ಹಣಕಾಸು ಸಚಿವಾಲಯ
2023-24ನೇ ಆರ್ಥಿಕ ವರ್ಷದಲ್ಲಿ 1 ಲಕ್ಷ ದಾಟಿದ ಪೇಟೆಂಟ್ ಸಂಖ್ಯೆ
2023-24ನೇ ಆರ್ಥಿಕ ವರ್ಷದಲ್ಲಿ 1. 25 ಲಕ್ಷ ದಾಟಿದ ಗುರುತು ಪಡೆದುಕೊಂಡ ಸ್ಟಾರ್ಟ್ ಅಪ್ ಗಳ ಸಂಖ್ಯೆ
ಶ್ರೇಣಿ 2 ಮತ್ತು ಶ್ರೇಣಿ 3 ನಗರಗಳಲ್ಲಿ ಶೇಕಡಾ 45 ರಷ್ಟು ಸ್ಟಾರ್ಟ್-ಅಪ್‌ಗಳು
ಅನುಸಂಧಾನ್ ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನ (ANRF) ಭಾರತೀಯ ಉದ್ಯಮದಲ್ಲಿ ವೈಜ್ಞಾನಿಕ ಸಂಶೋಧನೆಗೆ ಮಾರ್ಗದರ್ಶನ ನೀಡಲಿದೆ-ಸಮೀಕ್ಷೆ
Posted On:
22 JUL 2024 2:33PM by PIB Bengaluru
ಇತ್ತೀಚಿನ ವರ್ಷಗಳಲ್ಲಿ ಪೇಟೆಂಟ್‌ಗಳು ಮತ್ತು ಸ್ಟಾರ್ಟ್‌ಅಪ್‌ಗಳ ತ್ವರಿತ ಏರಿಕೆಯು ಜ್ಞಾನ ಮತ್ತು ನಾವೀನ್ಯತೆ ಬೆಂಬಲಿತ ಆರ್ಥಿಕ ಬೆಳವಣಿಗೆಯನ್ನು ತೋರಿಸುತ್ತದೆ. ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಇಂದು ಸಂಸತ್ತಿನಲ್ಲಿ ಮಂಡಿಸಿದ ಆರ್ಥಿಕ ಸಮೀಕ್ಷೆ 2023-24, ಸಮಗ್ರ ನಾವೀನ್ಯತೆ ಹೊಂದಿರುವ ಕೈಗಾರಿಕಾ ಪರಿಸರ ವ್ಯವಸ್ಥೆಗೆ ಬಲವಾದ ವಿಷಯವನ್ನು ಪ್ರಸ್ತುತಪಡಿಸಿದರು.
ಜಾಗತಿಕ ಆವಿಷ್ಕಾರ ಸೂಚ್ಯಂಕದಲ್ಲಿ ಭಾರತದ ಸ್ಥಿರ ಸುಧಾರಣೆಯಿಂದ ಇತ್ತೀಚಿನ ವರ್ಷಗಳಲ್ಲಿ ಕೈಗಾರಿಕಾ ಸಂಶೋಧನೆ ಮತ್ತು ಅಭಿವೃದ್ಧಿಯ ಪ್ರಗತಿಯು ಕಂಡುಬಂದಿದೆ ಎಂದು ಸಮೀಕ್ಷೆ ಹೇಳುತ್ತದೆ. ಸೂಚ್ಯಂಕದ ದೇಶೀಯ ಮಾರುಕಟ್ಟೆ ಪ್ರಮಾಣದ ಸೂಚಕದಲ್ಲಿ ಭಾರತವು ಜಾಗತಿಕವಾಗಿ ಉನ್ನತ ಶ್ರೇಣಿಯನ್ನು ಹೊಂದಿದೆ. 2014-15ರಲ್ಲಿ 5,978 ಇದ್ದ ಪೇಟೆಂಟ್‌ಗಳ ಸಂಖ್ಯೆ 2023-24ರಲ್ಲಿ 1,03,057ರಷ್ಟು ಹದಿನೇಳು ಪಟ್ಟು ಹೆಚ್ಚಿದೆ ಎಂದು ಸಮೀಕ್ಷೆ ಹೇಳುತ್ತದೆ. ನೋಂದಾಯಿತ ವಿನ್ಯಾಸಗಳು 2014-15 ರಲ್ಲಿ 7,147 ರಿಂದ 2023-24 ರಲ್ಲಿ 30,672 ಕ್ಕೆ ಏರಿಕೆಯಾಗಿದೆ ಎಂದು ಸಮೀಕ್ಷೆ ಎತ್ತಿ ತೋರಿಸುತ್ತದೆ. 2023-28ರ ಅವಧಿಯಲ್ಲಿ 50,000 ಕೋಟಿ ರೂಪಾಯಿ ಅಂದಾಜು ವೆಚ್ಚದೊಂದಿಗೆ ಅನುಸಂಧಾನ್ ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನವನ್ನು (ANRF) ಸ್ಥಾಪಿಸುವ ಗುರಿಯನ್ನು ಸರ್ಕಾರ ಹೊಂದಿದೆ, ಇದು ಭಾರತೀಯ ಉದ್ಯಮದಲ್ಲಿ ವೈಜ್ಞಾನಿಕ ಸಂಶೋಧನೆಗೆ ಉನ್ನತ ಮಟ್ಟದ ಕಾರ್ಯತಂತ್ರದ ನಿರ್ದೇಶನವನ್ನು ಒದಗಿಸುವ ಉನ್ನತ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತದೆ.
