ಹಣಕಾಸು ಸಚಿವಾಲಯ
ಬಡತನವನ್ನು ಹೊಡೆದೋಡಿಸಲು ಸಬ್ ಕಾ ಸಾಥ್ ಮೂಲಕ ಬಡವರ ಸಬಲೀಕರಣಕ್ಕೆ ಆದ್ಯತೆ: ಕೇಂದ್ರ ಹಣಕಾಸು ಸಚಿವರು
Posted On:
01 FEB 2024 12:38PM by PIB Bengaluru
ಪ್ರಧಾನಮಂತ್ರಿ ಜನ್ ಧನ್ ಯೋಜನೆ, ಪ್ರಧಾನಮಂತ್ರಿ ಸ್ವಾನಿಧಿ ಮತ್ತು ಪ್ರಧಾನಮಂತ್ರಿ ಜನ್ಮ ಯೋಜನೆ ಮೂಲಕ ನೇರ ಲಾಭದ ವರ್ಗಾವಣೆಯು ಜನರನ್ನು ಸಬಲೀಕರಣಗೊಳಿಸುತ್ತಿದೆ: ಹಣಕಾಸು ಸಚಿವರು
ಗರೀಬ್ ಕಲ್ಯಾಣ್ ಅನ್ನು ದೇಶ್ ಕಾ ಕಲ್ಯಾಣ್ ಎಂದು ಕೇಂದ್ರೀಕರಿಸಿ, ಬಡವರ ಸಬಲೀಕರಣದಲ್ಲಿ ಸರ್ಕಾರ ನಂಬಿಕೆ ಇಟ್ಟಿದೆ ಎಂದು ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವ ಶ್ರೀಮತಿ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಇಂದು ಮಧ್ಯಂತರ ಕೇಂದ್ರ ಬಜೆಟ್ 2024 ಅನ್ನು ಮಂಡಿಸಿದ ಶ್ರೀಮತಿ ಸೀತಾರಾಮನ್, “ಬಡತನವನ್ನು ಅರ್ಹತೆಗಳ ಮೂಲಕ ನಿಭಾಯಿಸುವ ಹಿಂದಿನ ವಿಧಾನವು ಅತ್ಯಂತ ಸಾಧಾರಣ ಫಲಿತಾಂಶಗಳನ್ನು ನೀಡಿತು. ಬಡವರು ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಸಶಕ್ತ ಪಾಲುದಾರರಾದಾಗ, ಅವರಿಗೆ ಸಹಾಯ ಮಾಡುವ ಸರ್ಕಾರದ ಶಕ್ತಿಯು ಅನೇಕ ಪಟ್ಟು ಹೆಚ್ಚಾಗುತ್ತದೆ. ಕಳೆದ 10 ವರ್ಷಗಳಲ್ಲಿ ಸಬ್ಕಾ ಸಾಥ್‌ನ ಅನ್ವೇಷಣೆಯಲ್ಲಿ ಸರ್ಕಾರವು 25 ಕೋಟಿ ಜನರಿಗೆ ಬಹು ಆಯಾಮದ ಬಡತನದಿಂದ ಮುಕ್ತಿ ಪಡೆಯಲು ಸಹಾಯ ಮಾಡಿದೆ ಎಂದು ಹೇಳಿದರು.
ಸರ್ಕಾರದ ಪ್ರಯತ್ನಗಳು ಈಗ ಅಂತಹ ಸಶಕ್ತ ಜನರ ಶಕ್ತಿ ಮತ್ತು ಉತ್ಸಾಹದೊಂದಿಗೆ ಸಂಯೋಜನೆಗೊಳ್ಳುತ್ತಿವೆ. ಇದು ನಿಜವಾಗಿಯೂ ಅವರನ್ನು ಬಡತನದಿಂದ ಮೇಲಕ್ಕೆತ್ತುತ್ತಿದೆ ಎಂದರು.
ಪಿಎಂ-ಜನ್ ಧನ್ ಖಾತೆಗಳನ್ನು ಬಳಸಿಕೊಂಡು ಸರ್ಕಾರದಿಂದ ರೂ. 34 ಲಕ್ಷ ಕೋಟಿ ರೂ. ನೇರ ಲಾಭ ವರ್ಗಾವಣೆ ಮಾಡುವ ಮೂಲಕ ಸರ್ಕಾರಕ್ಕೆ 2.7 ಲಕ್ಷ ಕೋಟಿ ಉಳಿತಾಯವಾಗಿದೆ. ಇದು ಹಿಂದೆ ಇದ್ದ ಸೋರಿಕೆಯನ್ನು ತಪ್ಪಿಸಲು ಸಾಧ್ಯವಾಗಿದೆ. ಉಳಿತಾಯವು 'ಗರೀಬ್ ಕಲ್ಯಾಣ್'ಗೆ ಹೆಚ್ಚಿನ ಹಣವನ್ನು ಒದಗಿಸಲು ಸಹಾಯ ಮಾಡಿದೆ.
ಬಡವರನ್ನು ಸಬಲೀಕರಣಗೊಳಿಸಿದ ಯೋಜನೆಗಳ ಉದಾಹರಣೆಗಳನ್ನು ಉಲ್ಲೇಖಿಸಿದ ಶ್ರೀಮತಿ ಸೀತಾರಾಮನ್, “ಪಿಎಂ-ಸ್ವಾನಿಧಿ 78 ಲಕ್ಷ ಬೀದಿ ವ್ಯಾಪಾರಿಗಳಿಗೆ ಸಾಲದ ನೆರವು ಒದಗಿಸಿದೆ. ಒಟ್ಟಾರೆಯಾಗಿ, 2.3 ಲಕ್ಷ ಜನರು ಮೂರನೇ ಬಾರಿಗೆ ಸಾಲ ಪಡೆದಿದ್ದಾರೆ ಎಂದರು.
ಪ್ರಧಾನಮಂತ್ರಿ-ಜನ್ಮನ್ ಯೋಜನೆಯನ್ನು ಸಬಲೀಕರಣದ ಪ್ರಮುಖ ಉದಾಹರಣೆಯಾಗಿ ಉಲ್ಲೇಖಿಸಿದ ಕೇಂದ್ರ ಹಣಕಾಸು ಸಚಿವರು, ಈ ಯೋಜನೆಯು ವಿಶೇಷವಾಗಿ ದುರ್ಬಲ ಬುಡಕಟ್ಟು ಗುಂಪುಗಳನ್ನು ತಲುಪಿದೆ. ಹಲವಾರು ವರ್ಷಗಳಿಂದ ಅಭಿವೃದ್ಧಿಯನ್ನು ಕಾಣದ ಈ ಗುಂಪಿನವರು ಈಗ ಪ್ರಧಾನಮಂತ್ರಿ ಯೋಜನೆಯಿಂದ ಸಬಲೀಕರಣದತ್ತ ಹೆಜ್ಜೆ ಹಾಕಿದ್ದಾರೆ ಎಂದರು.
****
(Release ID: 2001179)
Visitor Counter : 126
Read this release in:
English
,
Urdu
,
Marathi
,
Hindi
,
Assamese
,
Bengali
,
Manipuri
,
Punjabi
,
Gujarati
,
Tamil
,
Telugu
,
Malayalam