ಪ್ರಧಾನ ಮಂತ್ರಿಯವರ ಕಛೇರಿ
ಐಪಿಎಸ್ ಪ್ರಶಿಕ್ಷಣಾರ್ಥಿಗಳೊಂದಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಸಂವಾದ
ಸೈಬರ್ ಅಪರಾಧದಂತಹ ಹೊಸ ಸವಾಲುಗಳನ್ನು ಎದುರಿಸುವ ಅಗತ್ಯದ ಬಗ್ಗೆ ಚರ್ಚೆ
Posted On:
04 OCT 2024 6:43PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಪ್ರಶಿಕ್ಷಣಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ಶ್ರೀ ಮೋದಿಯವರು, ವರ್ಷಗಳು ಕಳೆದಂತೆ ಕಾನೂನು ಸುವ್ಯವಸ್ಥೆಯ ರೂಪಾಂತರ ಮತ್ತು ಸೈಬರ್ ಅಪರಾಧದಂತಹ ಹೊಸ ಸವಾಲುಗಳನ್ನು ನಿಭಾಯಿಸುವ ಅಗತ್ಯದ ಬಗ್ಗೆ ಚರ್ಚಿಸಿದರು.
ಪ್ರಧಾನಮಂತ್ರಿಗಳು ಎಕ್ಸ್ ನಲ್ಲಿ ಹೀಗೆ ಪೋಸ್ಟ್ ಮಾಡಿದ್ದಾರೆ:
"ಇಂದು ಬೆಳಗ್ಗೆ 76 ಆರ್ ಆರ್ ನ ಐಪಿಎಸ್ ಪ್ರೊಬೆಷನರ್‌ಗಳೊಂದಿಗೆ ಸಂವಾದ ನಡೆಸಿದೆ. ಜನ ಸೇವೆಯ ಅವರ ಪ್ರಯತ್ನಕ್ಕೆ ಶುಭ ಕೋರಿದೆ. ವರ್ಷಗಳು ಕಳೆದಂತೆ ಕಾನೂನು ಸುವ್ಯವಸ್ಥೆ ಕಾಪಾಡುವ ಪೊಲೀಸ್ ವ್ಯವಸ್ಥೆ ಹೇಗೆ ಪರಿವರ್ತನೆ ಹೊಂದಿದೆ ಹಾಗೂ ಸೈಬರ್ ಅಪರಾಧದಂತಹ ಹೊಸ ಸವಾಲುಗಳನ್ನು ಎದುರಿಸುವುದು ಹೇಗೆ ಮುಖ್ಯವಾಗಿದೆ ಎಂಬ ಬಗ್ಗೆ ಚರ್ಚಿಸಿದೆ. @svpnpahyd"
*****
(Release ID: 2062268)
Visitor Counter : 41
Read this release in:
English
,
Urdu
,
Marathi
,
Hindi
,
Bengali
,
Manipuri
,
Assamese
,
Punjabi
,
Gujarati
,
Odia
,
Tamil
,
Telugu
,
Malayalam