆ.  ಸಾಗರ ವಲಯದಲ್ಲಿ ರಾಷ್ಟ್ರೀಯ, ಪ್ರಾದೇಶಿಕ ಮತ್ತು ಜಾಗತಿಕ ಕ್ರಮ ಮತ್ತು ಸಹಕಾರ, ಹಾಗು ಅದರ ಸಮಗ್ರತೆಯನ್ನು ಕಾಪಾಡಿಕೊಳ್ಳುವ ಅಗತ್ಯವಿದೆ;

ಹಂಚಿಕೆಯ ಪ್ರಜಾಪ್ರಭುತ್ವ ಮೌಲ್ಯಗಳು, ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯಲ್ಲಿ ಬಲವಾದ ನಂಬಿಕೆ ಮತ್ತು ಕಾನೂನಿನ ನಿಯಮ ಮತ್ತು ಯುಎನ್ ಚಾರ್ಟರ್ನ ತತ್ವಗಳಿಗೆ ಹಂಚಿಕೆಯ ಬದ್ಧತೆಯ ಆಧಾರದ ಮೇಲೆ ನಂಬಿಕೆ ಮತ್ತು ವಿಶ್ವಾಸದ ಮೂಲಕ ವಲಯದಲ್ಲಿ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಗಾಗಿ ಇಂಡೋ-ಪೆಸಿಫಿಕ್ ಕುರಿತ ಆಸಿಯಾನ್ ದೃಷ್ಟಿಕೋನದ ಸಹಕಾರದ ಆಸಿಯಾನ್-ಭಾರತ ಜಂಟಿ ಹೇಳಿಕೆಯ ಅನುಷ್ಠಾನದ ಪ್ರಯತ್ನಗಳನ್ನು ಶ್ಲಾಘಿಸುತ್ತೇವೆ;

ಬಹುಪಕ್ಷೀಯತೆ, ವಿಶ್ವಸಂಸ್ಥೆಯ ಚಾರ್ಟರ್ ನಲ್ಲಿ ಪ್ರತಿಪಾದಿಸಲಾದ ಉದ್ದೇಶಗಳು ಮತ್ತು ತತ್ವಗಳನ್ನು ಎತ್ತಿಹಿಡಿಯುವ ನಮ್ಮ ಬದ್ಧತೆಯನ್ನು ಪುನರುಚ್ಚರಿಸುತ್ತೇವೆ, ಉದಯೋನ್ಮುಖ ಬಹುಧ್ರುವೀಯ ಜಾಗತಿಕ ವಾಸ್ತುಶಿಲ್ಪದ ನಡುವೆ ಆಸಿಯಾನ್ ಹೆಚ್ಚುತ್ತಿರುವ ಜಾಗತಿಕ ಪ್ರಸ್ತುತತೆ ಮತ್ತು ಅನನ್ಯ ಸಂಘಟನಾ ಶಕ್ತಿಯನ್ನು ಗುರುತಿಸುತ್ತೇವೆ ಮತ್ತು ಪ್ರಮುಖ ಅಂತರರಾಷ್ಟ್ರೀಯ ಆರ್ಥಿಕ ಮತ್ತು ರಾಜಕೀಯ ವ್ಯವಹಾರಗಳಲ್ಲಿ ಭಾರತದ ಬೆಳೆಯುತ್ತಿರುವ ಮತ್ತು ಸಕ್ರಿಯ ಪಾತ್ರವನ್ನು ಗಮನಿಸುತ್ತೇವೆ.

