ಪ್ರಧಾನ ಮಂತ್ರಿಯವರ ಕಛೇರಿ
ಪ್ರಧಾನಮಂತ್ರಿಯವರು 'ಮೇಕ್ ಇನ್ ಇಂಡಿಯಾ' ಕುರಿತಾದ ತಮ್ಮ ಆಲೋಚನೆಗಳನ್ನು ಹಂಚಿಕೊಂಡು, ಈ ಯೋಜನೆಯ ಸ್ಫೂರ್ತಿಗೆ ಶಕ್ತಿ ನೀಡಿದ ಆವಿಷ್ಕಾರಕರು ಮತ್ತು ಸಂಪತ್ತಿನ ಸೃಷ್ಟಿಕರ್ತರಿಗೆ ವಂದನೆ ಸಲ್ಲಿಸಿದ್ದಾರೆ
Posted On:
25 SEP 2024 7:18PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು 'ಮೇಕ್ ಇನ್ ಇಂಡಿಯಾ' ಮತ್ತು ಮೇಕ್ ಇನ್ ಇಂಡಿಯಾದ ಸ್ಫೂರ್ತಿಗೆ ಶಕ್ತಿ ನೀಡಿದ ಆವಿಷ್ಕಾರಕರು ಮತ್ತು ಸಂಪತ್ತಿನ ಸೃಷ್ಟಿಕರ್ತರ ಬಗ್ಗೆ ತಮ್ಮ ಆಲೋಚನೆಗಳನ್ನು ಹಂಚಿಕೊಂಡು, ಚಿಂತನೆ ನಡೆಸಿದರು.
ಮೇಕ್ ಇನ್ ಇಂಡಿಯಾ ಉಪಕ್ರಮವು ಬೆಳೆದು, ಮತ್ತೊಂದು ಬೆಳವಣಿಗೆಗೆ ಪ್ರೋತ್ಸಾಹ ನೀಡಿದೆ. ಯುವ ಶಕ್ತಿಗೆ ದೊಡ್ಡ ಕನಸು ಕಾಣಲು ರೆಕ್ಕೆಗಳನ್ನು ನೀಡಿದೆ ಎಂದು ಶ್ರೀ ಮೋದಿಯವರು ಹೇಳಿದ್ದಾರೆ.
ಮೇಕ್ ಇನ್ ಇಂಡಿಯಾ ಕುರಿತಾದ ಪ್ರಧಾನಮಂತ್ರಿಯವರ ಚಿಂತನೆಯನ್ನು ಲಿಂಕ್ಡ್ ಇನ್ ನಲ್ಲಿ ಓದಬಹುದು.
ಪ್ರಧಾನಮಂತ್ರಿಯವರು Xನ ಪೋಸ್ಟ್ ನಲ್ಲಿ ಹೀಗೆ ಹೇಳಿದ್ದಾರೆ;
"@makeinindia ಸ್ಫೂರ್ತಿಯನ್ನು ಶಕ್ತಿಯುತಗೊಳಿಸಿದ ಪ್ರತಿಯೊಬ್ಬ ನಾವೀನ್ಯಕಾರ ಮತ್ತು ಸಂಪತ್ತಿನ ಸೃಷ್ಟಿಕರ್ತನಿಗೆ ನನ್ನ ವಂದನೆಗಳು. ಈ ಉಪಕ್ರಮವು ತನ್ನ ಬೆಳವಣಿಗೆಯನ್ನು ಮತ್ತಷ್ಟು ಹೆಚ್ಚಿಸಿ, ನಮ್ಮ ಯುವ ಶಕ್ತಿಗೆ ದೊಡ್ಡ ಕನಸು ಕಾಣಲು ರೆಕ್ಕೆಗಳನ್ನು ನೀಡಿದೆ! @LinkedIn ನಲ್ಲಿ ಇದರ ಬಗ್ಗೆ ನನ್ನ ಕೆಲವು ಆಲೋಚನೆಗಳನ್ನು ಹಂಚಿಕೊಂಡಿದ್ದೇನೆ. https://www.linkedin.com/pulse/10-years-make-india-narendra-modi-sb2if? #10YearsOfMakeInIndia"
*****
(Release ID: 2058920)
Read this release in:
Odia
,
Tamil
,
Telugu
,
Manipuri
,
English
,
Urdu
,
Marathi
,
Hindi
,
Assamese
,
Punjabi
,
Gujarati
,
Malayalam