ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಭಾರತ ಸರ್ಕಾರದ ವಿವಿಧ ಯೋಜನೆಗಳ ಲಕ್ಷದ್ವೀಪದ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದ ಪ್ರಧಾನಮಂತ್ರಿ

Posted On: 03 JAN 2024 1:49PM by PIB Bengaluru

ಲಕ್ಷದ್ವೀಪದಲ್ಲಿ ಭಾರತ ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳೊಂದಿಗೆ ತಮ್ಮ ಸಂವಾದದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದೃಷ್ಠಿಕೋನವನ್ನು ಹಂಚಿಕೊಂಡಿದ್ದಾರೆ.

ಪ್ರಧಾನಮಂತ್ರಿಯವರು ತಮ್ಮ ಎಕ್ಸ್ ಖಾತೆಲ್ಲಿ ಈ ರೀತಿ ಸಂದೇಶ ಹಂಚಿಕೊಂಡಿದ್ದಾರೆ;

“ಭಾರತ ಸರ್ಕಾರದ ವಿವಿಧ ಯೋಜನೆಗಳ ಲಕ್ಷದ್ವೀಪದ ಫಲಾನುಭವಿಗಳೊಂದಿಗೆ ಸಂವಾದ ನಡೆಸುವುದು ನನಗೆ ಸಂತೋಷ ತಂದಿದೆ. ಮಹಿಳೆಯರ ಒಂದು ಗುಂಪು ತಮ್ಮ ಸ್ವಸಹಾಯ ಸಂಘವು ರೆಸ್ಟೋರೆಂಟ್ ಅನ್ನು ಪ್ರಾರಂಭಿಸಲು ಯೋಜನೆಯ ಧನ ಸಹಾಯ ಹೇಗೆ ಕೆಲಸ ಮಾಡಿದೆ ಎಂಬುದರ ಕುರಿತು ಮಾತನಾಡಿದರು, ಹೀಗಾಗಿ ಅವರು ಸ್ವಾವಲಂಬಿಯಾಗಿದ್ದಾರೆ; ಹೃದ್ರೋಗಕ್ಕೆ ಚಿಕಿತ್ಸೆ ನೀಡಲು ಆಯುಷ್ಮಾನ್ ಭಾರತ್ ಹೇಗೆ ಸಹಾಯ ಮಾಡಿದೆ ಎಂದು ವೃದ್ಧರೊಬ್ಬರು ಮಾಹಿತಿ ಹಂಚಿಕೊಂಡಿದ್ದಾರೆ. ಪಿಎಂ-ಕಿಸಾನ್ನಿಂದ ಮಹಿಳಾ ರೈತರ ಜೀವನ ಬದಲಾಗುತ್ತದೆ ಎಂದು ಒಬ್ಬರು ವಿವರಿಸಿದರು. ಉಚಿತ ಪಡಿತರ, ದಿವ್ಯಾಂಗರಿಗೆ ಪ್ರಯೋಜನಗಳು, ಪಿಎಂ-ಅವಾಸ್ , ಕಿಸಾನ್ ಕ್ರೆಡಿಟ್ ಕಾರ್ಡ್ಗಳು, ಉಜ್ವಲ ಯೋಜನೆ ಮತ್ತು ಹೆಚ್ಚಿನವುಗಳ ಬಗ್ಗೆ ಇತರರು ಮಾತನಾಡಿದರು. ಹೆಚ್ಚು ದೂರದ ಪ್ರದೇಶಗಳಲ್ಲಿಯೂ ಸಹ ಒಂದು ವರ್ಗದ ಜನರನ್ನು ಅಭಿವೃದ್ಧಿಯ ಫಲ ತಲುಪುವುದನ್ನು ಸನಿಹದಿಂದ ನೋಡುವುದು ನಿಜವಾಗಿಯೂ ತೃಪ್ತಿಕರವಾಗಿದೆ. 

***


(Release ID: 1992715) Visitor Counter : 111