ಮೂಲಕ ನಾವು ಹೀಗೆಂದು  ಘೋಷಿಸುತ್ತೇವೆ

1. ಶಾಂತಿ, ಸ್ಥಿರತೆ, ಕಡಲ ಸುರಕ್ಷತೆ ಮತ್ತು ಭದ್ರತೆ, ನೌಕಾಯಾನ ಮತ್ತು ಓವರ್ ಫ್ಲೈಟ್ ಸ್ವಾತಂತ್ರ್ಯ, ಮತ್ತು ಅಡೆತಡೆರಹಿತ ಕಾನೂನುಬದ್ಧ ಕಡಲ ವಾಣಿಜ್ಯ ಸೇರಿದಂತೆ ಸಮುದ್ರಗಳ ಇತರ ಕಾನೂನುಬದ್ಧ ಬಳಕೆಗಳನ್ನು ಕಾಪಾಡಿಕೊಳ್ಳುವ ಮತ್ತು ಉತ್ತೇಜಿಸುವ ಮಹತ್ವವನ್ನು ಪುನರುಚ್ಚರಿಸುತ್ತೇವೆ ಮತ್ತು 1982 ಯುಎನ್ಸಿಎಲ್ಒಎಸ್ ಸೇರಿದಂತೆ ಅಂತರರಾಷ್ಟ್ರೀಯ ಕಾನೂನಿನ ಸಾರ್ವತ್ರಿಕವಾಗಿ ಗುರುತಿಸಲ್ಪಟ್ಟ ತತ್ವಗಳಿಗೆ ಅನುಗುಣವಾಗಿ ವಿವಾದಗಳ ಶಾಂತಿಯುತ ಪರಿಹಾರಗಳನ್ನು ಉತ್ತೇಜಿಸುತ್ತೇವೆ. ಅಂತರರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆ (ಐಸಿಎಒ) ಮತ್ತು ಇಂಟರ್ನ್ಯಾಷನಲ್ ಮ್ಯಾರಿಟೈಮ್ ಆರ್ಗನೈಸೇಶನ್ (ಐಎಂಒ) ಸಂಬಂಧಿತ ಮಾನದಂಡಗಳು ಮತ್ತು ಶಿಫಾರಸು ಮಾಡಿದ ಅಭ್ಯಾಸಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತೇವೆ. ಈ ನಿಟ್ಟಿನಲ್ಲಿ, ದಕ್ಷಿಣ ಚೀನಾ ಸಮುದ್ರದಲ್ಲಿ ಪಕ್ಷಗಳ ನಡವಳಿಕೆಯ ಘೋಷಣೆಯ (ಡಿಒಸಿ) ಸಂಪೂರ್ಣ ಮತ್ತು ಪರಿಣಾಮಕಾರಿ ಅನುಷ್ಠಾನವನ್ನು ನಾವು ಬೆಂಬಲಿಸುತ್ತೇವೆ ಮತ್ತು ಅಂತರರಾಷ್ಟ್ರೀಯ ಕಾನೂನಿಗೆ ಅನುಗುಣವಾಗಿ 1982 ಯುಎನ್ಸಿಎಲ್ಒಎಸ್ ಸೇರಿದಂತೆ ದಕ್ಷಿಣ ಚೀನಾ ಸಮುದ್ರದಲ್ಲಿ ಪರಿಣಾಮಕಾರಿ ಮತ್ತು ಗಣನೀಯ ನೀತಿ ಸಂಹಿತೆಯು (ಸಿಒಸಿ) ಶೀಘ್ರ ಜಾರಿಗೆ ಬರುವುದನ್ನು ಎದುರು ನೋಡುತ್ತಿದ್ದೇವೆ. 

2. 2023ರಲ್ಲಿ ಮೊದಲ ಆಸಿಯಾನ್-ಭಾರತ ಕಡಲ ವ್ಯಾಯಾಮ (ಎಐಎಂಇ) ಮತ್ತು ಭಯೋತ್ಪಾದನೆ ನಿಗ್ರಹ ಕುರಿತ ಎಡಿಎಂಎಂ-ಪ್ಲಸ್ ತಜ್ಞರ ಕಾರ್ಯ ಗುಂಪಿನ ಸಹ ಅಧ್ಯಕ್ಷತೆ (2024-2027) ಸೇರಿದಂತೆ ಆಸಿಯಾನ್ ರಕ್ಷಣಾ ಸಚಿವರ ಸಭೆ (ಎಡಿಎಂಎಂ) ಪ್ಲಸ್ ಚೌಕಟ್ಟಿನೊಳಗೆ ರಕ್ಷಣೆ ಮತ್ತು ಭದ್ರತೆಯಲ್ಲಿ ನಡೆಯುತ್ತಿರುವ ಸಹಯೋಗವನ್ನು ಭದ್ರಪಡಿಸುವುದು, ಜೊತೆಗೆ 2022 ರಲ್ಲಿ ಆಸಿಯಾನ್-ಭಾರತ ರಕ್ಷಣಾ ಸಚಿವರ ಅನೌಪಚಾರಿಕ ಸಭೆಯಲ್ಲಿ ಘೋಷಿಸಲಾದ ಎರಡು ಉಪಕ್ರಮಗಳನ್ನು ಗಮನಿಸುತ್ತೇವೆ;

3. ಕಡಲ ಭದ್ರತೆ, ಭಯೋತ್ಪಾದನೆ ನಿಗ್ರಹ, ಸೈಬರ್ ಭದ್ರತೆ, ಮಿಲಿಟರಿ ಔಷಧ, ಬಹುರಾಷ್ಟ್ರೀಯ ಅಪರಾಧ, ರಕ್ಷಣಾ ಉದ್ಯಮ, ಮಾನವೀಯ ನೆರವು ಮತ್ತು ವಿಪತ್ತು ಪರಿಹಾರ, ಶಾಂತಿಪಾಲನೆ ಮತ್ತು ನಿಷ್ಕ್ರಿಯಗೊಳಿಸುವ ಕಾರ್ಯಾಚರಣೆಗಳು ಮತ್ತು ವಿಶ್ವಾಸವನ್ನು ಹೆಚ್ಚಿಸುವ ಕ್ರಮಗಳಲ್ಲಿ ಸಹಕಾರವನ್ನು ಬಲಪಡಿಸಲಾಗುವುದು. ಭೇಟಿಗಳ ವಿನಿಮಯ, ಜಂಟಿ ಮಿಲಿಟರಿ ವ್ಯಾಯಾಮ, ಕಡಲ ವ್ಯಾಯಾಮ, ನೌಕಾ ಹಡಗುಗಳ ಬಂದರು ಭೇಟಿಗಳು ಮತ್ತು ರಕ್ಷಣಾ ವಿದ್ಯಾರ್ಥಿವೇತನಗಳ ಮೂಲಕ ಇದನ್ನು ಸಾಧಿಸಲಾಗುವುದು;

