ಹಣಕಾಸು ಸಚಿವಾಲಯ
ಬಾಡಿಗೆ ಮನೆಗಳು, ಕೊಳೆಗೇರಿಗಳು, ಅಥವಾ ಚಾವ್ಲ್ ಗಳು ಮತ್ತು ಅನಧಿಕೃತ ಕಾಲೋನಿಗಳಲ್ಲಿ ವಾಸಿಸುವ" ಮಧ್ಯಮ ವರ್ಗದ ಅರ್ಹ ವಿಭಾಗಗಳಿಗೆ ತಮ್ಮದೇ ಆದ ಮನೆಗಳನ್ನು ಖರೀದಿಸಲು ಅಥವಾ ನಿರ್ಮಿಸಲು ಸಹಾಯ ಮಾಡುವ ಯೋಜನೆಯನ್ನು ಸರ್ಕಾರ ಪ್ರಾರಂಭಿಸಲಿದೆ
ಪಿಎಂ ಆವಾಸ್ ಯೋಜನೆ (ಗ್ರಾಮೀಣ) ಅಡಿಯಲ್ಲಿ 3 ಕೋಟಿ ಮನೆಗಳ ಗುರಿಯನ್ನು ಸಾಧಿಸುವ ಸಮೀಪದಲ್ಲಿದೆ
ಕುಟುಂಬಗಳ ಸಂಖ್ಯೆಯ ಹೆಚ್ಚಳದಿಂದ ಉಂಟಾಗುವ ಅಗತ್ಯಗಳನ್ನು ಪೂರೈಸಲು ಮುಂದಿನ 5 ವರ್ಷಗಳಲ್ಲಿ ಇನ್ನೂ 2 ಕೋಟಿ ಮನೆಗಳನ್ನು ಕೈಗೊಳ್ಳಲಾಗುವುದು
Posted On:
01 FEB 2024 12:48PM by PIB Bengaluru
ಇಂದು ಸಂಸತ್ತಿನಲ್ಲಿ 2024-25ರ ಮಧ್ಯಂತರ ಬಜೆಟ್ ಮಂಡಿಸಿದ ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು, "ಬಾಡಿಗೆ ಮನೆಗಳು, ಕೊಳೆಗೇರಿಗಳು, ಅಥವಾ ಚಾವ್ಲ್ ಗಳು ಮತ್ತು ಅನಧಿಕೃತ ಕಾಲೋನಿಗಳಲ್ಲಿ ವಾಸಿಸುವ" ಮಧ್ಯಮ ವರ್ಗದ ಅರ್ಹ ವರ್ಗಗಳಿಗೆ ತಮ್ಮ ಸ್ವಂತ ಮನೆಗಳನ್ನು ಖರೀದಿಸಲು ಅಥವಾ ನಿರ್ಮಿಸಲು ಸಹಾಯ ಮಾಡುವ ಯೋಜನೆಯನ್ನು ಸರ್ಕಾರ ಪ್ರಾರಂಭಿಸಲಿದೆ ಎಂದು ಘೋಷಿಸಿದರು.
ಪಿಎಂ ಆವಾಸ್ ಯೋಜನೆ (ಗ್ರಾಮೀಣ) ಸಾಧನೆಯನ್ನು ಬಿಂಬಿಸಿದ ಕೇಂದ್ರ ಹಣಕಾಸು ಸಚಿವರು, ಕೋವಿಡ್ ನಿಂದಾಗಿ ಸವಾಲುಗಳ ಹೊರತಾಗಿಯೂ, ಯೋಜನೆಯ ಅನುಷ್ಠಾನ ಮುಂದುವರೆದಿದೆ ಮತ್ತು ಸರ್ಕಾರವು ಮೂರು ಕೋಟಿ ಮನೆಗಳ ನಿರ್ಮಾಣದ ಗುರಿಯನ್ನು ಸಾಧಿಸಲು ಹತ್ತಿರದಲ್ಲಿದೆ ಎಂದು ಹೇಳಿದರು. ಕುಟುಂಬಗಳ ಸಂಖ್ಯೆಯ ಹೆಚ್ಚಳದಿಂದ ಉಂಟಾಗುವ ಅಗತ್ಯವನ್ನು ಪೂರೈಸಲು ಮುಂದಿನ ಐದು ವರ್ಷಗಳಲ್ಲಿ ಇನ್ನೂ ಎರಡು ಕೋಟಿ ಮನೆಗಳನ್ನು ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು 2047 ರ ವೇಳೆಗೆ ಭಾರತವನ್ನು 'ವಿಕಸಿತ ಭಾರತ' ಮಾಡಲು ಸರ್ವಾಂಗೀಣ, ಸರ್ವವ್ಯಾಪಿ ಮತ್ತು ಎಲ್ಲವನ್ನೂ ಒಳಗೊಂಡ ಅಭಿವೃದ್ಧಿಯ ವಿಧಾನದೊಂದಿಗೆ ಸರ್ಕಾರ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.
*****
(Release ID: 2001389)
Visitor Counter : 124
Read this release in:
Marathi
,
English
,
Urdu
,
Hindi
,
Nepali
,
Bengali
,
Assamese
,
Punjabi
,
Gujarati
,
Odia
,
Tamil
,
Telugu
,
Malayalam