ವಾರ್ತಾ ಮತ್ತು ಪ್ರಸಾರ ಸಚಿವಾಲಯ

77 ನೇ ಕ್ಯಾನೆಸ್ ಚಲನಚಿತ್ರೋತ್ಸವದಲ್ಲಿ [ಮೇ 14-25] ಭಾಗಿಯಾಗಲಿರುವ ಭಾರತ


ಕ್ಯಾನೆಸ್ ಚಲನಚಿತ್ರೋತ್ಸವದಲ್ಲಿ “ಭಾರತ್ ಪರ್ವ್” ಆಚರಣೆ 

ಅಹಮದಾಬಾದ್ ನ ಎನ್.ಐ.ಡಿಯಿಂದ ಭಾರತ್ ಪೆವಿಲಿಯನ್ ವಿನ್ಯಾಸ, ಭಾರತದ ಸೃಜನೆಗಾಗಿ “ದಿ ಸೂತ್ರಧಾರ”ದಿಂದ ಸ್ಪೂರ್ತಿ 

ಸ್ಪರ್ಧಾತ್ಮಕ ವಿಭಾಗದಲ್ಲಿ ಭಾರತದ ಪಾಯಲ್ ಕಪಾಡಿಯಾ ಅವರ  “ಆಲ್ ವಿ ಇಮಾಜಿನ್ ಆಸ್ ಲೈಟ್” ಚಿತ್ರ ಸ್ಪರ್ಧೆ

55 ನೇ ಐಎಫ್ಎಫ್ಐ ನ ಪೋಸ್ಟರ್ ಮತ್ತು ಟ್ರೈಲರ್ ಬಿಡುಗಡೆಗೆ 2024 ರ ನವೆಂಬರ್ 1 ವೇವ್ಸ್ ಗಾಗಿ ದಿನಾಂಕ ಉಳಿಸಿಕೊಳ್ಳುವುದು ಅಗತ್ಯ 

Posted On: 10 MAY 2024 1:08PM by PIB Bengaluru

ಪ್ರತಿಷ್ಠಿತ 77 ನೇ ಕೇನ್ಸ್ ಚಿತ್ರೋತ್ಸವಕ್ಕೆ ಭಾರತ ಸಿದ್ಧವಾಗುತ್ತಿದ್ದು, ಈ  ಕೇನ್ಸ್ ಚಿತ್ರೋತ್ಸವದಲ್ಲಿ ಭಾರತಕ್ಕೆ ಇದು ವಿಶೇಷ ವರ್ಷವಾಗಿದೆ. ಭಾರತ ಸರ್ಕಾರದ ಭಾರತೀಯ ನಿಯೋಗ ಸರ್ಕಾರದ ಪ್ರತಿನಿಧಿಗಳನ್ನು ಒಳಗೊಂಡಿದೆ. ಉದ್ಯಮದ ಸದಸ್ಯರು ಭಾರತದ ಸೃಜನಶೀಲ ಆರ್ಥಿಕತೆಯನ್ನು ವಿಶ್ವದ ಪ್ರಮುಖ ಚಲನಚಿತ್ರ ಮಾರುಕಟ್ಟೆಯಾದ ಮಾರ್ಚೆ ಡೆ ವೇದಿಕೆಯಲ್ಲಿ ಗಮನಾರ್ಹ ಉಪಕ್ರಮಗಳ ಸರಣಿಯ ಮೂಲಕ ಪ್ರದರ್ಶಿಸಲಾಗುತ್ತಿದೆ. 

