ಪ್ರಧಾನ ಮಂತ್ರಿಯವರ ಕಛೇರಿ
ಐದು ಹೊಸ ಜಿಲ್ಲೆಗಳ ರಚನೆ ಹಿನ್ನೆಲೆಯಲ್ಲಿ ಲಡಾಖ್ ನಾಗರಿಕರಿಗೆ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅಭಿನಂದನೆ
ಲಡಾಖ್ ನಲ್ಲಿ ಐದು ಹೊಸ ಜಿಲ್ಲೆಗಳ ರಚನೆಯು ಸಮೃದ್ಧಿ ಮತ್ತು ಉತ್ತಮ ಆಡಳಿತದತ್ತ ಹೆಜ್ಜೆ : ಪ್ರಧಾನ ಮಂತ್ರಿ
प्रविष्टि तिथि:
26 AUG 2024 12:54PM by PIB Bengaluru
ಲಡಾಖ್ ನಲ್ಲಿ ಐದು ಹೊಸ ಜಿಲ್ಲೆಗಳ ರಚನೆ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಲ್ಲಿನ ನಾಗರಿಕರನ್ನು ಅಭಿನಂದಿಸಿದ್ದಾರೆ. ಹೊಸ ಜಿಲ್ಲೆಗಳಾದ ಝಂಸ್ಕಾರ್, ಡ್ರಾಸ್, ಶಾಮ್, ನುಬ್ರಾ ಮತ್ತು ಚಾಂಗ್ತಾಂಗ್ ಗಳು ಈಗ ಹೆಚ್ಚು ಕೇಂದ್ರೀಕೃತವಾಗಲಿದ್ದು, ಸೇವೆಗಳು ಮತ್ತು ಅವಕಾಶಗಳು ಜನರಿಗೆ ಇನ್ನಷ್ಟು ನಿಕಟವಾಗಲಿವೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ ರವರ ಎಕ್ಸ್ ಪೋಸ್ಟ್ ಅನ್ನು ಹಂಚಿಕೊಂಡು ಪ್ರಧಾನಮಂತ್ರಿಗಳು ಹೀಗೆ ಬರೆದಿದ್ದಾರೆ:
“ಲಡಾಖ್ ನಲ್ಲಿ ಐದು ಹೊಸ ಜಿಲ್ಲೆಗಳ ರಚನೆಯು ಉತ್ತಮ ಆಡಳಿತ ಮತ್ತು ಸಮೃದ್ಧಿಯತ್ತ ಒಂದು ಹೆಜ್ಜೆಯಾಗಿದೆ. ಝಂಸ್ಕಾರ್, ಡ್ರಾಸ್, ಶಾಮ್, ನುಬ್ರಾ ಮತ್ತು ಚಾಂಗ್ತಾಂಗ್ ಈಗ ಹೆಚ್ಚು ಗಮನವನ್ನು ಕೇಂದ್ರೀಕರಿಸಲಿವೆ, ಈ ಮೂಲಕ ಜನರಿಗೆ ಸೇವೆಗಳು ಮತ್ತು ಅವಕಾಶಗಳನ್ನು ಇನ್ನಷ್ಟು ನಿಕಟವಾಗಲಿವೆ. ಅಲ್ಲಿನ ಜನರಿಗೆ ಅಭಿನಂದನೆಗಳು.”
*****
(रिलीज़ आईडी: 2049073)
आगंतुक पटल : 71
इस विज्ञप्ति को इन भाषाओं में पढ़ें:
Telugu
,
English
,
Urdu
,
Marathi
,
हिन्दी
,
Hindi_MP
,
Manipuri
,
Bengali
,
Assamese
,
Punjabi
,
Gujarati
,
Odia
,
Tamil
,
Malayalam