4. ಕಡಲ ಸಹಕಾರಕ್ಕಾಗಿ ಆಸಿಯಾನ್-ಭಾರತ ಜಂಟಿ ಹೇಳಿಕೆಯ ಅನುಷ್ಠಾನವನ್ನು ತ್ವರಿತಗೊಳಿಸುವುದು ಮತ್ತು ಕಡಲ ಭದ್ರತೆ, ನೀಲಿ ಆರ್ಥಿಕತೆ, ಸುಸ್ಥಿರ ಮೀನುಗಾರಿಕೆ, ಸಾಗರ ಪರಿಸರ ಸಂರಕ್ಷಣೆ, ಸಾಗರ ಜೀವವೈವಿಧ್ಯತೆ ಮತ್ತು ಹವಾಮಾನ ಬದಲಾವಣೆ ವಿಷಯಗಳಂತಹ ಕ್ಷೇತ್ರಗಳಲ್ಲಿ ಸಹಕಾರವನ್ನು ಮುಂದುವರಿಸುವುದು;

5. ಜಾಗತಿಕ ಕಾಳಜಿಗಳನ್ನು ಪರಿಹರಿಸಲು, ಹಂಚಿಕೆಯ ಗುರಿಗಳನ್ನು ಅನುಸರಿಸಲು ಮತ್ತು ಪೂರಕ ಉಪಕ್ರಮಗಳನ್ನು ಕೈಗೊಳ್ಳಲು ಹಾಗು ನಮ್ಮ ಜನರ ಅನುಕೂಲಕ್ಕಾಗಿ ಸುಸ್ಥಿರ ಅಭಿವೃದ್ಧಿಯನ್ನು ಉತ್ತೇಜಿಸಲು ವಿಶ್ವಸಂಸ್ಥೆ ಮತ್ತು ಬಹುಪಕ್ಷೀಯ ಪ್ರಕ್ರಿಯೆಗಳ ಮೂಲಕ ಬಹುಪಕ್ಷೀಯತೆಯನ್ನು ಬಲಪಡಿಸಲು ಉತ್ತೇಜಿಸುವುದು ಮತ್ತು ಕೆಲಸ ಮಾಡುವುದು;

6. ಎಒಐಪಿ ಮತ್ತು ಇಂಡೋ-ಪೆಸಿಫಿಕ್ ಸಾಗರ ಉಪಕ್ರಮ (ಐಪಿಒಐ) ನಡುವೆ ಸಹಕಾರವನ್ನು ಮುಂದುವರಿಸುವ ಮೂಲಕ ವಲಯದಲ್ಲಿ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಗಾಗಿ ಎಒಐಪಿ ಸಹಕಾರಕ್ಕಾಗಿ ಆಸಿಯಾನ್-ಭಾರತ ಜಂಟಿ ಹೇಳಿಕೆಯನ್ವಯ ಕ್ರಮ.

7. ವ್ಯಾಪಾರೋದ್ಯಮಗಳನ್ನು ಹೆಚ್ಚು ಪರಿಣಾಮಕಾರಿ, ಬಳಕೆದಾರ ಸ್ನೇಹಿ, ಸರಳ ಮತ್ತು ವ್ಯಾಪಾರ-ಅನುಕೂಲಕರವಾಗಿಸಲು ಮತ್ತು ಪ್ರಸ್ತುತ ಜಾಗತಿಕ ವ್ಯಾಪಾರ ಅಭ್ಯಾಸಗಳಿಗೆ ಸೂಕ್ತವಾಗಿಸಲು ಹಾಗು ಪರಸ್ಪರ ಪ್ರಯೋಜನಕಾರಿ ವ್ಯವಸ್ಥೆಗಳನ್ನು ಉತ್ತೇಜಿಸಲು ಮತ್ತು ಆಸಿಯಾನ್ ಮತ್ತು ಭಾರತದ ನಡುವೆ ಆರ್ಥಿಕ ಸಹಕಾರವನ್ನು ಬಲಪಡಿಸಲು ಆಸಿಯಾನ್-ಭಾರತ ಸರಕುಗಳ ವ್ಯಾಪಾರ ಒಪ್ಪಂದದ  (ಎಐಟಿಜಿಎ) ಪರಾಮರ್ಶೆಯನ್ನು ತ್ವರಿತಗೊಳಿಸುವುದು;