77 ನೇ ಕ್ಯಾನೆಸ್ ಚಲನ ಚಿತ್ರೋತ್ಸವದಲ್ಲಿ ಇದೇ ಮೊದಲ ಬಾರಿಗೆ  “ಭಾರತ್ ಪರ್ವ್” ಆಚರಿಸಲಾಗುತ್ತದೆ. ಜಗತ್ತಿನಾದ್ಯಂತ ಪ್ರಮುಖ ಗಣ್ಯರು ಮತ್ತು ಪ್ರತಿನಿಧಿಗಳು ಇದರಲ್ಲಿ ಭಾಗಿಯಾಗಲಿದ್ದಾರೆ. ಚಲಚಿತ್ರ ನಿರ್ಮಾಣಕಾರರು, ನಿರ್ಮಾಪಕರು, ನಿರ್ದೇಶಕರು, ಖರೀದಿದಾರರು ಮತ್ತು ಜಗತ್ತಿನಾದ್ಯಂತ ಮಾರಾಟ ಪ್ರತಿನಿಧಿಗಳು ಚಿತ್ರೋತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಅಸಂಖ್ಯಾತ ಸೃಜನಶೀಲ ಪ್ರತಿಭೆಯ ಶ್ರೀಮಂತ ಬ್ಯಾಂಕ್ ಅನ್ನು ಪ್ರದರ್ಶಿಸಲಾಗುತ್ತಿದೆ.  2024 ರ ನವೆಂಬರ್ 20 ರಿಂದ 28 ರ ವರೆಗೆ ಗೋವಾದಲ್ಲಿ ನಡೆಯಲಿರುವ ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ [ಐಎಫ್ಎಫ್ಐ] ಕುರಿತ ಪೋಸ್ಟರ್ ಮತ್ತು ಟ್ರೈಲರ್ ಅನ್ನು “ಭಾರತ್ ಪರ್ವ್” ವೇದಿಕೆಯಲ್ಲಿ ಅನಾವರಣಗೊಳಿಸಲಾಗುತ್ತಿದೆ. 55 ನೇ ಐಎಫ್ಎಫ್ಐ ನಲ್ಲಿ ಮೊದಲ ವಿಶ್ವ ದೃಶ್ಯ – ಶ್ರವಣ ಮನೋರಂಜನಾ ಶೃಂಗಸಭೆ ನಡೆಯಲಿದ್ದು, [ವೇವ್ಸ್ ] ಇದಕ್ಕಾಗಿ “ದಿನಾಂಕ ಉಳಿಸಿಕೊಳ್ಳಿ” ಎಂಬ ಉಪಕ್ರಮವನ್ನು ಸಹ ಭಾರತ್ ಪರ್ವ್ ನಲ್ಲಿ ಅನಾವರಣಗೊಳಿಸಲಾಗುತ್ತಿದೆ. 

108 ನೇ ವಿಲೇಜ್ ಇಂಟರ್ ನ್ಯಾಷನಲ್ ರಿವೇರಿಯಾದಲ್ಲಿ ನಡೆಯಲಿರುವ 77 ನೇ ಕ್ಯಾನಸ್ ಚಲನಚಿತ್ರೋತ್ಸವದಲ್ಲಿ ಭಾರತ ಪೆವಿಲಿಯನ್ ಮೇ 15 ರಂದು ಗಣ್ಯರ ಸಮ್ಮುಖದಲ್ಲಿ ಉದ್ಘಾಟನೆಯಾಗಲಿದೆ. ಕ್ಯಾನಸ್ ನಲ್ಲಿರುವ ಭಾರತ ಪೆವಿಲಿಯನ್ ನಲ್ಲಿ ಭಾರತೀಯ ಚಲನಚಿತ್ರ ಸಮುದಾಯಕ್ಕೆ ವಿವಿಧ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ವೇದಿಕೆಯಾಗಿ ಕಾರ್ಯನಿರ್ವಹಿಸಲಿದೆ. ಇದರಲ್ಲಿ ಚಲನಚಿತ್ರಗಳ ನಿರ್ಮಾಣ ಸಹಯೋಗಗಳನ್ನು ಬೆಳೆಸುವುದು, ಚಲನಚಿತ್ರ ವಿತರಣಾ ಒಪ್ಪಂದಗಳಿಗೆ ಸಹಿ ಹಾಕುವ, ಗ್ರೀನ್ ಲೈಟ್ ಸ್ಕ್ರಿಪ್ಟ್ ಬಿ2ಬಿ ಸಭೆಗಳು ಮತ್ತು ಪ್ರಮುಖ ಮನೋರಂಜನೆ ಮತ್ತು ಮಾಧ್ಯಮ ಸಂರ್ಪಕ ಜಾಲ ಪ್ರಪಂಚ ತೆರೆದುಕೊಳ್ಳಲಿದೆ. ಭಾರತದ ಪೆವಿಲಿಯನ್ ಅನ್ನು ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮ [ಎನ್.ಎಫ್.ಡಿ.ಸಿ] ಭಾರತೀಯ ವಾಣಿಜ್ಯ ಮತ್ತು ಕೈಗಾರಿಕಾ ಒಕ್ಕೂಟ [ಎಫ್.ಐ.ಸಿ.ಸಿ] ಸಹಭಾಗಿ ಸಂಸ್ಥೆಯಾಗಿದೆ. ಭಾರತೀಯ ಕೈಗಾರಿಕಾ ಒಕ್ಕೂಟದಿಂದ [ಸಿಐಐ] ಕ್ಯಾನಸ್ ನ ಮಾರ್ಚೆ ಡೆ ನಲ್ಲಿ ಕೈಗಾರಿಕೆಗಳ ಸಂಪರ್ಕ ಮತ್ತು ಸಹಭಾಗಿತ್ವದಡಿ “ಭಾರತ ಮಳಿಗೆಯನ್ನು” ಸಹ ತೆರೆಲಾಗುತ್ತಿದೆ. 

