ಚುನಾವಣಾ ಆಯೋಗ

ಲೋಕಸಭೆ ಚುನಾವಣೆ 2024ರ 7ನೇ ಹಂತದ ಮತದಾನ- ಶೇ.61.63 ಮತದಾನವಾಗಿದೆ

Posted On: 02 JUN 2024 12:08AM by PIB Bengaluru

ಸಾರ್ವತ್ರಿಕ ಚುನಾವಣೆ 2024ರ ಏಳನೇ ಹಂತದ ಮತದಾನದಲ್ಲಿ ಕಳೆದ ರಾತ್ರಿ 11:45ರ ಹೊತ್ತಿಗೆ ಹೊರಬಿದ್ದ ಅಂಕಿಅಂಶ ಪ್ರಕಾರ ಅಂದಾಜು ಶೇಕಡಾ 61.63ರಷ್ಟು ಮತದಾನವಾಗಿದೆ. ಮತಗಟ್ಟೆ ಅಧಿಕಾರಿಗಳು ಮರಳುತ್ತಿರುವ ಹೊತ್ತಿನಲ್ಲಿ ಕ್ಷೇತ್ರ ಮಟ್ಟದ ಅಧಿಕಾರಿಗಳು ಶೇಕಡಾವಾರು ಮತದಾನ ಪ್ರಮಾಣವನ್ನು ನವೀಕರಿಸುತ್ತಿರುತ್ತಾರೆ. ಹಿಂದಿನ ಮತದಾನದ ಹಂತಗಳಲ್ಲಿ ಇದ್ದಂತೆ ವಿಟಿಆರ್ ಆ್ಯಪ್‌ನಲ್ಲಿ ಲೈವ್ ಶೇಕಡಾವಾರು (ಆಯಾ ಎಸಿ ವಿಭಾಗಗಳೊಂದಿಗೆ) ಲಭ್ಯವಿರುತ್ತದೆ.

ರಾತ್ರಿ 11:45 ಕ್ಕೆ ರಾಜ್ಯವಾರು ಅಂದಾಜು ಮತದಾನದ ಪ್ರಮಾಣ ಈ ಕೆಳಗಿನಂತಿದೆ:

ಕ್ರಮ ಸಂಖ್ಯೆ

ರಾಜ್ಯ / ಕೇಂದ್ರಾಡಳಿತ ಪ್ರದೇಶಗಳು

ಶೇಕಡಾವಾರು ಮತದಾನ ಪ್ರಕಾರ ಸ್ಥಾನಗಳು

ಅಂದಾಜು ಶೇಕಡಾವಾರು ಮತದಾನ

01

ಬಿಹಾರ

8

51.92

02

ಚಂಡೀಗಢ

1

67.9

03

ಹಿಮಾಚಲ ಪ್ರದೇಶ

4

69.67

04

ಜಾರ್ಖಂಡ್

3

70.66

05

ಒಡಿಶಾ

6

70.67

06

ಪಂಜಾಬ್

13

58.33

07

ಉತ್ತರ ಪ್ರದೇಶ

13

55.59

08

ಪಶ್ಚಿಮ ಬಂಗಾಳ

9

73.36

8 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು

 

 57

61. 63

ಕ್ಷೇತ್ರ ಅಧಿಕಾರಿಯು ಕಂಪ್ಯೂಟರ್ ಅಂಕಿಅಂಶದಲ್ಲಿ ತುಂಬಿದ ಮಾಹಿತಿಯ ಪ್ರಕಾರ ಇದು ಅಂದಾಜು ಶೇಕಡಾವಾರು ಮತದಾನವಾಗಿದೆ. ಇದು ಅಂದಾಜು ಶೇಕಡಾವಾರು ಮತದಾನ ಪ್ರಮಾಣವಾಗಿದ್ದು,  ಕೆಲವು ಮತದಾನ ಕೇಂದ್ರಗಳಿಂದ (PS) ತೆಗೆದುಕೊಂಡ ಅಂಕಿಅಂಶವಾಗಿದೆ. ಈ ಟ್ರೆಂಡ್ ಪೋಸ್ಟಲ್ ಬ್ಯಾಲೆಟ್ ನ್ನು ಒಳಗೊಂಡಿಲ್ಲ. ಪ್ರತಿ ಮತಗಟ್ಟೆ ಕೇಂದ್ರಗಳಲ್ಲಿ ದಾಖಲಾದ ಮತದಾನ ಪ್ರಮಾಣ ಫಾರ್ಮ್ 17 ಸಿಯಲ್ಲಿ ಎಲ್ಲಾ ಪೋಲಿಂಗ್ ಏಜೆಂಟ್‌ಗಳೊಂದಿಗೆ ಮತದಾನದ ಕೊನೆಯಲ್ಲಿ ಹಂಚಿಕೊಳ್ಳಲಾಗುತ್ತದೆ.

*****



(Release ID: 2022527) Visitor Counter : 41