8. ಸುಸ್ಥಿರ ಅಭಿವೃದ್ಧಿಯನ್ನು ಉತ್ತೇಜಿಸಲು ಪರಸ್ಪರ ಹಿತಾಸಕ್ತಿಯ ಕ್ಷೇತ್ರಗಳಲ್ಲಿ ಪೂರೈಕೆ ಸರಪಳಿಗಳಲ್ಲಿ ಸಂಭಾವ್ಯ ಅಪಾಯಗಳನ್ನು ಗುರುತಿಸುವ ಮತ್ತು ಪೂರ್ವಭಾವಿಯಾಗಿ ಪರಿಹರಿಸುವ ಬಗ್ಗೆ ಮಾಹಿತಿಯನ್ನು ವಿನಿಮಯ ಮಾಡಿಕೊಳ್ಳುವಾಗ ವೈವಿಧ್ಯಮಯ, ಸುರಕ್ಷಿತ, ಪಾರದರ್ಶಕ ಮತ್ತು ಸ್ಥಿತಿಸ್ಥಾಪಕ ಪೂರೈಕೆ ಸರಪಳಿಗಳನ್ನು ಉತ್ತೇಜಿಸುವುದು;

9. ಕೃತಕ ಬುದ್ಧಿಮತ್ತೆ (ಎಐ), ಬ್ಲಾಕ್ ಚೈನ್ ತಂತ್ರಜ್ಞಾನ, ಇಂಟರ್ನೆಟ್ ಆಫ್ ಥಿಂಗ್ಸ್ (ಐಒಟಿ), ರೊಬೊಟಿಕ್ಸ್, ಕ್ವಾಂಟಮ್ ಕಂಪ್ಯೂಟಿಂಗ್, 6-ಜಿ ತಂತ್ರಜ್ಞಾನ, ಡಿಜಿಟಲ್ ಸಂಪರ್ಕ ಮತ್ತು ಹಣಕಾಸು ತಂತ್ರಜ್ಞಾನಕ್ಕೆ ವಿಶೇಷ ಒತ್ತು ನೀಡುವ ಮೂಲಕ ಸ್ಟಾರ್ಟ್ ಅಪ್ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವುದು ಮತ್ತು ಬಲಪಡಿಸುವುದು ಸೇರಿದಂತೆ ಉದಯೋನ್ಮುಖ ತಂತ್ರಜ್ಞಾನಗಳಲ್ಲಿ ಸಹಕಾರ;

10. ಜಂಟಿ ಚಟುವಟಿಕೆಗಳನ್ನು ಬೆಂಬಲಿಸಲು ಡಿಜಿಟಲ್ ಭವಿಷ್ಯಕ್ಕಾಗಿ ಆಸಿಯಾನ್-ಭಾರತ ನಿಧಿಯ ಆರಂಭವನ್ನು ಸ್ವಾಗತಿಸುತ್ತೇವೆ;

11. ಎಐನ ತ್ವರಿತ ಪ್ರಗತಿಯು ಜಾಗತಿಕ ಡಿಜಿಟಲ್ ಆರ್ಥಿಕತೆಯ ಸಮೃದ್ಧಿ ಮತ್ತು ವಿಸ್ತರಣೆಯ ಸಾಮರ್ಥ್ಯವನ್ನು ಹೊಂದಿದೆ ಎಂದು ಪರಿಗಣಿಸಿ, ಅಂತರರಾಷ್ಟ್ರೀಯ ಸಹಕಾರ ಮತ್ತು ಎಐಗಾಗಿ ಅಂತರರಾಷ್ಟ್ರೀಯ ಆಡಳಿತದ ಬಗ್ಗೆ ಹೆಚ್ಚಿನ ಚರ್ಚೆಗಳನ್ನು ಉತ್ತೇಜಿಸುವ ಮೂಲಕ ಸುರಕ್ಷಿತ, ಸುಭದ್ರ, ಜವಾಬ್ದಾರಿಯುತ, ವಿಶ್ವಾಸಾರ್ಹ ಎಐನ ಸಂಪೂರ್ಣ ಸಾಮರ್ಥ್ಯವನ್ನು ಅನ್ಲಾಕ್ ಮಾಡಲು ಸಹಕಾರ. ಜನರ ಹಕ್ಕುಗಳು ಮತ್ತು ಸುರಕ್ಷತೆಯನ್ನು ರಕ್ಷಿಸುವಾಗ ಜವಾಬ್ದಾರಿಯುತ, ಅಂತರ್ಗತ ಮತ್ತು ಮಾನವ ಕೇಂದ್ರಿತ ರೀತಿಯಲ್ಲಿ ಸವಾಲುಗಳನ್ನು ಪರಿಹರಿಸುವ ಮೂಲಕ ಸಾರ್ವಜನಿಕ ಒಳಿತಿಗಾಗಿ ಎಐ ಅನ್ನು ಬಳಸಿಕೊಳ್ಳಲು ನಾವು ಪ್ರಯತ್ನಿಸಬೇಕು;