ಅಹಮದಾಬಾದ್ ನ ಎನ್.ಐ.ಡಿಯಿಂದ ಭಾರತ್ ಪೆವಿಲಿಯನ್ ವಿನ್ಯಾಸಗೊಳಿಸಿದ್ದು, ಭಾರತದ ಸೃಜನೆಗಾಗಿ “ದಿ ಸೂತ್ರಧಾರ”ದಿಂದ ಸ್ಪೂರ್ತಿ ಪಡೆಯಲಾಗಿದೆ. “ಕ್ರಿಯೆಟ್ ಇಂಡಿಯಾ” ಈ ಭಾರಿಯ ಧ್ಯೇಯವಾಕ್ಯವಾಗಿದೆ. ಭಾರತದ ಪಾಲ್ಗೊಳ್ಳುವಿಕೆಯನ್ನು ನೋಡುವಾಗ ಈ ವರ್ಷ ಕೇನ್ಸ್ ಚಿತ್ರೋತ್ಸವದಲ್ಲಿ ಶ್ರೀಮಂತ ಇತಿಹಾಸ ಮತ್ತು ಸೃಜನಶೀಲತೆಯ ಭೂದೃಶ್ಯವು ಅಂತರರಾಷ್ಟ್ರೀಯ ವೇದಿಕೆಯಲ್ಲಿ ನಿರ್ದೇಶನ ನೀಡಲಿದೆ. 

ಸ್ಪರ್ಧಾತ್ಮಕ ವಿಭಾಗದಲ್ಲಿ ಭಾರತದ ಪಾಯಲ್ ಕಪಾಡಿಯಾ ಅವರ  “ಆಲ್ ವಿ ಇಮಾಜಿನ್ ಆಸ್ ಲೈಟ್” ಚಿತ್ರ ಪ್ರದರ್ಶನಗೊಳ್ಳಲಿದ್ದು, ಪ್ರತಿಷ್ಠಿತ ಪಾಮ್ ಡಿ ಒರ್ ಗಾಗಿ ಸ್ಪರ್ಧಿಸಲು ಸಿದ್ಧವಾಗಿದೆ. ಮೂರು ದಶಕಗಳ ನಂತರ ಈ ಅದ್ಭುತ ಕೃತಿ ಸ್ಪರ್ಧೆಗಾಗಿ ಸಜ್ಜಾಗಿದ್ದು, ಇದು ಮಹತ್ವದ ಮೈಲಿ’ಗಲ್ಲಾಗಿದೆ. ನಿರ್ದೇಶಕರ ಫೋರ್ಟ್ ನೈಟ್ ನಲ್ಲಿ ಕರಣ್ ಕಂಧಾರಿ ಅವರ  “ಸಿಸ್ಟರ್ ಮಿಡ್ ನೈಟ್” ಜೊತೆಗೆ “ಸಂತೋಷ್”ನಲ್ಲಿ ಭಾರತೀಯ ಚಲನಚಿತ್ರ ನಿರ್ಮಾಪಕಿ ಸಂಧ್ಯಾ ಸೂರಿ ಅವರ ಬಿಗಿಯಾದ ನಿರೂಪಣೆ ಮತ್ತು ಎಲ್ ಅಸಿಡ್ ನಲ್ಲಿ ಮೈಸಂ ಅಲಿ ಅವರ ಸಿನೆಮಾ ಚಲನಚಿತ್ರೋತ್ಸವದ ಭೂ ಸದೃಶ್ಯದಲ್ಲಿ ಗಮನ ಸೆಳೆಯಲಿದೆ.  

ಲಾ ಸಿನೆಫ್ ಸ್ಪರ್ಧಾತ್ಮಕ ವಿಭಾಗದಲ್ಲಿ ದಿ ಫಿಲ್ಮ್ ಅಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ [ಎಫ್.ಟಿ.ಐ.ಐ] ವಿದ್ಯಾರ್ಥಿಗಳು ನಿರ್ಮಿಸಿದ  “SUNFLOWERS WERE FIRST ONES TO KNOW” ಸ್ಪರ್ಧಿಸಲಿದೆ. ಈ ಕಿರು ಚಿತ್ರವನ್ನು ಕನ್ನಡದಲ್ಲಿ ನಿರ್ಮಿಸಲಾಗಿದ್ದು, ಜಗತ್ತಿನಾದ್ಯಂತ ಬಂದಿದ್ದ ಚಿತ್ರಗಳಲ್ಲಿ ಇದನ್ನು ಆಯ್ಕೆ ಮಾಡಲಾಗಿದೆ. ಅಂತಿಮ ಹಂತದಲ್ಲಿ 17 ಅಂತರರಾಷ್ಟ್ರೀಯ ಕಿರು ಚಿತ್ರಗಳ ಸಾಲಿನಲ್ಲಿ ಇದು ಸ್ಪರ್ಧಿಸಲಿದೆ.  

