ಪ್ರಧಾನ ಮಂತ್ರಿಯವರ ಕಛೇರಿ

ನೇಪಾಳದ ವಿದೇಶಾಂಗ ವ್ಯವಹಾರಗಳ ಸಚಿವರಾದ ಘನತೆವೆತ್ತ ಡಾ. ಅರ್ಜು ರಾಣಾ ದೇವುಬಾ ಅವರು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದರು

Posted On: 19 AUG 2024 9:48PM by PIB Bengaluru

ನೇಪಾಳದ ವಿದೇಶಾಂಗ ವ್ಯವಹಾರಗಳ ಸಚಿವರಾದ ಘನತೆವೆತ್ತ ಡಾ. ಅರ್ಜು ರಾಣಾ ದೇವುಬಾ ಅವರು ಇಂದು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದರು. ಡಾ. ದೇವುಬಾ ಅವರನ್ನು ಭಾರತಕ್ಕೆ ಸ್ವಾಗತಿಸಿದ ಶ್ರೀ ಮೋದಿಯವರು, ಭಾರತ ಮತ್ತು ನೇಪಾಳದ ನಡುವಿನ ಅಭಿವೃದ್ಧಿ ಪಾಲುದಾರಿಕೆಯಲ್ಲಿ ಉಭಯ ದೇಶಗಳು ನಿರಂತರ ವೇಗವನ್ನು ನಿರೀಕ್ಷಿಸುವುದಾಗಿ ತಿಳಿಸಿದರು.

ಪ್ರಧಾನ ಮಂತ್ರಿ ಶ್ರೀ ಮೋದಿಯವರು Xನಲ್ಲಿ ಪೋಸ್ಟ್ ಮಾಡಿ:

"ನೇಪಾಳದ ವಿದೇಶಾಂಗ ಸಚಿವರಾದ @Arzuranadeuba ಅವರನ್ನು ಸ್ವಾಗತಿಸಲು ಸಂತೋಷವಾಗಿದೆ. ಭಾರತ ಮತ್ತು ನೇಪಾಳ ದೇಶಗಳು ನಿಕಟ ನಾಗರಿಕ ಸಂಬಂಧ ಮತ್ತು ಪ್ರಗತಿಪರ ಮತ್ತು ಬಹುಮುಖಿ ಪಾಲುದಾರಿಕೆಯನ್ನು ಹಂಚಿಕೊಂಡಿವೆ. ಉಭಯ ದೇಶಗಳ ಅಭಿವೃದ್ಧಿ ಪಾಲುದಾರಿಕೆಯಲ್ಲಿ ನಿರಂತರ ವೇಗವನ್ನು ನಿರೀಕ್ಷಿಸುತ್ತಿದ್ದೇವೆ" ಎಂದು ಹೇಳಿಕೊಂಡಿದ್ದಾರೆ.

 

 

*****



(Release ID: 2047332) Visitor Counter : 8