ಪ್ರಧಾನ ಮಂತ್ರಿಯವರ ಕಛೇರಿ

ಜಪಾನಿನ ವಿದೇಶಾಂಗ ಮತ್ತು ರಕ್ಷಣಾ ಸಚಿವರು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದರು

Posted On: 19 AUG 2024 9:53PM by PIB Bengaluru

ಜಪಾನ್ ದೇಶದ ವಿದೇಶಾಂಗ ವ್ಯವಹಾರಗಳ ಸಚಿವೆ  ಶ್ರೀಮತಿ ಕಾಮಿಕಾವಾ ಯೊಕೊ ಮತ್ತು ರಕ್ಷಣಾ ಸಚಿವ ಶ್ರೀ ಕಿಹರಾ ಮಿನೋರು ಅವರು ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು. 3ನೇ ಭಾರತ-ಜಪಾನ್ 2+2 ವಿದೇಶಾಂಗ ಮತ್ತು ರಕ್ಷಣಾ ಸಚಿವರ ಸಭೆಗೆ ಮುನ್ನ ಶ್ರೀ ಮೋದಿ ಅವರು ಇಬ್ಬರನ್ನೂ ಭಾರತಕ್ಕೆ ಸ್ವಾಗತಿಸಿದರು. ಭಾರತ-ಜಪಾನ್ ರಕ್ಷಣಾ ಮತ್ತು ಭದ್ರತಾ ಸಂಬಂಧಗಳಲ್ಲಿ ಸಾಧಿಸಿರುವ ಪ್ರಗತಿಯನ್ನು ಪ್ರಧಾನಮಂತ್ರಿಯವರು ಭೇಟಿಯ ವೇಳೆ ಪರಿಶೀಲಿಸಿದರು.

ಶ್ರೀ ಮೋದಿ ಅವರು X ನಲ್ಲಿ ಹೀಗೆ ಬರೆದಿದ್ದಾರೆ:

"3ನೇ ಭಾರತ-ಜಪಾನ್ 2+2 ವಿದೇಶಾಂಗ ಮತ್ತು ರಕ್ಷಣಾ ಸಚಿವರ ಸಭೆಗೆ ಮುಂಚಿತವಾಗಿ ಜಪಾನ್ ವಿದೇಶಾಂಗ ಸಚಿವೆ @Kamikawa_Yoko ಮತ್ತು ರಕ್ಷಣಾ ಸಚಿವ @kihara_minoru ಅವರ ಭೇಟಿ ಸಂತೋಷ ತಂದಿದೆ. ಭಾರತ-ಜಪಾನ್ ರಕ್ಷಣೆ ಮತ್ತು ಭದ್ರತಾ ಸಂಬಂಧಗಳಲ್ಲಿ ಆಗಿರುವ ಪ್ರಗತಿಯ ಕುರಿತು ಪರಿಶೀಲನೆ ನಡೆಯಿತು. ಇಂಡೋ-ಪೆಸಿಫಿಕ್ ಮತ್ತು ಅದರಾಚೆಗೂ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಯನ್ನು ಉತ್ತೇಜಿಸುವಲ್ಲಿ ಭಾರತ-ಜಪಾನ್ ಪಾಲುದಾರಿಕೆ ವಹಿಸುವ ಪಾತ್ರವನ್ನು ಇದು ಪುನರುಚ್ಚರಿಸಿದೆ".

 

 

*****



(Release ID: 2047343) Visitor Counter : 11