ಕ್ಲಾಸಿಕ್ ವಿಭಾಗದಲ್ಲಿ ಶ್ಯಾಂ ಬೆನಗಲ್ ಮಂಥನ್ ನಲ್ಲಿ ಅಮುಲ್ ಡೈರಿ ಸಹಕಾರಿ ಆಂದೋನ ಕುರಿತಂತೆ ಚಿತ್ರ ಪ್ರದರ್ಶನವಾಗಲಿದೆ. ಭಾರತದ ಮಾರ್ಗದಲ್ಲಿ ಈ ಚಿತ್ರ ಮಹತ್ವ ಪಡೆಯಲಿದೆ. ಸಚಿವಾಲಯದ ಚಲನಚಿತ್ರ ವಿಭಾಗದ ಪ್ರಮುಖ ಘಟಕವಾದ ಎನ್.ಎಫ್.ಡಿ.ಸಿ - ದಿ ನ್ಯಾಷನಲ್ ಫಿಲ್ಮ್ ಆಕ್ರೀವ್ ಇಂಡಿಯಾ [ಎನ್.ಎಫ್.ಎ.ಐ] ಹಲವಾರು ವರ್ಷಗಳಿಂದ ಚಲನಚಿತ್ರಗಳ ರೀಲ್ ಗಳನ್ನು ಸಂರಕ್ಷಿಸಲಾಗಿದೆ ಮತ್ತು ಇದನ್ನು ಪಿಲ್ಮ್ ಹೆರಿಟೇಜ್ ಫೌಂಡೇಷನ್ [ಎಫ್.ಎಚ್.ಎಂ] ನಿಂದ ಮರು ಸ್ಥಾಪಿಸಲಾಗಿದೆ. 

ಕ್ಯಾನೆಸ್ ಚಲನಚಿತ್ರೋತ್ಸವದಲ್ಲಿ ರಾಷ್ಟ್ರಪ್ರಶಸ್ತಿ ವಿಜೇತ ಛಾಯಾಗ್ರಾಹಕ ಸಂತೋಷ್ ಶಿವನ್ ಅವರು ಪ್ರತಿಷ್ಠಿತ ಪಿಯರೆ ಆಂಜಿನಿಯಕ್ಸ್ ಗೌರವವನ್ನು ಸ್ವೀಕರಿಸಲಿದ್ದಾರೆ. ಅವರು ಕೇನ್ಸ್ ಪ್ರತಿನಿಧಿಗಳಿಗೆ ಮಾಸ್ಟರ್‌ಕ್ಲಾಸ್ ಅನ್ನು ಸಹ ನೀಡುತ್ತಾರೆ, ಈ ಗೌರವವನ್ನು ಪಡೆದ ಮೊದಲ ಭಾರತೀಯರು ಅವರಾಗಿದ್ದಾರೆ. 

ಭಾರತದ ವೈವಿಧ್ಯಮ ಪ್ರದೇಶಗಳು ಮತ್ತು ಚಲನಚಿತ್ರ ಪ್ರತಿಭೆಗಳನ್ನು ಅನಾವರಣಗೊಳಿಸಲು ಕರ್ನಾಟಕ, ಗೋವಾ, ಮಹಾರಾಷ್ಟ್ರ, ಜಮ್ಮು ಮತ್ತು ಕಾಶ್ಮೀರ, ಜಾರ್ಖಂಡ್ ಮತ್ತು ದೆಹಲಿ ಸೇರಿದಂತೆ ಹಲವು ರಾಜ್ಯಗಳು ಚಿತ್ರೋತ್ಸವದಲ್ಲಿ ಭಾಗಿಯಾಗಲಿವೆ. 

