ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

2024 ಪ್ಯಾರೀಸ್ ಒಲಿಂಪಿಕ್ಸ್: ಎರಡನೇ ಪದಕ ಗೆದ್ದ ಅಥ್ಲೀಟ್ ಪ್ರೀತಿ ಪಾಲ್ ಅವರನ್ನು ಅಭಿನಂದಿಸಿದ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ

प्रविष्टि तिथि: 02 SEP 2024 12:01AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಸದ್ಯ ನಡೆಯುತ್ತಿರುವ 2024ರ ಪ್ಯಾರೀಸ್ ಒಲಿಂಪಿಕ್ಸ್ ನಲ್ಲಿ ಎರಡನೇ ಪದಕ ಗೆದ್ದ ಟ್ರ್ಯಾಕ್ ಮತ್ತು ಫೀಲ್ಡ್‌ ಅಥ್ಲೀಟ್ ಪ್ರೀತಿ ಪಾಲ್ ಅವರನ್ನು ಅಭಿನಂದಿಸಿದ್ದಾರೆ.

23 ವರ್ಷದ ಪಾಲ್ ಅವರು ಮಹಿಳೆಯರ 200 ಮೀಟರ್ T35 ಸ್ಪರ್ಧೆಯಲ್ಲಿ ಕಂಚಿನ ಪದಕವನ್ನು ಗೆದ್ದರು, ಆ ಮೂಲಕ  ಪ್ಯಾರಾಲಿಂಪಿಕ್ಸ್‌ನಲ್ಲಿ ಎರಡು ಪದಕಗಳನ್ನು ಗೆದ್ದ ಮೊದಲ ಭಾರತೀಯ ಮಹಿಳಾ ಟ್ರ್ಯಾಕ್ ಮತ್ತು ಫೀಲ್ಡ್ ಅಥ್ಲೀಟ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಪ್ರಧಾನಮಂತ್ರಿಗಳು ತಮ್ಮ ಸಾಮಾಜಿಕ ಜಾಲತಾಣ X ಪೋಸ್ಟ್ ನಲ್ಲಿ “ #ಪ್ಯಾರಾಲಿಂಪಿಕ್ಸ್2024ನ ಒಂದೇ ಆವೃತ್ತಿಯಲ್ಲಿ ಮಹಿಳೆಯರ 200ಮೀಟರ್ T35 ಸ್ಪರ್ಧೆಯಲ್ಲಿ ಕಂಚಿನೊಂದಿಗೆ ತನ್ನ ಎರಡನೇ ಪದಕವನ್ನು ಗೆದ್ದು ಪ್ರೀತಿ ಪಾಲ್  ಐತಿಹಾಸಿಕ ಸಾಧನೆ ಮಾಡಿದ್ದಾರೆ! ಅವರು ಭಾರತದ ಜನತೆಗೆ ಸ್ಪೂರ್ತಿಯಾಗಿದ್ದಾರೆ. ಅವರ ಬದ್ಧತೆ ನಿಜವಾಗಿಯೂ ಗಮನಾರ್ಹವಾಗಿದೆ.’’ 

#Cheer4Bharat ’’

 

 

***


(रिलीज़ आईडी: 2050782) आगंतुक पटल : 108
इस विज्ञप्ति को इन भाषाओं में पढ़ें: Telugu , Urdu , English , Manipuri , Gujarati , Tamil , Assamese , Odia , हिन्दी , Marathi , Bengali , Bengali-TR , Punjabi , Malayalam