ಪ್ರಧಾನ ಮಂತ್ರಿಯವರ ಕಛೇರಿ

ಲಖ್ಪತಿ ದೀದಿ ಕಾರ್ಯಕ್ರಮ ಮಹಿಳೆಯರ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಸಬಲೀಕರಣ ಖಾತರಿಪಡಿಸಿದೆ : ಪ್ರಧಾನ ಮಂತ್ರಿ 

Posted On: 29 AUG 2024 3:13PM by PIB Bengaluru

ಸ್ವ ಸಹಾಯ ಗುಂಪುಗಳ ಮೂಲಕ ರಾಷ್ಟ್ರ ನಿರ್ಮಾಣದಲ್ಲಿ ಪಾಲ್ಗೊಳ್ಳುವಿಕೆಯನ್ನು ಲಖ್ಪತಿ ದೀದಿಯರು ಖಾತರಿಪಡಿಸಿದ್ದಾರೆ ಎಂದು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಹೇಳಿದ್ದಾರೆ. ದೇಶದ ಮಹಿಳೆಯರು ಮುನ್ನಡೆದು, ಸಮೃದ್ಧರಾಗಿ ಪ್ರಗತಿಯ ಹೊಸ ಆಯಾಮಗಳನ್ನು ಸ್ಥಾಪಿಸುವಂತಾಗಲು ಮಹಿಳೆಯರ ಕಲ್ಯಾಣಕ್ಕಾಗಿ ಕಳೆದ 10 ವರ್ಷಗಳಲ್ಲಿ ಅನೇಕ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ. 

ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಖಾತೆ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾನ್ ಅವರ ಪೋಸ್ಟ್ ಗೆ ಪ್ರತಿಕ್ರಿಯೆ ನೀಡಿ ಪ್ರಧಾನ ಮಂತ್ರಿಗಳ ಕಾರ್ಯಾಲಯ ಹೀಗೆ ಬರೆದಿದೆ:

“ಲಖ್ಪತಿ ದೀದಿಯರು ಸ್ವ-ಸಹಾಯ ಗುಂಪುಗಳ ಮೂಲಕ ರಾಷ್ಟ್ರ ನಿರ್ಮಾಣದಲ್ಲಿ ತಮ್ಮ ಪಾಲ್ಗೊಳ್ಳುವಿಕೆಯನ್ನು ಖಾತರಿಪಡಿಸುತ್ತಿದ್ದಾರೆ ಎಂದು ಕೇಂದ್ರ ಸಚಿವರಾದ ಶ್ರೀ @ChouhanShivraj ತಿಳಿಸಿದ್ದಾರೆ. ದೇಶದ ಮಹಿಳೆಯರು ಮುನ್ನಡೆಯುತ್ತಾ, ಸಮೃದ್ಧಿ ಮತ್ತು ಸಂಪನ್ನರಾಗುತ್ತಾ ಪ್ರಗತಿಯ ಹೊಸ ಆಯಾಮ ರೂಪಿಸುವಂತಾಗಲು ಕಳೆದ 10 ವರ್ಷಗಳಿಂದ ಮಹಿಳೆಯರ ಕಲ್ಯಾಣಕ್ಕಾಗಿ ಅನನ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮಹಿಳೆಯರ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಸಬಲೀಕರಣವನ್ನು ಖಾತರಿಪಡಿಸಲಾಗಿದೆ.

 

 

*****



(Release ID: 2049810) Visitor Counter : 15