ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ವಿಶ್ವಕರ್ಮ ಯೋಜನೆ ಮತ್ತು ಸಿರಿಧಾನ್ಯಗಳ ಬಗ್ಗೆ ಜಾಗೃತಿ ಮೂಡಿಸುತ್ತಿರುವ ‘ಕುಮ್ಹಾರ್’ ಸಮುದಾಯದ ಮಹಿಳಾ ಉದ್ಯಮಿ


ನಿಮ್ಮ ಸಾಮೂಹಿಕ ಮಾತೃ ಶಕ್ತಿಯು ನಿಮ್ಮನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತದೆ: ಪ್ರಧಾನಮಂತ್ರಿ

Posted On: 27 DEC 2023 2:22PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಕಸಿತ ಭಾರತ ಸಂಕಲ್ಪ ಯಾತ್ರೆಯ ಫಲಾನುಭವಿಗಳೊಂದಿಗೆ ವಾಸ್ತವೋಪಮದ (ವಿಡಿಯೋ ಕಾನ್ಫರೆನ್ಸಿಂಗ್) ಮೂಲಕ ಸಂವಾದ ನಡೆಸಿದರು. ಈ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು.

ದೇಶಾದ್ಯಂತ ವಿಕಸಿತ ಭಾರತ ಸಂಕಲ್ಪ ಯಾತ್ರೆಯ ಸಾವಿರಾರು ಫಲಾನುಭವಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಈ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರು, ಸಂಸದರು, ಶಾಸಕರು ಹಾಗೂ ಸ್ಥಳೀಯ ಮಟ್ಟದ ಜನಪ್ರತಿನಿಧಿಗಳು ಪಾಲ್ಗೊಂಡಿದ್ದರು.

ರಾಜಸ್ಥಾನದ ಕೋಟಾದ ಸಪ್ನಾ ಪ್ರಜಾಪತಿ, ಸ್ವನಿಧಿ ಯೋಜನೆಯ ಫಲಾನುಭವಿಯೂ ಸಹ ಸಾಂಕ್ರಾಮಿಕ ಸಮಯದಲ್ಲಿ ಮುಖಗವಸುಗಳನ್ನು ತಯಾರಿಸುವ ಮೂಲಕ ಸಮಾಜಕ್ಕೆ ಕೊಡುಗೆ ನೀಡಿದ್ದಾರೆ. ಡಿಜಿಟಲ್ ವಹಿವಾಟಿನ ಮೂಲಕ ತಮ್ಮ ಹೆಚ್ಚಿನ ವ್ಯವಹಾರವನ್ನು ನಡೆಸುತ್ತಿದ್ದಾರೆ ಎಂದು ಪ್ರಧಾನಮಂತ್ರಿಯವರು ಪ್ರಶಂಸಿಸಿದರು. ಸ್ಥಳೀಯ ಸಂಸದರಾದ ಸ್ಪೀಕರ್ ಶ್ರೀ ಓಂ ಬಿರ್ಲಾ ಅವರು ಜಾಗೃತಿಯನ್ನು ವಿಸ್ತರಿಸಲು ಮತ್ತು ಹರಡಲು ಅವರಿಗೆ ಪ್ರೋತ್ಸಾಹಿಸಿದರು. ಸಪ್ನಾ ಅವರ ಗುಂಪಿನ ಮಹಿಳೆಯರು ಸಿರಿಧಾನ್ಯದ ಬಗ್ಗೆ ಪ್ರಚಾರ ಮತ್ತು ಕೆಲಸ ಮಾಡುತ್ತಿದ್ದಾರೆ ಎಂದು ಪ್ರಧಾನಮಂತ್ರಿ ಮೋದಿಯವರು ಸಂತಸ ವ್ಯಕ್ತಪಡಿಸಿದರು.

ವಿಶ್ವಕರ್ಮ ಯೋಜನೆಯ ಕುರಿತು ‘ಕುಮ್ಹಾರ್’ ಸಮುದಾಯದ ಉದ್ಯಮಿಗಳಿಗೆ ಪ್ರಧಾನಮಂತ್ರಿ ಮಾಹಿತಿ ನೀಡಿದರು. "ನಿಮ್ಮ ಸಾಮೂಹಿಕ ಮಾತೃ ಶಕ್ತಿಯು ನಿಮ್ಮನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತದೆ ಮತ್ತು “ಮೋದಿ ಕಿ ಗ್ಯಾರಂಟಿ ಕಿ ಗಾಡಿ”ಯನ್ನು ಜನರು ಪಡೆಯಬಹುದಾದ ಪ್ರಯೋಜನಗಳ ಬಗ್ಗೆ ಹೇಳುವ ಮೂಲಕ ಉತ್ತಮ ಯಶಸ್ಸನ್ನು ಮಾಡುವಂತೆ ನಾನು ನಿಮ್ಮೆಲ್ಲ ಸಹೋದರಿಯರಲ್ಲಿ ಕೇಳಿಕೊಳ್ಳುತ್ತೇನೆ " ಎಂದು ಅವರು ಹೇಳಿದರು.

*****
 


(Release ID: 1990920) Visitor Counter : 99