ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ರಿಷಿ ಸುನಕ್ ಅವರ ನಾಯಕತ್ವಕ್ಕೆ ಧನ್ಯವಾದ ಅರ್ಪಿಸಿದ ಪ್ರಧಾನಮಂತ್ರಿಯವರು

प्रविष्टि तिथि: 05 JUL 2024 7:17PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು, ಯುನೈಟೆಡ್ ಕಿಂಗ್ಡಮ್ ನಲ್ಲಿ ಸಾರ್ವತ್ರಿಕ ಚುನಾವಣೆಯ ನಂತರ ಅಧಿಕಾರದಿಂದ ಕೆಳಗಿಳಿದ ಯುನೈಟೆಡ್ ಕಿಂಗ್ಡಮ್ ನ ಮಾಜಿ ಪ್ರಧಾನಿ, ಶ್ರೀ ರಿಷಿ ಸುನಕ್ ಅವರಿಗೆ ಅವರ ನಾಯಕತ್ವ ಮತ್ತು ಭಾರತ ಮತ್ತು ಯುನೈಟೆಡ್ ಕಿಂಗ್ಡಮ್ ನಡುವಿನ ಬಾಂಧವ್ಯದ ಉತ್ತಮಿಕೆಗೆ ನೀಡಿದ ಕೊಡುಗೆಗಾಗಿ ಧನ್ಯವಾದ ಅರ್ಪಿಸಿದರು. 

ಪ್ರಧಾನಮಂತ್ರಿ ಶ್ರೀ ಮೋದಿಯವರು Xನಲ್ಲಿ ಪೋಸ್ಟ್ ಮಾಡಿ:

"ಯುನೈಟೆಡ್ ಕಿಂಗ್ಡಮ್ ನ ನಿಮ್ಮ ಪ್ರಶಂಸನೀಯ ನಾಯಕತ್ವಕ್ಕಾಗಿ ಧನ್ಯವಾದಗಳು. ನಿಮ್ಮ ಅಧಿಕಾರಾವಧಿಯಲ್ಲಿ ಭಾರತ ಮತ್ತು ಯುನೈಟೆಡ್ ಕಿಂಗ್ಡಮ್ ನಡುವಿನ ಸಂಬಂಧಗಳನ್ನು ಉತ್ತಮಗೊಳಿಸುವತ್ತ ನಿಮ್ಮ ಸಕ್ರಿಯ ಕೊಡುಗೆಗಾಗಿ @RishiSunak, ನಿಮಗೆ ಮತ್ತೊಮ್ಮೆ ಧನ್ಯವಾದಗಳು. ನಿಮಗೆ ಮತ್ತು ನಿಮ್ಮ ಕುಟುಂಬದವರ ಭವಿಷ್ಯಕ್ಕೆ ಶುಭ ಹಾರೈಕೆಗಳು" ಎಂದು ಟ್ವೀಟ್ ಮಾಡಿದ್ದಾರೆ.

 

 

*****


(रिलीज़ आईडी: 2031305) आगंतुक पटल : 72
इस विज्ञप्ति को इन भाषाओं में पढ़ें: Odia , Telugu , English , Urdu , Marathi , हिन्दी , Hindi_MP , Assamese , Bengali , Manipuri , Punjabi , Gujarati , Tamil , Malayalam