ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಶ್ರೀನಗರದ ದಾಲ್ ಸರೋವರವು ಈ ವರ್ಷದ ಯೋಗ ದಿನಾಚರಣೆ ಕಾರ್ಯಕ್ರಮಕ್ಕೆ ಅದ್ಭುತವಾದ ವೇದಿಕೆಯನ್ನು ಸೃಷ್ಟಿಸಿದೆ: ಪ್ರಧಾನಮಂತ್ರಿ

Posted On: 21 JUN 2024 2:09PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಈ ವರ್ಷ ಆಚರಿಸಲಾದ ಯೋಗ ದಿನದ ಕಾರ್ಯಕ್ರಮದ ಇಣುಕುನೋಟಗಳನ್ನು Xನಲ್ಲಿ ಹಂಚಿಕೊಂಡಿದ್ದಾರೆ.

ಪ್ರಧಾನಮಂತ್ರಿಯವರು Xನಲ್ಲಿ ಪೋಸ್ಟ್ ಮಾಡಿ:

"ಶ್ರೀನಗರದ ದಾಲ್ ಸರೋವರವು ಈ ವರ್ಷದ ಯೋಗ ದಿನಾಚರಣೆ ಕಾರ್ಯಕ್ರಮಕ್ಕೆ ಅದ್ಭುತವಾದ ವಾತಾವರಣವನ್ನು ಕಲ್ಪಿಸಿದ್ದು, ಈ ವಾತಾವರಣವು ಪ್ರಕೃತಿಯೊಂದಿಗಿನ ಪರಿಪೂರ್ಣ ಸಾಮರಸ್ಯವನ್ನು ಪ್ರತಿಬಿಂಬಿಸುತ್ತದೆ. ಈ ಸಂದರ್ಭದಲ್ಲಿ ಬಿದ್ದ ಮಳೆಯು ಅಲ್ಲಿ ನೆರೆದಿದ್ದ ಅಸಂಖ್ಯಾತ ಜನರ ಉತ್ಸಾಹಕ್ಕೆ ಭಂಗ ತರಲಿಲ್ಲ. ಯೋಗ ದಿನಾಚರಣೆ ಕೆಲವು ಇಣುಕುನೋಟಗಳು ಇಲ್ಲಿವೆ" ಎಂದು ಹಂಚಿಕೊಂಡಿದ್ದಾರೆ.

 

 

"ಶ್ರೀನಗರದಲ್ಲಿ ನಡೆದ ಯೋಗ ದಿನಾಚರಣೆ ಕಾರ್ಯಕ್ರಮದ ಮತ್ತಷ್ಟು  ಇಣುಕುನೋಟಗಳು."

 

 

*****

 

 


(Release ID: 2027999) Visitor Counter : 53