ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಮೇಘಾಲಯದ ಜನರಿಗೆ ರಾಜ್ಯೋತ್ಸವ ದಿನದ ಶುಭಾಶಯ ತಿಳಿಸಿದ ಪ್ರಧಾನ ಮಂತ್ರಿಗಳು 

प्रविष्टि तिथि: 21 JAN 2024 9:25AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮೇಘಾಲಯದ ರಾಜ್ಯೋತ್ಸವ ದಿನದ ಹಿನ್ನೆಲೆಯಲ್ಲಿ ಆ ರಾಜ್ಯದ  ಜನತೆಗೆ ಶುಭಾಶಯ ಕೋರಿದರು.

ಭವಿಷ್ಯದಲ್ಲಿ ಈಶಾನ್ಯ ರಾಜ್ಯವು ಪ್ರಗತಿಯ ಇನ್ನಷ್ಟು ಹೊಸ ಎತ್ತರವನ್ನು ಏರಲಿ ಎಂದು ಅವರು ಆಶಿಸಿದರು. 

ಈ ಬಗ್ಗೆ 'ಎಕ್ಸ್' ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹಂಚಿಕೊಂಡಿರುವ
ಪ್ರಧಾನ ಮಂತ್ರಿಗಳು, "ಮೇಘಾಲಯದ ಜನತೆಗೆ ರಾಜ್ಯೋತ್ಸವ ದಿನದ ಶುಭಾಶಯಗಳು! ಇಂದು ಮೇಘಾಲಯದ ವೈವಿಧ್ಯದ ಸಂಸ್ಕೃತಿ ಮತ್ತು ಅಲ್ಲಿನ ಜನರ ಸಾಧನೆಗಳನ್ನು ಸ್ಮರಿಸಿ ಸಂಭ್ರಮಿಸುವ ಸಂದರ್ಭವಾಗಿದೆ. ಮುಂಬರುವ ದಿನಗಳಲ್ಲಿ ಮೇಘಾಲಯವು ಪ್ರಗತಿಯ ಇನ್ನಷ್ಟು ಹೊಸ ಎತ್ತರಗಳನ್ನು ಏರಲಿ," ಎಂದು ಶುಭ ಹಾರೈಸಿದ್ದಾರೆ
.

 


(रिलीज़ आईडी: 1998323) आगंतुक पटल : 129
इस विज्ञप्ति को इन भाषाओं में पढ़ें: English , Urdu , Marathi , हिन्दी , Bengali-TR , Bengali , Manipuri , Assamese , Punjabi , Gujarati , Odia , Tamil , Telugu , Malayalam