12. ಸುಸ್ಥಿರ ಸಾಮಾಜಿಕ ಆರ್ಥಿಕ ಅಭಿವೃದ್ಧಿ ಮತ್ತು ಆರ್ಥಿಕ ಸಮೃದ್ಧಿಯನ್ನು ಉತ್ತೇಜಿಸುವಲ್ಲಿ ಪ್ರವಾಸೋದ್ಯಮದ ನಿರ್ಣಾಯಕ ಪಾತ್ರವನ್ನು ಗುರುತಿಸಿ ಮತ್ತು ಎಸ್.ಡಿ.ಜಿ.ಗಳನ್ನು  ಸಾಧಿಸುವ ವಿಧಾನಗಳಲ್ಲಿ  ಒಂದಾಗಿ ಜನರ ನಡುವಿನ ಸಂಬಂಧಗಳನ್ನು ಮತ್ತಷ್ಟು ಬಲಪಡಿಸಲು 2025 ನೇ ವರ್ಷವನ್ನು ಆಸಿಯಾನ್-ಭಾರತ ಪ್ರವಾಸೋದ್ಯಮ ವರ್ಷವಾಗಿ ಆಚರಿಸುವ ಪ್ರಸ್ತಾಪವನ್ನು ಗಮನಿಸಲಾಗಿದೆ. ಈ ಪ್ರಯತ್ನದಲ್ಲಿ, ನಾವು ಆಸಿಯಾನ್-ಭಾರತ ಪ್ರವಾಸೋದ್ಯಮ ಸಹಕಾರ ಕಾರ್ಯ ಯೋಜನೆ 2023-2027 ಅನುಷ್ಠಾನವನ್ನು ಬೆಂಬಲಿಸುತ್ತೇವೆ ಮತ್ತು ಸಾಮರ್ಥ್ಯವನ್ನು ಹೆಚ್ಚಿಸಲು ಹಾಗು ಉತ್ತಮ ಗುಣಮಟ್ಟದ ಪ್ರವಾಸೀ ಉದ್ಯಮವನ್ನು ಖಚಿತಪಡಿಸಿಕೊಳ್ಳಲು ಪ್ರವಾಸೋದ್ಯಮ ಶಿಕ್ಷಣ, ತರಬೇತಿ ಮತ್ತು ಸಂಶೋಧನೆಗಾಗಿ ಜಂಟಿ ಕಾರ್ಯಕ್ರಮಗಳನ್ನು ಬೆಂಬಲಿಸಲು ಆಳವಾದ ಸಹಕಾರವನ್ನು ಅನ್ವೇಷಿಸುತ್ತೇವೆ. ಪ್ರಯಾಣಿಕ ವ್ಯವಸ್ಥೆಯ (ಟ್ರಾವೆಲ್)  ಮಧ್ಯಸ್ಥಗಾರರ/ಭಾಗೀದಾರರ ನಡುವೆ ವ್ಯಾಪಾರ ಜಾಲಗಳ ವಿಸ್ತರಣೆ, ಸುಸ್ಥಿರ ಮತ್ತು ಜವಾಬ್ದಾರಿಯುತ ಪ್ರವಾಸೋದ್ಯಮದ ಪದ್ಧತಿಗಳು, ಜೊತೆಗೆ ಪ್ರವಾಸೋದ್ಯಮ ಪ್ರವೃತ್ತಿಗಳು ಮತ್ತು ಮಾಹಿತಿಯ ವಿನಿಮಯವನ್ನು ನಾವು ಪ್ರೋತ್ಸಾಹಿಸುತ್ತೇವೆ. ಇದಲ್ಲದೆ, ಬಿಕ್ಕಟ್ಟು ಸಂವಹನಗಳ ವರ್ಧನೆ, ಪ್ರವಾಸೋದ್ಯಮ ಹೂಡಿಕೆ ಅವಕಾಶಗಳಿಗೆ ಉತ್ತೇಜನ, ಜೊತೆಗೆ ಪ್ರಮುಖ ಮಾರುಕಟ್ಟೆಗಳು, ಕ್ರೂಸ್ ಪ್ರವಾಸೋದ್ಯಮ ಹಾಗು ಪ್ರವಾಸೋದ್ಯಮ ಮಾನದಂಡಗಳ ಅಭಿವೃದ್ಧಿ ಮತ್ತು ಜಂಟಿ ಪ್ರಚಾರವನ್ನು ನಾವು ಬೆಂಬಲಿಸುತ್ತೇವೆ;