ಭಾರತದ ವೈವಿಧ್ಯಮಯ ಸ್ಟಾರ್ಟ್-ಅಪ್ ಪರಿಸರ ವ್ಯವಸ್ಥೆಯನ್ನು ಆರ್ಥಿಕ ಸಮೀಕ್ಷೆಯಲ್ಲಿ ಉಲ್ಲೇಖಿಸಿದ ಸಚಿವೆ, ಶೇಕಡಾ 45ರಷ್ಟು ಸ್ಟಾರ್ಟ್-ಅಪ್‌ಗಳು ಶ್ರೇಣಿ 2 ಮತ್ತು ಶ್ರೇಣಿ 3 ನಗರಗಳಲ್ಲಿ ತಲೆಯೆತ್ತಿವೆ. 2016 ರಲ್ಲಿ 300 ಇದ್ದ ಸ್ಟಾರ್ಟ್ ಅಪ್ ಗಳ ಸಂಖ್ಯೆ ಕಳೆದ ಮಾರ್ಚ್ ವೇಳೆಗೆ ಡಿಪಿಐಐಟಿ-ಮಾನ್ಯತೆ ಪಡೆದ ಸ್ಟಾರ್ಟ್-ಅಪ್‌ಗಳ ಸಂಖ್ಯೆ 1.25 ಲಕ್ಷಕ್ಕೂ ಹೆಚ್ಚಿದೆ ಎಂದು ಸಮೀಕ್ಷೆ ಹೇಳುತ್ತದೆ. 13,000 ಕ್ಕೂ ಹೆಚ್ಚು ಸ್ಟಾರ್ಟ್-ಅಪ್‌ಗಳು ಕೃತಕ ಬುದ್ಧಿಮತ್ತೆ, ಇಂಟರ್ನೆಟ್, ರೋಬೋಟಿಕ್ಸ್ ಮತ್ತು ನ್ಯಾನೊತಂತ್ರಜ್ಞಾನದಂತಹ ವೈವಿಧ್ಯಮಯ ವಿಷಯಾಧಾರಿತ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. 2016 ರಿಂದ ಮಾರ್ಚ್ 2024 ರವರೆಗೆ 12,000 ಕ್ಕೂ ಹೆಚ್ಚು ಪೇಟೆಂಟ್ ಅರ್ಜಿಗಳನ್ನು ಸಲ್ಲಿಸುವ ಮೂಲಕ ಭಾರತೀಯ ಸ್ಟಾರ್ಟ್-ಅಪ್‌ಗಳು ದೇಶದಲ್ಲಿ ಆವಿಷ್ಕಾರವನ್ನು ಪ್ರಾರಂಭಿಸುತ್ತಿವೆ ಎಂದು ಆರ್ಥಿಕ ಸಮೀಕ್ಷೆ ಉಲ್ಲೇಖಿಸಿದೆ. ಸಮೀಕ್ಷೆಯ ಪ್ರಕಾರ, 135 ಪರ್ಯಾಯ ಹೂಡಿಕೆ ನಿಧಿಗಳು ಆರ್ಥಿಕ ವರ್ಷ 2024ರ ಅಂತ್ಯದ ವೇಳೆಗೆ18,000 ಕೋಟಿ ರೂಪಾಯಿಗೂ ಹೆಚ್ಚು ಸ್ಟಾರ್ಟ್‌ಅಪ್‌ಗಳಲ್ಲಿ ಹೂಡಿಕೆ ಮಾಡಿದ್ದು, ಭಾರತ್ ಸ್ಟಾರ್ಟ್‌ಅಪ್ ನಾಲೆಡ್ಜ್ ಆಕ್ಸೆಸ್ ರಿಜಿಸ್ಟ್ರಿಯು ಸ್ಟಾರ್ಟ್‌ಅಪ್ ಪರಿಸರ ವ್ಯವಸ್ಥೆಯಲ್ಲಿ ವೈವಿಧ್ಯಮಯ ಪಾಲುದಾರರನ್ನು ಒಟ್ಟುಗೂಡಿಸುತ್ತಿದೆ.
*****
(Release ID: 2035528)
Visitor Counter : 59
Read this release in:
Telugu
,
Malayalam
,
Tamil
,
Assamese
,
English
,
Urdu
,
Hindi
,
Hindi_MP
,
Marathi
,
Manipuri
,
Punjabi
,
Gujarati