ಮೇ 15 ರಂದು ಮಧ್ಯಾಹ್ನ 12 ಗಂಟೆಗೆ ಮುಖ್ಯ ವೇದಿಕೆಯಲ್ಲಿ (ರಿವೇರಿಯಾ) “ಅಬಂಡಂಟ್ ಇನ್ಸೆಂಟಿವ್ಸ್ ಮತ್ತು ಸೀಮ್‌ಲೆಸ್ ಫೆಸಿಲಿಟೇಶನ್ಸ್ - ಕಮ್, ಕ್ರಿಯೇಟ್ ಇನ್ ಇಂಡಿಯಾ” ಎಂಬ ಶೀರ್ಷಿಕೆಯಡಿಯಲ್ಲಿ ಭಾರತದ ಸಹಯೋಗದೊಂದಿಗೆ ಚಲನಚಿತ್ರ ನಿರ್ಮಾಣದ ಅವಕಾಶಗಳನ್ನು ಅನ್ವೇಷಿಸುವ ಅಧಿವೇಶನವನ್ನು ಆಯೋಜಿಸಲಾಗಿದೆ. ವೇದಿಕೆಯ ಚರ್ಚೆಯು ಚಲನಚಿತ್ರ ನಿರ್ಮಾಣ, ಸಹ-ನಿರ್ಮಾಣ ಅವಕಾಶಗಳು ಮತ್ತು ಉನ್ನತ ದರ್ಜೆಯ ಪೋಸ್ಟ್-ಪ್ರೊಡಕ್ಷನ್ ಸೌಲಭ್ಯಗಳಿಗಾಗಿ ಭಾರತದ ಬೃಹತ್ ಪ್ರೋತ್ಸಾಹಗಳನ್ನು ಗುರುತಿಸುತ್ತದೆ. ಈ ಉಪಕ್ರಮಗಳನ್ನು ಚಲನಚಿತ್ರ ನಿರ್ಮಾಪಕರು ಹೇಗೆ ಸ್ವಾಗತಿಸುತ್ತಿದ್ದಾರೆ, ಭಾರತದಲ್ಲಿ ಚಿತ್ರೀಕರಣಕ್ಕಾಗಿ ನೆಲದ ನಿಜವಾದ ಅನುಭವಗಳು ಯಾವುವು ಮತ್ತು ಹಂಚಿಕೊಳ್ಳಲಾಗುತ್ತಿರುವ ರೋಚಕ ಕಥೆಗಳು ಯಾವುವು ಎಂಬುದನ್ನು ಸಮಿತಿಯು ಅನಾವರಣಗೊಳಿಸಲಿದೆ. 

ಭಾರತ್ ಪೆವಿಲಿಯನ್ ನಲ್ಲಿ ಸಂವಾದಾತ್ಮಕ ಅಧಿವೇಶನದಲ್ಲಿ ಭಾರತ ಮತ್ತು ಅಂತರರಾಷ್ಟ್ರೀಯ ಸಹಭಾಗಿತ್ವದಲ್ಲಿ ಚಲನಚಿತ್ಸೋವಗಳನ್ನು ಆಯೋಜಿಸುವ ಕುರಿತಂತೆ ಚರ್ಚೆ ನಡೆಯಲಿದೆ. ಭಾರತ ಚಲನಚಿತ್ರ ತಾಣವಾಗಿದ್ದು, ಭಾರತ ಮತ್ತು ಇತರೆ ದೇಶಗಳಾದ ಸ್ಪೇನ್, ಬ್ರಿಟನ್, ಫ್ರಾನ್ಸ್ ಮತ್ತಿತರೆ ದೇಶಗಳ ಜೊತೆ ಸಹಭಾಗಿತ್ವದಲ್ಲಿ ಚಿತ್ರ ನಿರ್ಮಾಣ ಮಾಡುವ ಬಗ್ಗೆಯೂ ಚರ್ಚೆ ನಡೆಯಲಿದೆ. ಈ ಅಧಿವೇಶನಗಳಲ್ಲಿ ಸೌಲಭ್ಯಗಳು, ಸಂಪರ್ಕ ಜಾಲ, ಸಹಭಾಗಿತ್ವದ ಅವಕಾಶಗಳು, ಭಾರತೀಯ ಚತುರ ಚಲನಚಿತ್ರೋತ್ಸವದ ಕೈಗಾರಿಕಾ ವಲಯದಲ್ಲಿ ತೊಡಗಿಕೊಳ್ಳುವ ಮತ್ತು ಅಂತರರಾಷ್ಟ್ರೀಯ ಸಹಭಾಗಿತ್ವ ಕುರಿತು ಅಧಿವೇಶನಗಳಲ್ಲಿ ಚರ್ಚೆ ನಡೆಯಲಿದೆ. 

*****



(Release ID: 2020240) Visitor Counter : 85