13. ಸಂಶೋಧನೆ ಮತ್ತು ಅಭಿವೃದ್ಧಿ (ಆರ್ & ಡಿ), ಸಾರ್ವಜನಿಕ ಆರೋಗ್ಯ ತುರ್ತು ಸನ್ನದ್ಧತೆ, ಆರೋಗ್ಯ ವೃತ್ತಿಪರರ ತರಬೇತಿ, ವೈದ್ಯಕೀಯ ತಂತ್ರಜ್ಞಾನ, ಔಷಧಿಗಳು, ಲಸಿಕೆ ಭದ್ರತೆ ಮತ್ತು ಸ್ವಾವಲಂಬನೆ, ಲಸಿಕೆ ಅಭಿವೃದ್ಧಿ ಮತ್ತು ಉತ್ಪಾದನೆ, ಜೊತೆಗೆ ಸಾಮಾನ್ಯ ಮತ್ತು ಸಾಂಪ್ರದಾಯಿಕ ಔಷಧ ಸೇರಿದಂತೆ ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಸಹಯೋಗವನ್ನು ಹೆಚ್ಚಿಸುವ ಮೂಲಕ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸುವುದು;

14. ಜೀವವೈವಿಧ್ಯ ಮತ್ತು ಹವಾಮಾನ ಬದಲಾವಣೆ ಸೇರಿದಂತೆ ಪರಿಸರ ಕ್ಷೇತ್ರದಲ್ಲಿ ಸಹಕಾರವನ್ನು ಹೆಚ್ಚಿಸುವುದು ಮತ್ತು ಇಂಧನ ಸಹಕಾರಕ್ಕಾಗಿ ಆಸಿಯಾನ್ ಕ್ರಿಯಾ ಯೋಜನೆ 2021-2025 ಮತ್ತು ಭಾರತದ ನವೀಕರಿಸಬಹುದಾದ ಇಂಧನ ಮತ್ತು ಇತರ ರಾಷ್ಟ್ರೀಯ ಮಾದರಿಗಳು ಹಾಗು ಆದ್ಯತೆಗಳಿಗೆ ಅನುಗುಣವಾಗಿ ಮತ್ತು ಜೈವಿಕ-ವೃತ್ತಾಕಾರ-ಹಸಿರು ಅಭಿವೃದ್ಧಿಗಾಗಿ ಶುದ್ಧ, ನವೀಕರಿಸಬಹುದಾದ ಮತ್ತು ಕಡಿಮೆ ಇಂಗಾಲದ ಇಂಧನದ ಸಹಕಾರ ಹೆಚ್ಚಳ ಸೇರಿದಂತೆ ಇಂಧನ ಭದ್ರತೆಯ ಕ್ಷೇತ್ರದಲ್ಲಿ ಸಹಕಾರವನ್ನು ಅನ್ವೇಷಿಸುವುದು.

15. ಜ್ಞಾನ ಹಂಚಿಕೆ ಮತ್ತು ಉತ್ತಮ ಅಭ್ಯಾಸಗಳು/ಪದ್ಧತಿಗಳು, ಸಾಮರ್ಥ್ಯ ವರ್ಧನೆ ಮತ್ತು ತಾಂತ್ರಿಕ ಸಹಾಯದ ಮೂಲಕ ಮೂಲಸೌಕರ್ಯ ವ್ಯವಸ್ಥೆಗಳ ವಿಪತ್ತು ಮತ್ತು ಹವಾಮಾನ ಸ್ಥಿತಿಸ್ಥಾಪಕತ್ವವನ್ನು ಉತ್ತೇಜಿಸುವುದು, ಇದನ್ನು ವಿಪತ್ತು ಸ್ಥಿತಿಸ್ಥಾಪಕ ಮೂಲಸೌಕರ್ಯಗಳ ಒಕ್ಕೂಟದ (ಸಿಡಿಆರ್ಐ) ಚೌಕಟ್ಟಿನ ಮೂಲಕ ಮತ್ತು ವಿಪತ್ತು ನಿರ್ವಹಣೆಯ ಮಾನವೀಯ ನೆರವಿನ ಆಸಿಯಾನ್ ಸಮನ್ವಯ ಕೇಂದ್ರ (ಎಎಚ್ಎ ಕೇಂದ್ರ) ಹಾಗು ಭಾರತದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆ (ಎನ್ಡಿಎಂಎ) ನಡುವಿನ ಉದ್ದೇಶಿತ ಆಸಕ್ತಿಯ ತಿಳಿವಳಿಕೆ ಒಡಂಬಡಿಕೆ (ಎಂಒಐ) ಮೂಲಕ ಅನುಸರಿಸಬಹುದು.

