ಪರಿಸರ ಮತ್ತು ಅರಣ್ಯ ಸಚಿವಾಲಯ
azadi ka amrit mahotsav g20-india-2023

‘ಏಕ್ ಪೇಡೆ ಮಾ ಕೆ ನಾಮ್’ (ತಾಯಿಯ ಹೆಸರಿನಲ್ಲಿ ಒಂದು ಗಿಡ ನೆಡಿ) ಅಭಿಯಾನದಡಿ ರಾಷ್ಟ್ರವ್ಯಾಪಿ ಸುಮಾರು 52 ಕೋಟಿ ಸಸಿಗಳ ನೆಡಲಾಗಿದೆ


ವಿಶ್ವ ಪರಿಸರ ದಿನದ ಅಂಗವಾಗಿ ಅಭಿಯಾನಕ್ಕೆ ಚಾಲನೆ ನೀಡಿದ ಪ್ರಧಾನಮಂತ್ರಿ 

Posted On: 03 SEP 2024 9:50AM by PIB Bengaluru

ಕೇಂದ್ರ ಪರಿಸರ ಅರಣ್ಯ ಮತ್ತು ಹವಾಮಾನ ವೈಪರೀತ್ಯ ಸಚಿವ ಶ್ರೀ ಭೂಪೇಂದರ್ ಯಾದವ್ ಇಂದು ತಮ್ಮ ಸಾಮಾಜಿಕ ಜಾಲತಾನ ಎಕ್ಸ್‌ ಪೋಸ್ಟ್ ಮೂಲಕ  ‘ಏಕ್ ಪೆಡ್ ಮಾ ಕೆ ನಾಮ್’ (ತಾಯಿಯ ಹೆಸರಿನಲ್ಲಿ ಒಂದು ಗಿಡ ನೆಡಿ) ಅಭಿಯಾನದಡಿಯಲ್ಲಿ ದೇಶವು ಗಿಡಗಳನ್ನು ನೆಡುವಲ್ಲಿ ಮೈಲಿಗಲ್ಲು ಸಾಧಿಸಿದೆ ಮತ್ತು ಅಭಿಯಾನದ ಅಡಿಯಲ್ಲಿ ಭಾರತದಾದ್ಯಂತ 52 ಕೋಟಿಗೂ ಅಧಿಕ ಸಸಿಗಳನ್ನು ನೆಡಲಾಗಿದೆ ಎಂದು ತಿಳಿಸಿದ್ದಾರೆ. 

 

ವಿಶ್ವ ಪರಿಸರ ದಿನದ ಸಂದರ್ಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 05.06.2024 ರಂದು ‘ಏಕ್ ಪೆಡ್ ಮಾ ಕೆ ನಾಮ್’ಅಭಿಯಾನಕ್ಕೆ ಚಾಲನೆ ನೀಡಿದ್ದರು. ಅಭಿಯಾನದ ಕುರಿತು ಸ್ಪಷ್ಟ ಕರೆ ನೀಡಿದ ಅವರು, ಈ ಉಪಕ್ರಮದ ಮೂಲಕ ಉತ್ತಮ ಭೂ ಗ್ರಹ ಮತ್ತು ಸುಸ್ಥಿರ ಅಭಿವೃದ್ಧಿಗೆ ಕೊಡುಗೆ ನೀಡುವಂತೆ ಪ್ರಧಾನಮಂತ್ರಿ ಅವರು ಪ್ರತಿಯೊಬ್ಬರನ್ನು ಒತ್ತಾಯಿಸಿದರು. 

ವಿವರಗಳಿಗೆ ಹಿಂದಿನ ಪ್ರತಿಕಾ ಪ್ರಕರಣೆ ಪ್ರತಿ ಇಲ್ಲಿದೆ:

https://pib.gov.in/PressReleasePage.aspx?PRID=2022815

 

*****



(Release ID: 2051286) Visitor Counter : 48