16. ಆಸಿಯಾನ್ ಸಂಪರ್ಕದ ಮಾಸ್ಟರ್ ಪ್ಲಾನ್ (ಮಹಾ ಯೋಜನೆ -ಎಂಪಿಎಸಿ) 2025 ಮತ್ತು ಅದರ ಉತ್ತರಾಧಿಕಾರಿ ದಾಖಲೆಯಾದ ಆಸಿಯಾನ್ ಸಂಪರ್ಕ ಕಾರ್ಯತಂತ್ರ ಯೋಜನೆ (ಎಸಿಎಸ್ಪಿ) ಮತ್ತು ಭಾರತದ ಆಕ್ಟ್ ಈಸ್ಟ್ ಪಾಲಿಸಿ ಅಂಡ್ ಸೆಕ್ಯುರಿಟಿ ಅಂಡ್ ಗ್ರೋತ್ ಫಾರ್ ಆಲ್ ಇನ್ ದಿ ರೀಜನ್ (ಸಾಗರ್) ದೃಷ್ಟಿಕೋನದ ಅಡಿಯಲ್ಲಿ ಪ್ರದೇಶದಲ್ಲಿ ಭಾರತದ ಸಂಪರ್ಕ ಉಪಕ್ರಮಗಳ ನಡುವಿನ ಸಮನ್ವಯವನ್ನು ಅನ್ವೇಷಿಸುವ ಮೂಲಕ "ಸಂಪರ್ಕಗಳನ್ನು ಸಂಪರ್ಕಿಸುವ" ವಿಧಾನಕ್ಕೆ ಅನುಗುಣವಾಗಿ ಆಸಿಯಾನ್ ಮತ್ತು ಭಾರತದ ನಡುವಿನ ಸಂಪರ್ಕವನ್ನು ಹೆಚ್ಚಿಸುವುದು.  ಗುಣಮಟ್ಟದ, ಸುಸ್ಥಿರ ಮತ್ತು ಸ್ಥಿತಿಸ್ಥಾಪಕ ಮೂಲಸೌಕರ್ಯಕ್ಕಾಗಿ ಭಾರತ ಫೆಸಿಫಿಕ್ ನಡುವೆ ಸಹಯೋಗ ಮತ್ತು ಭಾರತ-ಮ್ಯಾನ್ಮಾರ್-ಥೈಲ್ಯಾಂಡ್ (ಐಎಂಟಿ) ತ್ರಿಪಕ್ಷೀಯ ಹೆದ್ದಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸುವುದು ಹಾಗು ಕಾರ್ಯಗತಗೊಳಿಸುವುದು ಸೇರಿದಂತೆ ಭೂಮಿ, ವಾಯು ಮತ್ತು ಕಡಲ ಕ್ಷೇತ್ರಗಳಲ್ಲಿ ಸಾರಿಗೆಯಲ್ಲಿ ಸಹಕಾರವನ್ನು ಹೆಚ್ಚಿಸುವುದು;ಲಾವೋ ಪಿ.ಡಿ.ಆರ್ ನ ಪೂರ್ವಾಭಿಮುಖ ವಿಸ್ತರಣೆಯನ್ನು ಎದುರುನೋಡುವುದು

17. ವಿಶ್ವಸಂಸ್ಥೆ ಮತ್ತು ಅಂತರರಾಷ್ಟ್ರೀಯ ಹಣಕಾಸು ವಾಸ್ತುಶಿಲ್ಪ, ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಗಳು ಮತ್ತು ಬಹುಪಕ್ಷೀಯ ಅಭಿವೃದ್ಧಿ ಬ್ಯಾಂಕುಗಳು ಸೇರಿದಂತೆ ಬಹುಪಕ್ಷೀಯ ಜಾಗತಿಕ ಆಡಳಿತ ವಾಸ್ತುಶಿಲ್ಪದ ಬಹುಪಕ್ಷೀಯತೆಯನ್ನು ಬಲಪಡಿಸುವ ಮತ್ತು ಸಮಗ್ರ ಸುಧಾರಣೆಯ ಮಹತ್ವವನ್ನು ಒತ್ತಿಹೇಳುವುದು, ಪ್ರಸ್ತುತ ಜಾಗತಿಕ ವಾಸ್ತವತೆಗಳು ಮತ್ತು ಜಾಗತಿಕ ದಕ್ಷಿಣದ ಅಗತ್ಯಗಳು ಹಾಗು ಆಕಾಂಕ್ಷೆಗಳಿಗೆ ಸೂಕ್ತವಾಗುವಂತೆ ಮಾಡಲು, ಪ್ರಜಾಪ್ರಭುತ್ವೀಕರಣ, ಸಮಾನ, ಪ್ರಾತಿನಿಧಿಕ ಮತ್ತು ಸ್ಪಂದಿಸುವ ರೀತಿಯಲ್ಲಿ ಅವುಗಳನ್ನು ರೂಪಿಸುವುದು ;

18. ಹವಾಮಾನ ಬದಲಾವಣೆ ಕುರಿತ ವಿಶ್ವಸಂಸ್ಥೆಯ ಚೌಕಟ್ಟು ಸಮಾವೇಶದಲ್ಲಿ (ಯುಎನ್ಎಫ್ಸಿಸಿಸಿ) 'ಸಾಮಾನ್ಯ ಆದರೆ ವಿಭಿನ್ನ ಜವಾಬ್ದಾರಿಗಳು ಮತ್ತು ಸಂಬಂಧಿತ ಸಾಮರ್ಥ್ಯಗಳು' (ಸಿಬಿಡಿಆರ್-ಆರ್ಸಿ) ತತ್ವವು ಎಲ್ಲಾ ಸಂಬಂಧಿತ ಜಾಗತಿಕ ಸವಾಲುಗಳಿಗೆ ಅನ್ವಯಿಸುತ್ತದೆ ಎಂಬುದನ್ನು ಪರಿಗಣಿಸಿ, ಜಾಗತಿಕ ದಕ್ಷಿಣದ ಕಾಳಜಿಗಳು ಮತ್ತು ಆದ್ಯತೆಗಳಿಗೆ ಸ್ಪಂದಿಸುವ ಅಂತರ್ಗತ ಮತ್ತು ಸಮತೋಲಿತ ಅಂತರರಾಷ್ಟ್ರೀಯ ಕಾರ್ಯಸೂಚಿಗೆ ಕರೆ;

19. ಹಿಂದೂ ಮಹಾಸಾಗರದ ರಿಮ್ ಅಸೋಸಿಯೇಷನ್ (ಐಒಆರ್ಎ), ಬಹು-ವಲಯ ತಾಂತ್ರಿಕ ಮತ್ತು ಆರ್ಥಿಕ ಸಹಕಾರಕ್ಕಾಗಿ ಬಂಗಾಳ ಕೊಲ್ಲಿ ಉಪಕ್ರಮ (ಬಿಮ್ಸ್ಟೆಕ್), ಇಂಡೋನೇಷ್ಯಾ-ಮಲೇಷ್ಯಾ-ಥೈಲ್ಯಾಂಡ್ ಬೆಳವಣಿಗೆ ತ್ರಿಕೋನ (ಐಎಂಟಿ-ಜಿಟಿ), ಸಿಂಗಾಪುರ್-ಜೊಹೊರ್-ರಿಯಾವ್ (ಸಿಜೋರಿ) ಬೆಳವಣಿಗೆ ತ್ರಿಕೋನ, ಬ್ರೂನಿ ದಾರುಸ್ಸಲಾಮ್-ಇಂಡೋನೇಷ್ಯಾ-ಮಲೇಷ್ಯಾ-ಫಿಲಿಪೈನ್ಸ್ ಪೂರ್ವ ಆಸಿಯಾನ್ ಬೆಳವಣಿಗೆ ಪ್ರದೇಶ (ಬಿಐಎಂಪಿ-ಇಎಜಿಎ) ಮತ್ತು ಮೆಕಾಂಗ್-ಗಂಗಾ ಸಹಕಾರ (ಎಂಜಿಸಿ) ಸೇರಿದಂತೆ ಮೆಕಾಂಗ್ ಉಪ-ಪ್ರಾದೇಶಿಕ ಸಹಕಾರ ಚೌಕಟ್ಟು ಆಯೇಯವಾದಿ ಚೋ ಫ್ರೆಯಾ –ಮೆಕಾಂಗ್ ಆರ್ಥಿಕ ಸಹಾಕಾರ ಕಾರ್ಯತಂತ್ರ (ಎ.ಸಿ.ಎಂ.ಇ.ಸಿ.ಎಸ್.) ಗಳಂತಹ ಉಪ-ಪ್ರಾದೇಶಿಕ ಚೌಕಟ್ಟುಗಳೊಂದಿಗೆ ಸಂಭಾವ್ಯ ಸಮನ್ವಯವನ್ನು ಅನ್ವೇಷಿಸುವುದು ಹಾಗು ಆಸಿಯಾನ್ ಮತ್ತು ಭಾರತದ ಸಮಗ್ರ, ಪರಸ್ಪರ ಬೆಳವಣಿಗೆ ಮತ್ತು ಅಭಿವೃದ್ಧಿಯೊಂದಿಗೆ ಉಪ-ಪ್ರಾದೇಶಿಕ ಬೆಳವಣಿಗೆಯನ್ನು ಹೊಂದಿಸುವ ಮೂಲಕ ಸಮಾನ ಅಭಿವೃದ್ಧಿಯನ್ನು ಉತ್ತೇಜಿಸುವ ಆಸಿಯಾನ್ ಮತ್ತು ಭಾರತದ ಪ್ರಯತ್ನಗಳನ್ನು ಬೆಂಬಲಿಸುವುದು;

20. ಆಸಿಯಾನ್-ಭಾರತ ಸಮಗ್ರ ಕಾರ್ಯತಂತ್ರದ ಸಹಭಾಗಿತ್ವದ ಮೂಲಕ ನಮ್ಮ ಪಾಲುದಾರಿಕೆಯನ್ನು ಬಲಪಡಿಸಲು ಪ್ರಯತ್ನಿಸುವಾಗ ಸಾಮಾನ್ಯ ಕಾಳಜಿಯ ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಬಗ್ಗೆ ಒಟ್ಟಾಗಿ ಕೆಲಸ ಮಾಡುವುದನ್ನು ಮುಂದುವರಿಸುವುದು.

 

*****


(Release ID: 2064253) Visitor Counter : 29